VIDEO| ಹಿಂದುತ್ವದ ಬಗ್ಗೆ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ರಾಹುಲ್, ಹಿಗ್ಗಾಮುಗ್ಗಾ ಝಾಡಿಸಿದ ಮೋಹನ್ ಭಾಗವತ್

in Kannada News/News 225 views

ನವದೆಹಲಿ: ರಾಜಸ್ಥಾನದ ಜೈಪುರದಲ್ಲಿ ‘ಮಹಂಗಾಯಿ ಭಗಾವೊ’ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವನ್ನು ವಿವರಿಸಿ ವಿರೋಧ ಪಕ್ಷಗಳ (ರಾಜಸ್ಥಾನದಲ್ಲಿ ಬಿಜೆಪಿ ಹಾಗು NDA ವಿರೋಧ ಪಕ್ಷದಲ್ಲಿವೆ) ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಹುಲ್ ಗಾಂಧಿಯವರ ಈ ಹೇಳಿಕೆ ಬಗ್ಗೆ ಇದೀಗ ಭಾರೀ ಚರ್ಚೆ ನಡೆದಿದೆ. ಇದೀಗ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಕೂಡ ಹಿಂದುತ್ವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೋಹನ್ ಭಾಗವತ್ ಅವರ ಈ ಹೇಳಿಕೆಯನ್ನು ರಾಹುಲ್ ಗಾಂಧಿಯವರ ಹಿಂದುತ್ವದ ಹೇಳಿಕೆಗೆ ಪ್ರತ್ಯುತ್ತರ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಶನಿವಾರ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಘದ ಬಳಿ ಅಧಿಕಾರದ ರಿಮೋಟ್ ಕಂಟ್ರೋಲ್ ಇಲ್ಲ. ಈ ಆರೋಪ ನಿರಾಧಾರ ಎಂದರು.

Advertisement

ಅಷ್ಟೇ ಅಲ್ಲ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಹಿಂದುತ್ವದ ಬಗ್ಗೆ ತಮ್ಮ ವಿಚಾರಗಳನ್ನ ಮುಂದಿಟ್ಟಿದ್ದಾರೆ. “ಭಾರತವು ವಿಶ್ವ ಶಕ್ತಿಯಲ್ಲದಿದ್ದರೂ, ಸಾಂಕ್ರಾಮಿಕ ನಂತರದ ಯುಗದಲ್ಲಿ ಅದು ಖಂಡಿತವಾಗಿಯೂ ವಿಶ್ವ ಗುರುವಾಗುವ ಸಾಮರ್ಥ್ಯವನ್ನು ಹೊಂದಿದೆ” ಎಂದರು. ಅವರು ಮುಂದೆ ಮಾತನಾಡುತ್ತ, ಕಳೆದ 96 ವರ್ಷಗಳಿಂದ ಆರೆಸ್ಸೆಸ್‌ನ್ನ ವಿರೋಧಿಸುತ್ತಲೇ ಬಂದಿದ್ದಾರೆ ಸಾದರೆ ನಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ‌. ಸ್ವಯಂಸೇವಕನೊಬ್ಬ ಅಧಿಕಾರಕ್ಕೆ ಬಂದಾಗ ಸಂಘಕ್ಕೆ ಸ್ವಲ್ಪ ಸಮಾಧಾನ ಸಿಕ್ಕಿತು. ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಆರ್‌ಎಸ್‌ಎಸ್ 96 ವರ್ಷಗಳ ಕಾಲ ಸಮಾಜ ಸೇವೆ ಮಾಡುತ್ತಾ ಮುನ್ನಡೆದಿದೆ” ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಕೆಲವು ಪದಗಳು ನಮ್ಮ ಜೀವನಕ್ಕೆ ಅಂಟಿಕೊಳ್ಳುತ್ತವೆ, ಅವುಗಳನ್ನು ತೆಗೆದುಹಾಕಲಾಗುವುದಿಲ್ಲ. ಹಿಂದೂ ಎಂಬ ಪದವು ಹಿಂದೂಸ್ಥಾನದಿಂದ ಬಂದಿದೆ ಮತ್ತು ಹಿಂದುತ್ವವು ಸಂಘಕ್ಕೆ ಅಂಟಿಕೊಂಡಿದೆ. ಹಿಂದುತ್ವ ಯಾರನ್ನೂ ಗೆಲ್ಲಿಸುವ ಬಗ್ಗೆ ಮಾತನಾಡುವುದಿಲ್ಲ. ಹಿಂದುತ್ವವು ಒಗ್ಗೂಡುವ ಬಗ್ಗೆ ಮಾತನಾಡುತ್ತದೆ, ಯಾರನ್ನೂ ವಿಭಜಿಸುವುದಿಲ್ಲ. ಕಳೆದ 40 ಸಾವಿರ ವರ್ಷಗಳಿಂದ ಎಲ್ಲ ಭಾರತೀಯರ ಡಿಎನ್‌ಎ ಒಂದೇ. ಧರ್ಮ ಎಂದರೆ ಸಮಾಜವನ್ನು ಒಂದುಗೂಡಿಸುವ ನಂಬಿಕೆ” ಎಂದರು.

ಮೋಹನ್ ಭಾಗವತ್ ರವರು ಮುಂದೆ ಮಾತನಾಡುತ್ತ ಹೇಳಿದ್ದಾರೆ.“ಸದಾ ಒಡಕು ಇದ್ದುದರಿಂದಲೇ ನಾವು ಗುಲಾಮರಾದೆವು” ಎಂದರು. ಚೀನಾ ಮತ್ತು ಪಾಕಿಸ್ತಾನದೊಂದಿಗಿನ ದೇಶದ ಸಂಬಂಧದ ಕುರಿತು ಮಾತನಾಡಿದ ಅವರು, ಭಾರತದ ಕಡೆಯಿಂದ ಯಾರೊಂದಿಗೂ ದ್ವೇಷವಿಲ್ಲ, ಆದರೆ ಶತ್ರುಗಳಂತೂ ಇರುತ್ತಾರೆ, ಯಾರಾದರೂ ಶತ್ರುತ್ವ ಬೆಳೆಸಿದರೆ, ಅದಕ್ಕೆ ತಲೆಬಾಗಬೇಡಿ, ಆದರೆ ಅದನ್ನ ಮೆಟ್ಟಿ ಮುಂದುವರಿಯಿರಿ” ಎಂದರು. ಕಳೆದ ಕೆಲವು ದಿನಗಳಿಂದ ರಾಹುಲ್ ಗಾಂಧಿ ಹಿಂದೂ ಮತ್ತು ಹಿಂದುತ್ವದ ವ್ಯಾಖ್ಯಾನವನ್ನು ಹೇಳುತ್ತಾ ಸರ್ಕಾರವನ್ನು ಟಾರ್ಗೆಟ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಉಲ್ಲೇಖಿಸಬಹುದು. ಹಿಂದೂಗಳು ಎಂದಿಗೂ ಅಳುವುದಿಲ್ಲ ಆದರೆ ಹಿಂದುತ್ವವಾದಿಗಳು ಅಳುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ರಾಹುಲ್ ಗಾಂಧಿ ವಿರುದ್ಧ ಅಜಯ್ ಅಲೋಕ್ ವಾಗ್ದಾಳಿ

ರಾಹುಲ್ ಗಾಂಧಿಯವರ ಈ ಹೇಳಿಕೆಯ ನಂತರ ಜೆಡಿಯು ನಾಯಕ ಅಜಯ್ ಅಲೋಕ್ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತ, “ಪಾರ್ಸಿ ತಂದೆ ಮತ್ತು ಕ್ರಿಶ್ಚಿಯನ್ ತಾಯಿಯ ಮಗನಿಗೆ ಹಿಂದುತ್ವದ ವಿರುದ್ಧ ಮಾತನಾಡಲು ಎಷ್ಟು ಧೈರ್ಯ?” ಎಂದು ಗರಂ ಆಗಿದ್ದಾರೆ.

ಅಜಯ್ ಅಲೋಕ್ ತಮ್ಮ ಟ್ವೀಟ್‌ನಲ್ಲಿ, “ಹಿಂದುತ್ವ ಎಂದರೆ ಪಾರ್ಸಿ ತಂದೆ ಮತ್ತು ಕ್ರಿಶ್ಚಿಯನ್ ತಾಯಿಯ ಮಗ ಕೂಡ ಜನಿವಾರಧಾರಿ ಬ್ರಾಹ್ಮಣರಾದರೂ ಜನರು ವಿರೋಧಿಸುವುದಿಲ್ಲ, ಆದರೆ ಹಿಂದುತ್ವದ ಬಗ್ಗೆ ಭಾಷಣಗಳನ್ನು ನೀಡುವುದು, ಹಿಂದುತ್ವವನ್ನು ನಿಂದಿಸಿದಾಗ ಮಿತಿ ಮೀರಿದಂತಾಗುತ್ತೆ. ದೇಶದ 100 ಕೋಟಿ ಜನರು ಹಿಂದುತ್ವವಾದಿಗಳು. ಈ ರೀತಿಯಾಗಿ ನಿಂದನಾತ್ಮಕ ಮಾತುಗಳಾಡೋಕೆ ಎಷ್ಟು ಧೈರ್ಯ? ಬದಲಾಗಿ” ಎಂದು ಎಂದಿದ್ದಾರೆ.

 

Advertisement
Share this on...