ಯಾವುದೇ ಕಾರಣಕ್ಕೂ ಇದನ್ನ ಮಾಡೋಕೆ ಬಿಡಲ್ಲ ಎಂದ ಕಾಂಗ್ರೆಸ್: ಮುಲ್ಲಾ ಮೌಲ್ವಿಗಳ‌ ಪರ ನಿಂತು ಬ್ಯಾಟ್ ಬೀಸಿದ ಕಾಂಗ್ರೆಸ್

in Kannada News/News 151 views

ಹೆಣ್ಣು ಮಕ್ಕಳ ಕನಿಷ್ಠ ವಿವಾಹ ವಯೋಮಿತಿಯನ್ನು 18ರಿಂದ 21 ವರ್ಷಕ್ಕೆ ಹೆಚ್ಚಿಸುವ ಮೋದಿ ಸಂಪುಟದ ನಿರ್ಣಯದಿಂದ ಕಾಂಗ್ರೆಸ್‌ಗೆ ಭಾರೀ ಸಮಸ್ಯೆಯಾಗಿದ್ದು, ಈಗ ಅದನ್ನು ವಿರೋಧಿಸಲಿದ್ದಾರೆ. ಮೋದಿ ಸರ್ಕಾರದ ಈ ನಿರ್ಧಾರದ ಹಿಂದಿನ ಉದ್ದೇಶ ಅತ್ಯಂತ ಸಂಶಯಾಸ್ಪದ ಮತ್ತು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಹೇಳಿದೆ.

ಎಕನಾಮಿಕ್ ಟೈಮ್ಸ್ ಜೊತೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, “ಮೋದಿ ಸರ್ಕಾರದ ಹೆಣ್ಣುಮಕ್ಕಳ ಕನಿಷ್ಠ ವಯೋಮಿತಿಯನ್ನು 21ಕ್ಕೆ ಏರಿಸುವ ಆತುರದ ಯೋಜನೆ, ಸಂಶಯಾಸ್ಪದ ಯೋಜನೆ, ಅತ್ಯಂತ ಪ್ರಶ್ನಾರ್ಹ ಮತ್ತು ರಾಜಕೀಯ ಪ್ರೇರಿತ. ಸರ್ಕಾರದ ಈ ಪ್ರಸ್ತಾಪವನ್ನು ಈಗಾಗಲೇ ವಿವಿಧ ಮಹಿಳಾ ಪ್ರತಿನಿಧಿಗಳು ಮತ್ತು ಸಂಘಟನೆಗಳು ತೀವ್ರವಾಗಿ ಟೀಕಿಸಿವೆ. ಅವರು ಅದನ್ನು ಅವೈಜ್ಞಾನಿಕ ಮತ್ತು ಅವಾಸ್ತವಿಕ ಎಂದು ತಳ್ಳಿಹಾಕಿದ್ದಾರೆ” ಎಂದು ಹೇಳಿದ್ದಾರೆ.

Advertisement

ಕಾಂಗ್ರೆಸ್ ನಾಯಕ ಮಾತನಾಡುತ್ತ, “ಗ್ರಾಮೀಣ ಪ್ರದೇಶದ ಯುವತಿಯರು ತಮ್ಮ ಶೈಕ್ಷಣಿಕ ಮತ್ತು ಆರ್ಥಿಕ ಉನ್ನತಿಗೆ ಹೆಜ್ಜೆಗಳನ್ನಿಡಲು ಬಯಸುತ್ತಾರೆ. ಮೇಲ್ನೋಟಕ್ಕೆ, ಈ ಪ್ರಸ್ತಾಪವನ್ನು ತರುವ ಮೊದಲು ಸರ್ಕಾರವು ವಿವಿಧ ಸಂಘಟನೆಗಳು, ಮಹಿಳಾ ಪ್ರತಿನಿಧಿಗಳ ಜತೆ ಸರಿಯಾದ ಚರ್ಚೆಯನ್ನು ನಡೆಸಲಿಲ್ಲ. ಆದ್ದರಿಂದ, ಇಂತಹ ಮಸೂದೆಯನ್ನು ಮುಂದುವರಿಸುವ ಸರ್ಕಾರದ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷವು ವಿರೋಧಿಸುತ್ತದೆ” ಎಂದರು.

ವೇಣುಗೋಪಾಲ್ ಮುಂದೆ ಮಾತನಾಡುತ್ತ, “ಮೋದಿ ಸರ್ಕಾರವು ನಿಜವಾಗಿಯೂ ಗಂಭೀರವಾಗಿದೆ ಮತ್ತು ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದ್ದರೆ, ಬದಲಿಗೆ, ದೀರ್ಘಾವಧಿಯಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಎರಡರಷ್ಟು ಸ್ಥಾನಗಳಿಗೆ ಮೀಸಲಾತಿ ನೀಡಿ” ಎಂದರು.

ಅವರು ಮುಂದೆ ಮಾತನಾಡುತ್ತ, “ಮಹಿಳಾ ಪ್ರತಿನಿಧಿಗಳು ಮತ್ತು ಸಂಸ್ಥೆಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಮಹಿಳೆಯರಿಗೆ ಕನಿಷ್ಠ ವಿವಾಹದ ವಯಸ್ಸನ್ನು ಹೆಚ್ಚಿಸುವ ತನ್ನ ಪ್ರಸ್ತಾವನೆಯ ಕುರಿತು ಸರ್ಕಾರವು ಸಮಗ್ರ ಚರ್ಚೆಯನ್ನು ಪ್ರಾರಂಭಿಸಬೇಕು”. ರಾಜಕೀಯ  ಉದ್ದೇಶದಿಂದ ಇದನ್ನೆಲ್ಲಾ ಮಾಡಲಾಗುತ್ತಿದ್ದು ಅವರು, ರೈತರ ಸಮಸ್ಯೆಗಳು, ಲಖೀಂಪುರದ ಘಟನೆಗಳಿಂದ ಗಮನ ಬೇರೆಡೆ ಸೆಳೆಯಲು ಹಾಗು ಕೇಂದ್ರ ಸಚಿವ ಅಜಯ್ ಅವರ ಮೇಲಿನ ಆರೋಪಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಪ್ರಸ್ತಾಪವನ್ನು ತರಲಾಗಿದೆ” ಎಂದರು‌.

ಕಾಂಗ್ರೆಸ್ ಹೊರತಾಗಿ ಸಮಾಜವಾದಿ ಪಕ್ಷ, ಎಡಪಕ್ಷ, ಐಯುಎಂಎಲ್, ಎಐಎಂಐಎಂ ಪಕ್ಷಗಳೂ ಮೋದಿ ಸರ್ಕಾರದ ಈ ಪ್ರಸ್ತಾಪದ ವಿರುದ್ಧ ತಿರುಗಿಬಿದ್ದಿವೆ. ಈ ಪ್ರಸ್ತಾವನೆ ತರುವ ಮೂಲಕ ಸರ್ಕಾರ ಮುಸ್ಲಿಂ ಹಾಗು ಇತರ ಧರ್ಮಗಳ ಪರ್ಸನಲ್ ಲಾ (ಕಾನೂನು) ಗಳಲ್ಲಿ ನುಸುಳಲು ಯತ್ನಿಸಿದೆ ಎಂದು ಕೆಲವು ಮುಸ್ಲಿಂ ಸಂಘಟನೆಗಳು ಆರೋಪಿಸುತ್ತಿವೆ.

“ಮದುವೆ ಲೇಟ್ ಆದ್ರೆ ಹೆಣ್ಣುಮಕ್ಕಳು ಬ್ಲೂಫಿಲಂ ನೋಡೋಕೆ ಶುರುಮಾಡ್ತಾರೆ, ಮುಂದೆ ಮಕ್ಕಳು ಹುಟ್ಟಲ್ಲ”: ಎಸ್‌ಟಿ ಹಸನ್, SP ಸಂಸದ

ಇದನ್ನು ಸದನದಲ್ಲಿ ವಿರೋಧಿಸುತ್ತೇವೆ ಎಂದು ಹೇಳಿದ ಸಮಾಜವಾದಿ ಪಕ್ಷದ ಸಂಸದ ಶಫೀಕ್ ಉರ್ ರೆಹಮಾನ್ ಬುರ್ಕೆ ಮಾತನಾಡುತ್ತ, ಮದುವೆಯ ವಯಸ್ಸು 18 ರ ಬದಲು 17 ಆಗಿರಬೇಕು ಎಂದರು. ಇದೇ ವೇಳೆ ಸಮಾಜವಾದಿ ಪಕ್ಷದ ಸಂಸದ ಎಸ್.ಟಿ.ಹಸನ್ ಮಾತನಾಡಿ, ಫರ್ಟಿಲಿಟಿ ಏಜ್ ಆದ ನಂತರ ಮದುವೆಯಿಂದ ಏನು ಪ್ರಯೋಜನ? ತಡವಾಗಿ ಮದುವೆಯಾದರೆ ಮಕ್ಕಳಾಗುವುದು ಕಷ್ಟ ಎಂದಿದ್ದಾರೆ.

ವಾಸ್ತವವಾಗಿ, ಈಗ ಸಮಾಜವಾದಿ ಪಕ್ಷದ ಇನ್ನೊಬ್ಬ ಸಂಸದ ಎಸ್‌ಟಿ ಹಸನ್ ಕೂಡ ಶಫೀಕ್ ಉರ್ ರೆಹಮಾನ್ ಅವರ ಹೇಳಿಕೆಯನ್ನು ಸಮರ್ಥಿಸುತ್ತ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ. ಅವರು ತಮ್ಮ ಹೇಳಿಕೆಯಲ್ಲಿ, “ಹುಡುಗಿಯರ ಮದುವೆಯ ವಯಸ್ಸನ್ನು 21 ಅಲ್ಲ 16-17 ಕ್ಕೆ ಬದಲಾಯಿಸಬೇಕು… ಮದುವೆ ವಿಳಂಬವಾದರೆ, ಹೆಣ್ಣುಮಕ್ಕಳು ಮಕ್ಕಳು ಇಂಟರ್ನೆಟ್ ನಲ್ಲಿ, ಕೊಳಕು (ಅಶ್ಲೀಲ) ವೀಡಿಯೊಗಳನ್ನು ನೋಡುತ್ತಾರೆ. ಅಶ್ಲೀಲ ವಿಡಿಯೋ ನೋಡಿ ಅಸಭ್ಯವಾಗಿ ವರ್ತಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಮದುವೆಯ ವಯಸ್ಸನ್ನು ಹೆಚ್ಚಿಸುವುದರಿಂದ ಹೆಣ್ಣು ಮಕ್ಕಳು ಅನುಚಿತ ವರ್ತನೆ ಮಾಡೋಕೆ ಶುರು ಮಾಡ್ತಾರೆ” ಎಂದಿದ್ದಾರೆ.

ಎಸ್.ಟಿ ಹಸನ್ ಮುಂದೆ ಮಾತನಾಡುತ್ತ, “ಮದುವೆ ಬೇಗ ಆದರೆ ಮಕ್ಕಳೂ ಬೇಗ ಹುಟ್ಟುತ್ತಾರೆ, ಯಾಕಂದ್ರೆ ಮಹಿಳೆಯರ ಫರ್ಟಿಲಿಟಿಯ ವಯಸ್ಸು 15-30 ರವರೆಗೇ ಇರುತ್ತೆ. ಅಂಥದ್ರಲ್ಲು ಮದುವೆಯ ವಯಸ್ಸಿನಲ್ಲಿ ತಡವಾಗಬಾರದು. ನನ್ನ ಪ್ರಕಾರ ಯುವತಿ ತಿಳುವಳಿಕೆಯುಳ್ಳವಳಾಗಿದ್ದರೆ ಆಕೆಯನ್ನ 16 ನೆಯ ವಯಸ್ಸಿನಲ್ಲೇ ಮದುವೆಯಾದರೂ ತಪ್ಪಿಲ್ಲ. ಯುವತಿ 18 ನೆಯ ವಯಸ್ಸಿಗೆ ವೋಟ್ ಹಾಕಬಹುದು ಅಂತಾದ್ರೆ ಮದುವೆ ಮಾಡಿಕೊಳ್ಳೋದ್ರಲ್ಲಿ ತಪ್ಪೇನು?” ಎಂದಿದ್ದಾರೆ.

ಇದೇ ವೇಳೆ ಶಫೀಕ್ ಉರ್ ರೆಹಮಾನ್ ಬರ್ಕ್ ಹೇಳಿಕೆಗೆ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಟಾಹ್‌ನ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್ ಮಾತನಾಡಿ, “ಇದು ಗುಲಾಮಗಿರಿಯ ಜನರ ಮನಸ್ಥಿತಿ, ಅವರು ಯಾವಾಗಲೂ ಹೆಣ್ಣುಮಕ್ಕಳನ್ನು ಗುಲಾಮರನ್ನಾಗಿ ಇಡಲು ಬಯಸುತ್ತಾರೆ. ಮೋದಿ ಸರ್ಕಾರ ಸಂವಿಧಾನದ ನೆರವಿನಿಂದ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುತ್ತಿದೆ” ಎಂದರು.

ಈ ಮತಾಂಧ ನಾಯಕರಿಗೆ ಮದುವೆಯ ವಯಸ್ಸಿನ ಬಗ್ಗೆ ತಕರಾರಲ್ಲ ಬದಲಾಗಿ ತಮ್ಮ ಜನಸಂಖ್ಯೆ ವೃದ್ಧಿ ಮಾಡಿ ಭಾರತವನ್ನ ಮುಸ್ಲಿಂ ಬಾಹುಳ್ಯ ದೇಶ ಮಾಡಬೇಕಿದೆ ಅಷ್ಟೇ.

ಎಐಎಂಐಎಂ ಪಕ್ಷದ ಉತ್ತಪ್ರದೇಶದ ಅಲಿಗಢ ಜಿಲ್ಲಾಧ್ಯಕ್ಷ ಮತ್ತು ಒವೈಸಿ ಆಪ್ತ ಗುಫ್ರಾನ್ ನೂರ್‌ನ ವಿವಾದಾತ್ಮಕ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆಯಲ್ಲಿ, ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುವವರನ್ನು ವಿರೋಧಿಸುವುದು ಮತ್ತು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವುದನ್ನ ಈತ ಪ್ರತಿಪಾದಿಸುತ್ತಿದ್ದಾನೆ. ನಾವು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸದಿದ್ದರೆ ನಾವು ಈ ಭಾರತದ ಮೇಲೆ ರಾಜ್ (ಅಧಿಕಾರ) ನಡೆಸಲು ಸಾಧ್ಯ? ಎಂದು ಗುಫ್ರಾನ್ ನೂರ್ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಗುಫ್ರಾನ್ ನೂರ್, “ನಮ್ಮ ಮುಖ್ಯಸ್ಥ ಓವೈಸ್ ಸಾಹಿಬ್ ಅಲ್ಲಾನ ಹೆಸರೇಳಿ ಮಾತ್ರ ಹೆದರಿಸುತ್ತಾರೆ. ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ನವರು ಭಾಷಣ ಆರಂಭಿಸಿದಾಗ ಬಿಜೆಪಿಯ ಹೆಸರಿನಿಂದ ಹೆದರಿಸುತ್ತಾರೆ. ಮನುಷ್ಯರಿಗೆ ಹೆದರಿಸುತ್ತಾರೆ‌. ಮೊದಲು ಇಲ್ಲಿ ವ್ಯತ್ಯಾಸ ತಿಳಿದುಕೊಳ್ಳಿ. ಮುಸ್ಲಿಂ ಸಮುದಾಯವು ನಂಬಿಕೆಯಿಂದ ಮತ್ತು ಎಲ್ಲ ರೀತಿಯಲ್ಲೂ ಕೆಳಗಿಳಿದಿದೆ. ಜನ ಹೆಚ್ಚು ಮಕ್ಕಳನ್ನ ಹೆರಬೇಡಿ ಎನ್ನುತ್ತಾರೆ. 1 ಬೇಕು, 2 ಸಾಕು ಎನ್ನುತ್ತಾರೆ. ಅಯ್ಯೋ, ನಾವು ಹೆಚ್ಚೆಚ್ಚು ಮಕ್ಕಳನ್ನ ಹೆರದೇ ಭಾರತದ ಮೇಲೆ ಹೇಗೆ ರಾಜ್ (ಆಳ್ವಿಕೆ) ಮಾಡಬಹುದು? ನಮ್ಮ ಓವೈಸಿ ಸಾಹೇಬರು ಹೇಗೆ ಪ್ರಧಾನಿಯಾಗುತ್ತಾರೆ? ನಮ್ಮ ಶೌಕತ್ ಸಾಹೇಬರು ಹೇಗೆ ಮುಖ್ಯಮಂತ್ರಿಯಾಗುತ್ತಾರೆ? ಮಕ್ಕಳನ್ನು ಹೆಚ್ಚೆಚ್ಚು ಮಾಡದಂತೆ ದಲಿತರನ್ನು ಬೆದರಿಸಲಾಗುತ್ತಿದೆ. ಮಕ್ಕಳನ್ನು ಹೆರೋದನ್ನ ತಡೆಯಲು ಮುಸ್ಲಿಮರನ್ನು ಬೆದರಿಸಲಾಗುತ್ತಿದೆ. ಮಕ್ಕಳನ್ನು ಹೆರೋದನ್ನ ಯಾಕೆ ಬಂದ್ ಮಾಡಬೇಕು? ಇದು ನಮ್ಮ ಷರಿಯತ್‌ನ ವಿರುದ್ಧವಾಗಿದೆ. ನಮ್ಮ ಮಹಿಳೆಯರು ಮತ್ತು ಯುವತಿಯರು ಬುರ್ಖಾ ಹಾಕಿಕೊಳ್ಳಬೇಕು” ಎಂದು ಹೇಳೋದನ್ನ ನೀವು ಕೇಳಬಹುದು.

ಗಮನಾರ್ಹವೆಂದರೆ ಕೆಲವು ದಿನಗಳ ಹಿಂದೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡು ಈ ಸಂಬಂಧ ನಿರ್ಣಯವನ್ನು ಅಂಗೀಕರಿಸಿತ್ತು. ಇದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು 2020 ರ ಆಗಸ್ಟ್ 15 ರಂದು ಕೆಂಪು ಕೋಟೆಯ ಆವರಣದಿಂದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಘೋಷಿಸಿದ್ದರು. ಇದರ ಹಿಂದಿನ ಕಾರಣವನ್ನು ವಿವರಿಸಿದ ಪ್ರಧಾನಿ, “ಸರ್ಕಾರವು ಯಾವಾಗಲೂ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಹೆಣ್ಣು ಮಕ್ಕಳನ್ನು ಅಪೌಷ್ಟಿಕತೆಯಿಂದ ರಕ್ಷಿಸಲು, ಅವರನ್ನ ಸರಿಯಾದ ವಯಸ್ಸಿನಲ್ಲಿ ಮದುವೆ ಮಾಡುವುದು ಅವಶ್ಯಕ” ಎಂದಿದ್ದರು.

Advertisement
Share this on...