ಇಂಗ್ಲೆಂಡಿನ ನದಿಯ ಆಳದಲ್ಲಿ ಪತ್ತೆಯಾಯ್ತು 10 ಸಾವಿರ ವರ್ಷಗಳಷ್ಟು ಪುರಾತನವಾದ ಭಾರತದ ಬೃಹತ್ ರಾಹುಯಂತ್ರ ಹಾಗು ರಹಸ್ಯಮಯ ಕ್ಯೂಬ್‌ಗಳು: ಅವು ಅಲ್ಲಿ ತಲುಪಿದ್ದು ಹೇಗೆ?

in Kannada News/News/ಕನ್ನಡ ಮಾಹಿತಿ 20,658 views

ರಹಸ್ಯಗಳ ಬಗ್ಗೆ ತಿಳಿದುಕೊಳ್ಳಲು ಯಾರಿಗೆ ತಾನೇ ಕುತೂಹಲವಿರಲ್ಲ ಹೇಳಿ? ಈ ಪೃಥ್ವಿಯು ತನ್ನೊಡಲಲ್ಲಿ ಅಸಂಖ್ಯಾತ ರಹಸ್ಯಗಳನ್ನು ಹೊಂದಿದ್ದು ಅವುಗಳನ್ನ ಭೇದಿಸಲು ಈಗಲೂ ಸಾಧ್ಯವಾಗುತ್ತಿಲ್ಲ. ಈಗ ನಾವು ಅಂತಹುದೇ ರಹಸ್ಯವೊಂದನ್ನ ನಿಮಗೆ ತಿಳಿಸಲು ಹೊರಟಿದ್ದು ಇದು ಇಂಗ್ಲೆಂಡಿನ ಕೊವೆಂಟ್ರಿ ಬಳಿಯಿರುವ ನದಿಯಲ್ಲಿ ಸಿಕ್ಕ ಕೆಲ ನಿಗೂಢ ವಸ್ತುಗಳದ್ದಾಗಿದೆ. ಮ್ಯಾಗ್ನೆಟ್ ಮೀನುಗಾರನು ತನ್ನ ಇಬ್ಬರು ಮಕ್ಕಳೊಂದಿಗೆ ನದಿಯಲ್ಲಿ ಮೀನು ಹಿಡಿಯುತ್ತಿರುವಾಗ ಆತನಿಗೆ ಸುಮಾರು 60 ನಿಗೂಢ ಕ್ಯೂಬ್ಸ್  (ಘನಾಕೃತಿ)ಗಳು ಸಿಕ್ಕಿವೆ, ಆ ಘನಾಕೃತಿಗಳು ಪವಿತ್ರ ಸಂಖ್ಯಾ ಶಾಸನ (numerical inscriptions) ಗಳನ್ನು ತೋರಿಸುತ್ತದೆ ಎಂದು ನಂಬಲಾಗಿದೆ.

Advertisement

38 ವರ್ಷದ ಫಿನ್ಹಾಮ್ ಪ್ರದೇಶದ ಮೀನುಗಾರ ಮ್ಯಾಗ್ನೆಟ್ ಎಂಬಾತನಿಗೆ “ಲೀಡ್ ಬ್ಲಾಕ್ಸ್” ಗಳು ಸಿಕ್ಕಿವೆ. ತಂದೆ ಮತ್ತು ಮಕ್ಕಳು ಆ ಪ್ರದೇಶದಲ್ಲಿ ಅಂದರೆ ನದಿಯಲ್ಲಿ ಬಲವಾದ ನಿಯೋಡೈಮಿಯಮ್ ಮ್ಯಾಗ್ನೆಟ್ನೊಂದಿಗೆ ಎಳೆಯಲು ಲಭ್ಯವಿರುವ ಫೆರೋಮ್ಯಾಗ್ನೆಟಿಕ್ ವಸ್ತುಗಳನ್ನು ಹುಡುಕುತ್ತಿದ್ದರು.

ಆದರೆ ಅವರು ಹುಡುಕುತ್ತಿದ್ದ ವಸ್ತುಗಳೇನೋ ಸಿಗಲಿಲ್ಲ ಆದರೆ ರಹಸ್ಯಮಯ 60 ನಿಗೂಢ ಕ್ಯೂಬ್ಸ್ ಸಿಕ್ಕವು. ಅವುಗಳನ್ನ ಎರಡು ಬೆರಳುಗಳಲ್ಲಿ ಹಿಡಿಯಬಹುದಾಗಿದ್ದು ಒಂದೊಂದು ಕ್ಯೂಬ್ ಗಳೂ 125 ಗ್ರಾಮ್ ನಷ್ಟಿವೆ. ಅವುಗಳು ಪರ್ಫೆಕ್ಟ್ ಗ್ರಿಡ್ ನಂತಿದ್ದು ಅವುಗಳ ಮೇಲೆ ಸಂಸ್ಕೃತದ ಕೆತ್ತನೆಯಿರುವ ಶಾಸನಗಳಿವೆ.

ಮೊದಮೊದಲು ಇವುಗಳು ಸಣ್ಣ ಟೈಲ್ಸ್ ಅಥವ ಕಲ್ಲುಗಳಿರುಬಹುದೆಂದು ಊಹಿಸಲಾಗಿತ್ತು

ಮೀನುಗಾರ ಹಾಗು ಆತನ ಮಕ್ಕಳು ಮೊದಮೊದಲು ಆ ಕ್ಯೂಬ್ ಗಳು ಸಣ್ಣ ಕಲ್ಲುಗಳ ರಾಶಿಯಾಗಿದ್ದು ಅವುಗಳನ್ನ ಕೊವೆಂಟ್ರಿ ನದಿಯಲ್ಲಿ ಸಿಕ್ಕಿವೆ ಅಂದುಕೊಂಡಿದ್ದರು.

ಅಂದು ನಡೆದ ಆ ಅಸಾಮಾನ್ಯ ಘಟನೆಯನ್ನು ಆತ ಹೇಳುತ್ತ, “ನಾವು ಲಾಕ್‌ಡೌನ್‌ನಲ್ಲಿ ನಮ್ಮ ದೈನಂದಿನ ಚಟುವಟಿಕೆಯಾಗಿ ಮ್ಯಾಗ್ನೆಟ್ ಫಿಶಿಂಗ್ ಅನ್ನು ನಡೆಸುತ್ತಿದ್ದೆವು ಮತ್ತು ನಾವು ಮೂವರೂ ಪ್ರತ್ಯೇಕ ಸ್ಥಳದಲ್ಲಿದ್ದೆವು. ಮೊದಲಿಗೆ, ನಾವು ಕೀ, ನಾಣ್ಯಗಳು ಮತ್ತು ಇತರ ಬಿಟ್‌ಗಳು ಮತ್ತು ಬಾಬ್‌ಗಳನ್ನು ಕಂಡುಕೊಂಡೆವು, ಮೊದಮೊದಲು ನಾವು ಅವುಗಳನ್ನು ಯಾವುದೋ ಕಲ್ಲುಗಳು ಅಂದುಕೊಂಡಿದ್ದೆವು”

ಬಳಿಕ ಆ ವಸ್ತುಗಳೇನಂತ ಗೊತ್ತಾಗದೆ ಆತ ಫೇಸ್ಬುಕ್ ಲೈವ್ ಮೂಲಕ ಆ ವಸ್ತುಗಳಾದರೂ ಏನು ಅಂತ ತನ್ನ ಫೇಸ್ಬುಕ್ ಸ್ನೇಹಿತರಿಗೆ ಕೇಳುತ್ತಾನೆ. ಆತ ಮುಂದೆ ಮಾತನಾಡುತ್ತ, “ನನಗೆ ಸಿಕ್ಕ ಕ್ಯೂಬ್ಸ್ ಗಳನ್ನ ನಾನು ಕಾಮೆರಾದ ಮುಂದೆ ಅವುಗಳನ್ನ ತೋರಿಸಿದೆ” ಎನ್ನುತ್ತಾನೆ.

ಆದರೆ ಅವನಿಗೆ ಯಾರಿಂದಲೂ ಅದಕ್ಕೆ ಉತ್ತರ ಸಿಗಲಿಲ್ಲ. ಬಳಿಕ ಆತ ತನಗೆ ಸಿಕ್ಕ ರಹಸ್ಯಮಯ ಕ್ಯೂಬ್ ಗಳ ಫೋಟೋಗಳನ್ನ ಫೇಸ್ಬುಕ್ ಮೇಲೆ ಪೋಸ್ಟ್ ಮಾಡುತ್ತಾನೆ. ಬಳಿಕ ಆ ಫೋಟೋಗಳನ್ನ ನೋಡಿ ಸಾವಿರಾರು ಜನ ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಂದಿಡಲು ಪ್ರಾರಂಭಿಸಿದರು.

ಬಳಿಕ ರೀಡ್ (ಆ ಮೀನುಗಾರ) ತನಗೆ ಕ್ಯೂಬ್ಸ್ ಸಿಕ್ಕ ಪ್ರದೇಶಕ್ಕೆ ಮತ್ತೆರಡು ಬಾರಿ ಭೇಟಿ ನೀಡುತ್ತಾನೆ. ಆಗ ಅವನಿಗೆ ಬೆಳ್ಳಿ ನಾಣ್ಯವೊಂದು ಸಿಗುತ್ತದೆ.

ಅಷ್ಟಕ್ಕೂ ಆ ವಸ್ತುಗಳಾದರೂ ಏನು?

ತಜ್ಞರು ಹೇಳುವ ಪ್ರಕಾರ ಆ ಕ್ಯೂಬ್ ಹಾಗು ನಾಣ್ಯಗಳು ಹಿಂದೂ ಸಂಸ್ಕತಿಗೆ ಸಂಬಂಧಿಸಿದ್ದಾಗಿದ್ದು ಹಿಂದುಗಳು ಪ್ರಾರ್ಥನೆ, ಪೂಜೆ ಪುನಸ್ಕಾರಕ್ಕಾಗಿ ಬಳಸುತ್ತಿದ್ದ ವಸ್ತುಗಳೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ‌. ಅವುಗಳು ಭಾರತದ ಮೂಲದ್ದಾಗಿದ್ದು ಅವುಗಳು ಪ್ರಾರ್ಥನೆಯ ಸಮಯದಲ್ಲಿ ಬಳಸಲಾಗುತ್ತಿತ್ತು ಹಾಗು ನದಿಯಲ್ಲಿ ನಾಣ್ಯಗಳನ್ನ ಹೇಗೆ ಎಸೆಯಲಾಗುತ್ತೋ ಅದೇ ರೀತಿ ಅವುಗಳನ್ನೂ ನದಿಯಲ್ಲಿ ಎಸೆಯಲಾಗಿತ್ತು ಎಂದು ರೀಡ್ ಹೇಳುತ್ತಾನೆ.

ಅಲ್ಲಿ ಸಿಕ್ಕಿರುವ 60 ಕ್ಯೂಬ್ ಗಳೂ ಒಂದೇ ರೀತಿಯ ಗಾತ್ರದ್ದಾಗಿದ್ದು ನಾಲ್ಕು ಮುಖಗಳ ಪೈಕಿ ಎಲ್ಲ ನಾಣ್ಯಗಳ ಒಂದು ಬದಿ ಒಂದೇ ರೀತಿಯದ್ದಾಗಿದ್ದು ಉಳಿದ ಮೂರು ಬದಿಗಳ ಮೇಲೆ ಬೇರೆ ಬೇರೆ ಕೆತ್ತನೆಗಳಿವೆ. ತಜ್ಞ ರೆಡ್ಡಿಟರ್ ಹೇಳುವ ಪ್ರಕಾರ, “ಬಹುಶಃ ಅವುಗಳು ಜ್ಯೋತಿಷ್ಯ ಟೋಕನ್ಸ್ ಗಳಿರಬಹುದು ಯಾಕಂದ್ರೆ ಅವುಗಳ ಮೇಲೆ ನಾವು ಸಂಖ್ಯೆಗಳನ್ನ ಹಾಗು ಗ್ರಹಗಳಾದ ರಾಹು, ಶಕ್ತಿದೇವತೆ, ಸರ್ಪಗಳನ್ನ ಕಾಣಬಹುದಾಗಿದೆ” ಎನ್ನುತ್ತಾರೆ‌.

‘ಮ್ಯಾಜಿಕ್’ ಸ್ಕ್ವಾಯರ್ಸ್

ಅವುಗಳನ್ನ ಅಧ್ಯಯನ ನಡೆಸಿರುವ ಭಾರತೀಯ ತಜ್ಞರು ಹೇಳುವ ಪ್ರಕಾರ ಆ ಕ್ಯೂಬ್ ಗಳ ಮೇಲೆ ಭಾರತೀಯ ಸಂಖ್ಯೆಗಳನ್ನ ಈ ರೀತಿಯಾಗಿ ಬರೆಯಲಾಗಿದೆ.

15 8 13

10 12 14

11 16 9

ಎಲ್ಲ ಸಾಲುಗಳು, ಕಾಲಮ್‌ಗಳು ಮತ್ತು ಕರ್ಣಗಳನ್ನ ಕೂಡಿಸಿದರೆ ಸಿಗುವ ಸಂಖ್ಯೆ 36 ಆಗಿದ್ದು ಇದು ಮ್ಯಾಜಿಕ್ ಸ್ಕ್ವಾಯರ್ ಆಗುದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಇದನಗಬ ನವಗ್ರಹ ಯಂತ್ರವೆಂದೂ ಕರೆಯುತ್ತಾರೆ. ನವಗ್ರಹ ಅಂದರೆ 9 ಗ್ರಹಳ ಪ್ರತೀಕ ವಾಗಿದ್ದು ಅವುಗಳ ಕಾಂಬಿನೇಷನ್ ಸಂಖ್ಯೆ 9 ರಿಂದ ಕೂಡಿರುತ್ತದೆ. ಅವುಗಳನ್ನೆಲ್ಲಾ ಕೂಡಿಸಿದರೆ ಮ್ಯಾಜಿಕ್ ಸ್ಕ್ವಾಯರ್ ಸಿದ್ಧವಾಗುತ್ತದೆ.

ಆ ಕ್ಯೂಬ್ ಗಳ ಮೇಲ್ಭಾಗದಲ್ಲಿ “ಓಂ ರಾಮ್ ರವಾಹೇ ನಮಹಃ ಓಂ‌ರಾಗ ರವಾಹೇ ನಮಃ” ಎಂದು ಬರೆಯಲಾಗಿದ್ದು ಅದನ್ನ ಬೀಜ ಮಂತ್ರವೆಂದು ಕರೆಯಲಾಗುತ್ತದೆ.

ಹರಿಯುವ ನೀರಿನಲ್ಲಿ ಸೀಸವನ್ನು (ರಾಂಗಾ) ಹಾಕುವುದು ಈ ಅಭ್ಯಾಸದಲ್ಲಿ ನಿರ್ದಿಷ್ಟ ವಿಷಯಗಳು ಮತ್ತು ಜ್ಯೋತಿಷ್ಯ ಸಂದರ್ಭಗಳಲ್ಲಿ ಪರಿಹಾರದ ರೂಪವಾಗಿ ಬಳಸಲ್ಪಡುತ್ತವೆ.

ಇದಲ್ಲದೆ, ರೆಡ್ಡಿಟರ್ ಗಮನಿಸಿದಂತೆ, ಗಣಿತ-ಮುಂಭಾಗದಲ್ಲಿಯೂ ಅವು ಆಸಕ್ತಿದಾಯಕವಾಗಿವೆ.  “ಮ್ಯಾಜಿಕ್ ಚೌಕಗಳು (ಮತ್ತು ಲ್ಯಾಟಿನ್ ಚೌಕಗಳು ಎಂದು ಕರೆಯಲ್ಪಡುವ ಇದೇ ರೀತಿಯ ಪರಿಕಲ್ಪನೆಯು) ಸಂಪನ್ಮೂಲ ವಿತರಣೆ ಮತ್ತು ವೇಳಾಪಟ್ಟಿ ಸಮಸ್ಯೆಗಳ ಸಂಖ್ಯಾತ್ಮಕ ಪ್ರಾತಿನಿಧ್ಯಗಳಾಗಿ ಕಾರ್ಯನಿರ್ವಹಿಸಬಹುದು, ಅಲ್ಲಿ ನೀವು ಪ್ರತಿಯೊಂದು ಘಟಕವನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು.”

ಗಣಿತದ ಆಸಕ್ತಿಯಿರುವವರು ಈ thread (ಎಳೆಯನ್ನು) ಜಾಡು ಹಿಡಿಸಯ ಮ್ಯಾಜಿಕ್ ಕ್ಯೂಬ್‌ಗಳಿಂದ ಹಿಡಿದು ಲ್ಯಾಟಿನ್ ಕ್ಯೂಬ್ ಯೂಲರ್‌ನ ಕೆಲಸದ ಪ್ರಸಿದ್ಧ ಕಂಜೆಕ್ಚರ್ಸ್ ವರೆಗೆ ತಲುಪಬಹುದಾಗಿದೆ.

ಆದರೆ ಹಿಂದೂ ಸಂಸ್ಕೃತಿಯ ಆ 60 ಕ್ಯೂಬ್, ನಾಣ್ಯಗಳು ಇಂಗ್ಲೆಂಡಿನ ನದಿಯಲ್ಲಿ ಹೇಗೆ ಬಂದವು ಎಂಬುದರ ರಹಸ್ಯ ಮಾತ್ರ ಈಗಲೂ ಬಗೆಹರಿಸಲು ಸಾಧ್ಯವಾಗದೇ ರಹಸ್ಯಗಳಾಗೇ ಉಳಿದಿವೆ.

– Vinod Hindu Nationalist 

Advertisement
Share this on...