ಬರೋಬ್ಬರಿ 3 ವರ್ಷಗಳ ಕಾಲ ಔರಂಗಜೇಬ್ ತನ್ನ ಬೃಹತ್ ಸೇನೆಯೊಂದಿಗೆ ಮೊಕ್ಕಾಂ ಹೂಡಿದರೂ ಈ ಮಂದಿರವನ್ನ ಕೆಡವಲು ಸಾಧ್ಯವಾಗಲಿಲ್ಲ: ಏಲಿಯನ್ ಗಳು ಕಟ್ಟಿದ್ದಾ ಈ ದೇವಾಲಯ? ಏನಿದರ ಇತಿಹಾಸ

in Kannada News/News/ಕನ್ನಡ ಮಾಹಿತಿ 240 views

ಅಲ್ಲಿ ಭವ್ಯವಾದ, ಮುಂದಿನ ಅನೇಕಾನೇಕ ಪೀಳಿಗೆಗಳು ಕಳೆದರೂ ಕಟ್ಟಲು ಸಾಧ್ಯವಾಗದ ಇಂತಹ ದೇವಾಲಯ ಇಲ್ಲಿತ್ತು ಅನ್ನೋ ಯಾವ ಕುರುಹುಗಳೂ ಸಿಗಬಾರದು ಎಂಬ ಕಾರಣಕ್ಕೆ 1682 ರಲ್ಲಿ, ಔರಂಗಜೇಬ್ ಕೈಲಾಸ (ಅಜಂತ ಎಲ್ಲೋರಾ) ದೇವಾಲಯವನ್ನು ಧ್ವಂ ಸ ಗೊಳಿಸಲು ಆದೇಶಿಸಿದ್ದನು. ಇಂದಿಗೂ ಇರುವ ದಾಖಲೆಗಳ ಪ್ರಕಾರ ಒಂದು ಸಾವಿರ ಜನ‌ ಬರೋಬ್ಬರಿ ಮೂರು ವರ್ಷಗಳ ಕಾಲ ಅದನ್ನ ಧ್ವಂ ಸ ಗೊಳಿಸಲು ಕೆಲಸ ಮಾಡಿದರೂ ಅವರು ಅದನ್ನ ಅತ್ಯಂತ ಕಡಿಮೆ 0.00000001% ನಷ್ಟು ಮಾತ್ರ ಹಾನಿ ಮಾಡಲೂ ಸಾಧ್ಯವಾಗಲಿಲ್ಲ. ಔರಂಗಜೇಬನ ಸೈ ನ್ಯ ಇಲ್ಲಿ ಕೆಲವು ಪ್ರತಿಮೆಗಳನ್ನು ಒ ಡೆ ದರು ಹಾಗು ವಿರೂಪಗೊಳಿಸಬಹುದರಷ್ಟೇ, ಆದರೆ ಈ ದೇವಾಲಯವನ್ನು ಸಂಪೂರ್ಣವಾಗಿ ನಾಶಮಾಡಲು ಸಾಧ್ಯವೇಲ್ಲ ಎಂದು ಅವರು ಅರಿತುಕೊಂಡರು. ಔರಂಗಜೇಬನು ಈ ಅಸಾಧ್ಯ ಕೆಲಸವನ್ನು ಕೊನೆಗೂ ಕೈಬಿಟ್ಟನು. ಈ ಧ್ವಂ ಸ ಕಾರ್ಯ ನಡೆಯಬೇಕಿದ್ದರೆ ಸ್ವತಃ ಔರಂಗಜೇಬ್ ಈ ಜಾಗದಲ್ಲಿ ಬರೋಬ್ಬರಿ 1 ತಿಂಗಳುಗಳ ಕಾಲ ತಂಗಿದ್ದ.

Advertisement

ಅಷ್ಟಕ್ಕೂ ಈ ಮಂದಿರ ಎಲ್ಲಿದೆ? ಇದನ್ನ ನಿರ್ಮಿಸಿದ್ದು ಯಾರು? ಇದನ್ನ ಏಲಿಯನ್ ಗಳು ನಿರ್ಮಿಸಿರಬಹುದು ಅಂತ ತಜ್ಞರು ಹೇಳೋದ್ಯಾಕೆ? ಬನ್ನಿ ನಿಮಗೆ ಈ ವೈಭಯಯುತ, ಅತ್ಯಂತರ ಕ್ಲಿಷ್ಟಕರ ರೀತಿಯಲ್ಲಿ ಕಟ್ಟಲಾದ ಈ ಭವ್ಯ ಮಂದಿರದ ಬಗ್ಗೆ ತಿಳಿಸುತ್ತೇವೆ.

ಅಜಂತಾ ಎಲ್ಲೋರಾ ಗುಹೆಗಳು!!

ಅಜಂತಾ ಎಲ್ಲೋರಾ ಗುಹೆಗಳು, ಅಲ್ಲಿನ ವಾಸ್ತುಕಲೆ, ಶಿಲ್ಪಕಲೆ ಇಡೀ ಜಗತ್ತನ್ನೇ ಕೈ ಬೀಸಿ ಕರೆಯುತ್ತವೆ. ಆದರೆ ಬೆಟ್ಟ ಗುಡ್ಡಗಳ ನಡುವೆ ಕಟ್ಟಿರುವ ಈ ಅದ್ಭುತ ಶಿಲ್ಪಕಲೆಗಳನ್ನ ಕಟ್ಟಿದವರು ಯಾರು? ಅದನ್ನ ಹೇಗೆ ಕಟ್ಟಲಾಯಿತು? ಇದನ್ನ ಮನುಷ್ಯರು ಕಟ್ಟೋಕೆ ಸಾಧ್ಯವೇ ಇಲ್ಲ ಇದು ಅನ್ಯಗ್ರಹ ಜೀವಿಗಳೇ ಕಟ್ಟಿದ್ದು ಅಂತ ಹಲವು ಜನರ ವಾದ.

ನಿಜಕ್ಕೂ‌ಅಜಂತಾ ಎಲ್ಲೋರಾ ಗುಹೆಗಳನ್ನ ನಿರ್ಮಿಸಿದ್ದು ಅನ್ಯಗ್ರಹ ಜೀವಿಗಳಾದ ಏಲಿಯನ್ ಗಳಾ?
ಇಲ್ಲ. ಈ ಅದ್ಭುತ ಶಿಲ್ಪಕಲೆಯಿರುವ ಗುಹೆಗಳನ್ನ ನಿರ್ಮಿಸಿರೋದು ರಾಜ ಹರಿಸೇನ!!

ಒಂದಾನೊಂದು ಕಾಲದಲ್ಲಿ ಒಬ್ಬ ಚಾಣಾಕ್ಷ ಹಾಗು ಬಲಿಷ್ಟ ರಾಜನೊಬ್ಬ ಭಾರತದಲ್ಲಿ ಆಡಳಿತ ನಡೆಸಿದ್ದ. ಆತನ ಹೆಸರೇ ಹರಿಸೇನ, ಆತ ತನ್ನ ಅತಿ ದೊಡ್ಡ ರಾಜ್ಯವನ್ನ 17 ವರ್ಷಗಳ ಕಾಲ ಆಡಳಿತ ನಡೆಸಿದ್ದ. ತನ್ನ ಕೇವಲ 17 ವರ್ಷಗಳ ಆಡಳಿತದಲ್ಲಿ ಆತ ಬರೀ ತನ್ನ ಮಿಲಿಟರಿ ಸಾಮರ್ಥ್ಯವನ್ನಷ್ಟೇ ಹೆಚ್ಚಿಸಿದ್ದಲ್ಲದೆ ಭರತಖಂಡದ ಮೇಲೆ ದಾಳಿಯೆರಗಲು ಬಂದ ಅಧರ್ಮಿಗಳನ್ನ ಹಿಮ್ಮೆಟ್ಟಿಸಿ ಭಾರತಮಾತೆಯ ಗೌರವವನ್ನ ಕಾಪಾಡಿದ್ದ.

ರಾಜಾ ಹರಿಸೇನ ಕೇವಲ ಸಮರ್ಥ ರಾಜನಷ್ಟೇ ಅಲ್ಲ ಬದಲಾಗಿ ಆತ ಶಿಲ್ಪಕಲೆಯಲ್ಲಿಯೂ ಮಾಸ್ಟರ್ ಆಗಿದ್ದ. ಆತ ತನ್ನ ಅಧಿಕಾರಾವಧಿಯಲ್ಲಿ ಕಲೆ ಹಾಗು ವಾಸ್ತುಶಿಲ್ಪಕ್ಕೆ ಹೆಚ್ಚು ಒತ್ತು ನೀಡಿದ್ದ. ಆತ ಸರ್ವ ಧರ್ಮ ಸಹಿಷ್ಣುವಾಗಿದ್ದು ತನ್ನ ರಾಜ್ಯದಲ್ಲಿ ಎಲ ಧರ್ಮೀಯರನ್ನೂ ಸಮಾನವಾಗಿ ನೋಡಿಕಸು ಹಿಂದೂ ಧರ್ಮದ ಪುನರುಜ್ಜೀವಕನಾಗಿ ಆಡಳಿತ ನಡೆಸಿದ್ದ.

ಸಮರ್ಥವಾಗಿ 17 ವರ್ಷಗಳ ಕಾಲ ಆಡಳಿತ ನಡೆಸಿದ್ದ ಹರಿಸೇನನ ಮರಣದ ನಂತರ ಆತನ ಮಗ ಶ್ರವಣಸೇನ ಕೇವಲ 2 ವರ್ಷ ರಾಜ್ಯಭಾರ ನಡೆಸಿದ.

ಇಲ್ಲಿಗೇ ರಾಹ ಹರಿಸೇನನ ಕಥೆ ಮುಕ್ತಾಯವಾಯಿತು ಅಂತಂದರೆ ನಿಮ್ಮ ಊಹೆ ತಪ್ಪು, ಆತನ ಆಡಳಿತದ ಬಗ್ಗೆ ಹೇಳೋಕೆ ಇನ್ನೂ ಹಲವಾರು ಕಥೆಗಳಿವೆ.

ಅಷ್ಟಕ್ಕೂ ಯಾರೀ ರಾಜ ಹರಿಸೇನ? ನಾವು ಇಂದು ಆತನ ಬಗ್ಗೆ ಆತನ ಆಡಳಿತದ ಬಗ್ಗೆ ಯಾಕೆ ತಿಳಿದುಕೊಳ್ಳುವುದು ಅವಶ್ಯ?

ಸಿಂಪಲ್, ಹರಿಸೇನ ಭಾರತ ಕಂಡ ಶ್ರೇಷ್ಟ ರಾಜನಾಗಿದ್ದ, ಆತ ಭರತಖಂಡವನ್ನಾಳಿದ ಇತಿಹಾಸ ಮರೆಯದಂತಹ ಆಡಳಿತವನ್ನ ನೀಡಿ ಹೋದವನಾಗಿದ್ದ.

ಭಾರತ ಕಂಡ ಅಜಂತಾದಂತಹ ಅನೇಕ ಗುಹೆಗಳು, ಶಿಲ್ಪಕಲೆಗಳು, ವಾಸ್ತುಶಿಲ್ಪಗಳು ಭಾರತದ ಕಾಲಖಂಡದಲ್ಲಿ‌ ಕಂಡುಬಂದದ್ದು ರಾಜಾ ಹರಿಸೇನನ ಆಡಳಿತಾವಧಿಯಲ್ಲೇ.

ಆತನ ಆಡಳಿತದಲ್ಲಿ ಬೌದ್ಧ ಕಲೆಗೆ ಆತ ಹೆಚ್ಚು ಒತ್ತು ನೀಡಿದ್ದ, ಆತ ನಿರ್ಮಿಸಿದ್ದ ಅಜಂತಾ ಗುಹೆಗಳು, ಅಲ್ಲಿನ ಮಂದಿರಗಳು, ವಾಸ್ತುಶಿಲ್ಪಕಲೆ ಈಗಲೂ ಇತಿಹಾಸಕಾರರಿಗೆ, ವಿಜ್ಞಾನಕ್ಕೆ ಸವಾಲಾಗಿ ನಿಂತಿವೆ. ಸುಮಾರು 2200 ವರ್ಷಗಳಷ್ಟು ಹಳೆಯದೆಂದು ನಂಬಲಾದ ಅಜಂತಾವನ್ನ ರಾಜ ಹರಿಸೇನ ವೆಂಕಟ ಎಂಬ ರಾಜನ ಮೂಲಕ ಕಟ್ಟಿಸಿದ್ದಂತೆ.

ಇತಿಹಾಸಕಾರರು ಹೇಳುವ ಪ್ರಕಾರ ಹರಿಸೇನ ನಿರ್ಮಿಸಿದ್ದ 17 ಗುಹಾಂತರಗಳೂ ಅದ್ಭುತವಂತೆ ಹಾಗು ಅವುಗಳಲ್ಲಿನ 16 ನೆಯ ಗುಹಾಂತರವಂತೂ ಅತ್ಯದ್ಭುತವಂತ ಇತಿಹಾಸಕಾರರು ಹರಿಸೇನನ ಶಿಲ್ಪಕಲೆಯನ್ನ ಹಾಡಿ ಹೊಗಳುತ್ತಾರೆ.

ಕೇವಲ ಎರಡು ದಶಕಗಳ ಅಂತರದಲ್ಲೇ (ಹರಿಸೇನ ಅಧಿಕಾರಕ್ಕೆ ಬಂದದ್ದು ಕ್ರಿ.ಶ.460 ಹಾಗು ಅಚಾನಕ್ಕಾಗಿ ಮರಣ ಹೊಂದಿದ್ದು ಕ್ರಿ.ಶ 477 ರ ಡಿಸೆಂಬರ್ 31 ರಂದು) ರಾಜ ಹರಿಸೇನ ಹಾಗು ಆತನ ಮಂತ್ರಿಗಳು ಸೇರಿ ಈಗಿರುವ 30 ಗುಹೆಗಳ ಪೈಕಿ‌ 25 ಗುಹಾಂತರಗಳನ್ನ ನಿರ್ಮಿಸಿದ್ದರಂತೆ.

ಈ ಮಾಹಿತಿಯನ್ನಾಧರಿಸಿ ಹೇಳಬೇಕೆಂದರೆ ಅಜಂತಾ ಗುಹೆಗಳ 2/3rd ಭಾಗವನ್ನ ಹರಿಸೇನನೇ ಅದೂ ಕ್ರಿಶ.460 ಹಾಗು 480 ರ ನಡುವೆ ನಿರ್ಮಿಸಲಾಗಿದೆ ಎಂದು ಭಾವಿಸಬಹುದು.

ಬೌದ್ಧ ಸಂಸ್ಕೃತಿಯ ಪ್ರಕಾರ ಬೌದ್ಧ ಮುನಿಗಳು ತಪಸ್ಸಿಗಾಗಿ ಆಯ್ದುಕೊಳ್ಳುತ್ತಿದ್ದ ಜಾಗವೇ ಗುಹೆಗಳಾದ್ದರಿಂದ ಹಾಗು ಚೈತ್ಯ, ವಿಹಾರಗಳನ್ನೇ ಅವರು ಧ್ಯಾನಕ್ಕಾಗಿ ಬಳಸುತ್ತಿದ್ದರಿಂದ ಹರಿಸೇನ ಅಜಂತಾ ಗುಹೆಗಳನ್ನ ನಿರ್ಮಿಸಿದ ಎಂದು ಇತಿಹಾಸಕಾರರು ಹೇಳುತ್ತಾರೆ.

ಅದ್ಭುತ ಶಿಲ್ಪಕಲೆಯ ಗುಹೆಗಳ ನಿರ್ಮಾಣದ ನಂತರ ತತ ಅಲ್ಲಿನ‌ ಗೋಡೆಗಳಿಗೆ ಫ್ರೆಸ್ಕೋ ಪೇಂಟಿಂಗ್ ಮಾಡಿಸಿಟ್ಟನಂತೆ, ಆ ಗುಹೆಗಳಲ್ಲಿನ ಪೇಂಟಿಂಗ್ ಗಳು ಈಗಲೂ ಸುರಕ್ಷಿತವಾಗಿವದ ಹಾಗು ನೀವು ಅದನ್ನ ಈಗಲೂ ಅಲ್ಲಿ ನೋಡಬಹುದಾಗಿದೆ.

ಆದರೆ ಭಾರತದ ಇತಿಹಾಸದ ಗರ್ಭದಲ್ಲಿ ಹೇಗೆ ಅನ್ಯ ರಾಜರುಗಳು ಮರೆಯಾಗಿ ಹೋದರೋ ಅದೇ ರೀತಿಯಲ್ಲಿ ರಾಜ ಹರಿಸೇನನ ಇತಿಹಾಸವೂ ಮರೆಯಾಗಿ ಹೋಗಿದೆ. ಭಾರತದಲ್ಲಿ ಕೆಲವೇ ಬೆರಳೆಣಿಕೆಯಷ್ಟು ಜನ ಹರಿಸೇನನ್ನ ಗುರುತಿಸುತ್ತಾರೆ.

ಅಷ್ಟೇ ಅಲ್ಲ ಇತಿಹಾಸಕಾರರು ರಾಜ ಹರಿಸೇನನ ಮೇಲೆ ಬೆಳಕು ಚೆಲ್ಲುವ ಬದಲು ಅಜಂತಾ ಗುಹೆಗಳನ್ನ ವೆಂಕಟ ಹಾಗು ಶಾತವಾಹನರು ನಿರ್ಮಿಸಿದ್ದರು ಎಂಬ ಸುಳ್ಳು ಇತಿಹಾಸವನ್ನೇ ನಮಗೆ ಬೋಧಿಸುತ್ತ ಬಂದಿದ್ದಾರೆ.
ಹೌದು ರಾಜ ವೆಂಕಟ ಈ ಗುಹೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆದರೆ ಆತನ ಹಿಂದಿದ್ದ ರಾಜ ಹರಿಸೇನನನ್ನ ಮಾತ್ರ ಇತಿಹಾಸಕಾರರು ತಿಳಿಸುವ ಗೋಜಿಗೇ ಹೋಗುವುದಿಲ್ಲ.

ಭಾರತದ ಇತಿಹಾಸ ಕಂಡ ಗುಪ್ತರ ಹಾಗೆ‌ರಾಜ ಹರಿಸೇನ ಕೂಡ ಈ ದೇಶದಲ್ಲಿ ಅದ್ಭುತವಾದ ಆಡಳಿತ ನೀಡಿ ಹೋಗಿದ್ದ ರಾಜನಾಗಿದ್ದ. ಆತನ ಸಾಮ್ರಾಜ್ಯ ಪೂರ್ವದ ಸಮುದ್ರದಿಂದ ದಕ್ಷಿಣದ ಭಾರತದವರೆಗೆ ಹರಡಿಕೊಂಡಿತ್ತು. ಹಾಗು ಆತನ ಸೇನೆಯ ಪರಾಕ್ರಮ ಮಾತ್ರ ಅತ್ಯಧ್ಬುತವಾಗಿತ್ತು.

ಒಂದರ ಹಿಂದೆ ಒಂದರಂತೆ ಗುಹಾಂತರಗಳನ್ನ‌ ನಿರ್ಮಿಸಿದ ರಾಜಾ ಹರಿಸೇನ ಹಾಗು ಆತನ ಮಂತ್ರಿ ವರಾಹದೇವವನ್ನ ಮರೆಯೋಕೆ ಸಾಧ್ಯವೇ ಇಲ್ಲ ಬಿಡಿ.

ಆತನ ಇತಿಹಾಸವನ್ನ, ಗತವೈಭವವನ್ನ ಹಾಗು ಹರಿಸೇನನ ಮರಣಾನಂತರ ಹೇಗೆ ಆತನ ವಂಶ ಛಿದ್ರ ಛಿದ್ರವಾಗಿ ಅಳಿದುಹೋಯಿತು ಎಂಬ ಮಾಹಿತಿಯನ್ನ ತಿಳಿದುಕೊಳ್ಳಬೇಕಾದರೆ ‘ದಂಡಿನ್’ರ “ವಿಸೃತಚರಿತ” ಯನ್ನೊಮ್ಮೆ ಓದಲೇಬೇಕು.

1500 ವರ್ಷಗಳ ಹಿಂದೆ ಗುಹೆಗಳಲ್ಲಿ ಮಾಡಿದ ಪೇಂಟಿಂಗ್ ಗಳು, ಶಿಲ್ಪಕಲೆಗಳು ಈಗಲೂ ಇತಿಹಾಸದ ಕಥೆಗಳನ್ನ ಜೀವಂತವಾಗಿ ಹೇಳುವ ಹಾಗೆ ನಮ್ಮೆದುರಿಗೆ ನಿಂತಿವೆ.

ನಮ್ಮ ಭಾರತದ ಸೋ ಕಾಲ್ಡ್ ಇತಿಹಾಸಕಾರರು ಅಂತಹ ಮಹಾನ್ ರಾಜ ಹರಿಸೇನನ ಇತಿಹಾಸವನ್ನ ನಿಗೂಢವಾಗಿಯೇ ಉಳಿಯುಂತೆ ಮಾಡಿ ಇತಿಹಾಸಕ್ಕೆ ದ್ರೋಹ ಬಗೆದರಲ್ಲಾ ಅಂತ ಒಮ್ಮೆ ಹೊಟ್ಟೆಗೆ ಉರಿ ಬೀಳುತ್ತೆ.

ಆ ರಾಜಾ ಹರಿಸೇನನ ಇತಿಹಾಸವನ್ನ ಕಡೆಗಣಿಸಿದ್ದಕ್ಕೋ‌ ಏನೋ ಇಂದು “ಅಜಂತಾ ಗುಹೆಗಳನ್ನ ನಿರ್ಮಿಲು ಮನುಷ್ಯನಿಂದ ನಿರ್ಮಿಸೋಕೆ ಸಾಧ್ಯವೇ ಇಲ್ಲ, ಅನ್ಯಗ್ರಹ ಜೀವಿಗಳಾದ ಏಲಿಯನ್ ಗಳು ಈ ಗುಹೆಗಳನ್ನ ನಿರ್ಮಿಸಿವೆ” ಅಂತ ಡಿಸ್ಕವರಿ ಚಾನೆಲ್ ನಂತಹ ಅಂತರಾಷ್ಟ್ರೀಯ ಮಾಧ್ಯಮಗಳೂ ರಾಜ ಹರಿಸೇನ ಕಟ್ಟಿಸಿದ್ದ ಅದ್ಭುತ ಶಿಲ್ಪಕಲೆಗಳನ್ನ ಅಣುಕಿಸುತ್ತಿವೆ.

ಅವರು ಹೇಳುವುದನ್ನ ಕೇಳುವಾಗ ಮನಸ್ಸಿನಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗುತ್ತ ಮೂಡುವ ಪ್ರಶ್ನೆ “ರಾಜ ಹರಿಸೇನ ಅನ್ಯಗ್ರಹ ಜೀವಿಯಾಗಿದ್ದನಾ? ಆತ ಏಲಿಯನ್ನಾ?” ಅನ್ನೋದು!!!

– Vinod Hindu Nationalist

Advertisement
Share this on...