ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿನ್ನೆ (21 ಡಿಸೆಂಬರ್ 2021) ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಭಾರತ ಸರ್ಕಾರವು ಭಾರತ ವಿರೋಧಿ ಪ್ರೊಪೊಗಂಡಾ ಹರಡುತ್ತಿದ್ದ 2 ವೆಬ್ಸೈಟ್ಗಳು ಮತ್ತು 20 ಯೂಟ್ಯೂಬ್ ಚಾನೆಲ್ಗಳನ್ನು ನಿರ್ಬಂಧಿಸಿದೆ ಎಂದು ತಿಳಿಸಿತು. ಮಾಹಿತಿಯ ಪ್ರಕಾರ, ಈ ಸೈಟ್ಗಳು ಮತ್ತು ಚಾನಲ್ಗಳಲ್ಲಿನ ವಿಷಯವು ವಾಸ್ತವಿಕವಾಗಿ ಫೇಕ್ ಆಗಿದ್ದು ಭಾರತದ ವಿರುದ್ಧ ಪ್ರಚಾರ ಮಾಡುತ್ತಿವೆ, ಆದ್ದರಿಂದ ಸರ್ಕಾರವು ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ನಿಯಮ 16 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಚಲಾಯಿಸುವ ಮೂಲಕ ಈ ಕ್ರಮ ಕೈಗೊಂಡಿದೆ.
ನಿರ್ಬಂಧಿತವಾಗಿರುವ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳು ಕಂಟೆಂಟ್ನ ಹೆಸರಿನಲ್ಲಿ ಭಾರತ ವಿರೋಧಿ ಪ್ರಚಾರವನ್ನು ಹರಡುತ್ತಿವೆ ಎಂದು ನಮಗೆ ತಿಳಿದಿದೆ, ಆದರೆ ಅವರು ಯಾವ ಕಾಲ್ಪನಿಕ ವಿಷಯಗಳ ಮೇಲೆ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆಂದು ತಿಳಿಯುವುದು ತುಂಬಾ ಆಸಕ್ತಿದಾಯಕ ಮತ್ತು ಆಶ್ಚರ್ಯಕರವಾಗಿದೆ.
ಪ್ರೆಸ್ ರಿಲೀಸ್ ನಲ್ಲಿ PIB ನೀಡಿದ ಮಾಹಿತಿಯ ಪ್ರಕಾರ:
ದಿ ಪಂಚ್ ಲೈನ್ ನಂತಹ ಯೂಟ್ಯೂಬ್ ಚಾನೆಲ್ ಗೆ 1,16,000 ಸಬ್ಸ್ಕ್ರೈಬರ್ಸ್ ಇದ್ದು, ಕ್ಲೂ ಕ್ಯೂ ಗೆ 2,01,31,840 ಸಬ್ಸ್ಕ್ರೈಬರ್ಸ್ ಇದ್ದಾರೆ. ಇದರಲ್ಲಿ ಕಾಶ್ಮೀರದಿಂದ ಹಿಡಿದು ರಾಮಮಂದಿರದವರೆಗೆ ಸುಳ್ಳು ಪ್ರಚಾರ ಮಾಡಿದ್ದರು. ತಯ್ಯಬ್ ಎರ್ಡೋಗನ್ ಅವರು ರಾಮಮಂದಿರದ ಬದಲಿಗೆ ಮಸೀದಿಯ ಪುನರ್ನಿರ್ಮಾಣವನ್ನು ಘೋಷಿಸಿದ್ದಾರೆ ಮತ್ತು ಇದು ಯೋಗಿ-ಮೋದಿಗೆ ತೊಂದರೆಯಾಗಲಿದೆ ಎಂದು ಈ ಚಾನೆಲ್ ಹೇಳಿತ್ತು.
ಇದರ ನಂತರ ಕಾಶ್ಮೀರ ಮುಜಾಹಿದ್ದೀನ್ (ಭಯೋತ್ಪಾದಕರು) ಭಾರತೀಯ ಸೇನೆಯ ಮೇಲೆ ದಾ ಳಿ ಮಾಡಿ ಕೊಂ ದ ಸುದ್ದಿ, ‘ಭಾರತದಲ್ಲಿ ಇಮ್ರಾನ್ ಖಾನ್ ಜಿಂದಾಬಾದ್ ಘೋಷಣೆಗಳು’, ‘200 ಭಾರತೀಯ ಸೈನಿಕರು ಶ್ರೀನಗರದಲ್ಲಿ ಇ ಸ್ಲಾಂ ಧರ್ಮವನ್ನು ಸ್ವೀಕರಿಸಿದರು’, ‘ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಭಾರತದ ವಿರೋಧ’ ಎಂಬ ಶೀರ್ಷಿಕೆಯಡಿಯಲ್ಲಿ ಅನೇಕ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ಕಾಶ್ಮೀರಿಗಳ ಮೇಲೆ ಗುಂ ಡಿ ನ ದಾ ಳಿ ನಡೆಸಲು ಭಾರತೀಯ ಸೇನೆ ನಿರಾಕರಿಸಿದ ಕಾರಣ ನರೇಂದ್ರ ಮೋದಿ ಅತಿ ದೊಡ್ಡ ಸೋಲನ್ನು ಅನುಭವಿಸಿದ್ದಾರೆ ಎಂದು ಮತ್ತೊಂದ ವಿಡಿಯೋಗೆ ಟೈಟಲ್ ನೀಡಲಾಗಿತ್ತು.
ಅದೇ ರೀತಿ, 1,14,000 ಸಬ್ಸ್ಕ್ರೈಬರ್ಸ್ ಮತ್ತು 1,50,46,007 ವೀವ್ಸ್ ಹೊಂದಿದ್ದ ಇಂಟರ್ನ್ಯಾಷನಲ್ ವೆಬ್ ನ್ಯೂಸ್, ‘ಖಾಲಿಸ್ತಾನ್ ರೆಫರೆಂಡಮ್ ಯುಕೆ 2021’ ಮತ್ತು ‘ಭಾರತದ ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಪೋಷಿಸಲಾಗುತ್ತಿದೆ’ ಮುಂತಾದ ವಿಷಯಗಳ ಕುರಿತು ವಿಷಯವನ್ನು ಪೋಸ್ಟ್ ಮಾಡಿದೆ… ನಂತರ ಖಾಲ್ಸಾ ಟಿವಿ ಕೂಡ ದೇಶದ ವಿರುದ್ಧ ಸಿಖ್ಖರನ್ನು ಪ್ರಚೋದಿಸುವ ವಿಷಯವನ್ನು ಪೋಸ್ಟ್ ಮಾಡಿತು.
4 ಲಕ್ಷ ಸಬ್ಸ್ಕ್ರೈಬರ್ಸ್ ಮತ್ತು 80 ಮಿಲಿಯನ್ ವೀಕ್ಷಣೆಗಳನ್ನು ಪಡೆದ ನೇಕೆಡ್ ಟ್ರುತ್, ಮುಜಾಹಿದೀನ್ (ಭ ಯೋ ತ್ಪಾ ದಕರು) ಬೇಡಿಕೆಗಳನ್ನು ಭಾರತ ಸರ್ಕಾರ ಒಪ್ಪಿಕೊಂಡಿದೆ ಎಂದು ಹರಡಿತು; 47 ಭಾರತೀಯ ಜನರಲ್ಗಳ ಗುಂಪು ಟ್ಯಾಂಕ್ಗಳೊಂದಿಗೆ ಕಾಶ್ಮೀರವನ್ನು ಸ್ವತಂತ್ರಗೊಳಿಸುವುದಾಗಿ ಘೋಷಿಸಿದೆ; ಐದು ದೇಶಗಳು ಬಾಬರಿ ಮಸೀದಿಯ ಬಗ್ಗೆ ನಿರ್ಧರಿಸಿವೆ; ಕಾಶ್ಮೀರದಲ್ಲಿ ಭಾರತೀಯ ಸೇನೆ ಸೋತಿದೆ ಎಂಬೆಲ್ಲಾ ತಲೆಬರಹಗಳ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು.
ಇವುಗಳ ಹೊರತಾಗಿ, ಭಾರತದ ವಿರುದ್ಧ ಅಪಪ್ರಚಾರ ಮಾಡುವ – ನ್ಯೂಸ್ 24, 48 ನ್ಯೂಸ್, ಫಿಕ್ಷನಲ್, ಹಿಸ್ಟೋರಿಕಲ್ ಫ್ಯಾಕ್ಟ್ಸ್ ಪಂಜಾಬ್ ವೈರಲ್, ನಯಾ ಪಾಕಿಸ್ತಾನ್ ಗ್ಲೋಬಲ್, ಕವರ್ ಸ್ಟೋರಿ, ಗೋ ಗ್ಲೋಬಲ್, ಜುನೈದ್ ಹಲೀಮ್ ಆಫುಷಿಯಲ್, ತೈಯಬ್ ಹನೀಫ್, ಜೈನ್ ಅಲಿ ಅಫಿಷಿಯಲ್, ಮೊಹ್ಸಿನ್ ರಜಪೂತ್, ಕನೀಜ್ ಫಾತಿಮಾ, ಸದಾಫ್ ದುರಾನಿ, ಮಿಯಾನ್ ಇಮ್ರಾನ್ ಅಹ್ಮದ್, ನಜ್ಮ್ ಹಸನ್ ನಂತಹ ಚಾನೆಲ್ಗಳನ್ನ ಭಾರತ ಸರ್ಕಾರ ಬ್ಯಾನ್ ಮಾಡಿದೆ.
ಭಾರತದ ದುಷ್ಪ್ರಚಾರಕ್ಕಾಗಿ ಈ ಚಾನೆಲ್ಗಳಲ್ಲಿ ಹರಡಿದ ಕೆಲವು ಆಧಾರರಹಿತ ಸುದ್ದಿಗಳು ಹೀಗಿವೆ:
ಟರ್ಕಿ ಆರ್ಮಿ ದೆಹಲಿಗೆ ನುಗ್ಗಿ ಬಿಟ್ಟಿತು,
ಟರ್ಕಿ ಅಧ್ಯಕ್ಷ ಎರ್ದೋಗನ್ ಕಾಶ್ಮೀರಕ್ಕಾಗಿ 35 ಸೈನಿಕರನ್ನ ಭಾರತಕ್ಕೆ ಕಳಿಸಿದ್ದಾರೆ,
300 ಭಾರತೀಯ ರಾ ಏಜೆಂಟ್ ಗಳನ್ನ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸೆರೆಹಿಡಿದಿದ್ದಾರೆ
ದೆಹಲಿಗೆ ನುಗ್ಗುವಂತೆ ಯುಎಸ್ ಆರ್ಮಿಗೆ ಆದೇಶ ಕೊಟ್ಟ ಜೋ ಬೈಡನ್
ಭಾರತಕ್ಕೆ ತೈಲ ಕೊಡದಿರಲು ನಿರ್ಧರಿಸದ 7 ಅರಬ್ ರಾಷ್ಟ್ರಗಳು
ನಾರ್ಥ್ ಕೋರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜೋಂಗ್ ಉನ್ ಅಯೋಧ್ಯೆಯಲ್ಲಿ ತನ್ನ ಸೇನೆಯನ್ನ ಕಳಿಸಿದರು
500 ಮುಜಾಹಿದ್ದೀನ್ ಗಳು ಭಾರತಕ್ಕೆ ನುಗ್ಗಿದರು
ತನ್ನ ಲಾಭಕ್ಕಾಗಿ ಅಮೇರಿಕದ ಬೆನ್ನಿಗೆ ಚೂ ರಿ ಇರಿದ ಭಾರತ
ಬಿಪಿನ್ ರಾವತ್ನ ಸಾವು ಆ್ಯಕ್ಸಿಡೆಂಟ್ ಅಲ್ಲ, ಭಾರತೀಯ ಮುಸಲ್ಮಾನರಿಗಾಗಿ ಅದು ಬಿಜೆಪಿ-ಆರೆಸ್ಸೆಸ್ ನ ಪ್ಲ್ಯಾನ್ ಆಗಿತ್ತು
ಅಸ್ಸಾಂನ 1000 ಮುಸ್ಲಿಮರು ಟ್ರೇನಿಂಗ್ ಪಡೆಯಲು ತಾಲಿಬಾನ್ ಬಳಿ ಹೋದರು
193 ದೇಶಗಳು ಆರ್ಟಿಕಲ್ 370 ರದ್ದು ಮಾಡಿದ್ದಕ್ಕೆ ಮೋದಿಗೆ ಧಮಕಿ ಹಾಕಿವೆ
PIB ರಿಲೀಸ್ ನಲ್ಲಿ ಅನೇಕ ವಿಡಿಯೋಗಳ ಸ್ಕ್ರೀನ್ಶಾಟ್ ಹಾಗು ಅವುಗಳ ಮೇಲೆ ಫೇಕ್ ನ್ಯೂಸ್ ಎಂಬ ಸ್ಟ್ಯಾಂಪ್ ಕೂಡ ಹಾಕಲಾಗಿದೆ.