ಕಾಂಗ್ರೆಸ್ ವಕ್ತಾರರ ಆಯ್ಕೆಗೆ UPSC ಯಂತಹ ಪರೀಕ್ಷೆ, ಬರೋಬ್ಬರಿ 45 ನಿಮಿಷಗಳ ಇಂಟರ್‌ವ್ಯೂ: RSS ಬಗ್ಗೆ ಕೇಳಲಾಗುತ್ತಿವೆ ಈ ಪ್ರಶ್ನೆಗಳು

in Kannada News/News 192 views

ನವದೆಹಲಿ: ಉತ್ತರಪ್ರದೇಶದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಪಕ್ಷಗಳೂ ಶತಾಯಗತಾಯವಾಗಿ ಗೆಲ್ಲಲೇಬೇಕು ಎಂದ  ನಾನಾ ತಂತ್ರಗಳನ್ನ ಬಳಸುತ್ತಿವೆ. ಮತದಾರರನ್ನು ತಮ್ಮ ಪರವಾಗಿ ಸೆಳೆಯಲು ಪಕ್ಷಗಳು ಲಾಭದಾಯಕ ಭರವಸೆಗಳನ್ನು ನೀಡುತ್ತಿವೆ. ರಾಜ್ಯದಲ್ಲಿ ಮತ್ತೆ ನೆಲೆ ಪಡೆಯುವಂತಾಗಲು ಕಾಂಗ್ರೆಸ್ ಕೂಡ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಪಕ್ಷವು (ಕಾಂಗ್ರೆಸ್) ತನ್ನ ವಕ್ತಾರರ ಪರೀಕ್ಷೆಯನ್ನು ಸಂಪೂರ್ಣವಾಗಿ ವೃತ್ತಿಪರಗೊಳಿಸಿದೆ.

Advertisement

ಪಕ್ಷದ ವಕ್ತಾರರಾಗಲು ಅಭ್ಯರ್ಥಿಗಳು ಈಗ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ವಕ್ತಾರರಾಗಲು, ಈ ಪ್ರಕ್ರಿಯೆಯು ಸಾಮಾನ್ಯವಾಗಿರುವುದಿಲ್ಲ ಬದಲಾಗಿ UPSC ಮಟ್ಟದಲ್ಲಿರುತ್ತದೆ, ಇದರಲ್ಲಿ ಅಭ್ಯರ್ಥಿಗಳು ಪಕ್ಷಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ 45 ನಿಮಿಷಗಳಲ್ಲಿ ಉತ್ತರಿಸಬೇಕಾಗುತ್ತದೆ. ಈ ಪ್ರಶ್ನೆಗಳ ಹೊರತಾಗಿ, ಅಭ್ಯರ್ಥಿಗಳು ತಮ್ಮ ಹೆಸರು, ಜನ್ಮ ದಿನಾಂಕ, ಶಿಕ್ಷಣ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿಯಂತಹ ಮೂಲಭೂತ ವಿವರಗಳಂತಹ ಸಂಪೂರ್ಣ ವಿವರಗಳನ್ನು ಸಹ ನೀಡಬೇಕು. ಇದಲ್ಲದೇ ಅಭ್ಯರ್ಥಿಯು ಸಾಮಾಜಿಕ ಜಾಲತಾಣಗಳಲ್ಲಿ ಯಾವ ಹೆಸರಿನಿಂದ ಟ್ವಿಟರ್ ಹ್ಯಾಂಡಲ್ ನಡೆಸುತ್ತಾನೆ, ಆತನ ಫೇಸ್ ಬುಕ್ ಪೇಜ್ ಹೆಸರು, ಯೂಟ್ಯೂಬ್ ಚಾನೆಲ್ ಹೆಸರು, ಇವೆಲ್ಲವುಗಳಲ್ಲಿ ಫಾಲೋವರ್ಸ್ ಸಂಖ್ಯೆ ಎಷ್ಟು? ಅವರು ಸಾಮಾಜಿಕ ಮಾಧ್ಯಮದಲ್ಲಿ ಎಷ್ಟು ಖಾತೆಗಳನ್ನು ಹೊಂದಿದ್ದಾರೆ? ಅವರು ಯಾವ ಹೆಸರಿನಲ್ಲಿ ಮತ್ತು ಅವರು ಕೆಲವು ವಿಷಯವನ್ನು ಎಷ್ಟು ಸಮಯದಲ್ಲಿ ಪೋಸ್ಟ್ ಮಾಡುತ್ತಾರೆ, ಎಷ್ಟು ದಿನಗಳಲ್ಲಿ, ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಹ ನೀಡಬೇಕಾಗುತ್ತದೆ.

ಪಕ್ಷಕ್ಕೆ ಸಂಬಂಧಿಸಿದ ಮಾಹಿತಿ ತಿಳಿದಿರಲೇಬೇಕು

ಈ ಪ್ರಶ್ನೆಗಳು ಪಕ್ಷದ ಕೆಲಸವನ್ನೂ ಒಳಗೊಂಡಿರುತ್ತವೆ, ಆದ್ದರಿಂದ ಅಭ್ಯರ್ಥಿಗಳು ಪಕ್ಷದ ಬಗ್ಗೆ ಎಲ್ಲಾ ಮಾಹಿತಿಯನ್ನು ಹೊಂದಿರಬೇಕು. ಈ ಪ್ರಶ್ನೆಗಳ ಬಗ್ಗೆ ಮಾತನಾಡುವುದಾದರೆ, ಈ ಪ್ರಶ್ನೆಗಳಲ್ಲಿ ಕೆಲವು, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಾತ್ರವೇನು?, ಯುಪಿಗೆ ಕಾಂಗ್ರೆಸ್ ಏನು ಮಾಡಿದೆ? ಹೇಳಿಕೆ ನೀಡಬಹುದೇ?, ನೀವು ಏಕೆ ವಕ್ತಾರರಾಗಲು ಬಯಸುತ್ತೀರಿ?, ಕಾಂಗ್ರೆಸ್ ಪಕ್ಷದ ಇತಿಹಾಸವೇನು? ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ ಕೊಡುಗೆಯೇನು? RSS ನ ಪ್ರಭಾವ ಏಕೆ ಅಪಾಯಕಾರಿ? ಇವುಗಳ ಬಗ್ಗೆ ಅಭ್ಯರ್ಥಿಗಳು ತಿಳಿದಿರಲೇಬೇಕು.

45 ನಿಮಿಷಗಳಲ್ಲಿ ನೀಡಲೇಬೇಕು ಅನೇಕ ಪ್ರಶ್ನೆಗಳಿಗೆ ಉತ್ತರ

ಅಭ್ಯರ್ಥಿಗಳನ್ನು ಪಕ್ಷದ ವಕ್ತಾರರನ್ನಾಗಿ ಮಾಡಲು 45 ನಿಮಿಷಗಳಲ್ಲಿ ಎರಡು ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದರಲ್ಲಿ 20 ಪ್ರಶ್ನೆಗಳು ಐಚ್ಛಿಕವಾಗಿರುತ್ತವೆ. 2 ಪ್ರಶ್ನೆಗಳು ವಿಶ್ಲೇಷಣಾತ್ಮಕವಾಗಿವೆ. ಕೆಳಗೆ ನೀಡಿರುವ ಈ ಪ್ರಶ್ನೆಗಳ ಪಟ್ಟಿಯನ್ನು ನೋಡಿ.

RSS ನ ಹೆಚ್ಚುತ್ತಿರುವ ಪ್ರಭಾವ ಏಕೆ ಅಪಾಯಕಾರಿ?

ಉತ್ತರಪ್ರದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿದೆ?

ಉತ್ತರಪ್ರದೇಶದಲ್ಲಿ ಒಟ್ಟು ಎಷ್ಟು ಲೋಕಸಭಾ ಹಾಗು ವಿಧಾನಸಭಾ ಸೀಟುಗಳಿವೆ?

2004 ಮತ್ತು 2009ರ ಲೋಕಸಭಾ ಚುನಾವಣೆಲ್ಲಿ ಕಾಂಗ್ರೆಸ್ ಎಷ್ಟು ಸೀಟು ಗೆದ್ದಿತ್ತು?

2014 ರ ಲೋಕಸಭಾ ಮತ್ತು 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೋಟ್ ಶೇರ್ ಎಷ್ಟು ಪ್ರತಿಶತದಷ್ಟಿತ್ತು?

ಉತ್ತರಪ್ರದೇಶದಲ್ಲಿ ಒಟ್ಟು ಎಷ್ಟು ಬ್ಲಾಕ್ ಹಾಗು ಕ್ಷೇತ್ರಗಳಿವೆ?

ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಎಷ್ಟು ಮೀಸಲಾತಿ ಸೀಟುಗಳಿವೆ?

ಯುಪಿಯಲ್ಲಿ ಎಷ್ಟು ವಿಧಾನಸಭಾ ಕ್ಷೇತ್ರಗಳು ಕೂಡಿ ಒಂದು ಲೋಕಸಭಾ ಸ್ಥಾನವಾಗುತ್ತದೆ?

ಯೋಗಿ ಆದಿತ್ಯನಾಥ್ ಸರ್ಕಾರ ಯಾವ್ಯಾವ ಪ್ರಮುಖ ವಿಷಯಗಳಲ್ಲಿ ವಿಫಲವಾಗಿದೆ?

ಮನಮೋಹನ್ ಸಿಂಗ್ ಸರ್ಕಾರದ ಸಾಧನೆಗಳೇನು?

Advertisement
Share this on...