“ಭಾರತದ ಕ್ರಾಂತಿಕಾರಿಗಳನ್ನ ಬ್ರಿಟೀಷರಿಗೆ ಹಿಡಿದುಕೊಟ್ಟಿದ್ದೇ ಸಿಖ್ ರೈತರು”: ವೈಸ್‌ರಾಯ್ ಚಾರ್ಲ್ಸ್ (ಬೋಸ್ ದಾ#ಳಿಯಲ್ಲಿ ಬದುಕುಳಿದಿದ್ದ ಬ್ರಿಟಿಷ್ ಅಧಿಕಾರಿ)

in Kannada News/News/ಕನ್ನಡ ಮಾಹಿತಿ 173 views

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಇದ್ದಾಗ, ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ (1857 ರ ಸ್ವಾತಂತ್ರ್ಯ ಸಂಗ್ರಾಮ) ಮರುವರ್ಷ ಅಂದರೆ 1858 ರಲ್ಲಿ ಜನಿಸಿದ ಲಾರ್ಡ್ ಚಾರ್ಲ್ಸ್ ಹಾರ್ಡಿಂಜ್ ಅವರನ್ನು ನವೆಂಬರ್ 1910 ರಲ್ಲಿ ಭಾರತದ ಗವರ್ನರ್ ಜನರಲ್ ಆಗಿ ಕಳುಹಿಸಲಾಯಿತು ಮತ್ತು ಅವರು ಏಪ್ರಿಲ್ 1916 ರವರೆಗೆ ಅವರು ಈ ಹುದ್ದೆಯಲ್ಲಿದ್ದರು. ಅವರ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಅವರು ಬ್ರಿಟನ್‌ನ ಕೆಂಟ್‌ಗೆ ಹಿಂದಿರುಗಿದನು ಮತ್ತು ಆಗಸ್ಟ್ 1944 ರಲ್ಲಿ 86 ವರ್ಷ ವಯಸ್ಸಿನಲ್ಲಿ ಆತನ ನಿಧನವಾಯಿತು. ಆದರೆ, ರಾಸ್ ಬಿಹಾರಿ ಬೋಸ್ ಯಶಸ್ವಿಯಾಗಿದ್ದರೆ, ಲಾರ್ಡ್ ಚಾರ್ಲ್ಸ್ ಹಾರ್ಡಿಂಜ್ ಡಿಸೆಂಬರ್ 23, 1912 ರಂದೇ ಕೊ ಲ್ಲ ಲ್ಪ ಟ್ಟಿರುತ್ತಿದ್ದ, ಆದರೆ ದಾ ಳಿ ಯಲ್ಲಿ ಬ ದು ಕು ಳಿ ದ ಕಾರಣ, ಆತನ ವಯಸ್ಸು 32 ವರ್ಷಗಳು ಹೆಚ್ಚಾಯಿತು.

Advertisement

ಚಾರ್ಲ್ಸ್ ಹಾರ್ಡಿಂಜ್ ಆನೆಯ ಮೇಲೆ ಹೋಗುತ್ತಿದ್ದಾಗ, ದೆಹಲಿಯಲ್ಲಿ ಚಳಿಗಾಲದ ಸಮಯದಲ್ಲಿ ರಾಸ್ ಬಿಹಾರಿ ಬೋಸ್ ಆತನ ಮೇ ಲೆ ಬಾಂ ಬ್ ಎ ಸೆ ದಿದ್ದರು. ಛತ್ರಿ ಹಿಡಿದಿದ್ದ ಅವನ ಸೇವಕನು ಕೊ ಲ್ಲ ಲ್ಪ ಟ್ಟನು, ಆದರೆ ಲಾರ್ಡ್ ಹಾರ್ಡಿಂಜ್ ತಪ್ಪಿಸಿಕೊಂಡ. ಆತನ ಕೈ ಕಾಲುಗಳಿಗೆ ಗಾ ಯ ಗಳಾಯಿತು, ಭುಜ ಉಡೀಸ್ ಆಯ್ತು. ಆತನ ಪತ್ನಿ ಕೂಡ ದಾ ಳಿ ಯಿಂದ ಬ ದು ಕುಳಿದಳು, ಆನೆ ಮತ್ತು ಮಾವುತರಿಗೆ ಏನೂ ಆಗಿಲ್ಲ. ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಇದನ್ನು ‘ಡೆಲ್ಲಿ ಕಾನ್ಸ್ಪಿರಸಿ ಕೇಸ್ (ದೆಹಲಿ ಪಿ ತೂ ರಿ ಪ್ರಕರಣ)’ ಎಂದೂ ಕರೆಯುತ್ತಾರೆ.

ಚಾರ್ಲ್ಸ್ ಮೇ 1916 ರಲ್ಲಿ ಇಂಗ್ಲೆಂಡ್ ತಲುಪಿದಾಗ, ಆತ ನ್ಯೂಯಾರ್ಕ್ ಟೈಮ್ಸ್‌ಗೆ ಸಂದರ್ಶನ ನೀಡಿದ್ದನು, ಅದರಲ್ಲಿ ಆತ ಭಾರತದಲ್ಲಿ ಕೆಲಸ ಮಾಡುವಾಗ ಆತನಿಗಾದ ಅನುಭವಗಳ ಬಗ್ಗೆ ಮಾತನಾಡಿದ್ದನು. ಬ್ರಿಟಿಷರನ್ನು ಬೆಂಬಲಿಸಿದವರು ಅಥವಾ ಅವರ ಸೂಚನೆಯಂತೆ ಚಳವಳಿ ನಡೆಸುತ್ತಿದ್ದವರಿಗೆ ಬ್ರಿಟಿಷರು ಬುದ್ಧಿಜೀವಿಗಳ ಸ್ಥಾನಮಾನ ನೀಡುತ್ತಿದ್ದರು ಎಂಬುದು ಈ ಸಂದರ್ಶನದಿಂದ ಸ್ಪಷ್ಟವಾಗಿದೆ. ರಾಶ್ ಬಿಹಾರಿ ಬೋಸ್ ಅವರು ಐಎನ್ಎ (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಥಾಪಿಸಿದರು ಮತ್ತು ‘ಗದರ್ ಪಾರ್ಟಿ’ಯಲ್ಲಿ ಸಕ್ರಿಯರಾಗಿದ್ದರು.

ಗದರ್‌ನ ಈ ಯೋಜನೆ ಯಶಸ್ವಿಯಾಗಲಿಲ್ಲ ಏಕೆಂದರೆ ವಿಶ್ವ ಯು ದ್ಧ ದ ಸಮಯದಲ್ಲಿ ಬಹುತೇಕ ಎಲ್ಲಾ ಬ್ರಿಟಿಷ್ ಸೈನಿಕರು ದೇಶದಿಂದ ಹೊರಗಿದ್ದರು. ಆಗ ಭಾರತವನ್ನು ಸ್ವತಂತ್ರಗೊಳಿಸಲು ಭಾರತೀಯ ದೇಶಭಕ್ತರು ವಿವಿಧ ಬೆಟಾಲಿಯನ್‌ಗಳನ್ನು ಸೇರಿದರು. ಆಗ ಅನೇಕ ಕ್ರಾಂತಿಕಾರಿಗಳನ್ನು ಬಂ ಧಿ ಸಲಾಯಿತು. ಆದರೆ, ರಾಸ್ ಬಿಹಾರಿ ಬೋಸ್ ಬ್ರಿಟಿಷ್ ಗು ಪ್ತ ಚರ ಸಂಸ್ಥೆಗಳ ಕಣ್ತಪ್ಪಿಸಿ ಜಪಾನ್‌ಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಅವರು INA ಆಡಳಿತವನ್ನು ಮಹಾನ್ ಸುಭಾಸ್ ಚಂದ್ರ ಬೋಸ್‌ಗೆ ಹಸ್ತಾಂತರಿಸಿದರು.

ಲಾರ್ಡ್ ಚಾರ್ಲ್ಸ್ ಹಾರ್ಡಿಂಗ್ ಭಾರತದಲ್ಲಿ ಬ್ರಿಟಿಷರಿಗೆ ನಿಷ್ಠರಾಗಿರದ ಕೆಲವೇ ಜನರಿದ್ದಾರೆ ಎಂದು ನಂಬಿದ್ದನು‌. 30 ಕೋಟಿ ಭಾರತೀಯ ಜನಸಂಖ್ಯೆಯು ಅನೇಕ ಧರ್ಮಗಳು ಮತ್ತು ಸಮುದಾಯಗಳ ಜನರನ್ನು ಒಳಗೊಂಡಿದೆ ಮತ್ತು ಅವರು ವಿವಿಧ ರೀತಿಯ ರಾಜಕೀಯ ಬೋಧನೆಗಳು ಮತ್ತು ಅಭಿವೃದ್ಧಿಯನ್ನು ಪ್ರತಿನಿಧಿಸುತ್ತಾರೆ. ಕ್ರಾಂತಿಕಾರಿಗಳ ಬಗ್ಗೆ ಆತ ಮಾತನಾಡುತ್ತ, “ಈ ಜನರು ಅ#ರಾ-ಜಕ ಶಕ್ತಿಗಳಾಗಿದ್ದು, ಅವರ ಉದ್ದೇಶವು ಹೊಸ ಶಕ್ತಿಯನ್ನು ಸ್ಥಾಪಿಸುವುದಲ್ಲ, ಆದರೆ ಅಸ್ತಿತ್ವದಲ್ಲಿರುವ ಶಕ್ತಿಗೆ ಹಾ ನಿ ಮಾಡುವುದಾಗಿದೆ” ಎಂದಿದ್ದ‌.

ಅಮೆರಿಕದ ಜನರ ಮುಂದೆ ಬ್ರಿಟಿಷ್ ಪ್ರೊಪೊಗಂಡಾವನ್ನ ಹರಡಿದ ಚಾರ್ಲ್ಸ್, ‘ಗದರ್ ಪಾರ್ಟಿ’ಯಂತಹ ಭಾರತೀಯ ಕ್ರಾಂತಿಕಾರಿ ಸಂಘಟನೆಗಳ ಹಿಂದೆ ಇರುವವರು ಬುದ್ಧಿಜೀವಿಗಳಲ್ಲ ಎಂದು ಪ್ರತಿಪಾದಿಸಿದನು‌. ಕ್ರಾಂತಿಕಾರಿಗಳನ್ನು ಅರೆ ವಿದ್ಯಾವಂತರು ಎಂದು ಬಣ್ಣಿಸಿದ ಆತ, ವಿದೇಶಗಳಲ್ಲಿ ‘ಗದರ್ ಪಾರ್ಟಿ’ಯ ಸುದ್ದಿ ಪ್ರಕಟವಾಗಿ ಗುಪ್ತವಾಗಿ ಸಕ್ರಿಯವಾಗಿದ್ದರೆ ಅವರಲ್ಲಿ ಅ#ರಾ-ಜಕತೆ ಇಲ್ಲ ಎಂದರ್ಥವಲ್ಲ. ಈ ಸಂಘಟನೆಯ ಹಿಂದೆ ಅಮೆರಿಕ ಮತ್ತು ಪಶ್ಚಿಮ ಕೆನಡಾ ಮತ್ತು ಜರ್ಮನಿಯ “ಹುಚ್ಚ ಜನರು” ಇದ್ದಾರೆ ಎಂದು ಅತ ವಿವರಿಸಿದ್ದ‌.

ಅದರ ಮುಖ್ಯಸ್ಥ ಲಾಲಾ ಹರದಯಾಳ್ ಜರ್ಮನ್ ವಾರ್ ಮಿನಿಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದು, ಆತನಿಗೆ ಜಪಾನ್‌ನಿಂದಲೂ ಬೆಂಬಲ ಸಿಕ್ಕಿತು ಎಂದು ಚಾರ್ಲ್ಸ್ ಹೇಳಿದ್ದ. ಈ ಪಕ್ಷವು ಪ್ರಭಾವ ಮತ್ತು ಸಂಖ್ಯೆಯಲ್ಲಿ ಚಿಕ್ಕದಾಗಿದೆ ಮತ್ತು ಅದರ ಹೆಚ್ಚಿನ ಅಧಿಕಾರವು ಬಂಗಾಳದಲ್ಲಿದೆ, ಅಲ್ಲಿ ಅದು ಪೊಲೀಸ್-ಆಡಳಿತದ ಅಧಿಕಾರಿಗಳನ್ನು ಕೊ ಲ್ಲ ಲು ಪ್ರಯತ್ನಿಸುತ್ತಿದೆ ಎಂದು ಆತ ಪ್ರತಿಪಾದಿಸಿದ್ದ‌. ದೆಹಲಿಯ ಚಾಂದಿನಿ ಚೌಕ್‌ನಲ್ಲಿ ತನ್ನ ಮೇ ಲೆ ನಡೆದ ದಾ ಳಿ ಯ ಬಗ್ಗೆ ಹೇಳುವಾಗ ಆತ ನಗುತ್ತ ಈ ವಿಚಾರ ಹೇಳಿದ್ದ.

ಚಾರಲ್ಸ್ ನಗುತ್ತ ಮಾತನಾಡುತ್ತ, ತಮ್ಮ ಹಿಂದಿನವರಂತೆ ಭಾರತದ ಹಿಂದಿನ ವೈಸರಾಯ್ (ಅವರು ಸ್ವತಃ) ಕೂಡ ಈ ‘ಪಿತೂರಿ’ಗಳಿಗೆ ಬ ಲಿ ಯಾಗಿದ್ದಾರೆ ಎಂದು ಹೇಳಿದ್ದನು. ಆ ಘಟನೆಯಲ್ಲಿ ಉಂಟಾದ ಗಾ ಯ ಗಳಿಂದ 4 ವರ್ಷಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಮತ್ತು ತನ್ನೊಂದಿಗಿದ್ದ ಭಾರತೀಯ ಸೇವಕ ಕೂಡ ಈಗ ಚೆನ್ನಾಗಿದ್ದಾನೆ ಎಂದು ಆತ ಹೇಳಿದ್ದನು. ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಬ್ರಿಟಿಷ್ ಸರ್ಕಾರ ಶಿ‌ ಕ್ಷಿ ಸಿದೆ ಎಂದೂ ಆತ ಹೇಳಿದ್ದರು. ಬನ್ನಿ ಅವರ ಹೆಸರುಗಳನ್ನೂ ತಿಳಿಯೋಣ.

ಬಸಂತ್ ಕುಮಾರ್ ವಿಶ್ವಾಸ್, ಕೇವಲ 20 ನೇ ವಯಸ್ಸಿನಲ್ಲಿ ಗ ಲ್ಲಿ ಗೇರಿಸಲಾಯಿತು. ಭಾರತಮಾತೆಗಾಗಿ 32ನೇ ವಯಸ್ಸಿನಲ್ಲಿ ನೇ ಣಿ ಗೇರಿದ ಸಹೋದರ ಬಾಲ ಮುಕುಂದ್. ಇವರಿಬ್ಬರನ್ನು ಹೊರತುಪಡಿಸಿ ಅಮೀರ್ ಚಂದ್ ಮತ್ತು ಅವಧ್ ಬಿಹಾರಿ ಅವರಿಗೆ ಮ ರ ಣ‌ ದಂ ಡನೆ ವಿಧಿಸಲಾಯಿತು. ಲಾಲಾ ಹನುಮಂತ್ ಸಹಾಯ್ ಅವರಿಗೆ ಜೀ ವಾ ವ ಧಿ ಶಿ ಕ್ಷೆ ವಿಧಿಸಲಾಯಿತು ಮತ್ತು ಕಾಲಾಪಾನಿಗೆ ಕಳುಹಿಸಲಾಯಿತು. ಬ್ರಿಟಿಷ್ ಭಾರತದ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ಟ್ರಾನ್ಸಫರ್ ಮಾಡುತ್ತಿದ್ದಾಗ ಈ ದಾ ಳಿ ನಡೆದಿತ್ತು.

ನಂತರ ಲಾರ್ಡ್ ಚಾರ್ಲ್ಸ್ ಹಾರ್ಡಿಂಗ್ ಮಾತನಾಡುತ್ತ, ಈ ದಾ ಳಿ ಯಲ್ಲಿ ತಾನು ಹೆಚ್ಚು ಬಳಲಿದ್ದೆ ಆದರೆ ತನ್ನ ಹೆಂಡತಿಗೆ ಏನೂ ಆಗಲಿಲ್ಲ. ‘ಪಿಕ್ರಿಕ್ ಆ-ಸಿಡ್ (C6H3N3O7)’ ನಿಂದಾಗಿ ಆಕೆಯ ಬಟ್ಟೆಯಷ್ಟೇ ಡ್ಯಾಮೇಜ್ ಆಯಿತು ಎಂದು ಆತ ಹೇಳಿದ್ದ. ಆದಾಗ್ಯೂ, ಲಾರ್ಡ್ ಹಾರ್ಡಿಂಗ್‌ನ ಬೆನ್ನು, ಕಾಲು ಮತ್ತು ತಲೆಗೆ ತೀ ವ್ರ ವಾಗಿ ಗಾ ಯ ವಾಗಿತ್ತು. ಆತನ ಭು ಜ ದ ಮೇಲಿನ ಮಾಂ ಸ ಹ ರಿ ದಿ ತ್ತು. ಆದರೆ ಭಾರತದ ‘ಬುದ್ಧಿಜೀವಿಗಳ ನಾಯಕರ’ ಬಗ್ಗೆ ಆತ ಹೇಳಿದ್ದನ್ನ ನಾವು ಇಂದು ತಿಳಿಯಲೇಬೇಕು. ಆಗ ಅವರ ಎಂತಹ ನಾಯಕರಾಗಿದ್ದರು ಅನ್ನೋದು ನಿಮಗೆ ಅರ್ಥವಾಗುತ್ತದೆ. ಚಾರ್ಲ್ಸ್ ಮಾತನಾಡುತ್ತ ಅವರ ಬಗ್ಗೆ ಹೇಳಿದ್ದಿಷ್ಟು,

“ಮೊದಲನೆಯ ವಿಶ್ವ ಯು ದ್ಧ ಪ್ರಾರಂಭವಾದಾಗಿನಿಂದ, ವಿದ್ಯಾವಂತ ರಾಜಕೀಯ ವರ್ಗವು ಭಾರತದ ಎಲ್ಲಾ ರಾಜಕೀಯ ಸಮಸ್ಯೆಗಳನ್ನು ಬದಿಗಿಟ್ಟಿದೆ. ಆಗಲೇ ಕಷ್ಟಗಳನ್ನು ಎದುರಿಸುತ್ತಿದ್ದ ಬ್ರಿಟಿಷ್ ಸರ್ಕಾರದ ಚಟುವಟಿಕೆಗಳಿಗೆ ಅಡ್ಡಿಪಡಿಸಲು ಅವರು ಬಯಸಲಿಲ್ಲ. ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಹೆಚ್ಚಿನ ಸಂಖ್ಯೆಯ ಭಾರತೀಯ ಸದಸ್ಯರನ್ನು ಹೊಂದಿತ್ತು, ಆದರೂ ನಮ್ಮ ಇಚ್ಛೆಗೆ ಅನುಗುಣವಾಗಿ ಮಸೂದೆಗಳನ್ನು ಅಂಗೀಕರಿಸಲಾಯಿತು. ಆ ಸದಸ್ಯರು ಮಾಡಿದ ಭಾಷಣದಲ್ಲಿ ಜವಾಬ್ದಾರಿಯ ಝಲಕ್ ಇತ್ತು. ಅಲ್ಲಿ ಸ್ವಾತಂತ್ರ್ಯ ಬಯಸಿದ ವಿದ್ಯಾವಂತ ನಾಯಕರು ಭಾರತ ಏಕಾಂಗಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂದು ತಿಳಿದಿದ್ದರು, ಅದಕ್ಕಾಗಿಯೇ ಅವರು ಹೆಚ್ಚು ಉದಾರವಾದರು ಮತ್ತು ತಿಳುವಳಿಕೆಯನ್ನು ತೋರಿಸಿದರು”

ಭಾರತದ ಕಡೆಯಿಂದ ಮೊದಲ ವಿಶ್ವ ಯು ದ್ಧ ದಲ್ಲಿ ಹೋ ರಾ ಡಲು ಸೇನೆ ಹೋಗಿದ್ದು ಮಾತ್ರವಲ್ಲದೆ, ದೇಶದ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಂಡು ಬಂ ದೂ ಕು, ಗ ನ್ ಪೌಡರ್ ನಿಂದ ಎಲ್ಲ ರೀತಿಯ ವಸ್ತುಗಳನ್ನು ಇಲ್ಲಿಂದಲೇ ಕಳುಹಿಸಲಾಗಿತ್ತು. ಇದೆಲ್ಲ ಹೇಗೆ ಸಾಧ್ಯವಾಯಿತು? ಇದಕ್ಕೆ ಪ್ರತಿಕ್ರಿಯೆಯಾಗಿ, ಆಗ ವೈಸರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜ್ ದೇಶದ ನಾಯಕರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿದನು, ನಂತರ ಅವರು ಅದನ್ನು ಒಪ್ಪಿಕೊಂಡರು ಎಂದು ಹೇಳಿದ್ದನು. ಭಾರತದ 3 ಲಕ್ಷ ಸೈ ನಿ ಕ ರು ಫ್ರಾನ್ಸ್, ಈಜಿಪ್ಟ್, ಚೀನಾ, ಮೆಸೊಪೊಟೋಮಿಯಾ, ಪೂರ್ವ ಆಫ್ರಿಕಾ ಮತ್ತು ಕ್ಯಾಮರೂನ್‌ನಲ್ಲಿ ಹೋರಾಡಿದರು.

32 ಕೋಟಿ ಜನಸಂಖ್ಯೆಯಿರುವ ದೇಶವನ್ನು ಕೇವಲ 73,000 ಬ್ರಿಟಿಷರು ಸುಲಭವಾಗಿ ಹೇಗೆ ಆ ಕ್ರ ಮಿ ಸಿಕೊಂಡರು ಎಂಬುದು ಈ ಸಂದರ್ಶನದಿಂದ ಬಹಿರಂಗವಾಗುತ್ತದೆ‌. ಇಲ್ಲಿ ಕೇವಲ 10-15 ಸಾವಿರ ಬ್ರಿಟಿಷರು ಇದ್ದು ಇಡೀ ದೇಶವನ್ನು ಆಳುತ್ತಿದ್ದ ಕಾಲವಿತ್ತು. ಲಾರ್ಡ್ ಹಾರ್ಡಿಂಜ್ ಮಾತಿನಲ್ಲಿ ಹೇಳುವುದಾದರೆ, ಭಾರತದಲ್ಲಿ ಬ್ರಿಟಿಷರಿಗಿದ್ದ ನಿಷ್ಠಾವಂತರಿಂದ ಇದೆಲ್ಲವೂ ಸಾಧ್ಯವಾಯಿತು. ಇಲ್ಲಿನ ಹಲವು ಗ್ರಾಮಸ್ಥರು ಕ್ರಾಂತಿಕಾರಿಗಳ ಬಗ್ಗೆ ಪೊಲೀಸರಿಗೆ ರ ಹ ಸ್ಯ ಮಾಹಿತಿ ನೀಡುತ್ತಿದ್ದರು ಎಂದು ಚಾರ್ಲ್ಸ್ ಹೇಳಿದ್ದ.

ಇದಕ್ಕಾಗಿ ಆತ ಒಂದು ಉದಾಹರಣೆಯನ್ನೂ ನೀಡಿದ್ದ, ಅದನ್ನು ಈಗಿನ ದಿನಕ್ಕೂ ಹೋಲಿಕೆ ಮಾಡಿ ನೋಡಲೇಬೇಕು. 1914-15 ರ ಚಳಿಗಾಲದಲ್ಲಿ, ಅಮೆರಿಕ ಮತ್ತು ಕೆನಡಾದ ಪಶ್ಚಿಮ ಭಾಗಗಳಿಂದ 7000 ಸಿ ಖ್ಖ ರು ಪಂಜಾಬ್‌ಗೆ ಹಿಂತಿರುಗಿದರು ಮತ್ತು ಸ್ವಾತಂತ್ರ್ಯಕ್ಕಾಗಿ ಎಲ್ಲಾ ರೀತಿಯ ‘ದೌ ರ್ಜ ನ್ಯ’ಗಳನ್ನು ಪ್ರಾರಂಭಿಸಿದರು, ಆದರೆ ಬ್ರಿಟಿಷ್ ಸರ್ಕಾರ ಅವರನ್ನು ನಿಗ್ರಹಿಸಲು ಪ್ರಾರಂಭಿಸಿದಾಗ, ಸಿ ಖ್ ಕ್ರಾಂತಿಕಾರಿಗಳ ಎಲ್ಲಾ ಪ್ರಯತ್ನಗಳು ವಿಫಲವಾದವು. ಇದು ಹೇಗೆ ಸಾಧ್ಯವಾಯಿತು? ಲಾರ್ಡ್ ಚಾರ್ಲ್ಸ್ ಹಾರ್ಡಿಂಜ್ ಅವರ ಉತ್ತರ ಹೀಗಿತ್ತು – ‘ಸಿ ಖ್ ರೈತರ ಕಾರಣದಿಂದಾಗಿ’.

ಆತ ಮುಂದೆ ಮಾತನಾಡುತ್ತ, “ಪಂಜಾಬ್‌ನಲ್ಲಿ ಅಸಂಖ್ಯಾತ ಸಿಖ್ ರೈತರಿದ್ದಾರೆ. ಅವರು ಆ ಸಿ ಖ್ ಕ್ರಾಂತಿಕಾರಿಗಳನ್ನು ಹಿ ಡಿ ದು ಬ್ರಿಟಿಷ್ ಸರ್ಕಾರಕ್ಕೆ ಒಪ್ಪಿಸಿದರು. ಅವರ ಬಗ್ಗೆ ನಮಗೆ ಮಾಹಿತಿ ನೀಡಲಾಯಿತು. ಸ್ಥಳೀಯ ಮಟ್ಟದಲ್ಲಿ ಬ್ರಿಟಿಷರ ಬಗ್ಗೆ ಇರುವ ಅವರ ‘ನಿಷ್ಠೆ’ಯಿಂದ ಇದು ಸಾಧ್ಯವಾಗಿಯಿತು” ಎಂದು ಚಾರ್ಲ್ಸ್ ಹೇಳಿದ್ದ. ಆದಾಗ್ಯೂ, ಈ ಸಂದರ್ಶನದಲ್ಲಿ, ಆತ ಭಾರತದ ವಿ ರು ದ್ಧ ಇಂಗ್ಲಿಷ್ ನೆರೆಟಿವ್ ನ್ನ ಅಮೆರಿಕದ ಜನರೆದುರಿಡಲು ಆತ ವಿಷಯಗಳನ್ನ ಪ್ರಸ್ತುತಪಡಿಸಿದ್ದನು.

Vinod Hindu Nationalist 

Advertisement
Share this on...