“ಮೊದಲು ಅಸ್ಸಾಂ, ಬಳಿಕ ಪಂಜಾಬ್, ಈಗ ಉತ್ತರಾಖಂಡ….” ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ‌ ನಡೆಸಿದ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ

in Kannada News/News 274 views

ನವದೆಹಲಿ: ಪಂಜಾಬ್ ನಂತರ ಈಗ ಉತ್ತರಾಖಂಡ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಉತ್ತರಾಖಂಡದ ಮಾಜಿ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಪಕ್ಷದ ವಿರುದ್ಧ ಬಂಡಾಯ ಧೋರಣೆ ತೋರಲು ಆರಂಭಿಸಿದ್ದಾರೆ. ವಾಸ್ತವವಾಗಿ ಹರೀಶ್ ರಾವತ್ ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ಮತ್ತು ಆಪ್ತರಿಂದ ಸಹಕಾರ ಸಿಗುತ್ತಿಲ್ಲ ಎಂದು ಹರೀಶ್ ರಾವತ್ ಆರೋಪಿಸಿದ್ದಾರೆ. ಹರೀಶ್ ರಾವತ್ ತಮ್ಮ ಹುದ್ದೆಯ ಮೂಲಕ ಕಾಂಗ್ರೆಸ್ ತೊರೆಯಲು ಸೂಚಿಸಿದ್ದರು. ಇದಾದ ನಂತರ ಅವರು ಕಾಂಗ್ರೆಸ್ ಬಗ್ಗೆ ಭ್ರಮನಿರಸನಗೊಂಡಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಮುಂದಿನ ವರ್ಷ ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಿರುವಾಗ ಹಿರಿಯ ಕಾಂಗ್ರೆಸ್ ನಾಯಕರ ಬಂಡಾಯ ಧೋರಣೆ ಪಕ್ಷಕ್ಕೆ ಭಾರೀ ಸಂಕಷ್ಟ ತಂದೊಡ್ಡಬಹುದು ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಹರೀಶ್ ರಾವತ್ ಹೇಳಿಕೆ ಬೆನ್ನಲ್ಲೇ ಇದೀಗ ಪಕ್ಷದ ಹಿರಿಯ ನಾಯಕರ ಪ್ರತಿಕ್ರಿಯೆಯೂ ಮುನ್ನೆಲೆಗೆ ಬರುತ್ತಿದೆ. ಅಷ್ಟೇ ಅಲ್ಲ, ಪಕ್ಷದ ಸಂಸದರು ಕಾಂಗ್ರೆಸ್ ಹೈಕಮಾಂಡ್ ಗೆ ವಾರ್ನಿಂಗ್ ರೂಪದಲ್ಲಿ ಸಲಹೆ ನೀಡುತ್ತಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುರುವಾರ, ಮನೀಶ್ ತಿವಾರಿ ತಮ್ಮ ಟ್ವೀಟ್‌ನಲ್ಲಿ, “ಮೊದಲು ಅಸ್ಸಾಂ, ನಂತರ ಪಂಜಾಬ್ ಮತ್ತು ಈಗ ಉತ್ತರಾಖಂಡ…” ಎಂದು ಬರೆದಿದ್ದಾರೆ. ಮನೀಶ್ ತಿವಾರಿ ಅವರು ತಮ್ಮ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಪಂಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಅವರು ಪಕ್ಷದ ಹೈಕಮಾಂಡ್ ಮೇಲೆ ಬಹಿರಂಗವಾಗೇ ತಮ್ಮ ಅಸಮಾಧಾನವನ್ನ ಹೊರಹಾಕಿದ್ದರು.

Advertisement

ಇದಕ್ಕೂ‌ ಮೊದಲು ಹರೀಶ್ ರಾವತ್ ವಿರುದ್ಧ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಾಗ್ದಾಳಿ ನಡೆಸಿದ್ದರು. ANI ನ ಈ ಸುದ್ದಿಯನ್ನು ರೀಟ್ವೀಟ್ ಮಾಡಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್, “ನೀವು ಏನನ್ನು ಮಾಡುತ್ತೀರೋ, ಅದನ್ನೇ ವಾಪಸ್ ಪಡೆಯುತ್ತೀರ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ (ಯಾವುದಾದರೂ ಇದ್ದರೆ) ಶುಭಾಶಯಗಳು” ಎಂದಿದ್ದರು.

ಉತ್ತರಾಖಂಡ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಅವರು ಮಾಡುತ್ತಿರುವ ಕೆಲಸಕ್ಕೆ ಹೈಕಮಾಂಡ್ ಅಥವಾ ಅದರ ಆಪ್ತರು ಬೆಂಬಲ ನೀಡುತ್ತಿಲ್ಲ ಎಂದು ಹರೀಶ್ ರಾವತ್ ಬುಧವಾರ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹರೀಶ್ ರಾವತ್ ಅವರನ್ನು ಗಾಂಧಿ ಕುಟುಂಬಕ್ಕೆ ಆಪ್ತರು ಎಂದು ಪರಿಗಣಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.

ಪಂಜಾಬ್, ಗೋವಾ, ಉತ್ತರಪ್ರದೇಶದಿಂದಲೂ ಅಧಿಕಾರ ಕಳೆದುಕೊಳ್ಳಲಿದೆ ಕಾಂಗ್ರೆಸ್: ಸಮೀಕ್ಷೆ

ಮುಂದಿನ ವರ್ಷ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾಜಕೀಯ ನಡೆಯುತ್ತಿದೆ. ವಾಗ್ದಾಳಿ, ಆರೋಪ, ಪ್ರತ್ಯಾರೋಪ, ಲಾಭದಾಯಕ ಭರವಸೆಗಳನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಇದೇ ವೇಳೆ ಮತದಾರರ ಮನಃಸ್ಥಿತಿ ಅರಿಯಲು ಸಮೀಕ್ಷೆಗಳು ನಡೆಯುತ್ತಿವೆ. ಈ ಸುದ್ದಿಯಲ್ಲಿ ನಾವು ಪಂಜಾಬ್ ಮತ್ತು ಗೋವಾಗಳ ಬಗ್ಗೆ ಬಹಿರಂಗಗೊಂಡಿರುವ ಸಮೀಕ್ಷೆಗಳ ಫಲಿತಾಂಶಗಳ ಬಗ್ಗೆ ಹೇಳಲಿದ್ದೇವೆ. ಅಷ್ಟಕ್ಕೂ ಗೋವಾದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಶೇರ್ ಇದೆ? ಬನ್ನಿ ನಿಮಗೆ ವಿಸ್ತೃತವಾಗಿ ತಿಳಿಸುತ್ತೇವೆ.

ನ್ಯೂಸ್ ಎಕ್ಸ್ (News X) ನ ಈ ಸಮೀಕ್ಷೆಯಲ್ಲಿ ಗೋವಾದ 20 ಸಾವಿರ ಜನರನ್ನು ಪ್ರಶ್ನಿಸಲಾಗಿದೆ. ಇದರ ಪ್ರಕಾರ ಗೋವಾದಲ್ಲಿ ಬಿಜೆಪಿ ಅತಿ ಹೆಚ್ಚು ವೋಟ್ ಶೇರ್ ಹೊಂದಿದೆ. AAP ಎರಡನೇ ಸ್ಥಾನದಲ್ಲಿದ್ದರೆ, ಗೋವಾದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಲುಪಿದೆ. ಗೋವಾದಲ್ಲಿ ಭಾರತೀಯ ಜನತಾ ಪಕ್ಷ ಶೇ.32.8ರಷ್ಟು ಮತಗಳನ್ನು ಪಡೆಯುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಶೇ.18.8ರಷ್ಟು ಮತಗಳನ್ನು ಪಡೆದರೆ, ಆಮ್ ಆದ್ಮಿ ಪಕ್ಷ ಶೇ.22.1ರಷ್ಟು ಮತಗಳನ್ನು ಪಡೆಯುತ್ತಿದೆ. 26.30ರಷ್ಟು ವೋಟ್ ಶೇರ್ ಇತರರ ಖಾತೆಗೆ ಸೇರುತ್ತಿದೆ.

ನಾವು ಪಂಜಾಬ್ ಬಗ್ಗೆ ಮಾತನಾಡಿದರೆ, ಇಲ್ಲಿ ನಡೆದ ಸಮೀಕ್ಷೆಯಲ್ಲಿ 45000 ಜನರನ್ನು ಪ್ರಶ್ನಿಸಲಾಗಿದೆ. ಬಳಿಕ ಹೊರಬಿದ್ದಿರುವ ಅಂಕಿ ಅಂಶಗಳು ಹೀಗಿವೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅದರ ವೋಟ್ ಶೇರ್ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಸಮೀಕ್ಷೆಯ ಪ್ರಕಾರ, ಆಮ್ ಆದ್ಮಿ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ.

ಬಹಿರಂಗಪಡಿಸಿದ ಅಂಕಿಅಂಶಗಳ ಪ್ರಕಾರ, AAP 38.83 ಶೇಕಡಾ ಮತಗಳನ್ನು ಪಡೆಯುತ್ತಿದೆ. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು 35.2 ಶೇಕಡಾ ಮತಗಳನ್ನು ಪಡೆಯುತ್ತಿದೆ ಮತ್ತು SAD 21.01 ಮತ ಹಂಚಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಿಜೆಪಿ 2.33 ರಷ್ಟು ವೋಟ್ ಶೇರ್ ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ನಾವು ಸೀಟುಗಳ ಬಗ್ಗೆ ಮಾತನಾಡುವುದಾದರೆ, ಗೋವಾದಲ್ಲಿ ಬಿಜೆಪಿ 20-22 ಸ್ಥಾನಗಳನ್ನು ಪಡೆಯುತ್ತಿದೆ, ಕಾಂಗ್ರೆಸ್ 04-06 ಸ್ಥಾನಗಳನ್ನು ಪಡೆಯುತ್ತಿದೆ, ಎಎಪಿ 05-07 ಸ್ಥಾನಗಳನ್ನು ಪಡೆಯುತ್ತಿದೆ ಮತ್ತು ಇತರರು 08-09 ಸ್ಥಾನಗಳನ್ನು ಪಡೆಯುತ್ತಿದ್ದಾರೆ. ಪಂಜಾಬ್‌ನಲ್ಲಿ ಎಎಪಿ 47-52 ಸ್ಥಾನಗಳನ್ನು, ಕಾಂಗ್ರೆಸ್ 40-45 ಸ್ಥಾನಗಳನ್ನು, ಬಿಜೆಪಿ 01-02 ಸ್ಥಾನಗಳನ್ನು, SAD 22-26 ಸ್ಥಾನಗಳನ್ನು ಮತ್ತು ಇತರರು 00 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಪಂಜಾಬ್ ಒಟ್ಟು 117 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದರೆ ಗೋವಾ ಒಟ್ಟು 40 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ.

 

Advertisement
Share this on...