ಹಣೆಯ ಮೇಲೆ ಕುಂಕುಮವಿಟ್ಟುಕೊಂಡು ಮಹಾಕಾಲನ ದರ್ಶನ ಪಡೆದು ‘ಜೈ ಮಹಾಕಾಲ್’ ಎಂದ ಸೈಫ್ ಅಲಿಖಾನ್ ಮಗಳು ಸಾರಾ ಅಲಿ ಖಾನ್: ಟ್ರೋಲ್ ಮಾಡಿದ ನೆಟ್ಟಿಗರು

in FILM NEWS/Kannada News/News 462 views

ಉಜ್ಜಯಿನಿ: ಬಾಲಿವುಡ್ ನಟಿ ಹಾಗು ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಹಲವಾರು ಕಾರಣಗಳಿಂದಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಅದು ಆಕೆಯ ಟ್ವೀಟ್ ಬಗ್ಗೆ ಇರಲಿ, ಅಥವ ಕೆಲವೊಮ್ಮೆ ಆಕೆಯ ಡ್ರೆಸ್ ಬಗ್ಗೆ ಚರ್ಚೆಯಲ್ಲಿರುತ್ತಾರೆ. ಆದರೆ ಸಾರಾ ಅಲಿ ಖಾನ್ ಅನೇಕ ಬಾರಿ ಸೋಶಿಯಲ್ ಮೀಡಿಯಾ ಯೂಸರ್ ಗಳ ಕೈಯಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಈ ಬಾರಿ ಮತ್ತೊಮ್ಮೆ ನಟಿ ಸಾರಾ ಅಲಿ ಸೋಷಿಯಲ್ ಮೀಡಿಯಾದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement

ಇಂದು ಅಂದರೆ ಡಿಸೆಂಬರ್ 24 ರಂದು OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ‘ಅತರಂಗಿ ರೇ’ ಚಿತ್ರಕ್ಕಾಗಿ ಬಾಲಿವುಡ್ ನಟಿ ಸಾರಾ ಅಲಿ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಸಾರಾ ಅಲಿ ಖಾನ್ ಜೊತೆಗೆ ಅಕ್ಷಯ್ ಕುಮಾರ್ ಮತ್ತು ರಜನಿಕಾಂತ್ ಅಳಿಯ ಹಾಗು ತಮಿಳಿನ ಖ್ಯಾತ ನಟ ಧನುಷ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾರಾ ತಮ್ಮ ಸಿನಿಮಾವನ್ನು ಬಿರುಸಿನ ಪ್ರಚಾರ ಮಾಡಿದ್ದಾರೆ. ಅವರು ದೀರ್ಘಕಾಲದವರೆಗೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಧನುಷ್ ಜೊತೆಗಿನ ತಮ್ಮ ಚಲನಚಿತ್ರವನ್ನು ಪ್ರಚಾರ ಮಾಡುತ್ತಿದ್ದರು ಮತ್ತು ಈಗ ಸಾರಾ ಅಲಿ ಖಾನ್ ತಮ್ಮ ಚಿತ್ರದ ಯಶಸ್ಸಿಗೆ ಆಶೀರ್ವಾದ ಪಡೆಯಲು ಉಜ್ಜಯಿನಿಯ ಮಹಾಕಾಲ್ ದೇವಸ್ಥಾನವನ್ನು ತಲುಪಿದರು. ನಟಿ ತನ್ನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಕೈ ಮುಗಿದು ದೇವರ ಆಶೀರ್ವಾದವನ್ನು ತೆಗೆದುಕೊಳ್ಳುತ್ತಿದ್ದಾರೆ.

ಸಾರಾ ಅಲಿ ಖಾನ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್ ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಉಜ್ಜಯಿನಿಯ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಮತ್ತು ಎರಡನೆಯ ಚಿತ್ರಗಳಲ್ಲಿ, ಸಾರಾ ಕ್ಯಾಮೆರಾವನ್ನು ನೋಡುತ್ತಿರುವುದು ಕಂಡುಬರುತ್ತದೆ. ಅದೇ ಸಮಯದಲ್ಲಿ, ಮೂರನೇ ಚಿತ್ರದಲ್ಲ ಸಾರಾ ಹಿಂದೆ ಮುಖ ಮಾಡಿ ದೇವಾಲಯದತ್ತ ಹೊರಳಿ ನಮಸ್ಕಾರ ಮಾಡುತ್ತಿದ್ದಾರೆ. ಕೊನೆಯ ಅಂದರೆ ನಾಲ್ಕನೆಉ ಚಿತ್ರವು ದೇವಾಲಯದ್ದಾಗಿದೆ, ಇದರಲ್ಲಿ ದೇವಾಲಯವು ಲೈಟಿಂಗ್ಸ್ ನಲ್ಲಿ ಬೆಳಕಿನ ಬೆಳಕಿನಲ್ಲಿ ಬಹಳ ಸುಂದರವಾಗಿ ಕಾಣುತ್ತಿದೆ. ಲುಕ್ ಬಗ್ಗೆ ಮಾತನಾಡಿರುವ ಸಾರಾ ಎಂದಿನಂತೆ ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ನಟಿ ‘ಜೈ ಮಹಾಕಾಲ್’ ಎಂದು ಬರೆದುಕೊಂಡಿದ್ದಾರೆ.

ಸಾರಾ ಅಲಿ ಖಾನ್ ಮಧ್ಯಪ್ರದೇಶದ ಉಜ್ಜಯಿನಿಗೆ ಹೋಗಿ ಅಲ್ಲಿ ನಟಿ ಬಾಬಾ ಮಹಾಕಾಲನ ದರ್ಶನವನ್ನು ಮಾಡಿ ಆಶೀರ್ವಾದವನ್ನು ಪಡೆದು ಅದರ ಕೆಲ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಬಳಿಕ ಇದೀಗ ಜನ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಸಾರಾ ಅಲಿ ಖಾನ್ ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಜನರ ಟ್ರೋಲ್‌ಗೆ ಮತ್ತೆ ಆಹಾರವಾಗಿದ್ದು, ಜನರು ಸಾರಾ ಅಲಿ ಖಾನ್‌ನ್ನ ಸಾಕಷ್ಟು ಕಾಲೆಳೆಯುತ್ತ ಟ್ರೋಲ್ ಮಾಡಿದ್ದಾರೆ. ಯೂಸರ್ ಒಬ್ಬರು, “ನೀವು ಎಷ್ಟು ಸಮಯದವರೆಗೆ ದೇವರನ್ನೇ ದೋಚುತ್ತೀರಿ?” ಎಂದು ಬರೆದರೆ ಮತ್ತೊಬ್ಬ ಯೂಸರ್, “ಫಿಲಂ ಪ್ರೊಮೋಷನ್ ನಲ್ಲಿ ಮಾತ್ರ ಇವರಿಗೆ ದೇವರು ನೆನಪಾಗುತ್ತಾನೆ” ಎಂದು ಬರೆದಿದ್ದಾರೆ.

ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಕ್ಕೆ ನಟಿ ಸಾರಾ ಅಲಿ ಖಾನ್ ವಿರುದ್ಧ ಯೂಸರ್ ಗಳು ಆಕ್ರೋಶ ವ್ಯಕ್ತಪಡಿಸಿ ಟ್ರೋಲ್ ಮಾಡಿದ್ದರು.

 

Advertisement
Share this on...