ಗ್ರೇಟ್ ಖಲಿ ಬಳಿಕ ಜಗತ್ತಿನಾದ್ಯಂತ WWE ಮೂಲಕ ಘರ್ಜಿಸಲು ಹೊರಟ ಹಿಂದೂ ಹುಲಿ ‘ವೀರ್’: ಈ ವ್ಯಕ್ತಿಯ ಬಗ್ಗೆ ತಿಳಿದರೆ ಶಾಕ್ ಆಗ್ತೀರ

in Uncategorized 354 views

WWE ಇತ್ತೀಚೆಗೆ ಭಾರತದ ಪ್ರಸಿದ್ಧ ಸೂಪರ್‌ಸ್ಟಾರ್ ವೀರ್ (Veer) ಹೆಸರನ್ನು ಬದಲಾಯಿಸಿದೆ. ವೀರ್ ಈಗ WWE ನಲ್ಲಿ ವೀರ್ ಮಹಾನ್ ಹೆಸರಿನಲ್ಲಿ WWE ಕದನವಾಡೋದನ್ನ ನೀವು ನೋಡಲಿದ್ದೀರ. ನಿಮ್ಮ‌ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ವೀರ್ ಅವರ ನಿಜವಾದ ಹೆಸರು ರಿಂಕು ರಜಪೂತ್ ಆದರೆ ಮೇನ್ ರೋಸ್ಟರ್‌ನಲ್ಲಿ (WWE) ಅವರು ವೀರ್ ಹೆಸರಿನಲ್ಲೇ ಹೋರಾಡುತ್ತಿದ್ದರು.

Advertisement

ವೀರ್ ಕೆಲವು ತಿಂಗಳ ಹಿಂದೆ Raw ನಲ್ಲಿ ತನ್ನ ಮೇನ್ ರೋಸ್ಟರ್‌ಗೆ ಎಂಟ್ರಿ ಮಾಡಿದ್ದರು. ಅವರು ಜಿಂದರ್ ಮಹಲ್ ಮತ್ತು ಶಾಂಕಿ ಅವರೊಂದಿಗೆ ಟೀಮ್ ಮಾಡಿ ಪರ್ಫಾರ್ಮ್ ಮಾಡುತ್ತಿದ್ದರು. ಆದಾಗ್ಯೂ, ಇತ್ತೀಚಿನ ಡ್ರಾಫ್ಟ್‌ನಲ್ಲಿ, WWE ಎಲ್ಲಾ ಮೂರು ಭಾರತೀಯ ಸೂಪರ್‌ಸ್ಟಾರ್‌ಗಳ ತಂಡವನ್ನು ಬ್ರೇಕ್ ಮಾಡಿದೆ. ಜಿಂದರ್ ಮಹಲ್ ಮತ್ತು ಶಾಂಕಿ ಸ್ಮ್ಯಾಕ್‌ಡೌನ್‌ನ ಭಾಗವಾಗಿದ್ದರೆ, ವೀರ್ ಮಹಾನ್ ಅನ್ನು RAW ನಲ್ಲಿ ಡ್ರ್ಯಾಫ್ಟ್ ಮಾಡಲಾಗಿದೆ.

2018 ರಲ್ಲಿ WWE ಗೆ ಎಂಟ್ರಿ ಕೊಟ್ಟಿದ್ದ ವೀರ್ ಮಹಾನ್

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ 2018 ರಲ್ಲಿ, ವೀರ್ ಮಹಾನ್ WWE ಜೊತೆಗಿನ ಒಪ್ಪಂದಕ್ಕೆ (contract) ಸಹಿ ಹಾಕಿದರು. ಇದಕ್ಕೂ ಮೊದಲು, ವೀರ್ ಮಹಾನ್ ಅವರು NXT ಯಲ್ಲ ರಿಂಕು ಎಂಬ ಟ್ಯಾಗ್ ಟೀಮ್ ಡಿವಿಷನ್ ನಲ್ಲಿ ಇಂಡಸ್ ಶೇರ್ ಟೀಮ್‌ನ ಭಾಗವಾಗಿದ್ದರು ಮತ್ತು ಸೌರವ್ ಗುರ್ಜಾರ್ ಅವರೊಂದಿಗೆ ಇದ್ದರು. ಆದಾಗ್ಯೂ, ಅವರನ್ನು WWE ನ ಮೇನ್ ರೋಸ್ಟರ್‌ಗೆ ಕರೆದಾಗ, ಅವರು ಇಂಡಸ್ ಶೇರ್ ನ ಭಾಗವಾಗಲಿಲ್ಲ ಮತ್ತು ಬೇರೆ ಟೀಮ್‌ನ ಭಾಗವಾದರು.

ವೀರ್ ಮಹಾನ್ ಅವರ ಪುಟ್ಟ ಕೆರಿಯರ್ ನಲ್ಲಿ ಇದುವರೆಗೆ ಅನೇಕ ದೊಡ್ಡ ಸೂಪರ್‌ಸ್ಟಾರ್‌ಗಳ ವಿರುದ್ಧ ಹೋರಾಡಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ Superstar Spectacle ನಲ್ಲಿ ಡ್ರೂ ಮ್ಯಾಕ್‌ಇಂಟೈರ್ ಮತ್ತು ಸೌರವ್ ಅವರೊಂದಿಗೆ ಸೇರಿಕೊಂಡರು. ಈ ಮೂವರು ಸೂಪರ್‌ಸ್ಟಾರ್‌ಗಳು ಸಿಕ್ಸ್ ಮ್ಯಾನ್ ಟ್ಯಾಗ್ ಟೀಮ್ ಪಂದ್ಯದಲ್ಲಿ ಜಿಂದರ್ ಮಹಲ್, ಸಮೀರ್ ಸಿಂಗ್ ಮತ್ತು ಸುನಿಲ್ ಸಿಂಗ್ ಅವರನ್ನು ಸೋಲಿಸಿದರು.

ಇದಲ್ಲದೆ, ವೀರ್ ಮಹಾನ್ ಸಿಂಗಲ್ಸ್ ಪಂದ್ಯದಲ್ಲಿ Main Event ಶೋನಲ್ಲಿ ಜೆಫ್ ಹಾರ್ಡಿ ಮತ್ತು ಡ್ರೂ ಗುಲಾಕ್ ಅವರಂತಹ ಸೂಪರ್‌ಸ್ಟಾರ್‌ಗಳನ್ನು ಸೋಲಿಸಿದ್ದಾರೆ. RAW ನ ಎಪಿಸೋಡ್ ನಲ್ಲಿ, ವೀರ್ ಡ್ರೂ ಮ್ಯಾಕ್‌ಇಂಟೈರ್ ಅವರನ್ನು DQ ನಿಂದ ಸೋಲಿಸಿದರು. WWE ನಲ್ಲಿ ವೀರ್ ಮಹಾನ್ ಅವರ ಕೊನೆಯ ಗೆಲುವು ಸೆಪ್ಟೆಂಬರ್ 27, 2021 ರ RAW ಎಪಿಸೋಡ್ ನಲ್ಲಾಗಿತ್ತು. ಅವರು ಸಿಕ್ಸ್ ಮ್ಯಾನ್ ಟ್ಯಾಗ್ ಟೀಮ್ ಪಂದ್ಯದಲ್ಲಿ ಜೆಫ್ ಹಾರ್ಡಿ, ಅಲಿ ಮತ್ತು ಮನ್ಸೂರ್ ಅವರನ್ನು ಸೋಲಿಸಲು ಜಿಂದರ್ ಮಹಲ್ ಮತ್ತು ಶಾಂಕಿ ಅವರೊಂದಿಗೆ ಸೇರಿಕೊಂಡರು.

ಯಾರು ಈ ವೀರ್ ಮಹಾನ್?

ವೀರ್ ಮಹಾನ್ ರವರ ಮೂಲ ಹೆಸರು ರಿಂಕು ಸಿಂಗ್ ರಜಪೂತ್ ಆಗಿದ್ದು ಇವರು ಉತ್ತರಪ್ರದೇಶದ ಗೋಪಿಗಂಜ್ ನಲ್ಲಿ ಆಗಸ್ಟ್ 8, 1988 ರಲ್ಲಿ ಜನಿಸಿದರು. ರಿಂಕು ಸಿಂಗ್ ಒಬ್ಬ ಭಾರತೀಯ ವೃತ್ತಿಪರ ಕುಸ್ತಿಪಟು ಮತ್ತು ಮಾಜಿ ವೃತ್ತಿಪರ ಬೇಸ್‌ಬಾಲ್ ಪ್ಲೇಯರ್ ಆಗಿದ್ದರೆ. ಅವರು ಪ್ರಸ್ತುತ WWE ನ ಕಾಂಟ್ರಾಕ್ಟ್ ಗೆ ಸಹಿ ಮಾಡಿದ್ದಾರೆ, ಅಲ್ಲಿ ಅವರು ವೀರ್ ಮಹಾನ್ ಎಂಬ ರಿಂಗ್ ಹೆಸರಿನಡಿಯಲ್ಲಿ RAW ಬ್ರ್ಯಾಂಡ್‌ನಲ್ಲಿ ಪ್ರದರ್ಶನ ನೀಡುತ್ತಾರೆ.

2008 ರ ರಿಯಾಲಿಟಿ ಟೆಲಿವಿಷನ್ ಶೋ ದ ಮಿಲಿಯನ್ ಡಾಲರ್ ಆರ್ಮ್‌ನಲ್ಲಿ ಪಿಚಿಂಗ್ ಸ್ಪರ್ಧೆಯಲ್ಲಿ ಗೆದ್ದ ನಂತರ ಸಿಂಗ್ ಅವರು ಪಿಟ್ಸ್‌ಬರ್ಗ್ ಪೈರೇಟ್ಸ್ ಸಂಸ್ಥೆಯಿಂದ ಸಹಿ ಹಾಕಿದರು. ಅವರು ವೃತ್ತಿಪರ ಬೇಸ್‌ಬಾಲ್ ಆಡಿದ ಮೊದಲ ಭಾರತೀಯರಾಗಿದ್ದರು ಮತ್ತು ಹಲವಾರು ಸೀಸನ್‌ಗಳನ್ನು ಮೈನರ್ ಲೀಗ್‌ಗಳಲ್ಲಿ ಕಳೆದರು. Million Dollar Arm ಚಿತ್ರಕಥೆಯ ಕಥಾವಸ್ತು ಇವರನ್ನೇ ಆಧರಿಸಿದೆ.

ಉತ್ತರಪ್ರದೇಶದ ಭದೋಹಿ ಸಮೀಪದ ಗೋಪಿಗಂಜ್ ಎಂಬ ಗ್ರಾಮೀಣ ಹಳ್ಳಿಯಲ್ಲಿ ಟ್ರಕ್ ಡ್ರೈವರ್‌ನ ಮಗನಾದ ರಿಂಕು ಸಿಂಗ್ ಬಡತನದಲ್ಲಿ ಬೆಳೆದರು. ಕುಟುಂಬದ ಒಂದೇ ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದ ಒಂಬತ್ತು ಒಡಹುಟ್ಟಿದವರಲ್ಲಿ ರಿಂಕು ಸಿಂಗ್ ಒಬ್ಬರು.

ಹಿಂದೂ ಸಂಪ್ರದಾಯದ ಉಡುಪುಗಳಲ್ಲಿ ಕಾಣಿಸುವ ರಿಂಕು ಸಿಂಗ್ ಮಹಾನ್ ಶಿವಭಕ್ತನಾಗಿದ್ದು ಇವರ ಇನ್ಸ್ಟಾಗ್ರಾಮ್ ನಲ್ಲಿ (Veer Mahaan) ಇವರ ಇಂತಹ ಹಲವಾರು ಫೋಟೋಗಳನ್ನ ನೀವು ಕಾಣಬಹುದು.

Advertisement
Share this on...