ಉತ್ತರಪ್ರದೇಶದ ಕಾನ್ಪುರದಲ್ಲಿ ಓವೈಸಿ ಆಕ್ಷೇಪಾರ್ಹ ಭಾಷಣ ಮಾಡಿದ್ದು, “ಮೋದಿ ಯೋಗಿ ಇಲ್ಲದಿದ್ದರೆ ನಿಮ್ಮನ್ನು ರಕ್ಷಿಸುವವರು ಯಾರು” ಎಂದಿದ್ದನು. ಇದೀಗ ಹೈದರಾಬಾದ್ನ ಗೋಶಾಮಹಲ್ನ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರು ಓವೈಸಿಗೆ ಔರಂಗಜೇಬ್ ಇತಿಹಾಸವನ್ನು ನೆನಪಿಸಿದ್ದಾರೆ. ಓವೈಸಿಯ ಹೇಳಿಕೆಗಳಿಂದ ಕೆರಳಿದ ರಾಜಾ ಸಿಂಗ್ ಕೂಡ ಓವೈಸಿಯನ್ನು ಬಡಾ ಬಕರಾ (ದೊಡ್ಡ ಕುರಿ) ಎಂದು ಕರೆದಿದ್ದಾರೆ. ಬಿಜೆಪಿ ಶಾಸಕರು ನೆನ್ನೆ ಡಿಸೆಂಬರ್ 24, 2021 ರಂದು (ಶುಕ್ರವಾರ) ಈ ಹೇಳಿಕೆ ನೀಡಿದ್ದಾರೆ.
हैदराबाद के बड़े बकरे को मेरा जवाब
Advertisementतुम जब जब औरंगजेब और अकबर बनने का सपना देखोगे हम तब तब शिवाजी और महाराणा बनकर तुम्हारी नस्ले खत्म कर देंगे… #ArrestOwaisi pic.twitter.com/PPlgIfZpmX
— Raja Singh (@TigerRajaSingh) December 24, 2021
ತಮ್ಮ ಹೇಳಿಕೆಯಲ್ಲಿ, ಶಾಸಕ ರಾಜಾ ಸಿಂಗ್, “ಯೋಗಿ ಆಶ್ರಮ ಮತ್ತು ಮೋದಿ ಪರ್ವತಕ್ಕೆ ಹೋದರೆ ಹಿಂದೂಗಳ ಗತಿಯೇನು ಎಂದು ಅಸಾದುದ್ದೀನ್ ಓವೈಸಿ ಯುಪಿ ಚುನಾವಣಾ ಪ್ರಚಾರದಲ್ಲಿ ಹೇಳುತ್ತಾರೆ. ಅಂದರೆ ಇದರ ಇಂಟರ್ನಲ್ ಟಾರ್ಗೆಟ್ (ಆಂತರಿಕ ಗುರಿ) ಹಿಂದೂಗಳ ಮೇಲೆಯೇ ಇದೆ. ಈ ಮಗನಿಗೆ ನಾನು ಹೇಳಲು ಬಯಸುತ್ತೇನೆ, ಔರಂಗಜೇಬನಂತಹ ದೇಶ ದ್ರೋ ಹಿ ಗಳನ್ನು ನಿರ್ಮೂಲನೆ ಮಾಡಲು, ಭ ಯೋ ತ್ಪಾ ದಕರನ್ನು ತೊಡೆದುಹಾಕಲು ಹಿಂದೂಗಳು ತಮ್ಮ ಕ ತ್ತಿ ಯನ್ನು ಎತ್ತಿದಾಗ ಆಗ ನಿನ್ನಂಥವರು ಆ ಕಾಲದಲ್ಲಿ ಸಲ್ವಾರ್ ಕಮೀಜ್ ಹಾಕಿಕೊಂಡು ಬಚ್ಚಿಟ್ಟುಕೊಂಡಿದ್ದರು. ಇದು ನಿಮ್ಮ ಇತಿಹಾಸ. ಈಗ ಯೋಗಿ ಮತ್ತು ಮೋದಿ ವಿಷಯಕ್ಕೆ ಬರೋಣ. ಯಾವಾಗ್ಯಾವಾಗ ಧರ್ಮಕ್ಕೆ ಸಂಕಟ ಬರುತ್ತೋ ಆಗ ಯಾರಾದರೂ ಈ ಭೂಮಿಯಲ್ಲಿ ದೇವರ ರೂಪದಲ್ಲಿ ಜನ್ಮ ತಳೆದು ದೇಶ ಮತ್ತು ಧರ್ಮವನ್ನು ಕಾಪಾಡುತ್ತಾರೆ” ಎಂದಿದ್ದಾರೆ.
ಮುಂದೆ ಮಾತನಾಡಿದ ಅವರು, “ಆದ್ದರಿಂದ ಮೋದಿ ಯೋಗಿ ನಂತರ ಯಾರು ಬರುತ್ತಾರೆ ಎಂಬುದನ್ನು ಮರೆತುಬಿಡು. ನಮ್ಮಲ್ಲಿ ದೊಡ್ಡ ಸಾಲೇ ಇದೆ. ಯೋಗಿ, ಮೋದಿ ಮತ್ತು ಅಮಿತ್ ಶಾ ನಂತರ ಬಹಳ ದೊಡ್ಡ ಸಾಲು ಇದೆ ಯಾಕಂದ್ರೆ ನಮ್ಮ ಗುರಿ ಅಖಂಡ ಹಿಂದೂ ರಾಷ್ಟ್ರ. ಈ ಗುರಿಗಾಗಿ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಮಹಾರಾಣಾ ಪ್ರತಾಪ್ ಮತ್ತೆ ಹುಟ್ಟುತ್ತಾರೆ. ಆದರೆ ನಿಮ್ಮಂತಹ ದೇಶ ದ್ರೋ ಹಿ ಗಳು ಈ ಭೂಮಿಯಲ್ಲಿ ಬದುಕುವುದಿಲ್ಲ. ಒಂದು ವಿಷಯ ನೆನಪಿಟ್ಟುಕೋ, ಯೋಚಿಸಿ ಮಾತನಾಡು ಅಸಾದುದ್ದೀನ್ ಓವೈಸಿ ಯಾಕಂದ್ರೆ ಈಗಿನ ಹಿಂದೂ ನಿದ್ದೆ ಮಾಡುತ್ತಿಲ್ಲ ಬದಲಾಗಿ ಇಂದಿನ ಹಿಂದೂ ಎಚ್ಚರಗೊಂಡಿದ್ದಾನೆ” ಎಂದರು.
ಡಿಸೆಂಬರ್ 12 ರಂದು ಅಸಾದುದ್ದೀನ್ ಓವೈಸಿ ಉತ್ತರಪ್ರದೇಶದ ಕಾನ್ಪುರದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಆಕ್ಷೇಪಾರ್ಹ ಭಾಷಣ ಮಾಡಿದ್ದನು. ಓವೈಸಿಯ ಈ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ ಓವೈಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ.
2. As you can see in the above video & the one here, I was talking about POLICE ATROCITIES in Kanpur & addressing such cops who think they have immunity to violate people’s liberties because of Modi-Yogi
3. I said do not confuse our silence for acquiescence. 2/n pic.twitter.com/SpQq4sxQYk
— Asaduddin Owaisi (@asadowaisi) December 24, 2021
ವಿವಾದ ತಾರಕಕ್ಕೇರುತ್ತಿದ್ದಂತೆ ಇದೀಗ ಓವೈಸಿ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾನೆ. ಓವೈಸಿ ಪ್ರಕಾರ, “ಅವರಿಗೆ ಅಲ್ಲಾಹನ ನ್ಯಾಯದಲ್ಲಿ ನಂಬಿಕೆ ಇದೆ. ಅಲ್ಲಾನಲ್ಲಿ ನಂಬಿಕೆ ಇಡುವುದು ಮತ್ತು ನಿಮಗೆ ಸಂಭವಿಸಿದ ದೌ ರ್ಜ ನ್ಯವನ್ನು ನೆನಪಿಸಿಕೊಳ್ಳಬೇಕು ಅಂತ ಹೇಳಿದರೆ ಯಾಕೆ ವಿವಾದವಾಗಿದೆ? ಇದೆಲ್ಲ ಹರಿದ್ವಾರದ ಧರ್ಮ ಸಂಸದ್ ಗಮನ ಬೇರೆಡೆ ಸೆಳೆಯುವ ಷಡ್ಯಂತ್ರ” ಎಂದಿದ್ದಾನೆ.
ಕಾನ್ಪುರದಲ್ಲಿ ಓವೈಸಿ ಹೇಳಿದ್ದೇನು?
ಓವೈಸಿಯ ಭಾಷಣದ ವಿಡಿಯೋ ಕ್ಲಿಪ್ ಒಂದು ವೈರಲ್ ಆಗಿತ್ತು. ಇದರಲ್ಲಿ ಆತ ಪ್ರಧಾನಿ ಮೋದಿ ಹಾಗು ಸಿಎಂ ಯೋಗಿ ಆದಿತ್ಯನಾಥರನ್ನ ಬಹಿರಂಗವಾಗೇ ಧಮಕಿ ಹಾಕುತ್ತಿದ್ದಾನೆ. ಈ ವಿಡಿಯೋದಲ್ಲಿ ಆತ ಮಾತನಾಡುತ್ತ, “ಪೋಲಿಸರೇ (ಉತ್ತರಪ್ರದೇಶದ) ಯಾವಾಗಲೂ ಸಿಎಂ ಆಗಿ ಆ ಯೋಗಿ ಆದಿತ್ಯನಾಥನೇ ಇರಲ್ಲ, ದೇಶದ ಪ್ರಧಾನಮಂತ್ರಿಯಾಗಿ ಆ ಮೋದಿಯೇ ಇರಲ್ಲ, ಎಚ್ಚರದಿಂದಿರಿ ಮುಸಲ್ಮಾನರಿಗೆ ತೊಂದರೆ ಕೊಡಬೇಡಿ. ನಮ್ಮ ಸಮಯವೂ ಬರುತ್ತೆ ಆಗ ನಿಮ್ಮ ಸ್ಥಿತಿ ಊಹಿಸಿಕೊಳ್ಳಿ. ಆ ಯೋಗಿ ಹೋಗಿ ಮಠ ಸೇರ್ಕೋತಾನೆ, ಆ ಮೋದಿ ಹೋಗಿ ಗುಡ್ಡಗಾಡು ಸೇರ್ಕೋತಾನೆ. ಮುಸಲ್ಮಾನರ ಮೇಲೆ ಇವರು ಮಾಡ್ತಿರೋ ದೌರ್ಜನ್ಯವನ್ನ ಮುಸಲ್ಮಾನರು ನೆನಪಿನಲ್ಲಿಟ್ಟುಕೊಳ್ತಾರೆ. ಆ ಮೋದಿ, ಯೋಗಿ ಹೋದಮೇಲೆ ನಿಮ್ಮನ್ಯಾರು ಉಳಿಸುತ್ತಾರೆ” ಅಂತ ಪೋಲಿಸರಿಗೆ ಹಾಗು ಬಹುಸಂಖ್ಯಾತ ಹಿಂದುಗಳಿಗೆ ಬಹಿರಂಗವಾಗೇ ಧಮಕಿ ಹಾಕಿದ್ದ.
ವಿಡಿಯೋ ನೋಡಿ
Owaisi, like Aurangzeb and Jinnah, is the face of civilisational battle that Sanatan Dharma has faced for millennia. Balance of power is the need of the hour… pic.twitter.com/EgytTldGGB
— Amit Malviya (@amitmalviya) December 24, 2021