ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆದಿದ್ದ ಕಿಸಾನ್ ಆಂದೋಲನ್ ನಲ್ಲಿ ಒಂದೆಡೆ ದೆಹಲಿಯಲ್ಲಿ ಹಿಂದೂ ವಿರೋಧಿ ಗಲಭೆ ಆರೋಪಿಗಳ ಬಿಡುಗಡೆ, ಖಲಿಸ್ತಾನಿ ಬೆಂಬಲಿಗರ ಪೋಸ್ಟರ್ ಗಳು ಕಂಡು ಬಂದಿದ್ದವು, ಇದೀಗ ಪ್ರಧಾನಿ ಮೋದಿಗಾಗಿ ಬರ್ಬರ ಕೃತ್ಯ, ಆಕ್ಷೇಪಾರ್ಹ ಕಾಮೆಂಟ್ ಗಳು, ಸಾವಿನ ಬೆದರಿಕೆಗಳೂ ಕಾಣುತ್ತಿವೆ. ಇದರಿಂದಾಗಿ ಹೊಸ ಕೃಷಿ ಕಾನೂನುಗಳಿಗೆ ವಿರೋಧದ ಹಿಂದಿನ ನಿಜವಾದ ಉದ್ದೇಶದ ಬಗ್ಗೆ ಇದೀಗ ನಿರಂತರವಾಗಿ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.
ಗುರುವಾರ (ಡಿಸೆಂಬರ್ 26, 2020) ನ್ಯಾಶನಲ್ ದಸ್ತಕ್ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಮಹಿಳೆಯೊಬ್ಬರು ಪ್ರಧಾನಿಗೆ ಚಾ ಕು ವಿನಿಂದ ಇ ರಿ ಯುವುದಾಗು ಬೆದರಿಕೆ ಹಾಕುತ್ತಿರುವುದನ್ನು ಕೇಳಬಹುದು. ಪ್ರತಿಭಟನಾಕಾರರಿಗೆ ಲಂಗರ್ ತಯಾರಿಯಲ್ಲಿ ನಿರತರಾಗಿದ್ದ ಮಹಿಳೆಯೊಬ್ಬಳನ್ನ ಪತ್ರಕರ್ತರು ಮಾತನಾಡಿಸಿದಾಗ, “ನಾನು ಈ ಚಾ ಕು ವಿನಿಂದ ಮೋದಿ ಹೊಟ್ಟೆಯನ್ನು ಹ ರಿ ದು ಹಾಕುತ್ತೇನೆ” ಎಂದು ಉತ್ತರಿಸಿದಳು. ಮಹಿಳೆ ಇದ್ದಕ್ಕಿದ್ದಂತೆ ಮೋದಿಯನ್ನು ಕೊ ಲ್ಲು ವುದಾಗಿ ಬೆದರಿಕೆ ಹಾಕುತ್ತಿದ್ದಾಗ, ಅವಳು ತನ್ನ ಕೈಯಲ್ಲಿ ಹಿಡಿದಿದ್ದ ಚಾ ಕು ವಿನಿಂದ ಆತನಿಗೆ ಇದರಿಂದಲೇ ಇರಿಯುತ್ತೇನೆ ಎಂದು ಅದನ್ನ ತೋರಿಸುತ್ತಿದ್ದಳು. ವೀಡಿಯೊದಲ್ಲಿ ಈ ಧಮಕಿ 15 ನಿಮಿಷ 18 ಸೆಕೆಂಡುಗಳ ಹೊತ್ತಿಗೆ ನೀವು ಕೇಳಬಹುದು.
ಅದೇ ಸಮಯದಲ್ಲಿ, ಈ ಹೇಳಿಕೆಗಾಗಿ ಮಹಿಳೆಗೆ ಛೀಮಾರಿ ಹಾಕುವ ಬದಲು, ಪತ್ರಕರ್ತರು ಆಕೆಯ ಮಾತನ್ನ ಕೇಳಿ ನಗುತ್ತಿದ್ದರು ಮತ್ತು ಆ ಮಹಿಳೆಯ ಹೇಳಿಕೆಯನ್ನು ಪುನರಾವರ್ತಿಸಲು ಮಹಿಳೆಯನ್ನು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಬೇಡಿಕೆಗಳನ್ನು ಸ್ವೀಕರಿಸದ ಪ್ರಧಾನಿ ಮೋದಿ ವಿರುದ್ಧ ಪತ್ರಕರ್ತರು ಇದನ್ನು ‘ಜನರ ಕೋಪ’ ಎಂದು ಕರೆದರು.
ಮಹಿಳಾ ಪ್ರತಿಭಟನಾಕಾರರ ಹೇಳಿಕೆಯನ್ನು ಸಮರ್ಥಿಸಿಕೊಂಡ ಪತ್ರಕರ್ತೆ, “ಇದು ಸರ್ಕಾರದ ವಿರುದ್ಧ ಜನರ ಆಕ್ರೋಶ. ಅವರು 26 ದಿನಗಳ ಕಾಲ ಬೀದಿಯಲ್ಲಿದ್ದಾರೆ” ಎನ್ನುತ್ತಾರೆ. ಗಮನಿಸುವ ಸಂಗತಿಯೇನೆಂದರೆ ಪ್ರಧಾನಿ ಮೋದಿಗೆ ಧಮಕಿ ಹಾಕುತ್ತಿರುವ ಈ ಮಹಿಳೆ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕೈತ್ ಅವರ ಪತ್ನಿಯಾಗಿದ್ದಾಳೆ.
ಗಮನಿಸುವ ಅಂಶವೇನೆಂದರೆ ಇದಕ್ಕೂ ಮೊದಲೂ ಈ ಮಹಿಳೆಯ ಒಂದು ವಿಡಿಯೋ ವೈರಲ್ ಆಗಿತ್ತು. ಇದರಲ್ಲಿ ಪ್ರತಿಭಟನಾ ನಿರತ ಮಹಿಳೆಯರು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಯಲಿ ಎಂದು ಬೇಡಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳೆಯೊಬ್ಬರು, “ಮೋದಿ ಮರ್ ಜಾ ತು, ಶಿಕ್ಷಾ ಬೆಚ್ ಕೆ ಖಾ ಗಯಾ ರೇ ಮೋದಿ, ಮರ್ ಜಾ ತು. ರೇ ಮೋದಿ, ರೇಲ್ ಬೇಚ್ ಕರ್ ಖಾ ದಿಯಾ, ಮರ್ ಜಾ ತೂ. ಕಿಸಾನೋ ಕೋ ಧೋಕಾ ದೆ ಗಯಾ ರೆ ಮೋದಿ, ಮರ್ ಜಾ ತೂ” ಎನ್ನುತ್ತಿದ್ದಳು. ಎದುರಿಗೆ ಕುಳಿತ ಮಹಿಳೆ ‘ಹಾಯ್-ಹಾಯ್ ಮೋದಿ ಮರ್ ಜಾ ತು’ ಎಂದು ಮತ್ತೆ ಮತ್ತೆ ಹೇಳುತ್ತಿದ್ದಳು.
ಆದರೆ, ವಿಡಿಯೋ ಎಲ್ಲಿಯದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಹಿಂಭಾಗದಲ್ಲಿ ಅಖಿಲ ಭಾರತೀಯ ಕಿಸಾನ್ ಸಭಾ (AIKS) ಮತ್ತು ಕಮ್ಯುನಿಸ್ಟ್ ಪಕ್ಷದ ಸುತ್ತಿಗೆ ಗುರುತುಗಳನ್ನು ಹೊಂದಿರುವ ಪೋಸ್ಟರ್‌ಗಳನ್ನು ಕಾಣಬಹುದು. AIKS ಒಂದು ಎಡಪಂಥೀಯ ಸಂಘಟನೆಯಾಗಿದೆ. ಇದು ಎರಡು ಬಣಗಳನ್ನು ಹೊಂದಿದೆ – ಒಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಇನ್ನೊಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ).
ಇದೇ ವೇಳೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಕೂಡ ‘ಕಿಸಾನ್ ಆಂದೋಲನ’ದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನ ಉಲ್ಲೇಖಿಸಿ ಧೈರ್ಯವಿದ್ದರೆ ಒಬ್ಬರೇ ಬಂದು ರೈತರೊಂದಿಗೆ ಮಾತನಾಡಲಿ ಎಂದು ಹೇಳಿದ್ದಕ್ಕೆ ಬೆಂಬಲವೂ ವ್ಯಕ್ತವಾಗಿತ್ತು. ಪ್ರಧಾನಿ ಮೋದಿ ಸೇರಿದಂತೆ ಇತರ ಬಿಜೆಪಿ ನಾಯಕರ ಮುಖಗಳನ್ನು ನಾನು ನೋಡಿದ್ದೇನೆ, ಅವರೆಲ್ಲರೂ ‘ದೆವ್ವ’ಗಳಂತೆ ಕಾಣುತ್ತಿದ್ದಾರೆ ಎಂದು ಯೋಗರಾಜ್ ಸಿಂಗ್ ಹೇಳಿದ್ದರು.