ಕೃತಕ ಸೂರ್ಯನನ್ನೇ ಸೃಷ್ಟಿಸಿದ ಚೀನಾ: ಕೊರೋನಾ ಬಳಿಕ ಮತ್ತೊಂದು ಸಂಚು ರೂಪಿಸಲು ಹೊರಟಿದ್ಹೇಗೆ ಗೊತ್ತಾ?

in Uncategorized 324 views

ನವದೆಹಲಿ: ಕೊರೊನಾ ಸೋಂಕು ಹರಡಲು ಮೂಲವೆಂಬ ಅಪಕೀರ್ತಿಗೆ ಪಾತ್ರವಾಗಿರುವ ಚೀನಾ ಈಗ ಸೂರ್ಯನಿಗಿಂತಲೂ ಎಂಟು ಪಟ್ಟು ಅಧಿಕ ಶಕ್ತಿ ಉತ್ಪಾದಿಸುವ ಕೃತಕ ಸೂರ್ಯನ ತಯಾರಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ. ನಿಸರ್ಗದತ್ತವಾದ ಮೂಲ ಸೂರ್ಯ ಆಕಾಯದಲ್ಲಿ ಹೈಡ್ರೋಜನ್ ನ್ಯೂಕ್ಲಿಯಿಸ್ ಮತ್ತು ನ್ಯೂಕ್ಲಿಯರ್ ಗಳ ಸಮ್ಮಿಳನದಿಂದ 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ಬಿಡುಗಡೆ ಮಾಡುತ್ತಾರೆ.

Advertisement

ಚೀನಾದ ಎಕ್ಸಪೆರಿಮೆಂಟಲ್ ಅಡ್ವಾನ್ಸ್ ಸೂಪರ್ ಕಂಡಕ್ಟಿಂಗ್ ಟೋಕ್ ಮಾಕ್ (ಈಸ್ಟ್) ಸಂಸ್ಥೆಯ ವಿಜ್ಞಾನಿಗಳು ವಿನ್ಯಾಸಗೊಳಿಸಿರುವ ಕೃತಕ ಸೂರ್ಯ101 ಸೆಂಕೆಂಟ್ ಗಳಲ್ಲಿ 120 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಉಷ್ಣತೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಸೂರ್ಯನಿಗಿಂತಲೂ ಎಂಟು ಪಟ್ಟು ಅಧಿಕವಾಗಿದೆ. ಈವರೆಗೂ ಕೃತಕ ಸೂರ್ಯನ ವಿನ್ಯಾಸ, ಸಂಶೋಧನೆ, ಅಭಿವೃದ್ಧಿ ಪೂರ್ಣಗೊಂಡಿದ್ದರು ಪರಿಪೂರ್ಣತೆ ಪಡೆದು ಬಳಕೆಗೆ ಜಾರಿಯಾಗಲು ಇನ್ನು ಒಂದು ದಶಕಗಳ ಕಾಲ ಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಒಂದು ವೇಳೆ ಕೃತಕ ಸೂರ್ಯ ಪ್ರಯೋಗ ಯಶಸ್ವಿಯಾದರೆ ಹಸಿರು ಇಂಧನದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗುತ್ತದೆ. ಚೀನಾ ಹೆಫೀಯಿಯಲ್ಲಿರುವ ವಿಜ್ಞಾನಗಳ ಅಕಾಡೆಮಿಯ ಭೌತಶಾಸ್ತ್ರ ವಿಜ್ಞಾನ ವಿಭಾಗ ಕೃತಕ ಸೂರ್ಯನನ್ನು ವಿನ್ಯಾಸಗೊಳಿಸಿದೆ. ನಕ್ಷತ್ರ ಮತ್ತು ಸೂರ್ಯನಲ್ಲಿ ಶಾಖ ಉತ್ಪಾದನೆಗೆ ನಡೆಯುವ ನೈಸರ್ಗಿಕ ರಾಸಾಯನಿಕ ಪ್ರಕ್ರಿಯೆಗಳನ್ನು ಪುನಾವರ್ತನೆ ಮಾಡಲಾಗುತ್ತಿದೆ.

ಎರಡು ನ್ಯೂಕ್ಲಿಯಿಗಳನ್ನು ಒಂದು ಭಾರವಾದ ನ್ಯೂಕ್ಲಿಯಸ್ ಜೊತೆ ಸಮ್ಮಿಳನಗೊಳಿಸಲಾಸಗುತ್ತದೆ. ಅಯಾನ್ ಮತ್ತು ಎಲೆಕ್ಟ್ರಾನ್ ಗಳನ್ನು ಬೇರ್ಪಡಿಸಿ ಪ್ಲಾಸ್ಮಾ ಸ್ಥಿತಿಯಲ್ಲಿ ರಚನೆ ಮಾಡಿ, ಹೈಡ್ರೋಜನ್ ಐಸೋಟಾಪ್ಸ್ ದ್ಯುತಿಸಂಶ್ಲೇಷಣೆ ಯಂತ್ರದ ಒಳಗಿಡಲಾಗುತ್ತದೆ. ಪ್ರತಿಕ್ರಿಯೆ ಸಂದರ್ಭದಲ್ಲಿ ಅಯಾನ್ ಗಳನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡುವುದರಿಂದ ಉಷ್ಣಾಂಶವನ್ನು ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಯೂರೋಪ್, ಭಾರತ, ಚೀನಾ, ಜಪಾನ್, ಸೌಥ್ ಕೊರಿಯಾ, ರಷ್ಯ, ಅಮೆರಿಕಾ ಸಹಯೋಗ ಹೊಂದಿರುವ ಅಂತರಾಷ್ಟ್ರೀಯ ಥರ್ಮಲ್ ನ್ಯೂಕ್ಲಿಯರ್ ಎಕ್ಸಪೆರಿಮೆಂಟಲ್ ರಿಯಾಕ್ಟರ್ ಸಂಸ್ಥೆಯಲ್ಲಿ ಈಸ್ಟ್ ಸಂಸ್ಥೆ ಕೂಡ ಸದಸ್ಯತ್ವ ಹೊಂದಿದೆ. ಆದರೆ ಎಲ್ಲಾ ದೇಶಗಳನ್ನು ಹಿಂದಿಕ್ಕಿ ಕೃತಕ ಸೂರ್ಯನ ಪ್ರಯೋಗದಲ್ಲಿ ಚೀನಾ ದಾಪುಗಾಲಿಟ್ಟಿದೆ. ಸುಮಾರು 300 ವಿಜ್ಞಾನಿಗಳು, ಇಂಜನಿಯರ್ ಗಳು ಹಗಲು ರಾತ್ರಿ ಶ್ರಮವಹಿಸಿ ಸಂಶೋಧನೆ ನಡೆಸಿದ್ದಾರೆ.

ಈಸ್ಟ್ ಸಂಸ್ಥೆ ವಿಜ್ಞಾನಿಗಳು ಈ ಮೊದಲು 2018ರಲ್ಲಿ 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ರಿಯಾಕ್ಟರ್ ಅನ್ನು ಅಭಿವೃದ್ಧಿ ಪಡಿಸಿದ್ದರು. ಅದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಈಗ ಸೂರ್ಯನ ಮಧ್ಯಭಾಗದಲ್ಲಿ ಅನುಭಾವಿಸುವ ತಾಪಮಾನಕ್ಕಿಂತ ಏಳುಪಟ್ಟು ಉಷ್ಣತೆಯನ್ನು ಉತ್ಪಾದಿಸುವ ಕೃತಕ ಸೂರ್ಯನನ್ನು ಅಭಿವೃದ್ಧಿ ಪಡಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ಬಳಿಕ ಚೀನಾದಲ್ಲಿ ಪತ್ತೆಯಾಯ್ತು ಮತ್ತೊಂದು ವೈರಸ್

ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದ್ದ ಚೀನಾದಿಂದ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಹಕ್ಕಿಜ್ವರದ ರೂಪಾಂತರ ವೈರಸ್ H10N3 ಸೋಂಕು ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ.

ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬರಲ್ಲಿ ಈ ವೈರಸ್ ಪತ್ತೆಯಾಗಿದ್ದಾಗಿ ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಜ್ವರ ಹಾಗೂ ಇನ್ನಿತರ ಅನಾರೋಗ್ಯ ಹಿನ್ನೆಲೆಯಲ್ಲಿ ಏಪ್ರಿಲ್ 28ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಹಕ್ಕಿಜ್ವರದ ರೂಪಾಂತರಿ ವೈರಸ್ ದೃಢಪಟ್ಟಿದೆ.

ಇದು ವ್ಯಕ್ತಿಯಲ್ಲಿ ಹರಡಿದ್ದಾದರೂ ಹೇಗೆ ಎಂಬ ಬಗ್ಗೆ ಚೀನಾ ಮಾಹಿತಿ ನೀಡಿಲ್ಲ. H10N3 ಕಡಿಮೆ ರೋಗಕಾರಕ ಗುಣ ಹೊಂದಿದ್ದು, ಇತರ ವೈರಸ್ ಗಳಿಗೆ ಹೋಲಿಸಿದರೆ ಅಷ್ಟೊಂದು ವೇಗವಾಗಿ ಹರಡುವುದಿಲ್ಲ. ಸಧ್ಯ ರೋಗಿ ಚೇತರಿಸಿಕೊಂಡಿದ್ದಾಗಿ ತಿಳಿಸಿದೆ.

Advertisement
Share this on...