“ಮಾನವೀಯತೆಯ ಸೇವೆ ಮಾಡುತ್ತಿರೋ, ಭೇದಭಾವ ಮಾಡದ ಧರ್ಮಕ್ಕೆ ಜನ ಸ್ವ‌ಇಚ್ಛೆಯಿಂದ ಮತಾಂತರ ಆಗ್ತಿದ್ದಾರೆ ಹೊರತು ತಲ್ವಾರ್‌ಗೆ ಹೆದರಿ ಅಲ್ಲ.. ಅದು ಅತ್ಯಂತ ಶಾಂತಿಯುತ ಧರ್ಮ”

in Kannada News/News 461 views

ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಧಾರ್ಮಿಕ ಮತಾಂತರದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ ಶನಿವಾರ (25 ಡಿಸೆಂಬರ್ 2021) ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಂಡಿದ್ದ ಆಜಾದ್ ಹೀಗೆ ಹೇಳಿದ್ದಾರೆ:

“ಜನರು ಸ್ವಇಚ್ಛೆಯಿಂದ ಮತಾಂತರಗೊಳ್ಳುತ್ತಿದ್ದಾರೆಯೇ ಹೊರತು ಕತ್ತಿಯ ಭಯದಿಂದಲ್ಲ. ಒಬ್ಬ ವ್ಯಕ್ತಿಯ ಒಳ್ಳೆಯ ಗುಣ, ಅವನ ಒಳ್ಳೆಯ ಕೆಲಸದಿಂದಾಗಿ ಜನರು ಸ್ಫೂರ್ತಿ ಪಡೆಯುತ್ತಿದ್ದಾರೆ ಮತ್ತು ಪರಿವರ್ತನೆ ಹೊಂದುತ್ತಿದ್ದಾರೆ. ಯಾರೋ ಪ್ರಭಾವಿತರಾಗಿ ಅಥವಾ ಪ್ರೇರಿತರಾದ ನಂತರವೇ ಜನರು ಧರ್ಮವನ್ನು ಬದಲಾಯಿಸುತ್ತಾರೆ. ಒಂದು ನಿರ್ದಿಷ್ಟ ಧರ್ಮವು ಮಾನವೀಯತೆಗೆ ಸೇವೆ ಸಲ್ಲಿಸುತ್ತಿದೆ ಎಂದು ಜನರು ಭಾವಿಸುತ್ತಾರೆ, ಎಲ್ಲರನ್ನು ಕರೆದುಕೊಂಡು ಹೋಗುತ್ತಾರೆ, ಜನರ ನಡುವೆ ಭೇದಭಾವ ಮಾಡಲ್ಲ, ಅಂತಹ ಧರ್ಮಕ್ಕೆ ಜನ ಮತಾಂತರವಾಗುತ್ತಾರೆ”

Advertisement

ಕ್ರಿಸ್‌ಮಸ್ ಹಬ್ಬದಂದು ಕೆಲವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಕ್ರೈಸ್ತ ಧರ್ಮವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್ ನಾಯಕರು ಈ ಹೇಳಿಕೆ ನೀಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ, ಗುಲಾಂ ನಬಿ ಆಜಾದ್ , “ಜಮ್ಮು ಕಾಶ್ಮೀರದ ಅಂದಿನ ಮಹಾರಾಜರ (ಮಾಜಿ ಡೋಗ್ರಾ ಆಡಳಿತಗಾರರು) ಇಂದಿಗಿಂತ ಉತ್ತಮವಾಗಿತ್ತು. ನಾವು ಸರ್ವಾಧಿಕಾರ, ರಾಜವಂಶ ಅಥವಾ ನಿರಂಕುಶ ಆಡಳಿತಗಾರ ಎಂದು ಕರೆಯುತ್ತಿದ್ದ ಮಹಾರಾಜರು ಇಂದಿನ ಕಾಲಕ್ಕೆ ಅನುಗುಣವಾಗಿ ಜನರ ಒಳಿತಿಗಾಗಿ ಉತ್ತಮವಾಗಿ ಯೋಚಿಸುತ್ತಿದ್ದರು. ಆದರೆ ಈಗಿನ ಸರ್ಕಾರ ಈ ಮೂರೂ ವಿಷಯಗಳನ್ನು ಕಸಿದುಕೊಂಡಿದೆ” ಎಂದರು.

ಕಾಂಗ್ರೆಸ್ಸಿಗ ಗುಲಾಂ ನಬಿ ಆಜಾದ್ ಮತಾಂತರದ ವಿಷಯದ ನಂತರ ಅವರು ಮಹಾರಾಜರ ಆಡಳಿತ ಮತ್ತು ಪ್ರಸ್ತುತ ರಾಜಕೀಯದ ವಿಷಯಕ್ಕೆ ಬರಲು ವಿಳಂಬ ಮಾಡಲಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಾರ ಮತ್ತು ಅಭಿವೃದ್ಧಿಯಲ್ಲಿ ಕುಸಿತವಾಗಿದೆ ಎಂದು ಅವರು ಹೇಳಿದರು. ಬಡತನ ಹೆಚ್ಚುತ್ತಿದೆ. ದರ್ಬಾರ್ ಮೂವ್ ವ್ಯವಸ್ಥೆಯ ಅಂತ್ಯವನ್ನು ವಿರೋಧಿಸಿ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದರು.

ಗುಲಾಂ ನಬಿ ಆಜಾದ್ ಪ್ರಕಾರ, ಮಹಾರಾಜರ ನಿರಂಕುಶ ಆಡಳಿತವು ಈಗಿನ ಸರ್ಕಾರಕ್ಕಿಂತ ಉತ್ತಮವಾಗಿತ್ತು, ಆ ಸಮಯದಲ್ಲಿ ಸರ್ಕಾರಿ ಕೆಲಸವನ್ನು ದರ್ಬಾರ್ ಮೂವ್ ಅಡಿಯಲ್ಲಿ ಮಾಡಲಾಗುತ್ತಿತು. ಆದರೆ ಈ ವರ್ಷದ ಜೂನ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಆ ದರ್ಬಾರ್ ಮೂವ್‌ನ್ನ ಕೊನೆಗೊಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಆಜಾದ್, “ನಾನು ಯಾವಾಗಲೂ ದರ್ಬಾರ್ ಮೂವ್ ಅನ್ನು ಬೆಂಬಲಿಸುತ್ತೇನೆ. ಮಹಾರಾಜರು ನಮಗೆ ಮೂರು ವಿಷಯಗಳನ್ನು ನೀಡಿದ್ದರು, ಅದು ಕಾಶ್ಮೀರ ಮತ್ತು ಜಮ್ಮು ಪ್ರದೇಶಗಳ ಜನರ ಹಿತಾಸಕ್ತಿಯಾಗಿತ್ತು ಮತ್ತು ಅವುಗಳಲ್ಲಿ ಒಂದು ದರ್ಬಾರ್ ಮೂವ್ ಕೂಡ ಆಗಿತ್ತು” ಎಂದರು.

ಏನಿದು ದರ್ಬಾರ್ ಮೂವ್?

ಈ ವರ್ಷದ ಜೂನ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರ ಆಡಳಿತವು ರಾಜ್ಯದಲ್ಲಿ 149 ವರ್ಷಗಳಷ್ಟು ಹಳೆಯದಾದ ದರ್ಬಾರ್ ಮೂವ್ ವ್ಯವಸ್ಥೆಯನ್ನು ರದ್ದುಗೊಳಿಸಿತ್ತು. ರಾಜ್ಯದ ಎರಡು ರಾಜಧಾನಿಗಳಾದ ಜಮ್ಮು ಮತ್ತು ಶ್ರೀನಗರ ನಡುವೆ ನಡೆಯುವ ‘ದರ್ಬಾರ್ ಮೂವ್’ ಗಾಗಿ ಪ್ರತಿ 6 ತಿಂಗಳಿಗೊಮ್ಮೆ ಪ್ರತಿ ವರ್ಷ 200 ಕೋಟಿ ರೂ. ಖರ್ಚು ಮಾಡಲಾಗುತ್ತಿತ್ತು.

ದರ್ಬಾರ್ ಮೂವ್ ಎಂದರೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿಯು ಋತುವಿನ ಬದಲಾವಣೆಯೊಂದಿಗೆ ಪ್ರತಿ 6 ತಿಂಗಳಿಗೊಮ್ಮೆ ಬದಲಾಗುತ್ತಿತ್ತು. ರಾಜಧಾನಿ ಶ್ರೀನಗರದಲ್ಲಿ 6 ತಿಂಗಳು ಮತ್ತು ಜಮ್ಮುವಿನಲ್ಲಿ 6 ತಿಂಗಳು ಇರುತ್ತಿತ್ತು. ರಾಜಧಾನಿಯನ್ನು ಬದಲಾಯಿಸಿದ ನಂತರ, ಅಗತ್ಯವಿರುವ ಕಛೇರಿಗಳು, ಸಿವಿಲ್ ಸೆಕ್ರೆಟರಿಯೇಟ್ ಇತ್ಯಾದಿಗಳ ಎಲ್ಲಾ ವ್ಯವಸ್ಥೆಗಳನ್ನು ಜಮ್ಮುವಿನಿಂದ ಶ್ರೀನಗರಕ್ಕೆ ಮತ್ತು ಶ್ರೀನಗರದಿಂದ ಜಮ್ಮುವಿಗೆ ಶಿಫ್ಟ್ ಮಾಡಲಾಗುತ್ತಿತ್ತು. ಈ ಪ್ರಕ್ರಿಯೆಯನ್ನು ‘ದರ್ಬಾರ್ ಮೂವ್’ ಎಂದು ಕರೆಯಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಧಾನಿಯನ್ನು ಬದಲಾಯಿಸುವ ಈ ಸಂಪ್ರದಾಯವನ್ನು 1862 ರಲ್ಲಿ ಡೋಗ್ರಾ ಆಡಳಿತಗಾರ ಗುಲಾಬ್ ಸಿಂಗ್ ಪ್ರಾರಂಭಿಸಿದ್ದರು. ಗುಲಾಬ್ ಸಿಂಗ್ ಮಹಾರಾಜ ಹರಿ ಸಿಂಗ್ ಅವರ ಪೂರ್ವಜರು. ಹರಿ ಸಿಂಗ್ ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಯಿತು.

Advertisement
Share this on...