ಭಾರೀ ವಿರೋಧದ ನಡುವೆಯೂ ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ದ ಸುನಿಲ್ ಶೆಟ್ಟಿ: ಮದುವೆಯ ಬಳಿಕ ಹಿಂದೂ ಆದ ಪತ್ನಿ, 30 ವರ್ಷ ಕಳೆದ ಬಳಿಕ ಈಗ ಹಳೆಯ ಸ್ಟೋರಿ ಬಚ್ಚಿಟ್ಟ ಶೆಟ್ಟಿ

in FILM NEWS/Kannada News/News 55,378 views

ಹಿಂದಿ ಚಿತ್ರರಂಗದ ಜನಪ್ರಿಯ ನಟ ಸುನೀಲ್ ಶೆಟ್ಟಿ ದಾಂಪತ್ಯ ಜೀವನಕ್ಕೆ 31 ವರ್ಷ ಪೂರೈಸಿದ್ದಾರೆ. ಸುನೀಲ್ ಶೆಟ್ಟಿ ಹಿಂದಿ ಚಿತ್ರರಂಗಕ್ಕೆ ಕಾಲಿಡುವ ಮೊದಲೇ ಮದುವೆಯಾಗಿದ್ದರು. ಇವರ ಹೆಂಡತಿಯ ಹೆಸರು ಮಾನಾ ಶೆಟ್ಟಿ. ಮದುವೆಗೆ ಮುನ್ನ ಸುನೀಲ್ ಮತ್ತು ಮಾನಾ ಸುಮಾರು 9 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇದಾದ ನಂತರ ಇಬ್ಬರೂ ತಮ್ಮ ಪ್ರೀತಿಗೆ ಮದುವೆ ಎಂಬ ಹೊಸ ಹೆಸರನ್ನು ಕೊಟ್ಟರು.

Advertisement

ಹಿಂದಿ ಚಿತ್ರರಂಗದಲ್ಲಿ ಸುನೀಲ್ ಶೆಟ್ಟಿ ಮತ್ತು ಮಾನಾ ಶೆಟ್ಟಿ ಜೋಡಿ ಸಾಕಷ್ಟು ಚರ್ಚೆಯಲ್ಲಿರುತ್ತದೆ. ಈ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಮೊದಲ ನೋಟದಲ್ಲೇ ಮಾನಾ ನೋಡಿದ ಸುನೀಲ್ ಶೆಟ್ಟಿ ಮನಸೋತಿದ್ದರು. ಮಾನಾ ಸುನೀಲ್ ಶೆಟ್ಟಿಗೆ ಎಷ್ಟು ಇಷ್ಟವಾದರೆಂದರೆ ಅವರು ತನ್ನ ಇಡೀ ಜೀವನವನ್ನು ಆಕೆಯ ಜೊತೆಗೇ ಕಳೆಯಲು ಶಪಥ ಮಾಡಿದರು.

ಸುನಿಲ್ ಶೆಟ್ಟಿ 1992 ರಲ್ಲಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಮತ್ತು ಅದಕ್ಕೂ ಮೊದಲು 1991 ರಲ್ಲಿ ಸುನಿಲ್ ಮಾನಾ ಅವರನ್ನು ವಿವಾಹವಾದರು. 9 ವರ್ಷಗಳ ಡೇಟಿಂಗ್ ನಂತರ, ಇಬ್ಬರೂ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡರು. ಆದರೆ, ಇಬ್ಬರ ಮದುವೆಯೂ ಸುಲಭವಾಗಿರಲಿಲ್ಲ. ಏಕೆಂದರೆ ಸುನೀಲ್ ಶೆಟ್ಟಿ ಹಿಂದೂ ಆಗಿದ್ದರೆ ಮಾನಾ ಮುಸ್ಲಿಂ ಆಗಿದ್ದರು. ಆಕೆಯ ನಿಜವಾದ ಹೆಸರು ಮೋನಿಶಾ ಕಾದ್ರಿ ಆಗಿತ್ತು.

ಸುನೀಲ್ ಮತ್ತು ಮಾನಾ ಇಬ್ಬರಿಗೂ ಕುಟುಂಬ ಸದಸ್ಯರ ಮನವೊಲಿಸಲು ಬಹಳ ಸಮಯ ಹಿಡಿಯಿತು. ಈ ಕಾರಣದಿಂದಾಗಿ, ಅವರಿಬ್ಬರ ಸಂಬಂಧ ಮದುವೆಗೆ ತಲುಪಲು ಬರೋಬ್ಬರಿ 9 ವರ್ಷಗಳೇ ಹಿಡಿಯಿತು. ಇಬ್ಬರೂ ತಮ್ಮ ಇಡೀ ಜೀವನವನ್ನು ಪರಸ್ಪರ ಕಳೆಯಲು ಮನಸ್ಸು ಮಾಡಿದ್ದರೂ. ಅಂತಹ ಪರಿಸ್ಥಿತಿಯಲ್ಲಿ, ಇಬ್ಬರೂ ಧರ್ಮದ ಗೋಡೆಗಳನ್ನು ಮುರಿದು ಡಿಸೆಂಬರ್ 25, 1991 ರಂದು ವಿವಾಹವಾದರು. ಮೋನಿಶಾ ಕಾದ್ರಿ ಮದುವೆಯಾದ ತಕ್ಷಣ ಇಸ್ಲಾಂನಿಂದ ಹಿಂದೂವಾಗಿ ಮತಾಂತರಗೊಂಡರು ಮತ್ತು ಮಾನ ಶೆಟ್ಟಿ ಎಂದು ಹೆಸರು ಬದಲಿಸಿಕೊಂಡರು.

ಸುನೀಲ್ ಶೆಟ್ಟಿ ತಮ್ಮ ಮದುವೆಯ 31 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತನ್ನ ಇತ್ತೀಚಿನ ಪೋಸ್ಟ್‌ನಲ್ಲಿ, ನಟ ತನ್ನ ಹೆಂಡತಿಯ ಸೌಂದರ್ಯವನ್ನು ಹೊಗಳಿದ್ದಾರೆ. ಅವರು ತಮ್ಮ 30 ನೇ ವಿವಾಹ ವಾರ್ಷಿಕೋತ್ಸವದಂದು ಮಾನಾ ಜೊತೆಗಿನ ಹಳೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ ಇನ್ಸ್ಟಾಗ್ರಾಮ್ನಲ್ಲಿ ಟೈಟಲ್ ಈ ರೀತಿಯಾಗಿದೆ ನೀಡಿದ್ದಾರೆ, “ಆಗಲು ಸುಂದರ … ಈಗಲೂ ಸುಂದರ… ಸದಾ ಕಾಲ ಸುಂದರ… 31 ನೇ ವಾರ್ಷಿಕೋತ್ಸವದ ಶುಭಾಶಯಗಳು ವೈಫ್”

ಸುನಿಲ್ ಮತ್ತು ಮಾನಾ ಅವರ 31ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳು ಕೂಡ ಶುಭಾಶಯಗಳನ್ನು ಕೋರುತ್ತಿದ್ದಾರೆ. ಮತ್ತೊಂದೆಡೆ ಈ ಜೋಡಿಗೆ ಸೆಲೆಬ್ರಿಟಿಗಳು ಕೂಡ ಶುಭಾಶಯ ಕೋರುತ್ತಿದ್ದಾರೆ. ಸುನಿಲ್ ಅವರ ಪೋಸ್ಟ್‌ನಲ್ಲಿ ಅವರ ಮಗಳು ಮತ್ತು ನಟಿ ಅಥಿಯಾ ಶೆಟ್ಟಿ ಅವರು ಹಾರ್ಟ್ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಅರ್ಚನಾ ಪುರಾಣ್ ಸಿಂಗ್ ಅವರು ಕಾಮೆಂಟ್‌ನಲ್ಲಿ, “ನಮ್ಮ ಕಡೆಯಿಂದ ಸುನಿಲ್ ಮತ್ತು ಮಾನಾ ಇಬ್ಬರಿಗೂ ಸಾಕಷ್ಟು ಪ್ರೀತಿ ಮತ್ತು ಹೀಗೇ ಖುಷಿಯಾಗಿರಿ” ಎಂದು ಬರೆದಿದ್ದಾರೆ.

ಸುನೀಲ್ ಮತ್ತು ಮಾನಾ ಅವರ ಈ ಫೋಟೋಗೆ ಒಂದು ಲಕ್ಷ 43 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಅದೇ ಸಮಯದಲ್ಲಿ, ಈ ಬಗ್ಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಟಿವಿ ನಟಿ ಯುವಿಕಾ ಚೌಧರಿ ಅವರು ಸುನಿಲ್ ಅವರ ಪೋಸ್ಟ್‌ನಲ್ಲಿನ ಕಾಮೆಂಟ್‌ನಲ್ಲಿ ಹಾರ್ಟ್ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ನಟ ರಾಹುಲ್ ದೇವ್, “ಅತ್ಯುತ್ತಮ. ನಿಮ್ಮಿಬ್ಬರಿಗೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.” ಎಂದಿದ್ದಾರೆ.

ಅದೇ ಸಮಯದಲ್ಲಿ, ಟಿವಿ ನಿರೂಪಕ ಮನೀಶ್ ಪಾಲ್, “ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಣ್ಣಾ (ಸುನೀಲ್ ಶೆಟ್ಟಿ) ಮತ್ತು ಮಾನಾ ಮೇಡಂ” ಎಂದು ಬರೆದಿದ್ದಾರೆ. ಇದರೊಂದಿಗೆ ಹಲವು ಸೆಲೆಬ್ರಿಟಿಗಳು ಕಾಮೆಂಟ್ ಮಾಡಿದ್ದಾರೆ.

ಕೊನೆಪಿಯನ್ ಬೀಚ್ ರಸ್ತೆಯಲ್ಲಿರುವ ಪೇಸ್ಟ್ರಿ ಅಂಗಡಿಯಲ್ಲಿ ಸುನೀಲ್ ಮಾನಾ ರನ್ನು ಮೊದಲು ನೋಡಿದ್ದರು. ಸುನೀಲ್ ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದರು. ಸುನೀಲ್ ಶೆಟ್ಟಿ ಮಾನಾ ತಂಗಿಯ ಜೊತೆ ಮಾತನಾಡಿ ಮಾನಾ ಪರಿಚಯ ಮಾಡಿಕೊಂಡು ನಂತರ ಇಬ್ಬರೂ ಸ್ನೇಹಿತರಾದರು. ಈ ಸ್ನೇಹ ಪ್ರೀತಿಗೆ ತಿರುಗಿ ಬರೋಬ್ಬರಿ 9 ವರ್ಷಗಳ ನಂತರ ಪ್ರೀತಿ ಮದುವೆಗೆ ತಿರುಗಿತ್ತು.

ಸುನೀಲ್ ಮತ್ತು ಮಾನಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿಯ ಮಗಳ ಹೆಸರು ಅಥಿಯಾ ಶೆಟ್ಟಿ ಮತ್ತು ಮಗನ ಹೆಸರು ಅಹಾನ್ ಶೆಟ್ಟಿ.

ಅಥಿಯಾ ಮತ್ತು ಅಹಾನ್ ಇಬ್ಬರೂ ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸಿದರು ಮತ್ತು ಚಲನಚಿತ್ರ ವೃತ್ತಿಯನ್ನು ಆರಿಸಿಕೊಂಡರು. ಅಥಿಯಾ 2015 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಅಹಾನ್ ಅವರ ಚೊಚ್ಚಲ ಚಿತ್ರ ‘ತಡಪ್’ ಇತ್ತೀಚೆಗೆ ಡಿಸೆಂಬರ್ 3 ರಂದು ಬಿಡುಗಡೆಯಾಗಿತ್ತು.

Advertisement
Share this on...