ನಟ ಸಲ್ಮಾನ್ ಖಾನ್ ನೆನ್ನೆ ಅಂದರೆ ಡಿಸೆಂಬರ್ 27 ರಂದು 56 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಡಿಸೆಂಬರ್ 27, 1956 ರಂದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಜನಿಸಿದರು. ಸಲ್ಮಾನ್ ತನ್ನ ಎಲ್ಲಾ ಅಣ್ಣ ತಂಗಿಯರ ಪೈಕಿ ಹಿರಿಯ. ಅಂದರೆ ಸಲ್ಮಾನ್ ಖಾನ್ ಕುಟುಂಬದಲ್ಲಿ ಹಿರಿಯ ಮಗ, ಆದರೆ ಸಲ್ಮಾನ್ ತನ್ನ ಬಾಲ್ಯದಲ್ಲಿ ತುಂಬಾ ಚೇಷ್ಟೆ ಮಾಡುತ್ತಿದ್ದನಂತೆ.
ಸಲ್ಮಾನ್ ಖಾನ್‌ಗೆ ಸಂಬಂಧಿಸಿದ ಅನೇಕ ಕಥೆಗಳು ಬಹಳ ಪ್ರಸಿದ್ಧವಾಗಿವೆ. ನೆನ್ನೆ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ, ಅವರ ಬಾಲ್ಯಕ್ಕೆ ಸಂಬಂಧಿಸಿದ ಒಂದು ಘಟನೆಯೊಂದನ್ನ ನಾವು ನಿಮಗೆ ಹೇಳುತ್ತಿದ್ದೇವೆ, ಅದರ ಬಗ್ಗೆ ನೀವು ಹಿಂದೆಂದೂ ಕೇಳಿರುವುದಿಲ್ಲ. ವಾಸ್ತವವಾಗಿ, ಒಮ್ಮೆ ಸಲ್ಮಾನ್ ಖಾನ್ ತಾಯಿ ಸಲ್ಮಾ ಖಾನ್‌ನ್ನ ಹಗ್ಗದಿಂದ ಕೈಕಾಲು ಕಟ್ಟಿ ಬಾವಿಗೆ ಎಸೆದಿದ್ದರಂತೆ. ಹೌದು. ನೀವು ಇದು ನಿಜ. ಬನ್ನಿ ಈ ಘಟನೆಯ ಬಗ್ಗೆ ವಿವರವಾಗಿ ತಿಳಿಸುತ್ತೇವೆ.
ಇಂದೋರ್‌ನಲ್ಲಿ ಜನಿಸಿದ ಸಲ್ಮಾನ್ ಅವರ ಬಾಲ್ಯವು ಇಂದೋರ್ ಮತ್ತು ಹತ್ತಿರದ ಆಸುಪಾಸಿನ ಪ್ರದೇಶಗಳಲ್ಲಿ ಕಳೆದಿದೆ. ಸಲ್ಮಾನ್ ಬಾಲ್ಯದಲ್ಲಿ ಸಾಕಷ್ಟು ಕಿಡಿಗೇಡಿಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ. ಸಲ್ಮಾನ್ ಯಾವಾಗಲೂ ತನ್ನ ಹೆತ್ತವರಿಗೆ ತುಂಬಾ ಹತ್ತಿರವಾಗಿದ್ದಾರೆ ಮತ್ತು ವಿಶೇಷವಾಗಿ ಅವರು ತಮ್ಮ ತಾಯಿಯೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ ಬಾಲ್ಯದಲ್ಲಿ ಒಮ್ಮೆ ಆತನ ತಾಯಿ ಸಲ್ಮಾನ್‌ನ್ನ ಬಾವಿಗೆ ಕಟ್ಟಿ ಎಸೆದಿದ್ದರು.
ಸಲ್ಮಾನ್ ಖಾನ್ ಗೆ ಆಗ ಸ್ವಿಮ್ಮಿಂಗ್ ಬರ್ತಿರಲಿಲ್ಲ ಮತ್ತು ಅವರ ತಾಯಿ ಸಲ್ಮಾ ಮಗನ ಈ ಭಯವನ್ನು ಹೋಗಲಾಡಿಸಲು ದೊಡ್ಡ ಹೆಜ್ಜೆ ಇಟ್ಟಿದ್ದರು. ಸಲ್ಮಾ ಒಮ್ಮೆ ಸಲ್ಮಾನ್ ನನ್ನು ಹಗ್ಗದಿಂದ ಕಟ್ಟಿ ಬಾವಿಗೆ ಎಸೆದಿದ್ದರು. ಸಾಕಷ್ಟು ಪ್ರಯತ್ನದ ನಂತರ ಸಲ್ಮಾನ್ ಈಜು ಕಲಿತರಂತೆ, ವಿಶೇಷವೆಂದರೆ ಸಲ್ಮಾನ್ ಖಾನ್ ಆ ರೀತಿ ಮಾಡೋದಕ್ಕೂ ಮಜಾ ಅನಿಸುತ್ತಿತ್ತಂತೆ.
ಸಲ್ಮಾನ್ ತಂದೆ ಇಂದೋರ್‌ನಲ್ಲೇ ವಾಸಿಸುತ್ತಿದ್ದರು. ಅವರ ಕುಟುಂಬ ಮತ್ತು ಅವರ ಸಂಬಂಧಿಕರು ಇಂದಿಗೂ ಇಂದೋರ್‌ನಲ್ಲಿ ವಾಸಿಸುತ್ತಿದ್ದಾರೆ. ಆಗಾಗ ಸಲ್ಮಾನ್ ಇಂದೋರ್ ಸುತ್ತಮುತ್ತಲಿನ ಹಳ್ಳಿಗಳಿಗೆ ಜೀಪಿನಲ್ಲಿ ಹೋಗುತ್ತಿದ್ದರು ಮತ್ತು ಸಾಕಷ್ಟು ಸಾಹಸಗಳನ್ನು ಮಾಡುತ್ತಿದ್ದರು. ಒಮ್ಮೆ ಅವರ ಕಾರು ಕೆಸರಿನಲ್ಲಿ ಸಿಲುಕಿಕೊಂಡಿತು ಮತ್ತು ಸಲ್ಮಾನ್ ಅದನ್ನು ಹೊರತರಲು ಕೆಸರಿನಲ್ಲೇ ಮುಳುಗಿ ಹೋದರು. ಬಳಿಕ ಬಾವಿಯಲ್ಲಿ ಈಜುತ್ತಾ ತನ್ನ ಕೆಸರನ್ನು ಸ್ವಚ್ಛಗೊಳಿಸಿಕೊಂಡಿದ್ದರು.
ಸಲ್ಮಾನ್ ಖಾನ್ ಕಳೆದ 33 ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸಿದ್ಧ ಬರಹಗಾರರಾದ ಸಲೀಂ ಖಾನ್ ಮತ್ತು ಸಲ್ಮಾ ಖಾನ್ ಅವರ ಹಿರಿಯ ಮಗ, ಸಲ್ಮಾನ್ 1988 ರ ಚಲನಚಿತ್ರ ‘ಬಿವಿ ಹೋ ತೋ ಐಸಿ’ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಸಲ್ಮಾನ್ ಪಾತ್ರ ತುಂಬಾ ಚಿಕ್ಕದಾದರೂ. ಹಿರಿಯ ನಟಿ ರೇಖಾ ಮತ್ತು ದಿವಂಗತ ನಟ ಫಾರೂಕ್ ಶೇಖ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಸಲ್ಮಾನ್ ಖಾನ್ 1989 ರಲ್ಲಿ ನಾಯಕ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ, ಅವರ ಮೊದಲ ಚಿತ್ರ ‘ಮೈನೆ ಪ್ಯಾರ್ ಕಿಯಾ’ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿ ಭಾಗ್ಯಶ್ರೀ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ ಇದು ಇಬ್ಬರ ಮೊದಲ ಚಿತ್ರವಾಗಿದ್ದು, ಚೊಚ್ಚಲ ಚಿತ್ರವೇ ಸೂಪರ್ ಹಿಟ್ ಆಗಿತ್ತು.
ಈ ಚಿತ್ರದ ನಂತರ, ಸಲ್ಮಾನ್ ಹಿಂತಿರುಗಿ ನೋಡಲಿಲ್ಲ ಮತ್ತು ಅವರು ಯಶಸ್ಸಿನ ಮೆಟ್ಟಿಲು ಏರುತ್ತಲೇ ಇದ್ದರು. ಅವರು ಇಂದಿನ ಕಾಲದ ಅತ್ಯಂತ ಬ್ಯುಸಿ, ಅತ್ಯಂತ ದುಬಾರಿ ಮತ್ತು ಶ್ರೀಮಂತ ಕಲಾವಿದರಲ್ಲಿ ಒಬ್ಬರು. ಈಗ ಸಲ್ಮಾನ್ ಬಳಿ ಎಲ್ಲವೂ ಇದೆ.
ವರ್ಕ್ ಫ್ರಂಟ್ ಬಗ್ಗೆ ಮಾತನಾಡುವುದಾದರೆ, ಅವರ ಕೊನೆಯ ಬಿಡುಗಡೆಯಾದ ಚಿತ್ರ ‘ಅಂತಿಮ್’. ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿತು. ಈ ಚಿತ್ರದಲ್ಲಿ ಸಲ್ಮಾನ್ ಜೊತೆ ಅವರ ಸೋದರ ಮಾವ ಆಯುಷ್ ಶರ್ಮಾ ಮತ್ತು ನಟಿ ಮಹಿಮಾ ಮಕ್ವಾನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಸಲ್ಮಾನ್ ಅಭಿನಯದ ಮುಂಬರುವ ಚಿತ್ರದ ಹೆಸರು ‘ಟೈಗರ್ 3’. ಇದರ ಕೊನೆಯ ಭಾಗದ ಚಿತ್ರೀಕರಣ ದೆಹಲಿಯಲ್ಲಿ ನಡೆಯಲಿದೆ. ಚಿತ್ರದಲ್ಲಿ ಸಲ್ಮಾನ್ ಜೊತೆ ಕತ್ರಿನಾ ಕೈಫ್ ಇರಲಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರ ಮುಂದಿನ ವರ್ಷ 2022ರಲ್ಲಿ ಬಿಡುಗಡೆಯಾಗಲಿದೆ.