1990 ರಲ್ಲಿ 5 ಲಕ್ಷ ಕಾಶ್ಮೀರಿ ಪಂಡಿತರನ್ನ ಓಡಿಸಿದ್ದಷ್ಟೇ ಅಲ್ಲದೆ ತಮ್ಮ ದೇಶದಲ್ಲೇ ನಿರಾಶ್ರಿತರಾಗಿ ಬದುಕುತ್ತಿರುವ ಅದೇ ಕಾಶ್ಮೀರಿ ಪಂಡಿತರ ವಿರುದ್ಧ ತಿರುಗಿಬಿದ್ದು ಅವಹೇಳನ ಮಾಡಿದ ಕಾಂಗ್ರೆಸ್

in Kannada News/News 295 views

ನವದೆಹಲಿ: ಕಾಶ್ಮೀರಿ ಪಂಡಿತರ ನರಮೇಧದ ಕುರಿತಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿಯ ನಡುವೆ, ಕೇರಳ ಕಾಂಗ್ರೆಸ್ ತನ್ನ ಒಂದು ಟ್ವೀಟ್‌ನಿಂದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ವಾಸ್ತವವಾಗಿ, ಜಮ್ಮು ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ಮುಸ್ಲಿಮರ ಸಂಖ್ಯೆ ಪಂಡಿತರ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿದೆ. 1990 ರಿಂದ 2007 ರವರೆಗಿನ 17 ವರ್ಷಗಳಲ್ಲಿ ಭಯೋತ್ಪಾದಕ ದಾಳಿಯಲ್ಲಿ ಕೇವಲ 399 ಕಾಶ್ಮೀರಿ ಪಂಡಿತರು ಕೊಲ್ಲಲ್ಪಟ್ಟರು. ಈ ಸಮಯದಲ್ಲಿ ಬರೋಬ್ಬರಿ 15,000 ಮುಸ್ಲಿಮರು ಕೂಡ ಭಯೋತ್ಪಾದಕರ ಕೈಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇರಳ ಕಾಂಗ್ರೆಸ್ ಬರೆದಿದೆ.. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ವಲಸೆ ನಡೆದಾಗ ಬಿಜೆಪಿಯ ನೆರವಿನೊಂದಿಗೆ ವಿಪಿ ಸಿಂಗ್ ಅವರ ಸರ್ಕಾರ ಕೇಂದ್ರದಲ್ಲಿತ್ತು ಮತ್ತು ಜಗಮೋಹನ್ ರಾಜ್ಯಪಾಲರಾಗಿದ್ದರು ಎಂದು ಕೇರಳ ಕಾಂಗ್ರೆಸ್ ಮತ್ತೊಂದು ಟ್ವೀಟ್‌ನಲ್ಲಿ ಬರೆದಿದೆ.

ವಾಸ್ತವದಲ್ಲಿ ಕೇರಳ ಕಾಂಗ್ರೆಸ್‌ನ ಈ ಟ್ವೀಟ್ ಇತಿಹಾಸವನ್ನೇ ತಿರುಚಲಿದೆ. ಬಿಜೆಪಿಯ ನೆರವಿನಿಂದ ಕೇಂದ್ರದಲ್ಲಿ ವಿ.ಪಿ.ಸಿಂಗ್ ಅವರ ಸರಕಾರವಿದ್ದರೂ, 1990ರ ಜನವರಿ 19ರಂದು ಕಾಶ್ಮೀರಿ ಪಂಡಿತರ ಮೇಲೆ ದಾಳಿ ನಡೆಸಿ, ಪ್ರಾಣ ತೆತ್ತ ನಂತರ ಪಲಾಯನಗೈದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತು ಪಿಡಿಪಿ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸಯೀದ್ ಕೇಂದ್ರ ಗೃಹ ಸಚಿವರಾಗಿದ್ದರು. ಟ್ವೀಟ್ ಮಾಡುವಾಗ ಕೇರಳ ಕಾಂಗ್ರೆಸ್ ಈ ಇತಿಹಾಸವನ್ನು ಮರೆತಿದೆ, ಇಲ್ಲವೇ ಗೊತ್ತಿದ್ದೂ ಇದನ್ನ ಮರೆಮಾಚಿದೆ. ಕಾಂಗ್ರೆಸ್‌ನ ಈ ಟ್ವೀಟ್ ಗಳ ಬಳಿಕ ಯೂಸರ್ ಗಳ ಕೋಪ ಭುಗಿಲೆದ್ದಿತು.

ಸೋಶಿಯಲ್ ಮೀಡಿಯಾ ಯೂಸರ್ ಗಳು ಕೇರಳ ಕಾಂಗ್ರೆಸ್‌ಗೆ ಛೀಮಾರಿ ಹಾಕುತ್ತ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಕಾಂಗ್ರೆಸ್‌ಗೆ ಇತಿಹಾಸದ ಪಾಠವನ್ನ ಮಾಡಲಾರಂಭಿಸಿದರು. ಯೂಸರ್ ಗಳು ಪ್ರತಿಕ್ರಿಯೆಯಾಗಿ ಕಾಂಗ್ರೆಸ್‌ಗೆ ಇತಿಹಾಸದ ವಾಸ್ತವವನ್ನ ತಿಳಿಸುವ ಮೂಲಕ ಝಾಡಿಸಿದ್ದಾರೆ. ವಿಶೇಷವೆಂದರೆ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮುಗಿದ ಬೆನ್ನಲ್ಲೇ ಕೇರಳ ಕಾಂಗ್ರೆಸ್ ನ ಈ ಟ್ವೀಟ್ ಬಂದಿದೆ. ಈ ಬಗ್ಗೆ ಯೂಸರ್ ಗಳು ಕೇರಳ ಕಾಂಗ್ರೆಸ್‌ಗೆ ಛೀಮಾರಿ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯೂಸರ್ ಗಳ ಪ್ರತಿಕ್ರಿಯೆಯನ್ನು ಸಹ ನೀವು ನೋಡಬಹುದು…

Advertisement
Share this on...