ನೂಪುರ್ ಶರ್ಮಾ ಬೆಂಬಲಕ್ಕೆ ನಿಂತ ಖ್ಯಾತ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್: ತಿರುಗಿ ಬಿದ್ದ ಜಿಹಾದಿಗಳು, ಮುಸ್ಲಿಮರ ಪರ ನಿಂತ ಸ್ವರಾ ಭಾಸ್ಕರ್

in Kannada News/News 329 views

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ನೀಡಿದ ಪ್ರವಾದಿ ಮುಹಮ್ಮದ್ ಬಗೆಗಿನ ಹೇಳಿಕೆಯನ್ನು ವಿರೋಧಿಸಿ ಕರ್ನಾಟಕದ ಬೆಳಗಾವಿಯ ಮಸೀದಿಯೊಂದರಲ್ಲಿ ಕಟ್ಟರಪಂಥೀಯ ಮುಸ್ಲಿಮರು ನೂಪುರ್ ಶರ್ಮಾರವರ ಪ್ರತಿಕೃತಿಯನ್ನು ತಾಲಿಬಾನ್ ಮಾದರಿಯಲ್ಲಿ ರಸ್ತೆಯ ಮಧ್ಯಭಾಗದಲ್ಲಿ ನೇತುಹಾಕಿದ್ದರು. ಭಾನುವಾರ (ಜೂನ್ 12, 2022), ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಈ ವಿಷಯದ ಕುರಿತು ಟ್ವೀಟ್‌ನಲ್ಲಿ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನೇಣು ಹಾಕಿರುವುದನ್ನು ಖಂಡಿಸಿದ್ದರು. ಮತ್ತೇನು, ಕಟ್ಟರಪಂಥೀಯ ಮುಸ್ಲಿಮರ ವೆಂಕಟೇಶ್ ಪ್ರಸಾದ್ ರವರನ್ನ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದರು.

ಈ ವಿಷಯದ ಬಗ್ಗೆ, ಪ್ರಸಾದ್ ಅವರು ಟ್ವೀಟ್ ಮೂಲಕ, ನೂಪುರ್ ಶರ್ಮಾ ಅವರ ಪ್ರತಿಮೆಯನ್ನು ನೇತುಹಾಕಿರುವುದು ತುಂಬಾ ಭಯಾನಕವಾಗಿದೆ ಎಂದು ಕರೆದಿದ್ದಾರೆ. ಇದು 21ನೇ ಶತಮಾನದ ಭಾರತ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇದು ಅತಿಯಾಯ್ತು,  ರಾಜಕೀಯವನ್ನು ಬದಿಗಿಟ್ಟು ತಮ್ಮ ವಿವೇಚನೆಯಿಂದ ವರ್ತಿಸುವಂತೆ ಮುಸ್ಲಿಮರಿಗೆ ಮಾಜಿ ಕ್ರಿಕೆಟಿಗ ಸಲಹೆ ನೀಡಿದರು. ಇದು ಕೇವಲ ಪ್ರತಿಕೃತಿಯಾಗಿರಲಿಲ್ಲ ಬದಲಾಗಿ ಇದು ಅನೇಕರಿಗೆ ಕೊಲೆಯ ಬೆದರಿಕೆಯಾಗಿತ್ತು. ಆದಾಗ್ಯೂ, ವೆಂಕಟೇಶ ಪ್ರಸಾದ್ ರವರ ವಿವೇಕಯುತ ಮನವಿಯ ನಂತರ, ಕೆಲವು ಲಿಬರಲ್‌ಗಳು ಮತ್ತು ಇಸ್ಲಾಮಿಸ್ಟ್‌ಗಳು ಅವರನ್ನು ಸುತ್ತುವರಿಯಲು ಪ್ರಾರಂಭಿಸಿದರು.

ಈ ಅನುಕ್ರಮದಲ್ಲಿ, ಅನೇಕ ಇಸ್ಲಾಮಿಸ್ಟ್‌ಗಳು ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡವನ್ನು ಕೆಡವಲಾದ ಚಿತ್ರಗಳನ್ನೂ ಹಂಚಿಕೊಂಡಿದ್ದರು, ನಂತರ ಹಿಂಸಾತ್ಮಕ ಗಲಭೆಗಳು ಭುಗಿಲೆದ್ದವು. ಘಟನೆಯ 10 ವರ್ಷಗಳ ನಂತರ ಅಂದರೆ 2002 ರಲ್ಲಿ, ಇಸ್ಲಾಮಿಕ್ ಗುಂಪು ಅಯೋಧ್ಯೆಯಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ರೈಲಿಗೆ ಬೆಂಕಿ ಹಚ್ಚಿತ್ತು.

ನೂಪುರ್ ಶರ್ಮಾಗೆ ಬರುತ್ತಿರುವ ಕೊಲೆ ಬೆದರಿಕೆಯನ್ನು ಸಮರ್ಥಿಸಲು ಕೆಲವರು ಈ ಚಿತ್ರಗಳನ್ನು ಬಳಸುತ್ತಿರುವುದು ತುಂಬಾ ಆಶ್ಚರ್ಯಕರವಾಗಿದೆ. ಇವರೆಲ್ಲರೂ ತಮ್ಮ ಈ ಕೃತ್ಯವನ್ನ ಸಮರ್ಥಿಸಿಕೊಳ್ಳಲು ತಮ್ಮ ಇಸ್ಲಾಮಿಕ್ ಪುಸ್ತಕಗಳನ್ನು ಉಲ್ಲೇಖಿಸುತ್ತಾರೆ.

ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನೇಣು ಹಾಕಿರುವುದನ್ನು ಸಮರ್ಥಿಸಲು ರಾಂಚಿ ಪೊಲೀಸರು ಗಲಭೆಕೋರರ ವಿರುದ್ಧ ಕೈಗೊಂಡ ಕ್ರಮಗಳ ಚಿತ್ರಗಳನ್ನೂ ಅನೇಕ ಮೂಲಭೂತ ಇಸ್ಲಾಮಿಸ್ಟ್‌ಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇಷ್ಟೇ ಅಲ್ಲ, ಕ್ರಿಕೆಟ್ ಅಭಿಮಾನಿಗಳು ಮತ್ತು ರಾಜಕೀಯ ಕಾರ್ಯಕರ್ತರು ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನೇಣು ಹಾಕಿರುವುದನ್ನು ಸಮರ್ಥಿಸಿಕೊಳ್ಳಲು ಆಗಾಗ್ಗೆ ಈ ಪ್ರತಿಕೃತಿಗಳನ್ನು ಸುಡುತ್ತಾರೆ ಎಂದು ಹಲವರು ವಾದಿಸಿದ್ದಾರೆ. ಆದರೆ, ಪ್ರತಿಕೃತಿಗೆ ನೇಣು ಹಾಕುವ ಮೂಲಕ ಮೂಲಭೂತವಾದಿಗಳು ತಮ್ಮ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರೆ’ ಅಂತಹವರ ವಿರುದ್ಧವೂ ಇದೇ ರೀತಿ ವ್ಯವಹರಿಸಲಾಗುವುದು ಎಂಬ ಸಂದೇಶ ರವಾನಿಸಿದ್ದಾರೆ.

ಎಡಪಂಥೀಯ ಮತ್ತು ಇಸ್ಲಾಂವಾದಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನೇತುಹಾಕಿದ್ದನ್ನ ಸಮರ್ಥಿಸಿಕೊಂಡಿದ್ದಾಳೆ. ಆದರೆ ಇದುವರೆಗೂ ಸ್ವರಾ ಭಾಸ್ಕರ್ ಇಸ್ಲಾಮಿಕ್ ಗಲಭೆಕೋರರ ಕೃತ್ಯಗಳನ್ನ ಮಾತ್ರ ಖಂಡಿಸಿಲ್ಲ. ಯಾವ ರೀತಿಯಾಗಿ ಬೀಫ್ ಲಿಂಚಿಂಗ್ ಮತ್ತು ಲವ್ ಜಿಹಾದ್‌ನಲ್ಲಿ ಸಜೀವ ದಹನ ಮಾಡಿದ್ದರೋ ಅಂಥವರಿಗೂ ಇದೇ ರೀತಿಯ ಭಯ ಹುಟ್ಟಿಸಬೇಕು ಎಂದು ನಟಿ ಹೇಳಿದ್ದಾಳೆ.

ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ಯಾವ ರೀತಿಯಾಗಿ ನೇಣು ಹಾಕಲಾಗಿದೆಯೋ ಅದೇ ರೀತಿಯಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರ ದೇಹಗಳನ್ನು ಕ್ರೇನ್‌ಗೆ ನೇತುಹಾಕಿದ್ದರು ಎಂಬುದು ಗಮನಿಸಬೇಕಾದ ಸಂಗತಿ.

Advertisement
Share this on...