ಉದಯಪುರ್ ಕನ್ಹಯ್ಯಲಾಲ್ ನಂತೆಯೇ ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಅಮರಾವತಿಯಲ್ಲಿ ಮತ್ತೊಬ್ಬ ಹಿಂದೂವಿನ ಹ-ತ್ಯೆ: ಉಮೇಶ್ ಕೊಲ್ಹೆ ಪ್ರಾಣ ತೆಗೆದ ಜಿಹಾದಿಗಳು

in Uncategorized 246 views

ಅಮರಾವತಿ, ಮಹಾರಾಷ್ಟ್ರ: ನೂಪುರ್ ಶರ್ಮಾ ಅವರನ್ನ ಬೆಂಬಲಿಸಿದ್ದಕ್ಕಾಗಿ, ರಾಜಸ್ಥಾನದ ಉದಯಪುರದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಕೈಯಲ್ಲಿ ಕನ್ಹಯ್ಯಲಾಲ್ ಪ್ರಾಣ ಕಳೆದುಕೊಂಡಿದ್ದರು. ಈಗ ಇದೇ ಕಾರಣಕ್ಕೆ ಮಹಾರಾಷ್ಟ್ರದ ಅಮರಾವತಿಯಲ್ಲೂ ಹಿಂದೂ ಹ-ತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮೃತರ ಹೆಸರು ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಆಗಿದೆ. ಕೋಲ್ಹೆ ಅವರು ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಜೂನ್ 21 ರಂದು ಅವರನ್ನ ಜಿಹಾದಿಗಳಿಂದ ಹ-ತ್ಯೆ ಮಾಡಲಾಗಿತ್ತು. ಉಮೇಶ್ ಕೋಲ್ಹೆ ಅವರಿಗೆ 54 ವರ್ಷ ವಯಸ್ಸಾಗಿತ್ತು. ಉಮೇಶ್ ಅವರ ಪುತ್ರ ಸಂಕೇತ್ ನೀಡಿದ ದೂರಿನ ಮೇರೆಗೆ ಅಮರಾವತಿ ಕೊತ್ವಾಲಿ ಪೊಲೀಸರು ಮುದಸ್ಸಿರ್ ಅಹ್ಮದ್ ಮತ್ತು ಶಾರುಖ್ ಪಠಾಣ್ ಎಂಬಾತರನ್ನ ಜೂನ್ 23 ರಂದು ಬಂಧಿಸಿದ್ದರು. ವಿಚಾರಣೆಯ ನಂತರ, ಅಬ್ದುಲ್ ತೌಫಿಕ್, ಶೋಯೆಬ್ ಖಾನ್ ಮತ್ತು ಅತಿಬ್ ರಶೀದ್ ಎಂಬಾತರನ್ನ ಜೂನ್ 25 ರಂದು ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿ ಶಮೀಮ್ ಅಹ್ಮದ್ ಅಲಿಯಾಸ್ ಫಿರೋಜ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ನ್ಯೂಸ್ 18 ಪ್ರಕಾರ, ಈಗ NIA ಈ ಪ್ರಕರಣದ ಬಗ್ಗೆಯೂ ತನಿಖೆ ಮಾಡಬಹುದು ಎಂದು ಹೇಳಲಾಗುತ್ತಿದೆ.

Advertisement

ಪೊಲೀಸರ ತನಿಖೆಯ ವೇಳೆ ಉಮೇಶ್ ಕೊಲ್ಹೆ ಅವರು ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಪೋಸ್ಟ್ ಅನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಫಾರ್ವರ್ಡ್ ಮಾಡಿದ್ದರು ಎಂದು ಆಂಗ್ಲ ಪತ್ರಿಕೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಮೂಲಗಳನ್ನು ಉಲ್ಲೇಖಿಸಿದೆ. ಅವರು ಆಕಸ್ಮಿಕವಾಗಿ ಆ ಪೋಸ್ಟ್ ಅನ್ನು ಮುಸ್ಲಿಮರ ಗ್ರೂಪ್ ನಲ್ಲಿ ಶೇರ್ ಮಾಡಿದ್ದರು. ಉಮೇಶ್ ತನ್ನ ಗ್ರಾಹಕರಿಂದಾಗಿ ಆ ಗ್ರೂಪ್ ನಲ್ಲಿ ಸೇರಿಕೊಂಡಿದ್ದರು. ಪತ್ರಿಕೆಯ ಪ್ರಕಾರ, ಪ್ರವಾದಿಯನ್ನು ಅವಮಾನಿಸಿದ ಕಾರಣಕ್ಕಾಗಿ ಉಮೇಶ್ ಸಾಯಲೇಬೇಕಿತ್ತು ಎಂದು ಬಂಧಿತ ಆರೋಪಿಗಳಲ್ಲಿ ಒಬ್ಬಾತ ಪೊಲೀಸರಿಗೆ ತಿಳಿಸಿದ್ದಾನೆ. ಜೂನ್ 21ರ ರಾತ್ರಿ ಉಮೇಶ್ ತನ್ನ ಮೆಡಿಕಲ್ ಸ್ಟೋರ್ ಮುಚ್ಚಲು ಹೋಗುತ್ತಿದ್ದರು, ಮತ್ತೊಂದು ಸ್ಕೂಟರ್‌ನಲ್ಲಿ ಸಂಕೇತ್ ಮತ್ತು ಅವರ ಪತ್ನಿ ವೈಷ್ಣವಿ ಇದ್ದರು. ತಂದೆಯ ಬೈಕ್ ಪ್ರಭಾತ್ ಚೌಕ್ ಮೂಲಕ ಮಹಿಳಾ ಕಾಲೇಜು ನ್ಯೂ ಹೈಸ್ಕೂಲ್ ಗೇಟ್ ತಲುಪಿದಾಗ, ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ತಮ್ಮ ತಂದೆಯನ್ನು ಮುಂದಿನಿಂದ ಸುತ್ತುವರೆದರು ಎಂದು ಉಮೇಶ್ ಪುತ್ರ ಸಂಕೇತ್ ಪೊಲೀಸರಿಗೆ ತಿಳಿಸಿದ್ದಾರೆ.

ಸಂಕೇತ್ ಹೇಳುವ ಪ್ರಕಾರ ತಮ್ಮ ತಂದೆ ಉಮೇಶ್ ಕೋಲ್ಹೆ ಅವರ ಕುತ್ತಿಗೆಗೆ ಎಡಭಾಗದಲ್ಲಿ ಆರೋಪಿಗಳು ಇರಿದಿದ್ದಾನೆ. ಇದರಿಂದ ಅವರು ಬಿದ್ದು ರಕ್ತಸ್ರಾವವಾಗತೊಡಗಿತು. ಅವರು ಸಹಾಯಕ್ಕಾಗಿ ಮನವಿ ಮಾಡಲು ಪ್ರಾರಂಭಿಸಿದರು. ಅಷ್ಟರಲ್ಲಿ ಮೂರನೇ ವ್ಯಕ್ತಿ ಬಂದಿದ್ದು, ಮೂವರೂ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಜನರ ನೆರವಿನಿಂದ ಉಮೇಶ್ ಕೋಲ್ಹೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಸಂಕೇತ್ ಪೊಲೀಸರಿಗೆ ತಿಳಿಸಿದ್ದಾರೆ. ಬಂಧಿತರು ಮತ್ತೊಬ್ಬರಿಂದ ಸಹಾಯ ಪಡೆದಿರುವುದು ಅಂದರೆ 10,000 ಹಣ ಸಹಾಯ ಮತ್ತು ಕಾರಿನೊಂದಿಗೆ ಪರಾರಿಯಾಗಲು ಸಹಾಯ ಮಾಡಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಅಮರಾವತಿ ಪೊಲೀಸರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಹರಿಯಾಣಾದಲ್ಲೂ ಬೆಳಕಿಗೆ ಬಂದ ಇಂಥದ್ದೇ ಘಟನೆ

ಹರಿಯಾಣದ ಪಲ್ವಲ್ ಜಿಲ್ಲೆಯಲ್ಲಿ ವಿಕ್ಕಿ ಭಾರದ್ವಾಜ್ ಎಂಬ ಯುವಕನ ಮೇಲೆ ಮಾರಣಾಂತಿಕ ಹ-ಲ್ಲೆ ನಡೆದಿದೆ. ಈ ದಾ-ಳಿ-ಯಲ್ಲಿ ವಿಕ್ಕಿಯ ಹೊಟ್ಟೆಯನ್ನು ಚಾ-ಕು-ಗಳಿಂದ ಸೀ-ಳ-ಲಾಗಿದೆ. ದಾ-ಳಿಯ ಪ್ರಮುಖ ಆರೋಪಿ ಅಂಜುಮ್, ತಂದೆ ಸುಲೇಮಾನ್. ತೀವ್ರವಾಗಿ ಗಾಯಗೊಂಡಿರುವ ವಿಕ್ಕಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯು ಜೂನ್ 28, 2022 (ಮಂಗಳವಾರ) ನಡೆದಿದೆ. ಅಂಜುಮ್ ಜೊತೆಗೆ ಇತರ 5-6 ಆರೋಪಿಗಳು ಕೂಡ ದಾ-ಳಿ-ಕೋರರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಘಟನೆ ಕುರಿತು ವಿಕ್ಕಿಯ ತಂದೆ ಶಿವರಾಮ್ ಕ್ಯಾಂಪ್ ಪಲ್ವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಪಲ್ವಲ್‌ನ ಪಂಚವಟಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ದೂರಿನ ಪ್ರಕಾರ, “ನನ್ನ ಮಗ ವಿಕಾಸ್ ಅಲಿಯಾಸ್ ವಿಕ್ಕಿ 28 ಜೂನ್ 2022 ರಂದು ತನ್ನ ಕಾರಿನಲ್ಲಿ ಅಂಗಡಿ ವಸ್ತುಗಳನ್ನು ತರಲು ದೆಹಲಿಗೆ ಹೋಗಿದ್ದನು ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮಧ್ಯಾಹ್ನ 1.00 ಗಂಟೆ ಸುಮಾರಿಗೆ ಆತನ ಮೇಲೆ ಚಾ-ಕು-ವಿನಿಂದ ಹ-ಲ್ಲೆ-ಯಾದ ಬಗ್ಗೆ ನನಗೆ ಮಾಹಿತಿ ಸಿಕ್ಕಿತು. ನಾನು ಆಸ್ಪತ್ರೆಗೆ ತಲುಪಿದಾಗ, ನನ್ನ ಮಗ, ‘ದಿಲ್ಲಿಯಿಂದ ಹಿಂದಿರುಗುವಾಗ, ನಾನು ಬಸ್ ನಿಲ್ದಾಣದಲ್ಲಿ ಕೆಲವು ಸ್ನೇಹಿತರನ್ನು ಭೇಟಿಯಾದೆ. ನಾನು ಅವರನ್ನು ಬಿಡಲು ಕ್ಯಾಂಪ್ ಪ್ರದೇಶಕ್ಕೆ ಹೋದೆ. ನಾನು ಮಧ್ಯರಾತ್ರಿ 12.15 ರ ಸುಮಾರಿಗೆ ಗೋಲಯ ಪಬ್ಲಿಕ್ ಸ್ಕೂಲ್ ಬಳಿ ತಲುಪಿದಾಗ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನಿಂದ ಸುಮಾರು 5-6 ಜನರು ಇಳಿದು ನನ್ನ ಕಾರನ್ನು ನಿಲ್ಲಿಸಿದರು. ಇದರಲ್ಲಿ ಒಬ್ಬ ಆರೋಪಿಯ ಹೆಸರು ಅಂಜುಮ್, ಈತನ ತಂದೆಯ ಹೆಸರು ಸುಲೇಮಾನ್. ಅವರು ಪಲ್ವಲ್‌ನ ಶೇಖ್‌ಪುರದಲ್ಲಿ ವಾಸಿಸುತ್ತಿದ್ದಾರೆ. ನನ್ನ ಕಾರು ನಿಲ್ಲಿಸಿದ ತಕ್ಷಣ ಅವರೆಲ್ಲರೂ ನನ್ನನ್ನು ಥಳಿಸಲು ಪ್ರಾರಂಭಿಸಿದರು’ ಎಂದು ಹೇಳಿದ” ಎಂದಿದ್ದಾರೆ.

ಬಾಲ್ಯದಲ್ಲಿ ಪ್ರಧಾನಿ ಮೋದಿ ಚಹಾ ಮಾರಿದ್ದ ಜಾಗ?| Tea Stall where PM Modi Sold Tea |ತಿನ್ನಲು ಅನ್ನವಿಲ್ಲದೆ ಮಣ್ಣಿನ ರೊಟ್ಟಿ ತಿನ್ನುತ್ತಿದ್ದಾರೆ ಈ ದೇಶದ ಜನ | This country people eating Mud Rotis|Most Amazing 30 facts

Watch and Subscribe to the Channel to get such amazing facts

ದೂರಿನಲ್ಲಿ, ವಿಕಾಸ್ ಅಲಿಯಾಸ್ ವಿಕ್ಕಿ ತಂದೆ, “ದಾ-ಳಿ-ಯ ಸಂದರ್ಭದಲ್ಲಿ ಅಂಜುಮ್ ಇಂದು ಈತನನ್ನ ಕೊ-ಲ್ಲೋ-ಣ ಎಂದು ಹೇಳುತ್ತಿದ್ದ. ನಂತರ ಅವರು ನನ್ನ ಎ-ದೆ-ಗೆ ಚಾಕುವಿನಿಂದ ಇ-ರಿದರು. ಇದರಿಂದ ನಾನು ಕೆಳಗೆ ಬಿದ್ದೆ ಮತ್ತು ನನ್ನ ಸ್ನೇಹಿತರು ಕಾಪಾಡಿ-ಕಾಪಾಡಿ ಎಂದು ಕೂಗಲಾರಂಭಿಸಿದರು. ಆಗ ಹತ್ತಿರದ ದಾರಿಹೋಕರು ನನ್ನ ಪ್ರಾಣ ಉಳಿಸಿದರು. ಇನ್ನೊಮ್ಮೆ ಸಿಕ್ರೆ ಕೊ-ಲ್ಲು-ವುದಾಗಿ ಬೆದರಿಕೆ ಹಾಕಿ ಅಂಜುಮ್ ತನ್ನ ಸ್ನೇಹಿತರೊಂದಿಗೆ ಓಡಿ ಹೋದ. ವಿಕ್ಕಿಯ ಆರ್ಥಿಕ ಸ್ಥಿತಿ ಸರಿಯಿಲ್ಲ, ಮಗ ಗುರುನಾನಕ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ” ಎಂದು ದೂರಿನಲ್ಲಿ ವಿಕ್ಕಿ ತಂದೆ ತಿಳಿಸಿದ್ದಾರೆ.

ಘಟನೆಯ ಪ್ರತ್ಯಕ್ಷದರ್ಶಿ ಮತ್ತು ಸ್ಥಳದಲ್ಲಿದ್ದ ಹಿತೇನ್ ಶರ್ಮಾ ಅವರು ಮಾತನಾಡಿದ್ದಾರೆ. ಅವರು ಮಾತನಾಡುತ್ತ, “ಆ ದಿನ ನನ್ನ ಜನ್ಮದಿನವಾಗಿತ್ತು ಮತ್ತು ನಾವು ನಮ್ಮ ಸ್ನೇಹಿತರೊಂದಿಗೆ ಬರ್ತಡೇ ಆಚರಿಸುವವರಿದ್ದೆವು. ದಾರಿಯಲ್ಲಿ, ಅಂಜುಮ್ ನಮ್ಮೊಂದಿಗೆ ಅನಗತ್ಯವಾಗಿ ಜಗಳಕ್ಕಿಳಿದ. ಅಂಜುಮ್ ಮತ್ತು ಆತನ ಸಹಚರರು ಯಾಕೆ ನಮ್ಮ ಮೇಲೆ ದಾ-ಳಿ ಮಾಡಿದರು ಅನ್ನೋದೇ ನಮಗೆ ಗೊತ್ತಿಲ್ಲ” ಎಂದಿದ್ದಾರೆ. ದಾ-ಳಿ-ಕೋರರಲ್ಲಿ ಅಂಜುಮ್ ಹೊರತಾಗಿ ಬಿಲಾಲ್ ಕೂಡ ಇದ್ದ. ಇದುವರೆಗೆ ಯಾವುದೇ ಆರೋಪಿ ಸಿಕ್ಕಿಬಿದ್ದಿಲ್ಲ. ಗಾಯಾಳು ವಿಕ್ಕಿ ಮೊಬೈಲ್ ಅಂಗಡಿ ಹೊಂದಿದ್ದು, ಆತನ ಜೀವನೋಪಾಯವೂ ಇದೇ ಆಗಿದೆ.

 

Advertisement
Share this on...