ಲಾಲ್‌ ಸಿಂಗ್ ಚಡ್ಡಾ ಬಳಿಕ ಸಲ್ಮಾನ್ ಖಾನ್ ಹಿಂದೆ ಬಿದ್ದ ಬಾಯ್‌ಕಾಟ್ ಗ್ಯಾಂಗ್: ಸಲ್ಮಾನ್ ಖಾನ್‌ಗೆ ತಟ್ಟಿದ ಭಾರೀ ಬಾಯ್‌ಕಾಟ್ ಬಿಸಿ, ಕಂಗಾಲಾದ ಸಲ್ಮಾನ್

in Uncategorized 115 views

ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ‘ಏಕ್ ಥಾ ಟೈಗರ್’ ಚಿತ್ರ 10 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಿಗೆ ‘ಟೈಗರ್ 3’ ಘೋಷಣೆ ಮಾಡುವ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದರು. ಒಂದೆಡೆ, ‘ಟೈಗರ್ 3’ ಬರುತ್ತಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ ಮತ್ತೊಂದೆಡೆ ‘ಟೈಗರ್ 3’ ಚಿತ್ರಕ್ಕೆ ಕೆಲವರು ಬಾಯ್‌ಕಾಟ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಸಿನಿಮಾ ನೋಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗುತ್ತಿದೆ.

#BoycottTiger3: ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ಚಿತ್ರಗಳನ್ನು ಬಾಯ್‌ಕಾಟ್ ಮಾಡುವ ಕ್ಯಾಂಪೇನ್ ನಡೆಯುತ್ತಿದೆ. ಮೊದಲು ಜನ ‘ಲಾಲ್ ಸಿಂಗ್ ಚಡ್ಡಾ’ ಮತ್ತು ‘ರಕ್ಷಾ ಬಂಧನ’ವನ್ನು ವಿರೋಧಿಸಿದ್ದರು. ಇದಾದ ನಂತರ ಹೃತಿಕ್ ರೋಷನ್ ಅಭಿನಯದ ‘ವಿಕ್ರಂ ವೇದಾ’ ಮತ್ತು ಶಾರುಖ್ ಖಾನ್ ಅವರ ‘ಪಠಾಣ್’ ಚಿತ್ರಗಳನ್ನು ಬಾಯ್‌ಕಾಟ್ ಮಾಡುವಂತೆ ಜನರು ಒತ್ತಾಯಿಸಿದ್ದರು. ಅದೇ ಸಮಯದಲ್ಲಿ ಈಗ #BoycottTiger3 ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿದೆ.

Advertisement

ಟ್ರೆಂಡಿಂಗ್‌ನಲ್ಲಿ #BoycottTiger3

ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ‘ಏಕ್ ಥಾ ಟೈಗರ್’ ಚಿತ್ರ 10 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಿಗೆ ‘ಟೈಗರ್ 3’ ಘೋಷಣೆ ಮಾಡುವ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದರು. ಒಂದೆಡೆ, ‘ಟೈಗರ್ 3’ ಬರುತ್ತಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ ಮತ್ತೊಂದೆಡೆ ‘ಟೈಗರ್ 3’ ಚಿತ್ರಕ್ಕೆ ಕೆಲವರು ಬಾಯ್‌ಕಾಟ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಸಿನಿಮಾ ನೋಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗುತ್ತಿದೆ.

ಇದಕ್ಕೂ ಮುನ್ನ 2012ರಲ್ಲಿ ಸಲ್ಮಾನ್ ಖಾನ್ ಅಭಿನಯದ ‘ಏಕ್ ಥಾ ಟೈಗರ್’ ಬಿಡುಗಡೆಯಾಗಿ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿ ಪಡೆದಿತ್ತು. ಚಿತ್ರದ ಯಶಸ್ಸನ್ನು ನೋಡಿ, 2017 ರಲ್ಲಿ ‘ಟೈಗರ್ ಜಿಂದಾ ಹೈ’ ಬಂದಿತು. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಈ ಚಿತ್ರವೂ ಸೂಪರ್ ಹಿಟ್ ಎಂದು ಸಾಬೀತಾಗಿತ್ತು. ಚಿತ್ರದ ಕಥೆಯ ಜೊತೆಗೆ ಅದರ ಹಾಡುಗಳನ್ನೂ ಜನ ತುಂಬಾ ಇಷ್ಟಪಟ್ಟಿದ್ದರು. ಹಾಗಾಗಿಯೇ ಸಲ್ಮಾನ್ ಖಾನ್ ಈಗ ‘ಟೈಗರ್ 3’ ಸಿನಿಮಾವನ್ನು ಅನೌನ್ಸ್ ಮಾಡಿದಾಗ ಸಲ್ಮಾನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಆದರೆ ಚಿತ್ರದ ಘೋಷಣೆಯಾಗಿ ಎರಡು ದಿನಗಳೂ ಕಳೆದಿಲ್ಲ ಇದೀಗ ಚಿತ್ರದ ಮೇಲೆ ಬಾಯ್‌ಕಾಟ್ ಕರಿನೆರಳು ಆವರಿಸಿದೆ.

ಟ್ವಿಟರ್ ನಲ್ಲಿ ನಡೆಯುತ್ತಿರುವ #BoycotyTiger3 ಟ್ರೆಂಡಿಂಗ್ ಹೇಗಿದೆ ನೋಡಿ

ಬಾಯ್‌ಕಾಟ್ ನಿಂದ ಚಿತ್ರಕ್ಕಾಗುತ್ತಾ ಎಫೆಕ್ಟ್?

ಟ್ವಿಟರ್‌ನಲ್ಲಿ ಚಿತ್ರಗಳನ್ನು ಬಾಯ್‌ಕಾಟ್ ಮಾಡುವಂತೆ ಅಭಿಯಾನ ನಡೆಯುತ್ತಿದೆ. ಆದರೆ ಇದರಿಂದ ಚಲನಚಿತ್ರಗಳಿಗೆ ಯಾವಾಗಲೂ ಲಾಭವಿದೆ ಎನ್ನುತ್ತವೆ ದಾಖಲೆಗಳು. ಅದು ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತ್’ ಆಗಿರಲಿ ಅಥವಾ ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಆಗಿರಲಿ. ಅಮೀರ್ ಖಾನ್ ಅವರ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯಷ್ಟು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನ ಇಷ್ಟಪಡುವವರ ಸಂಖ್ಯೆ ಕಡಿಮೆಯೇನಿಲ್ಲ ಎಂದು ಚಿತ್ರಕ್ಕೆ ಬಂದ ರಿವೀವ್ಸ್ ಹೇಳುತ್ತಿವೆ.

ಅದೇ ನಾವು ಟೈಗರ್ 3 ಬಗ್ಗೆ ಮಾತನಾಡುವುದಾದರೆ, ಈ ಚಿತ್ರವು ಮುಂದಿನ ವರ್ಷ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಟೈಗರ್ 3 ಬಿಡುಗಡೆಯ ದಿನಾಂಕ ಏಪ್ರಿಲ್ 21, 2023 ಎಂದು ಅನೌನ್ಸ್ ಮಾಡಲಾಗಿದೆ. ಹಾಗೆ ನೋಡಿದರೆ ಚಿತ್ರ ಬಿಡುಗಡೆಯಾಗಲು ಇನ್ನೂ ಸುಮಾರು 9 ತಿಂಗಳುಗಳಿವೆ. ಆದ್ದರಿಂದ ಈಗಿನಿಂದಲೇ ಬಾಯ್‌ಕಾಟ್ ಟ್ರೆಂಡ್ ನಡೆಸುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ಸಿನಿ ತಜ್ಞರು.

ಸೆಲೆಬ್ರಿಟಿಗಳ ಆಕ್ರೋಶ:

ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಬಾಯ್‌ಕಾಟ್ ಟ್ರೆಂಡ್ ಬಗ್ಗೆ ಧ್ವನಿ ಎತ್ತಿದ್ದಾರೆ. ಸಂದರ್ಶನವೊಂದರಲ್ಲಿ ಅರ್ಜುನ್ ಕಪೂರ್ ಅವರು ಬಾಯ್‌ಕಾಟ್ ಟ್ರೆಂಡ್ ಸರಿಯಲ್ಲ. ನಾವು ಇದನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದೇವೆ ಅದೇ ಕಾರಣಕ್ಕೆ ಜನರಿಗೆ ಇದೊಂದು ಕೆಟ್ಟ ಅಭ್ಯಾಸವಾಗಿಬಿಟ್ಟಿದೆ ಎಂದು ಹೇಳಿದ್ದಾರೆ. ಅರ್ಜುನ್ ಕಪೂರ್ ಹೊರತಾಗಿ, ಏಕ್ತಾ ಕಪೂರ್ ಕೂಡ ಬಾಯ್‌ಕಾಟ್ ಟ್ರೆಂಡ್ ನ್ನ ತಪ್ಪು ಎಂದು ಕರೆದಿದ್ದಾರೆ.

ಅಮೀರ್ ಖಾನ್ ಕುರಿತು ಮಾತನಾಡಿದ ಏಕ್ತಾ ಕಪೂರ್, ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಬ್ಯುಸಿನೆಸ್ ಮಾಡಿರುವ ಅಮೀರ್ ಖಾನ್‌‌ರನ್ನ ಬಹಿಷ್ಕರಿಸುತ್ತಿದ್ದಾರೆ ಎಂದಿದ್ದಾರೆ. ಬಾಲಿವುಡ್ ನ ಮೂವರು ಖಾನ್ ಗಳಾದ ಅಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರನ್ನು ಲೆಜೆಂಡ್ ಎಂದು ಏಕ್ತಾ ಕಪೂರ್ ಬಣ್ಣಿಸಿದ್ದರು. ಈ ಮೂವರು ಸ್ಟಾರ್‌ಗಳನ್ನ ಮತ್ತು ಅವರ ಚಿತ್ರಗಳನ್ನು ನಾವು ವಿರೋಧಿಸಲು ಸಾಧ್ಯವಿಲ್ಲ ಎಂದು ಏಕ್ತಾ ಕಪೂರ್ ಹೇಳಿದ್ದರು.

Advertisement
Share this on...