“ಸಂಘ (RSS) ಇರದಿದ್ದರೆ ಕಾಶ್ಮೀರ ಪಾಕಿಸ್ತಾನದ ಪಾಲಾಗಿ ಲಕ್ಷಾಂತರ ಹಿಂದುಗಳು ಸಾಯ್ತಿದ್ರು”: ಸಂಘದ (RSS) ನ ಮೇಲೆ ಫಿಲ್ಮ್ ಹಾಗು ವೆಬ್ ಸೀರೀಸ್ ಮಾಡಲಿದ್ದಾರೆ ಎಸ್‌ಎಸ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್

in Uncategorized 1,559 views

ಖ್ಯಾತ ಬರಹಗಾರ ಮತ್ತು ರಾಜ್ಯಸಭಾ ಸಂಸದ ವಿ. ವಿಜಯೇಂದ್ರ ಪ್ರಸಾದ್ ಅವರು ‘ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)’ ದ ಮೇಲೆ ವೆಬ್ ಸೀರೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಇವರು ಎಸ್.ಎಸ್ ರಾಜಮೌಳಿ ಅವರ ತಂದೆ. RSS ನ ಮೇಲೆ ಚಲನಚಿತ್ರ ಮತ್ತು ವೆಬ್ ಸೀರೀಸ್ ಎರಡನ್ನೂ ಮಾಡಲಿದ್ದೇನೆ ಎಂದು ಅವರು ಹೇಳಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ವಿಜಯವಾಡದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಂಘದ ಮುಖಂಡ ರಾಮ್ ಮಾಧವ್ ಕೂಡ ಉಪಸ್ಥಿತರಿದ್ದರು. ವಿಜಯೇಂದ್ರ ಪ್ರಸಾದ್ ಮಾತನಾಡಿ, ಮೊದಲು ಆರ್‌ಎಸ್‌ಎಸ್ ಬಗ್ಗೆ ಅವರ ಚಿಂತನೆ ಸಕಾರಾತ್ಮಕವಾಗಿರಲಿಲ್ಲ, ಆದರೆ ಈಗ ಅವರು ಈ ಸಂಘಟನೆಯನ್ನು ಮನಗಂಡಿದ್ದಾರೆ ಎಂದು ತಿಳಿಸಿದರು.

Advertisement

2018 ರಲ್ಲಿ, ವಿ ವಿಜಯೇಂದ್ರ ಪ್ರಸಾದ್ ಅವರು RSS ಕುರಿತು ಚಲನಚಿತ್ರದ ಕಥೆಯನ್ನ ಬರೆಯಲಿದ್ದಾರೆ. ಈ ಚಿತ್ರದಲ್ಲಿ RSS ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಮತ್ತು ಸಂಘಟನೆಯ ಇತರ ನಾಯಕರ ಜೀವನವನ್ನು ಸಹ ತೋರಿಸಲಾಗುತ್ತದೆ ಎಂದು ವರದಿಯಾಗಿತ್ತು. ಈಗ ಅವರು ವಿಜಯವಾಡದ ಕೆವಿಎಸ್‌ಆರ್ ಸಿದ್ಧಾರ್ಥ ಫಾರ್ಮಾಸ್ಯುಟಿಕಲ್ ಸೈನ್ಸ್ ಕಾಲೇಜಿನಲ್ಲಿ ರಾಮ್ ಮಾಧವ್ ಅವರ ‘Partitioned Freedom’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೊಸ ಘೋಷಣೆ ಮಾಡಿದರು. 3-4 ವರ್ಷಗಳ ಹಿಂದೆ ತನಗೆ ಆರ್‌ಎಸ್‌ಎಸ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ ಮತ್ತು ಮಹಾತ್ಮ ಗಾಂಧಿಯವರ ಹ.ತ್ಯೆ.ಯಲ್ಲಿ ಅದರ ಕೈವಾಡವಿದೆ ಎಂದುಕೊಂಡಿದ್ದೆ ಎಂದರು.

ಅವರು ಮಾತನಾಡುತ್ತ, “4 ವರ್ಷಗಳ ಹಿಂದೆ RSS ನ ಬಗ್ಗೆ ಚಲನಚಿತ್ರ ಕಥೆ ಬರೆಯಲು ನನ್ನನ್ನು ಕೇಳಲಾಯಿತು. ಇದಕ್ಕಾಗಿ ಹಣ ಪಡೆದಿದ್ದರಿಂದ ನಾಗ್ಪುರಕ್ಕೂ ಹೋಗಿ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದೆ. ನಾನು 1 ದಿನ ಅಲ್ಲಿಯೇ ಇದ್ದೆ ಮತ್ತು ಮೊದಲ ಬಾರಿಗೆ ನೋಡಿದೆ – RSS ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅರ್ಥವಾಯಿತು. ಇಷ್ಟು ದೊಡ್ಡ ಸಂಸ್ಥೆಯ ಪರಿಚಯ ಇಲ್ಲಿಯವರೆಗೂ ಇಲ್ಲದಿರುವುದಕ್ಕೆ ನನಗೆ ಬಹಳ ವಿಷಾದವಿದೆ. ಆರೆಸ್ಸೆಸ್ ಇಲ್ಲದಿದ್ದರೆ ಇಂದು ಕಾಶ್ಮೀರ ಇರುತ್ತಿರಲಿಲ್ಲ, ಕಾಶ್ಮೀರ ಪಾಕಿಸ್ತಾನದ ಪಾಲಾಗಿ ಲಕ್ಷಾಂತರ ಹಿಂದೂಗಳು ಕೊ.ಲ್ಲ‌.ಲ್ಪ.ಡುತ್ತಿದ್ದರು”

ಎಸ್.ಎಸ್ ರಾಜಮೌಳಿ ಅವರ 80 ವರ್ಷದ ತಂದೆ ವಿ.ವಿಜಯೇಂದ್ರ ತಾವು ಅವರು 2 ತಿಂಗಳಲ್ಲಿ ಈ ಕಥೆ ಬರೆದಿದ್ದೇನೆ ಎಂದು ಹೇಳಿದ್ದು ಮೋಹನ್ ಭಾಗವತ್ ಅವರಿಗೂ ಖುಷಿ ತಂದಿದೆ ಎಂದರು. ‘ಮಗಧೀರ (2009)’, ಬಾಹುಬಲಿ ಸೀರೀಸ್ (2015, 2017), ‘ರೌಡಿ ರಾಥೋಡ್’ (2012), ‘ಬಜರಂಗಿ ಭಾಯಿಜಾನ್ (2015)’, ‘ಮಣಿಕರ್ಣಿಕಾ (2019)’ ಮತ್ತು ‘RRR’ (2022) ನಂತಹ ಬ್ಲಾಕ್‌ಬಸ್ಟರ್‌ ಚಿತ್ರಗಳ ಕಥೆ ಬರೆದ ಹಿರಿಯ ಲೇಖಕ ವಿ.ವಿಜಯೇಂದ್ರರೇ ಆಗಿದ್ದಾರೆ. RSS ಒಂದೇ ಒಂದು ತಪ್ಪು ಮಾಡಿದೆ ಅದು ತನ್ನ ಕೆಲಸದ ಬಗ್ಗೆ ಜನರಿಗೆ ಹೇಳಲಿಲ್ಲ ಎಂದು ಅವರು ಹೇಳಿದರು. ನನ್ನ ಈ ಸಣ್ಣ ಪ್ರಯತ್ನದ ನಂತರ ಜನರು RSS ಹಿರಿಮೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ ಎಂದು ಹೇಳಿದರು.

Advertisement
Share this on...