“ಹಿಜಾಬ್‌‌ನ್ನ ಸಿಖ್ಖರ ಪಗಡಿಗಾಗಲಿ ಹೋಲಿಸಬೇಡಿ, ಇದೇನು ಶಾಲೆ ಅನ್ಕೊಂಡಿದೀರೋ ಇಲ್ಲ ನಿಮ್ಮ….”: ಹಿಜಾಬ್‌ಧಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್

in Uncategorized 900 views

ಕರ್ನಾಟಕದಲ್ಲಿ ಹಿಜಾಬ್ ವಿವಾದದ ಕುರಿತು ಹೈಕೋರ್ಟ್‌ನ ತೀರ್ಪನ್ನು ಹಿಜಾಬ್ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ನಂತರ, ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 7, 2022 ರಂದು ನಿಗದಿಪಡಿಸಿತು. ಇದಕ್ಕೂ ಮುನ್ನ ನ್ಯಾಯಾಲಯವು ಅರ್ಜಿದಾರರನ್ನು ಶಾಲೆಯಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದುದನ್ನು ಧರಿಸಬಹುದೇ? ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ಶಾಲೆಯಿಂದ ಹೊರಗಿಡಲು ಸಾಧ್ಯವಿಲ್ಲವೇ? ಎಂದು ಕೇಳಿದೆ.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರು ಅರ್ಜಿದಾರರ ಪರ ವಕೀಲ ಸಂಜಯ್ ಹೆಗ್ಡೆ ಅವರನ್ನು,

Advertisement

“ವಿದ್ಯಾರ್ಥಿಗಳು ಮಿನಿ, ಮಿಡಿ ಧರಿಸಿ ಶಾಲೆಗೆ ಬರಬಹುದೇ? ನೀವು ಧಾರ್ಮಿಕ ಅಧಿಕಾರವನ್ನು ಹೊಂದಿರಬಹುದು. ಆದರೆ ಸಮವಸ್ತ್ರವನ್ನು ನಿಗದಿಪಡಿಸಿದ ಶಿಕ್ಷಣ ಸಂಸ್ಥೆಗಳಲ್ಲಿಯೂ ನಿಮ್ಮ ಈ ಹಠವನ್ನ ತರಬಹುದೇ?” ಎಂದು ಕೇಳಿದರು.

ಪೀಠವು, “ನೀವು ಹಿಜಾಬ್ ಅಥವಾ ಸ್ಕಾರ್ಫ್ ಧರಿಸಲು ಅರ್ಹರಾಗಿರಬಹುದು, ಆದರೆ ಯೂನಿಫಾರಂ ನಿಗದಿಪಡಿಸಿದ ಸ್ಥಳದಲ್ಲಿ ನಿಮ್ಮ ಅಧಿಕಾರ ಚಲಾಯಿಸುವುದು ಸರಿಯೇ?” ಎಂದು ಕೇಳಿತು.

ಸುಪ್ರೀಂ ಕೋರ್ಟ್ ನ ಪ್ರಶ್ನೆಗಳಿಗೆ ಹೆಗಡೆಯವರು ಉತ್ತರಿಸುವ ಬದಲು, “ನಿಗದಿತ ಸಮವಸ್ತ್ರ ಸಂಹಿತೆ ಪಾಲಿಸದ ಮಾತ್ರಕ್ಕೆ ಯಾರನ್ನಾದರೂ ಕಾಲೇಜಿನಿಂದ ಹೊರಹಾಕಲು ಸಾಧ್ಯವೇ, ಇದು ನ್ಯಾಯವೇ?” ಎಂದರು. ವಿಚಾರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಕಾನೂನಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗೆ (college development board) ಮಾನ್ಯತೆ ಇಲ್ಲ, ಆದರೆ ಈ ಸಮಿತಿಯು ವಸ್ತ್ರಸಂಹಿತೆಯನ್ನು ನಿರ್ಧರಿಸುತ್ತದೆ ಎಂದು ಹೇಳಿದರು.

ಹೆಗ್ಡೆ ಅವರ ವಾದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ, “ರಾಜ್ಯ ಸರ್ಕಾರವು ಅವರಿಗೆ ಅಧಿಕಾರ ನೀಡಿರುವುದರಿಂದ ಅಭಿವೃದ್ಧಿ ಸಮಿತಿಯು ಸಮವಸ್ತ್ರವನ್ನು ನಿಗದಿಪಡಿಸುತ್ತದೆ. ಈ ಸಮಿತಿಯಲ್ಲಿ ಶಿಕ್ಷಕರು, ಪೋಷಕರು, ಸ್ಥಳೀಯ ಶಾಸಕರು ಇದ್ದಾರೆ. ಮುಸ್ಲಿಂ ಕಾಲೇಜುಗಳಲ್ಲಿಯೂ ಸಮವಸ್ತ್ರವನ್ನ ಸಮಿತಿಯೇ ನಿರ್ಧರಿಸುತ್ತದೆ” ಎಂದರು.

ಅದೇ ಸಮಯದಲ್ಲಿ, ನ್ಯಾಯಮೂರ್ತಿ ಗುಪ್ತಾ ರವರು ಹೆಗ್ಡೆ ಅವರ ಮಾತುಗಳನ್ನು ಆಲಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಡ್ರೆಸ್ ಕೋಡ್ ಅನ್ವಯಿಸುತ್ತದೆ ಎಂದು ಹೇಳಿದರು. ಈ ಹಿಂದೆ ಮಹಿಳಾ ವಕೀಲರೊಬ್ಬರು ಜೀನ್ಸ್ ಧರಿಸಿ ಬಂದಿದ್ದರು, ಕೂಡಲೇ ಆಕೆಯನ್ನು ಹಾಗೆ ಬರಬಾರದು ಎಂದು ನಿರಾಕರಿಸಲಾಗಿತ್ತು. ಅಂತೆಯೇ, ಗಾಲ್ಫ್ ಕೋರ್ಸ್‌ಗಳು ತಮ್ಮದೇ ಆದ ಡ್ರೆಸ್ ಕೋಡ್ ಅನ್ನು ಹೊಂದಿವೆ ಎಂದರು. ಇದಾದ ನಂತರ ನ್ಯಾಯಾಲಯವು, “ಹಿಜಾಬ್ ಬಗ್ಗೆ ಇಡೀ ವಿವಾದವು ಧಾರ್ಮಿಕವಲ್ಲ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 7 ರಂದು ನಡೆಯಲಿದೆ” ಎಂದು ತಿಳಿಸಿತು.

ಈ ವಿಚಾರಣೆಯಲ್ಲಿ ಹಿಜಾಬ್, ಪೇಟ ಮತ್ತು ತಿಲಕವನ್ನು ಸಮರ್ಥಿಸಲು ವಕೀಲ ರಾಜೀವ್ ಧವನ್ ಕೂಡ ಪ್ರಶ್ನೆ ಎತ್ತಿದರು. ಆದಾಗ್ಯೂ, ನ್ಯಾಯಮೂರ್ತಿ ಗುಪ್ತಾ ಅವರು, “ಸಿಖ್ಖರ ಪೇಟವನ್ನು (ಪಗಡಿ) ಹಿಜಾಬ್‌ಗೆ ಸಮನಾಗಿರುತ್ತದೆ ಎಂದು ಹೇಳಲಾಗುವುದಿಲ್ಲ, ಅದು ಧಾರ್ಮಿಕವಲ್ಲ. ಇದನ್ನು ರಾಜಮನೆತನದ ನ್ಯಾಯಾಲಯಗಳಲ್ಲೂ ಧರಿಸಲಾಗುತ್ತಿತ್ತು. ನನ್ನ ಅಜ್ಜ ಕಾನೂನು ಅಭ್ಯಾಸ ಮಾಡುವಾಗ ಅದನ್ನು ಧರಿಸುತ್ತಿದ್ದರು. ಅದನ್ನು ಹಿಜಾಬ್‌ಗೆ ಹೋಲಿಸಬೇಡಿ” ಎಂದರು.

ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ನೀಡಿದ್ದ ತೀರ್ಪೇನಿತ್ತು? 

ಹಿಜಾಬ್ ಕುರಿತಾದ ತೀರ್ಪು ಮಾರ್ಚ್ 14 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಬಂದಿತ್ತು. ವಿದ್ಯಾರ್ಥಿನಿಯರು ನಿಗದಿತ ಸಮವಸ್ತ್ರ ಧರಿಸಿ ಬರಲು ನಿರಾಕರಿಸುವಂತಿಲ್ಲ ಎಂದು ಹೇಳಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ 23 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿದಾರರ ಪರ ಹಿರಿಯ ವಕೀಲರಾದ ರಾಜೀವ್ ಧವನ್, ಕಪಿಲ್ ಸಿಬಲ್, ದುಷ್ಯಂತ್ ದವೆ ಮತ್ತು ಸಂಜಯ್ ಹೆಗ್ಡೆ ವಾದ ಮಂಡಿಸುತ್ತಿದ್ದಾರೆ.

Advertisement
Share this on...