ಗೆಳೆಯರೇ ನೀವು ಹಲವಾರು ಫಿಲ್ಮ್ ಗಳಲ್ಲಿ ನಾಯಕ ಹಾಗು ನಾಯಕಿ ದೂರಾಗುವ ಸನ್ನಿವೇಶಗಳನ್ನ ನೋಡಿರುತ್ತೀರ. ಆದರೆ ಇಂದು ನಿಮಗೆ ನಾವು ಅಂತಹುದೇ ಒಂದು ಅಸಲಿ ಜೀವನದಲ್ಲಿ ನಡೆದ ಘಟನೆಯೊಂದನ್ನ ತಿಳಿಸಲಿದ್ದು ಇದರಲ್ಲಿ ಈ ಜೋಡಿಗಳು ಹಲವಾರು ವರ್ಷಗಳ ಕಾಲ ಬೇರೆಯಾಗಿ ಒಬ್ಬರನ್ನೊಬ್ಬರು ನೋಡಬೇಕೆಂದು, ಜೀವನ ನಡೆಸಬೇಕೆಂದು ಚಡಪಡಿಸುತ್ತಿದ್ದರು. ನಾವಿಂದು ನಿಮಗೆ ತಿಳಿಸಲು ಹೊರಟಿರುವ ಜೋಡಿ ಕೇವಲ 1 ವರ್ಷಗಳ ಕಾಲ ಮಾತ್ರ ಜೀವನ ಸಾಗಿಸಿದ್ದು ಬಳಿಕ ಬೇರೆಯಾಗಿದ್ದರು ಹಾಗು ಬರೋಬ್ಬರಿ 72 ವರ್ಷಗಳ ಬಳಿಕ ಇಬ್ಬರೂ ಈಗ ಒಂದಾಗಿದ್ದಾರೆ.
ಕುನ್ನೂರಿನಲ್ಲಿ ವಾಸಿಸುತ್ತಿರುವ ಶಾರದಾ ಎಂಬ ಮಹಿಳೆ 72 ವರ್ಷಗಳ ನಂತರ ತನ್ನ ಗಂಡನನ್ನು ಭೇಟಿಯಾಗಲು ಸಾಧ್ಯವಾಯಿತು. ಶಾರದಾ ಜೀ ಅವರಿಗೆ ಈಗ 85 ವರ್ಷವಾಗಿದ್ದರೆ ಅವರ ಗಂಡ ನಾರಾಯಣನ್ ಗೆ ಈಗ 93 ವರ್ಷ ವಯಸ್ಸಾಗಿದೆ.
ಶಾರದಾ ಮತ್ತು ನಾರಾಯಣನ್ 1946 ರಲ್ಲಿ ವಿವಾಹವಾದರು. ಆ ಸಮಯದಲ್ಲಿ ಶಾರದಾ ಕೇವಲ 13 ವರ್ಷ ಮತ್ತು ನಾರಾಯಣನ್ ಅವರಿಗೆ 17 ವರ್ಷದವರಾಗಿದ್ದರು. ಮದುವೆಯಾಗಿ ಒಂದು ವರ್ಷವೂ ಕಳೆದಿರಲಿಲ್ಲ ಆಗಲೇ ಇಬ್ಬರೂ ಬೇರ್ಪಡಬೇಕಾದ ಸಂದರ್ಭ ಎದುರಾಯಿತು. ನಾರಾಯಣನ್ ತಮ್ಮ ತಂದೆಯೊಂದಿಗೆ ಕವುಂಬೈನ ರೈತ ಚಳವಳಿಯಲ್ಲಿ ಭಾಗವಹಿಸಿದರು ಮತ್ತು ಇದೇ ಕಾರಣಕ್ಕಾಗಿ ನಾರಾಯಣನ್ ಪೋ ಲಿ ಸ ರ ಭ ಯ ದಿಂದ ಅಂಡರ್‌ಗ್ರೌಂಡ್ ಆಗಬೇಕಾಯಿತು.
ಆದರೆ ಸ್ವಲ್ಪ ಸಮಯದ ನಂತರ ಪೊ ಲೀ ಸ ರು ಆತನನ್ನು ಹಿಡದು ಆತನನ್ನು ಬಂ ಧಿ ಸ ಲಾಯಿತು. ಅಷ್ಟೇ ಅಲ್ಲ, ಅವರನ್ನು ಬಂ ಧಿ ಸಿ ದ ನಂತರ ಪೊ ಲೀ ಸ ರು ಶಾರದಾ ಮತ್ತು ಅತ್ತೆಯನ್ನೂ ಬಂ ಧಿ ಸ ಲು ಅವರ ಮನೆಗೆ ತಲುಪಿದರು. ಆದರೆ ಶಾರದಾ ಅವರ ಅತ್ತೆ ಹೇಗೋ ಉಪಾಯದಿಂದ ತಮ್ಮನ್ನ ಹಾಗು ಶಾರದಾರವರನ್ನ ಅ ರೆ ಸ್ಟ್ ಆಗದಂತೆ ನೋಡಿಕೊಂಡರು.
ಮನೆಯಲ್ಲಿ ಯಾರೂ ಸಿಗಲಿಲ್ಲವೆಂದು ಪೋ ಲಿ ಸ ರು ನಾರಾಯಣನ್ ಅವರ ಮನೆಗೆ ಬೆಂ ಕಿ ಹ ಚ್ಚಿ ದ ರು. ಹೇಗೋ ತಮ್ಮ ಜೀ ವ ವನ್ನು ಉಳಿಸಿಕೊಂಡ ನಂತರ, ಶಾರದಾ ಅವರ ಅತ್ತೆ ಆಕೆಯನ್ನ ಆಕೆಯ ತಾಯಿಯ ಮನೆಗೆ ಕಳುಹಿಸಿದರು. ಈ ಘಟನೆಯ ನಂತರ, ಶಾರದಾ ಅವರ ಕುಟುಂಬವು ನಾರಾಯಣನನ್ನು ಹುಡುಕಲು ಪ್ರಯತ್ನಿಸಿತು. ಆದರೆ ಆತನ ಬಗ್ಗೆ ಯಾವು ಸುಳುಲಿವೂ ಸಿಗಲಿಲ್ಲ. ಇದರ ನಂತರ, ಶಾರದಾ ಅವರ ಎರಡನೇ ಮದುವೆ ನಡೆಯಿತು.
ಶಾರದಾಗೆ ಎರಡನೇ ಮದುವೆಯಾದ ಬಳಿಕ ಅವರಿಗೆ 6 ಮಕ್ಕಳು ಜನಿಸಿದರು, ಅದರಲ್ಲಿ ಇಬ್ಬರು ಮಕ್ಕಳು ಅ ಸು ನೀ ಗಿದವು. ಎರಡನೇ ಮದುವೆಯಾದ ನಂತರ ಎಲ್ಲವೂ ಸರಿಯಾಗಿ ನಡೆಯುತ್ತಿತ್ತು. ಆ ಘಟನೆ ನಡೆದು 72 ವರ್ಷಗಳು ಕಳೆದಿವೆ. ಶಾರದಾ ಮಗ ಭಾರ್ಗವನ್ ತನ್ನ ತಾಯಿ ಶಾರದಾಳನ್ನು ತನ್ನ ಮೊದಲ ಪತಿ ನಾರಾಯಣನ್ ರವರನ್ನ ಭೇಟಿ ಮಾಡಲು ನಿರ್ಧರಿಸಿದನು.
ನಾರಾಯಣನ್ ತನ್ನ ತಂದೆಯೊಂದಿಗೆ ಜೈ ಲಿ ನಲ್ಲಿದ್ದಾಗ, ಅವರ ಮೇ ಲೆ ಮಾ ರ ಣಾಂ ತಿಕ ಹ ಲ್ಲೆ ಯೂ ನಡೆದಿತ್ತು. ಇದರಲ್ಲಿ ಅವರ ತಂದೆ ತೀ ರಿ ಕೊಂಡರು. ಇದರ ನಂತರ, 8 ವರ್ಷಗಳು ಕಳೆದ ನಂತರ, ನಾರಾಯಣನ್ ಅವರನ್ನು 1954 ರಲ್ಲಿ ಜೈ ಲಿ ನಿಂ ದ ಬಿಡುಗಡೆ ಮಾಡಲಾಯಿತು. ಜೈ ಲಿ ನಿಂದ ಹೊರಬಂದ ನಂತರ ನಾರಾಯಣನ್ ಕೂಡ ಎರಡನೇ ಮದುವೆಯಾದರು. ಶಾರದಾ ತನ್ನ ಮಗನಿಗೆ ತನ್ನ ಮೊದಲ ಮದುವೆಯ ಬಗ್ಗೆ ಹೇಳುತ್ತಾ ಆಕೆ ತನ್ನ ಮೊದಲ ಪತಿ ನಾರಾಯಣರನ್ನು ಭೇಟಿಯಾಗಬೇಕೆಂಬ ಬಯಕೆ ವ್ಯಕ್ತಪಡಿಸುತ್ತಾಳೆ.
ಭಾರ್ಗವನ್‌ಗೆ ತನ್ನ ತಾಯಿಯ ಮೊದಲ ಮದುವೆಯ ಬಗ್ಗೆ ಎಲ್ಲವೂ ತಿಳಿದಿತ್ತು ಮತ್ತು ನಾರಾಯಣನ್ ಅವರ ಕೆಲ ಸಂಬಂಧಿಕರನ್ನೂ ಆತ ಭೇಟಿಯಾಗಿದ್ದ. ನಾರಾಯಣ್ ಇನ್ನೂ ಜೀ ವಂ ತ ವಾಗಿದ್ದಾನೆ ಎಂಬ ಸುದ್ದಿ ಈ ಸಂಬಂಧಿಕರಿಂದ ಭಾರ್ಗವನ್‌ಗೆ ಸಿಕ್ಕಿತು.
ನಾರಾಯಣನ್ ಶಾರದಾ ಅವರನ್ನು ಭೇಟಿಯಾಗಲು ಬಯಸುತ್ತಿದ್ದಾರೆ ಎಂಬ ಪ್ರಸ್ತಾವನೆಯ ಬಗ್ಗೆ ಭಾರ್ಗವನ್ ತನ್ನ ತಾಯಿಗೆ ತಿಳಿಸಿದಾಗ ಶಾರದಾ ಅವರನ್ನು ಭೇಟಿಯಾಗಲು ನಿರಾಕರಿಸಿದರು. ಆದರೆ ಸಾಕಷ್ಟು ವಿವರಿಸಿದ ನಂತರ, ಆಕೆ ಭೇಟಿಯಾಗಲು ಸಿದ್ಧಳಾದಳು. 72 ವರ್ಷಗಳ ಕಾಲ ಬೇರ್ಪಟ್ಟ ನಂತರ, ನಾರಾಯಣ್ ಮತ್ತು ಶಾರದಾಗೆ ಭೇಟಿಯಾಗುವ ಅವಕಾಶ ಸಿಕ್ಕಿತು. ಇಬ್ಬರೂ ಭೇಟಿಯಾದಾಗ ಮೌನವಾಗೇ ಕುಳಿತಿದ್ದರು. ಅವರಿಬ್ಬರ ಕಣ್ಣಲ್ಲಿ ನೀರು ಇತ್ತು, ಬಹಳ ಸಮಯದವರೆಗೆ ಇಬ್ಬರೂ ಸುಮ್ಮನೇ ಕುಳಿತು ಬಳಿಕ ಇಬ್ಬರೂ ಮಾತನಾಡಿದರು. ಹೀಗೆ ತನ್ನ ತಂದೆ ಹಾಗು ತಾಯಿಯನ್ನ 72 ವರ್ಷಗಳ ಬಳಿಕ ಭೇಟಿ ಮಾಡಿಸಿದ ಸಾರ್ಥಕತೆ ಭಾರ್ಗವನ್ ಕಣ್ಣಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.