ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ವಾಸಿಸುತ್ತಿರುವ ಜನರ ಹಿತಾಸಕ್ತಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣದಿಂದಲೇ ಪ್ರಸ್ತುತ, ಪ್ರತಿ ರಾಜ್ಯದ ಮುಖ್ಯಮಂತ್ರಿಗಳು ಸಿಎಂ ಯೋಗಿ ಆದಿತ್ಯನಾಥ್ ಅವರ ಮಾರ್ಗವನ್ನು ಅನುಸರಿಸಲು ಬಯಸುತ್ತಾರೆ. ಯೋಗಿ ಆದಿತ್ಯನಾಥ್ ರವರ ಆಡಳಿತದಿಂದ ಉತ್ತರ ಪ್ರದೇಶದ ಜನರು ತುಂಬಾ ಸಂತುಷ್ಟರಾಗಿದ್ದಾರೆ. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಝೀರೋ ಟಾಲರೆನ್ಸ್ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ಇದರೊಂದಿಗೆ, ಅವರು ಅನಧಿಕೃತವಾಗಿ ವಶಪಡಿಸಿಕೊಂಡ ಭೂಮಿಯನ್ನು ತೆರವುಗೊಳಿಸುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಲಿಗಢದಿಂದ ಕಾನ್ಪುರದವರೆಗೆ ಜಿಟಿ ರಸ್ತೆ (GT Road from Aligarh to Kanpur) ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಬುಧವಾರ (ಸೆಪ್ಟೆಂಬರ್ 15, 2022), ಕಾನ್ಪುರ ಪೊಲೀಸರು ಮತ್ತು ಆಡಳಿತವು ಚೌಬೆಪುರ ಮತ್ತು ಶಿವರಾಜಪುರ ನಡುವಿನ ಮಜಾರ್ನ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ಕೆಡವಿದ್ದಾರೆ. ಹೆದ್ದಾರಿ ಅಗಲೀಕರಣಕ್ಕೆ ಈ ಅಕ್ರಮ ಮಜಾರ್ ಅಡ್ಡಿಯಾಗಿತ್ತು ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ, ಅಲಿಗಢ ಮತ್ತು ಕಾನ್ಪುರವನ್ನು ಸಂಪರ್ಕಿಸುವ ಸಿಕ್ಸ್ ಲೇನ್ ಹೈವೇ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. NHAI ಈ ಕೆಲಸವನ್ನು ಅಕ್ಟೋಬರ್ 2023 ರೊಳಗೆ ಪೂರ್ಣಗೊಳಿಸಲು ಯೋಜಿಸಿದೆ. ಚೌಬೆಪುರ ಮತ್ತು ಶಿವರಾಜಪುರದ (Chaubepur and Shivrajpur) ನಡುವೆ ಇರುವ ಮರಿಯಾನಿ ಗ್ರಾಮದಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಮಜಾರೊಂದು ಅಡ್ಡಿಯಾಗಿತ್ತು. ಎರಡು ತಿಂಗಳಿನಿಂದ ಅದನ್ನು ತೆಗೆಯಲು ಆಡಳಿತ ಮಂಡಳಿ ಪ್ರಯತ್ನಿಸುತ್ತಿದ್ದರೂ ಗ್ರಾಮದ ಮುಸಲ್ಮಾನರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ಮಜಾರ್ನ ಸಂರಕ್ಷನನ್ನ ಬುಧವಾರ (14 ಸೆಪ್ಟೆಂಬರ್ 2022) ಬಿಲ್ಹೌರ್ ಎಸ್ಡಿಎಂ ಅಲ್ಕಾ ಲಾಂಬಾ (Bilhaur SDM Alka Lamba) ನೇತೃತ್ವದಲ್ಲಿ ಕರೆಯಲಾಯಿತು. ಅವರ ಸಮ್ಮುಖದಲ್ಲಿ ಮಜಾರ್ನ್ನ ಶಾಂತಿಯುತವಾಗಿ ತೆಗೆದುಹಾಕಲಾಯಿತು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮಜಾರ್ ತೆರವು ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಎಸ್ಡಿಎಂ ಅಲ್ಕಾ ಲಾಂಬಾ ತಿಳಿಸಿದ್ದಾರೆ.
UP के कानपुर में मजार पर चला बुलडोजर, NH-91 के निर्माण के बीच में आ रही थी मजार. pic.twitter.com/IppENMzQQP
— Shivam Pratap Singh (@journalistspsc) September 14, 2022
ಎರಡು ತಿಂಗಳ ಹಿಂದೆ ಜಿಲ್ಲಾಡಳಿತದ ವತಿಯಿಂದ ಗೋರಿ ಕೆಡವುವ ಪ್ರಯತ್ನ ನಡೆದಿತ್ತು. ಇದನ್ನು ತೆರವುಗೊಳಿಸುವ ಬಗ್ಗೆ ಸಂಬಂಧಪಟ್ಟ ಸಮುದಾಯದವರಿಂದ (ಮುಸ್ಲಿಮರಿಂದ) ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೆದ್ದಾರಿ ಅಗಲೀಕರಣಕ್ಕಾಗಿ ಈ ಮಜಾರ್ ಕೆಡವುವುದು ಅವರಿಗೆ ಇಷ್ಟವಿರಲಿಲ್ಲ. ಇದಾದ ಬಳಿಕ ಜಿಟಿ ರಸ್ತೆ ಅಗಲೀಕರಣ ಕಾಮಗಾರಿ ಕೆಲಕಾಲ ಸ್ಥಗಿತಗೊಂಡಿತ್ತು. ಈ ಮಜಾರ್ನ್ನ ಐವತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಈ ಬಾರಿ ಸಭೆ ನಡೆಸಿ ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಯಾಗುತ್ತಿರುವ ಗೋರಿ ತೆಗೆಯಲು ಆಡಳಿತ ಮಂಡಳಿ ಯೋಜನೆ ರೂಪಿಸಿತ್ತು. ಎಎಸ್ಪಿ ಔಟರ್ ವಿಜೇಂದ್ರ ದ್ವಿವೇದಿ ಮತ್ತು ಎಸ್ಡಿಎಂ ಅಲ್ಕಾ ಲಾಂಬಾ ಸ್ಥಳಸ ಪೋಷಕರನ್ನು ಭೇಟಿ ಮಾಡಿ ಮಜಾರ್ ಕೆಡವುವಿಕೆಯ ಬಗ್ಗೆ ತಿಳಿಸಿದರು. ಇದಾದ ಬಳಿಕ ಯಾವುದೇ ಅಭ್ಯಂತರವಿಲ್ಲದೆ ಕೆಡವಲು ಅವಕಾಶ ನೀಡಿದರು.
ಕಳೆದ ವರ್ಷ ರೇಲ್ವೆ ಜಾಗದಲ್ಲಿ ಅತಿಕ್ರಮಣ ಮಾಡಿಕೊಂಡ ಮಜಾರ್, ಕಬ್ರ್ ಗಳನ್ನ ಕಿತ್ತೆಸೆಯಲು ಆದೇಶ ಹೊರಡಿಸಿದ್ದ ಯೋಗಿ ಆದಿತ್ಯನಾಥ್ ಸರ್ಕಾರ
ಮಜಾರ್ ಹಾಗು ಮಕಬರಾಗಳ ಲಿಸ್ಟ್ ಕೇಳಿದ ಉ.ಪ್ರ ಸರ್ಕಾರ
ಉತ್ತರ ರೈಲ್ವೆ ಬಹಳ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತ ಉತ್ತರಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮಜಾರ್ ಮತ್ತು ಮಕಬರಾಗಳ ಪಟ್ಟಿಯನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ನೀಡಿದೆ. ರಾಜ್ಯ ಸರ್ಕಾರಕ್ಕೆ ಪಟ್ಟಿಯನ್ನು ನೀಡುವಾಗ, ಭಾರತೀಯ ರೈಲ್ವೆಯ ಕಾರ್ಯಾಚರಣೆಯಲ್ಲಿ ಈ ಮಕಬರಾ, ಮಜಾರ್ ಗಳು ಸಮಸ್ಯೆಗಳನ್ನು ಉಂಟುಮಾಡುತ್ತಿವೆ ಎಂದು ರೈಲ್ವೇ ಹೇಳಿದೆ. ಅನೇಕ ಹೊರಗಿನವರು ರೈಲು ನಿಲ್ದಾಣದಲ್ಲಿ ಡೇರೆಗಳನ್ನು ಹಾಕಿಕೊಂಡು ನೆಲೆಸುತ್ತಾರೆ, ಇದರಿಂದಾಗಿ ಪ್ರಯಾಣಿಕರು ಅನಾನುಕೂಲತೆಯನ್ನು ಅನುಭವಿಸುತ್ತಾರೆ. ಈ ಮಕಬರಾ ಮತ್ತು ಮಜಾರ್ ಗಳನ್ನ ಅಲ್ಲಿಂದ ತೆಗೆದರೆ ಇದು ರೈಲ್ವೆಯ ಸರಿಯಾದ ಕಾರ್ಯಾಚರಣೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
Megh Updates ಎಂಬ ಟ್ವಿಟ್ಟರ್ ಹ್ಯಾಂಡಲ್ ನಿಂದ ಮಾಹಿತಿ
ಈ ಬಗ್ಗೆ ಮಾಹಿತಿಯನ್ನು ನೀಡುತ್ತಾ, ಮೇಘ್ ಅಪ್ಡೇಟ್ಸ್ ಎಂಬ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಒಂದು ಟ್ವೀಟ್ನಲ್ಲಿ “ರೇಲ್ವೇ ಇಲಾಖೆ ಉತ್ತರಪ್ರದೇಶ ರೇಲ್ವೇ ಸ್ಟೇಷನ್ ಪ್ಲಾಟ್ಫಾರ್ಮ್ಗಳಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ ಮಕಬರಾ, ಮಜಾರ್ ಇತ್ಯಾದಿಗಳ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ” ಎಂದು ತಿಳಿಸಿದೆ. ನಿಸ್ಸಂಶಯವಾಗಿ, ಅನೇಕ ರೈಲ್ವೇ ನಿಲ್ದಾಣಗಳ ಬದಿಯಲ್ಲಿ ಗೋರಿಗಳು ಮತ್ತು ಸಮಾಧಿಗಳು ಇವೆ, ಇದರಿಂದಾಗಿ ಪ್ರಯಾಣಿಕರಲ್ಲಿ ಸಮಸ್ಯೆ ಉಂಟಾಗಿದೆ ಮತ್ತು ರೈಲ್ವೇಯ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.
ಯೋಗಿ ಸರ್ಕಾರದ ಕ್ರಮಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಶ್ಲಾಘನೆ
ರಾಮ್ ಕಪೂರ್ ಎಂಬ ಟ್ವಿಟರ್ ಬಳಕೆದಾರರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಈ ನಿರ್ಧಾರವನ್ನು ಸ್ವಾಗತಿಸಿದರು ಮತ್ತು “ಯುವಕರೇ ಸಿದ್ಧರಾಗಿ, ಯೋಗಿ ಹೈ ಟು ಮುಮ್ಕಿನ್ ಹೈ” ಎಂದಿದ್ದಾರೆ
ಪೂಜಾ ಎಂಬ ಇನ್ನೊಬ್ಬ ಬಳಕೆದಾರರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡುತ್ತ “ಸ್ವಚ್ಛ ಪ್ಲಾಟ್ಫಾರ್ಮ್ ಅಭಿಯಾನವು ಈಗ ಯೋಗಿ ಜಿ ಅಡಿಯಲ್ಲಿ ಆರಂಭವಾಗಲಿದೆ” ಎಂದು ಬರೆದಿದ್ದಾರೆ.
Swatch platform abhiyaan shuru hoga ab Yogiji ki chatra chaya main 😂😂😂
— Pooja 🇮🇳 (@beyoond_starz) August 12, 2021