VIDEO| ಶಾರುಖ್ ಖಾನ್ ಮಗ ಆಯ್ತು ಈಗ ತಡರಾತ್ರಿ ಸೈಫ್ ಅಲಿ ಖಾನ್ ಮಗಳು ಮಾಡಿದ ಅಸಹ್ಯ ಕೆಲಸವೇನು ನೋಡಿ: ‘ಯುವ ಪೀಳಿಗೆಯನ್ನ ದಾರಿತಪ್ಪಿಸುತ್ತಿವೆ ಈ ನಾಲಾಯಕರು’ ಎಂದ ಜನ

in Uncategorized 362 views

ನಟಿ ಸಾರಾ ಅಲಿ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ನಿಲ್ಲಲೂ ಸಾಧ್ಯವಾಗದೇ ತೂರಾಡುತ್ತಿದ್ದಾರೆ. ವೀಡಿಯೋ ನೋಡಿದ ನಂತರ, ನಟಿ ಸಂಪೂರ್ಣವಾಗಿ ನಶೆಯಲ್ಲಿದ್ದಾರೆ, ಆದ್ದರಿಂದ ಆಕೆಯ ಕಾಲುಗಳು ನಡುಗುತ್ತಿವೆ ಎಂದು ಜನರು ಹೇಳುತ್ತಿದ್ದಾರೆ. ಇದು ತಡ ರಾತ್ರಿ ಸಮಯದ ವೀಡಿಯೊವಾಗಿದ್ದು, ಇದರಲ್ಲಿ ಸಾರಾ ಅಲಿ ಖಾನ್ ಸ್ನೇಹಿತೆಯ ಬೆಂಬಲದೊಂದಿಗೆ ರಸ್ತೆಯಲ್ಲಿ ನಡೆಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನೋಡುತ್ತಲೇ ಜನ ಬಾಲಿವುಡ್‌ನವರನ್ನ ‘ಡ್ರಗ್‌ವುಡ್‌’ ಎಂದು ಕರೆಯುತ್ತಿದ್ದಾರೆ.

ಸಾರಾ ಅಲಿ ಖಾನ್ ತನ್ನ ಕೈಗಳನ್ನು ತೋರಿಸಿ ಅಸ್ಪಷ್ಟ ಭಾಷೆಯಲ್ಲಿ ಏನನ್ನೋ ಹೇಳುತ್ತಾ ಮುಂದೆ ಹೋಗುತ್ತಿದ್ದರೂ ಛಾಯಾಗ್ರಾಹಕ ‘ಸಾರಾ ಜಿ, ವೇಟ್ ನೋ’ ಎಂದು ಹೇಳುತ್ತಿರುವುದನ್ನ ಈ ವೀಡಿಯೊದಲ್ಲಿ ಕಾಣಬಹುದು. ವಿಡಿಯೋದಲ್ಲಿ, ಅವರು ಕ್ಲಬ್‌ಗೆ ಪ್ರವೇಶಿಸುವುದನ್ನು ಕಾಣಬಹುದು, ಅಲ್ಲಿ ಈಗಾಗಲೇ ಕೆಲವು ಹುಡುಗಿಯರು ಇದ್ದಾರೆ. ಒಳಗೆ ಹೋಗುವಾಗ ಸಾರಾ ಅಲಿಖಾನ್ ಸೆಕ್ಯುರಿಟಿ ಗಾರ್ಡ್‌ನ ಕೈಯನ್ನು ಮುಟ್ಟಿದ ರೀತಿಯನ್ನ ನೋಡಿ ಜನರು ಆಕೆ ಕಂಠಮಟ್ಟ ಕುಡಿದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

Advertisement

ಈ ಸಮಯದಲ್ಲಿ ಸಾರಾ ಅಲಿ ಖಾನ್ ಸ್ನೇಹಿತೆ ಶರ್ಮಿಲ್ ಶೆಹಗಲ್ ಜೊತೆಗಿದ್ದರು. ಅವರು ನೀಲಿ ಬಣ್ಣದ ಜಂಪ್‌ಸೂಟ್‌ ಧರಿಸಿದ್ದರು. ಈ ವೀಡಿಯೋ ಮುಂಬೈನಲ್ಲಿರುವ ‘ಬಾಸ್ಟನ್’ ರೆಸ್ಟೋರೆಂಟ್‌ನದ್ದಾಗಿದ್ದು, ಇದು ಶುಕ್ರವಾರ (ಸೆಪ್ಟೆಂಬರ್ 16, 2022) ನಡೆದ ಘಟನೆಯಾಗಿದೆ. ವೀಡಿಯೊವನ್ನು ಹಂಚಿಕೊಂಡ ವರುಣ್ ಕಪೂರ್ ಎಂಬ ಯೂಸರ್, “ಬಾಯ್‌ಕಾಟ್ ಬಾಲಿವುಡ್ ಅಭಿಯಾನವನ್ನು ಏಕೆ ನಡೆಸಲಾಗುತ್ತಿದೆ ಎಂದು ಜನರು ಕೇಳುತ್ತಾರೆ. ಇಲ್ಲಿ ಇನ್ನೊಂದು ಕಾರಣವಿದೆ – ‘ಡ್ರಗಿವುಡ್’ ನಮ್ಮ ಮಕ್ಕಳು ಮತ್ತು ಯುವಕರನ್ನು ಹಾಳುಮಾಡುತ್ತಿದ್ದಾರೆ” ಎಂದು ಬರೆದಿದ್ದಾರೆ.

ಇದಕ್ಕೆ ಕಾರಣವನ್ನು ವಿವರಿಸಿದ ಅವರು, ಭವಿಷ್ಯದ ಪೀಳಿಗೆಯ ಜನರು ಸಾರಾ ಅಲಿ ಖಾನ್ ಅವರಂತಹ ಸೆಲೆಬ್ರಿಟಿಗಳನ್ನು ಅನುಸರಿಸುತ್ತಾರೆ, ಆದ್ದರಿಂದ ಅವರು ಹಾಳಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇಲ್ಲಿ ಕ್ಯಾಮರಾ ಇಲ್ಲದೇ ಇದ್ದಿದ್ದರೆ ಪಾಪ ಆ ಬಡಪಾಯಿ ಸೆಕ್ಯೂರಿಟಿ ಗಾರ್ಡ್ ಕೆಲಸ ಕಳೆದುಕೊಳ್ಳುತ್ತಿದ್ದ ಎಂದು ಒಬ್ಬ ಯೂಸರ್ ಬರೆದುಕೊಂಡಿದ್ದಾರೆ. ಸಾರಾ ಅಲಿ ಖಾನ್ ಅವರ ಈ ವೀಡಿಯೊಗೆ ಜನರು ‘ಪೀ ರಖಿ ಹೈ’, ‘ಟಲ್ಲಿ ಹೈ’, ‘ಓವರ್‌ಲೋಡ್ಡ್ ಡ್ರಂಕನ್’, ‘ನಶೆ ಮೆ ಧುತ್ತ್’ ಮತ್ತು ‘ಬೇವಡಿ’ ಎಂದು ಕಾಮೆಂಟ್ ಮಾಡಿದ್ದಾರೆ. ಸಾರಾ ಅಲಿ ಖಾನ್ ತಮ್ಮ ಮುಂಬರುವ ‘ಗ್ಯಾಸ್ಲೈಟ್’ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗಷ್ಟೇ ಶಾರುಖ್ ಖಾನ್ ಮಗನ ವಿಡಿಯೋ ಕೂಡ ಆಗಿತ್ತು ವೈರಲ್

ಬಾಲಿವುಡ್‌ನಲ್ಲಿ ತಡರಾತ್ರಿಯವರೆಗೆ ಪಾರ್ಟಿ ಮಾಡುವುದು, ಸ್ನೇಹಿತರೊಂದಿಗೆ ಸುತ್ತಾಡುವುದು ಮತ್ತು ಮೋಜು ಮಾಡುವುದು ತುಂಬಾ ಸರ್ವೇಸಾಮಾನ್ಯವಾಗಿದೆ.

ಕಳೆದ ವರ್ಷ, ಡ್ರಗ್ಸ್ ಕ್ರೂಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ನಂತರ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ನ್ನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಂಧಿಸಿತ್ತು, ಆದರೆ ಇತ್ತೀಚೆಗಷ್ಟೇ ಶಾರುಖ್ ಖಾನ್ ಅವರ ಮಗನಿಗೆ ಎನ್‌ಸಿಬಿ ಕ್ಲೀನ್ ಚಿಟ್ ನೀಡಿತ್ತು. ಇತ್ತೀಚೆಗಷ್ಟೇ ಕ್ಲೀನ್ ಚಿಟ್ ಪಡೆದ ಆರ್ಯನ್ ಖಾನ್‌ಗೆ ಜಪ್ತಾಗಿದ್ದ ಪಾಸ್ ಪೋರ್ಟ್ ಕೂಡ ವಾಪಸ್ ಬಂದಿದೆ. ಆದರೆ ಇದೀಗ ಆರ್ಯನ್ ಖಾನ್‌ನ ಮತ್ತೊಂದು ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಆರ್ಯನ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದಾನೆ.

ಮೋಜು ಮಸ್ತಿ ಮಾಡುತ್ತ ಕಂಡುಬಂದಿದ್ದ ಆರ್ಯನ್ ಖಾನ್

ಸದಾ ಚರ್ಚೆಯಲ್ಲಿರುವ ಸ್ಟಾರ್ ಕಿಡ್ಸ್ ಗಳಲ್ಲಿ ಆರ್ಯನ್ ಖಾನ್ ಕೂಡ ಒಬ್ಬನು. ಇಂಥವರ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿಷಯವನ್ನೂ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಬಯಸುತ್ತಾರೆ. NCB ಯಿಂದ ಕ್ಲೀನ್ ಚಿಟ್ ಪಡೆದ ನಂತರ, ಸಂಪೂರ್ಣ 1 ವರ್ಷದ ನಂತರ ಆರ್ಯನ್ ಖಾನ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ, ಈಗ ಆರ್ಯನ್ ಖಾನ್ ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಆರ್ಯನ್ ಖಾನ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಮತ್ತೆ ಕ್ಲಬ್‌ಗೆ ಹೋಗಿದ್ದಾನೆ. ಕ್ಲಬ್‌ನಲ್ಲಿ ಪಾರ್ಟಿ ಮಾಡುತ್ತಿರುವ ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ಅಭಿಮಾನಿಗಳ ಸಂಘವು Instagram ನಲ್ಲಿ ಹಂಚಿಕೊಂಡಿದೆ.

ವಿಡಿಯೋ ನೋಡಿ

ವೀಡಿಯೊದಲ್ಲಿ, ಆರ್ಯನ್ ಖಾನ್ ಕ್ಲಬ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಸಮಯವನ್ನು ಕಳೆಯುತ್ತಿದ್ದಾನೆ. ಅಷ್ಟೇ ಅಲ್ಲ, ಆರ್ಯನ್ ಇದರಲ್ಲಿ ಸ್ನೇಹಿತರ ಜೊತೆ ಡ್ರಿಂಕ್ಸ್ ಎಂಜಾಯ್ ಮಾಡುತ್ತಿದ್ದಾನೆ. ಆರ್ಯನ್ ಖಾನ್‌ನ ಈ ವಿಡಿಯೋಗೆ ಅಭಿಮಾನಿಗಳು ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಕೆರಿಯರ್ ಬಗ್ಗೆಯೂ ಯೋಚಿಸುತ್ತಿದ್ದಾನಂತೆ

ಆರ್ಯನ್ ಖಾನ್ ಅವರ ಈ ವೈರಲ್ ವೀಡಿಯೊಗೆ ಶಾರುಖ್ ಖಾನ್ ಮತ್ತು ಅವರ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಆರ್ಯನ್ ತನ್ನ ಜೀವನವನ್ನು ಮರಳಿ ಟ್ರ್ಯಾಕ್‌ಗೆ ತರಲು ತನ್ನ ವರ್ಕ್ ಫ್ರಂಟ್ ಬಗ್ಗೆಯೂ ಸಂಪೂರ್ಣ ಗಮನವನ್ನು ಹರಿಸುತ್ತಿದ್ದಾನೆ ಎಂದು ಶಾರುಖ್ ಹೇಳಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸುವ ವೆಬ್ ಸೀರೀಸ್‌ನ್ನ ಅವರು ಶೀಘ್ರದಲ್ಲೇ ನಿರ್ದೇಶಿಸಲಿದ್ದಾರೆ. ಇದರೊಂದಿಗೆ, ಆರ್ಯನ್ ಅವರು ಕೆಲಸ ಮಾಡಲು ಬಯಸುವ ಅಮೆಜಾನ್ ಪ್ರೈಮ್ ವೀಡಿಯೊಗೆ ಕಾರ್ಯಕ್ರಮಕ್ಕಾಗಿ ತಮ್ಮ ಸ್ಕ್ರಿಪ್ಟ್ ಅನ್ನು ಸಹ ಕಳುಹಿಸಿದ್ದಾರೆ. ವಾಸ್ತವವಾಗಿ, ಆರ್ಯನ್ ಖಾನ್ ತನ್ನ ತಂದೆಯಂತೆ ತೆರೆಯ ಮೇಲೆ ಕೆಲಸ ಮಾಡುವ ಬದಲು ತೆರೆಯ ಹಿಂದೆ ಕೆಲಸ ಮಾಡಲು ಬಯಸುತ್ತಾನಂತೆ. ಹಾಗಾಗಿ ಬರವಣಿಗೆ ಮತ್ತು ನಿರ್ದೇಶನದಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ನಿರ್ಧರಿಸಿದ್ದಾನಂತೆ

Advertisement
Share this on...