Zomato ದಿಂದ ಊಟ ಡೆಲಿವರಿ ಮಾಡಲು ಬಂದಿದ್ದ 40 ವರ್ಷದ ರಯೀಸ್ ಶೆಖ್, ಊಟ ಪಡೆಯಲು ಬಂದ 19 ವರ್ಷದ ಯುವತಿಯನ್ನ ನೋಡುತ್ತಲೇ ಅಸಹ್ಯ ಕೃತ್ಯವೆಸಗಿದ ಶೇಖ್ ಮಾಡಿದ್ದೇನು ನೋಡಿ

in Kannada News/News 2,406 views

ಮಹಾರಾಷ್ಟ್ರದ ಪುಣೆಯ ಯುವತಿಗೆ ಬಲವಂತವಾಗಿ ಚುಂಬಿಸಿದ ಝೊಮಾಟೊ ಡೆಲಿವರಿ ಬಾಯ್‌ನನ್ನು (Zomato Delivery Boy) ಬಂಧಿಸಲಾಗಿದೆ. ಈ ಘಟನೆ ಯೆವಲೆವಾಡಿ (Tewalewadi) ಯಲ್ಲಿ ನಡೆದಿದೆ. ಜೊಮಾಟೊ ಡೆಲಿವರಿ ಬಾಯ್ ಹೆಸರು 40 ವರ್ಷದ ರಯೀಸ್ ಶೇಖ್ ಎಂಬುದಾಗಿದೆ. 19 ವರ್ಷದ ಯುವತಿಯ ದೂರಿನ ಆಧಾರದ ಮೇಲೆ ಕೋಂಡ್ವಾ ಪೊಲೀಸ್ ಠಾಣೆಯ ಪೋಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಯುವತಿ ಯೆವಲೆವಾಡಿ ಪ್ರದೇಶದ ಹೆಸರುವಾಸಿಯಾದ ಸೊಸೈಟಿಯಲ್ಲಿ ವಾಸಿಸುತ್ತಿದ್ದಾಳೆ. ತಾನು ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಕೊಂಡ್ವಾದ ಕಾಲೇಜೊಂದರಲ್ಲಿ ಓದುತ್ತಿರುವುದಾಗಿ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾಳೆ. ಸೆಪ್ಟೆಂಬರ್ 17 ರ ರಾತ್ರಿ 9:30 ರ ಸುಮಾರಿಗೆ ಅವರು Zomato ನಿಂದ ಫುಟ್ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ಫುಡ್‌ನೊಂದಿಗೆ ಆಕೆಯ ಅಪಾರ್ಟ್ ಮೆಂಟ್ ತಲುಪಿದ ತಕ್ಷಣ ಆಕೆಗೆ ಕುಡಿಯಲು ನೀರು ಕೇಳಿದ್ದಾನೆ. ನೀರು ತಂದ ತಕ್ಷಣ ಕುಟುಂಬ ಸದಸ್ಯರ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ಆಕೆ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದು, ಸದ್ಯ ಅವರು ಹೊರಗೆ ಹೋಗಿದ್ದಾರೆ ಎಂದು ಯುವತಿ ಡೆಲಿವರಿ ಬಾಯ್‌ಗೆ ಹೇಳಿದ್ದಾಳೆ.

ಯುವತಿ ಫ್ಲ್ಯಾಟ್‌ನಲ್ಲಿ ಒಬ್ಬಳೇ ಇದ್ದಾಳೆ ಎಂಬ ವಿಷಯ ತಿಳಿದ ರೈಸ್ ಶೇಖ್ ಮತ್ತೆ ಒಂದು ಲೋಟ ನೀರು ಕೊಡಿ ಎಂದು ಆಕೆಯ ಕೈ ಹಿಡಿದು ಎಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಧನ್ಯವಾದ ಹೇಳುವಂತೆ ನಟಿಸುತ್ತಾ ಹುಡುಗಿಯ ಕೆನ್ನೆಗೆ ಎರಡು ಬಾರಿ ಮುತ್ತಿಟ್ಟಿದ್ದಾನೆ. ಹೊರಡುವಾಗ ಆ ಯುವತಿಗೆ ತಾನು ಆಕೆಯ ಚಿಕ್ಕಪ್ಪನಿದ್ದಂತೆ ಎಂದು ಹೇಳಿದ. ಆಕೆಗೆ ಯಾವುದೇ ರೀತಿಯ ಸಹಾಯದ ಅಗತ್ಯವಿದ್ದರೂ, ತನ್ನೊಂದಿಗೆ ಮಾತನಾಡಬಹುದು, ಯಾವುದೇ ಹಿಂಜರಿಕೆ ಬೇಡ ಎಂದಿದ್ದಾನೆ. ಇದಾದ ನಂತರ ರಯೀಸ್ ಶೇಖ್ ಯುವತಿಯ ವಾಟ್ಸಾಪ್ ನಂಬರ್‌ಗೆ ಮೆಸೇಜ್ ಮಾಡಲು ಪ್ರಾರಂಭಿಸಿದನು, ಆತನ ಈ ಕೃತ್ಯದಿಂದ ಯುವತಿ ತುಂಬಾ ಹೆದರಿದ್ದಳು.

ಸಂತ್ರಸ್ತೆಯ ಪ್ರಕಾರ, ಮೊದಲಿಗೆ ಆಕೆ ಶೇಖ್ ವಿರುದ್ಧ ದೂರು ನೀಡಲು ಹಿಂಜರಿದಳು, ಆದರೆ ಅವನು ಪದೇ ಪದೇ ಮೆಸೇಜ್ ಕಳುಹಿಸಲು ಪ್ರಾರಂಭಿಸಿದಾಗ ಆಕೆ ಕೊಂಡ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸರ್ದಾರ್ ಪಾಟೀಲ್ ತಿಳಿಸಿದ್ದಾರೆ.

ಪುಣೆಯಲ್ಲಿ ನಡೆದ ಈ ಘಟನೆ ಮತ್ತೊಮ್ಮೆ ಮಹಿಳೆಯರ ಭದ್ರತೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಫುಡ್ ಡೆಲಿವರಿ ಅಪ್ಲಿಕೇಶನ್‌ಗಳ ಮೂಲಕ ಫುಡ್ ಆರ್ಡರ್ ಮಾಡಲಾಗುತ್ತದೆ. ಪ್ರಶ್ನೆಯೆಂದರೆ, ಫುಡ್ ಡೆಲಿವರಿ ಅಪ್ಲಿಕೇಶನ್ ಕಂಪನಿಗಳು ತಮ್ಮ ಉದ್ಯೋಗಿಗಳ ದಾಖಲೆಗಳನ್ನು ಪರಿಶೀಲಿಸುತ್ತವೆಯೇ? ಅಲ್ಲದೆ, ಈ ಉದ್ಯೋಗಿಗಳ ಹಿನ್ನೆಲೆ ಮತ್ತು ವಿವರಗಳು ಅವರಿಗೆ ತಿಳಿದಿದೆಯೇ? ಎಂಬುದು ಇದೀಗ ಜನ ಇಂತಹ ಕಂಪೆನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement
Share this on...