ಶ್ರದ್ಧಾ ಹ#ತ್ಯೆ ಪ್ರಕರಣದಲ್ಲಿ ವಿಚಾರಣೆಯಲ್ಲಿ ಅಫ್ತಾಬ್ ಬಾಯಿ ಬಿಡುತ್ತಿರುವ ಸ್ಪೋಟಕ ಮಾಹಿತಿ ಪ್ರಕರಣವನ್ನ ಭೇದಿಸುವುದು ಬಿಡಿ ಪ್ರಕರಣವನ್ನ ಮತ್ತಷ್ಟು ಜಟಿಲಗೊಳಿಸುತ್ತಿದೆ. ಅಫ್ತಾಬ್‌ನ ಪ್ರತಿ ಉತ್ತರವೂ ನೇರವಾಗಿ ಪೊಲೀಸರನ್ನು ತಲುಪುತ್ತಿದ್ದಂತೆ, ಅವರು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ದೆಹಲಿ ಪೊಲೀಸರು ಅಫ್ತಾಬ್‌ಗೆ ನಾರ್ಕೊ ಪರೀಕ್ಷೆ (Narco Test) ನಡೆಸಲಿದ್ದಾರೆ. ಈಗ ಒಂದೆಡೆ ಅಫ್ತಾಬ್ ಜಾತಕದ ತನಿಖೆ ನಡೆಯುತ್ತಿದ್ದರೆ ಮತ್ತೊಂದೆಡೆ ಶ್ರದ್ಧಾಳ ವೈಯಕ್ತಿಕ ಬದುಕನ್ನು ಅರಿಯುವ ಪ್ರಯತ್ನವೂ ನಡೆದಿದೆ. ಈ ಸಂಚಿಕೆಯಲ್ಲಿ ಶ್ರದ್ಧಾಳ ಮೇ 4 ರ ಚಾಟ್ ಬೆಳಕಿಗೆ ಬಂದಿದೆ, ಅಂದರೆ ಆಕೆ ಸಾಯುವ 14 ದಿನಗಳ ಮೊದಲು ಆಕೆ ನಡೆಸಿದ್ದ ಚಾಟ್ ಬೆಳಕಿಗೆ ಬಂದಿದೆ.
ಶ್ರದ್ಧಾ ಮೇ 4 ರಂದು ತನ್ನ ಒಬ್ಬ ಸ್ನೇಹಿತೆಗೆ ಮೆಸೇಜ್ ಕಳುಹಿಸಿದ್ದಳು. ಈ ಮೆಸೇಜ್ ಆಕೆಯೇ ಮಾಡಿದ್ದ ರೀಲ್‌ನ ಕುರಿತಾಗಿತ್ತು. ಬನ್ನಿ ಮೊದಲು ಆ ಚಾಟ್ ನ್ನ ಒಮ್ಮೆ ಓದಿ, ನಂತರ ಮುಂದಿನ ಘಟನಾವಳಿಗಳ ಬಗ್ಗೆ ಅರ್ಥಮಾಡಿಕೊಳ್ಳಿ.
ಶೃದ್ಧಾ- ಐ ನೀಡ್ ಹೆಲ್ಪ್
ಫ್ರೆಂಡ್- ಏನಾಯ್ತು? ಹೇಳು
ಶೃದ್ಧಾ- ನನ್ನ ರೀಲ್ ಒಂದರ ಮೇಲೆ ನೀನು ಫೀಡ್‌ಬ್ಯಾಕ್ ಕೊಡಬಹುದಾ? ಇದರಲ್ಲಿ ಏನಾದರೂ ಬದಲಾವಣೆ ಮಾಡಬೇಕಾ?
ಫ್ರೆಂಡ್- ಇಷ್ಟೇನಾ?
ಶೃದ್ಧಾ- ಹಾಂ, ಇಷ್ಟೇ
ಪೊಲೀಸರನ್ನು ಚಿಂತೆಗೀಡುಮಾಡುತ್ತಿವೆ ಅಫ್ತಾಬ್‌ನ ನೇರಾನೇರ ಉತ್ತರಗಳು
ಮೇಲಿನ ಚಾಟ್ ನೋಡಿದರೆ ನಿಮಗೆ ಇದರಲ್ಲಿ ಅಂಥದ್ದೇನೂ ವಿಚಿತ್ರ ಸಂಗತಿಯಿದೆ, ಚಾಟ್ ಸರಿಯಾಗೇ ಇದೆ ಅಲ್ವಾ ಅಂತ ಅನಿಸುತ್ತಿರಬಹುದು. ಆದರೆ ಈ ಚಾಟ್‌ನ 14 ದಿನಗಳ ಬಳಿಕ ಶೃದ್ಧಾ ಹ#ತ್ಯೆಗೀಡಾಗುವ ಅಂಥದ್ಯಾವ ಘಟನೆ ನಡೆದಿರಬಹುದು? ಈ ಚಾಟ್ ನಾರ್ಮಲ್ ಚಾಟ್ ಥರ ಇದ್ದು, ಮುಂದಾಗಲಿರುವ ಪ್ರಮುಖ ಘಟನೆಯ ಯಾವುದೇ ಸೂಚನೆಯ ಸುಳಿವು ಸಿಗದಿದ್ದುದ್ದೇ ಒಂದು ದೊಡ್ಡ ಪ್ರಶ್ನೆಯಾಗಿದೆ. ಶ್ರದ್ಧಾ ಜೀವನದಲ್ಲಿ ಎಲ್ಲವೂ ಸರಿ ಇದ್ದಿದ್ದರೆ ಆಕೆ ತನ್ನ ಗೆಳತಿಯ ಜೊತೆ ತನ್ನ ರೀಲ್ ನ ಬಗ್ಗೆ ಯಾಕೆ ಮಾತನಾಡುತ್ತಿದ್ದಳು? ಶೃದ್ಧಾ ಆಗ ಅಷ್ಟು ಸಹಜವಾಗಿದ್ದಳೆಂದರೆ ಆಕೆಯ ಹ-ತ್ಯೆ ಆಗಿದ್ದಾದರೂ ಯಾಕೆ? ಎಂಬ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ ಆದರೆ ಇದಕ್ಕೆ ಉತ್ತರವನ್ನ ಪೊಲೀಸರೇ ಹುಡುಕಬೇಕಿದೆ.
ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಕೂಡ ಈ ಪ್ರಕರಣ ಅಂದುಕೊಂಡಷ್ಟು ಸುಲಭದ್ದಾಗಿಲ್ಲ ಎಂದು ಭಾವಿಸುತ್ತಿದ್ದಾರೆ. ಪ್ರತಿ ಪ್ರಶ್ನೆಗೂ ಅಫ್ತಾಬ್ ಉತ್ತರಿಸುತ್ತಿರುವ ಆತ್ಮವಿಶ್ವಾಸ ಪೊಲೀಸರನ್ನು ಇನ್ನಷ್ಟು ಕಾಡುತ್ತಿದೆ. ಅಸಲಿಗೆ ಅಫ್ತಾಬ್ ಹಲವು ಕ್ಲಿಷ್ಟ ಪ್ರಶ್ನೆಗಳಿಗೆ ನಿರ್ಭೀತಿಯಿಂದ ಉತ್ತರ ನೀಡುತ್ತಿದ್ದಾನೆ, ಆತನಿಗೆ ತಾನು ಕೊ-ಲೆ ಮಾಡಿದ್ದು ದೊಡ್ಡ ವಿಷಯವೇ ಅಲ್ಲ ಎಂಬುದು ಆತನ ಮಾತುಗಳಿಂದ ತೋರುತ್ತದೆ. ಪೊಲೀಸರು ಆತನ ಸ್ವಾಭಾವಿಕತೆಯನ್ನು ಅನುಮಾನಿಸುತ್ತಿದ್ದಾರೆ, ಆತನ ಅಪರಾಧಗಳನ್ನು ಸಾಕ್ಷ್ಯಗಳೊಂದಿಗೆ ನ್ಯಾಯಾಲಯಕ್ಕೆ ಹೇಗೆ ಹಾಜರುಪಡಿಸಬೇಕು ಎಂದು ಹೆಚ್ಚು ಚಿಂತಿಸುತ್ತಿದ್ದಾರೆ.
ಎಲ್ಲಿಯವರೆಗೆ ಬಂತು ಪ್ರಕರಣದ ತನಿಖೆ?
ಸದ್ಯಕ್ಕೆ ಪೊಲೀಸರು ಈ ಪ್ರಕರಣದ ತನಿಖೆಯನ್ನ ಹಲವು ದಿಕ್ಕುಗಳಲ್ಲಿ ನಡೆಸುತ್ತಿದ್ದಾರೆ. ಶ್ರದ್ಧಾ ಕುಟುಂಬದೊಂದಿಗೆ ನಿರಂತರ ಮಾತುಕತೆ ನಡೆಯುತ್ತಿದ್ದು, ಆಕೆಯ ತಂದೆಯ ಡಿಎನ್‌ಎ ಮಾದರಿಯನ್ನೂ ತೆಗೆದುಕೊಳ್ಳಲಾಗಿದೆ. ಶ್ರದ್ಧಾ ಅಫ್ತಾಬ್ ಜೊತೆ ವಾಸವಿದ್ದ ಮನೆಯಲ್ಲಿ ರ-ಕ್ತ-ದ ಕುರುಹುಗಳು ಪತ್ತೆಯಾಗಿದ್ದು, ಅದು ಯಾರ ರ-ಕ್ತ ಎಂದು ಪತ್ತೆ ಹಚ್ಚಲು ಪರೀಕ್ಷೆ ನಡೆಸಲಾಗುವುದು. ಇದಲ್ಲದೆ, ಪೊಲೀಸರು ಪ್ರಸ್ತುತ ಛತ್ತರ್‌ಪುರ ಪ್ರದೇಶದ ಸಿಸಿಟಿವಿ ಮ್ಯಾಪಿಂಗ್ ಮಾಡುತ್ತಿದ್ದಾರೆ. 6 ತಿಂಗಳ ಹಿಂದೆ ಕೊ-ಲೆ ನಡೆದಿದ್ದು, ಆ ಹಳೆಯ ಸಿಸಿಟಿವಿ ದಾಖಲೆಗಳನ್ನು ಹುಡುಕುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ 6 ತಿಂಗಳ ಹಿಂದಿನ ಹಳೆಯ ರೆಕಾರ್ಡಿಂಗ್‌ಗಳನ್ನು ಇಟ್ಟುಕೊಂಡಿರದ ಕಾರಣ ಅದೂ ಕೂಡ ಕಷ್ಟಕರವಾಗಬಹುದು. ಆದರೆ ಪೊಲೀಸರ ಪ್ರಯತ್ನ ನಡೆಯುತ್ತಿದೆ. ಇತ್ತೀಚಿನ ಕೆಲವು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಫ್ತಾಬ್ ಬಂದು ಹೋಗುತ್ತಿರುವುದನ್ನು ಕಾಣಬಹುದು. ಪೊಲೀಸರ ಪ್ರಕಾರ, ಈ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ, ಆತ ಈ ಹಿಂದೆ ಭೇಟಿಯಾದ ವ್ಯಕ್ತಿಗಳು, ಆತನ ಚಟುವಟಿಕೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು.
ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸುವುದರ ಜೊತೆ ಜೊತೆಗೆ ಪೊಲೀಸರು ಶ್ರದ್ಧಾ ತಂದೆಯನ್ನು ಪ್ರಶ್ನಿಸುತ್ತಿದ್ದಾರೆ, ಈಗ ಪೋಲಿಸರು ಶೃದ್ಧಾಳ ಸ್ನೇಹಿತರನ್ನೂ ಸಹ ತನಿಖೆಯ ಭಾಗವಾಗಿ ಮಾಡಬಹುದು. ಲಕ್ಷ್ಮಣ್ ಎಂಬಾತ ಅಫ್ತಾಬ್ ಮತ್ತು ಶ್ರದ್ಧಾಳ ಕಾಮನ್ ಫ್ರೆಂಡ್ ಆಗಿದ್ದು, ಆತನನ್ನೂ ವಿಚಾರಣೆಗೆ ಕರೆಯಲಾಗುವುದು ಎಂದು ಹೇಳಲಾಗುತ್ತಿದೆ. ಶೃದ್ಧಾಳನ್ನ ಕಾಂಟ್ಯಾಕ್ಟ್ ಮಾಡೋಕೆ ಸಾಧ್ಯವಾಗುತ್ತಿಲ್ಲ ಎಂದು ಇದೇ ಲಕ್ಷ್ಮಣ್ ಶ್ರದ್ಧಾಳ ತಂದೆಗೆ ಹೇಳಿದ್ದ. ಈ ಹ-ತ್ಯೆ-ಯ ಹಿಂದೆ ‘ದೊಡ್ಡ ಸಂಚು’ ಇರುವ ಶಂಕೆ ಶ್ರದ್ಧಾ ಸ್ನೇಹಿತೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಶ್ರದ್ಧಾ ತನಗೆ ಕರೆ ಮಾಡಿ ಅಫ್ತಾಬ್ ತನ್ನನ್ನು ಕೊ-ಲ್ಲು-ವುದಾಗಿ ಹೇಳಿದ್ದಳು ಎಂದು ಮತ್ತೊಬ್ಬ ಸ್ನೇಹಿತೆ ಹೇಳಿಕೊಂಡಿದ್ದಾರೆ.
ಪೊಲೀಸರಿಗೆ ಇನ್ನೂ ಕೆಲಸ ಬಾಕಿ ಇದೆ, ಶ್ರದ್ಧಾ ಶ-ವ-ವನ್ನು ತುಂಡರಿಸಿದ ಆಯುಧ ಇನ್ನೂ ಪತ್ತೆಯಾಗಿಲ್ಲ, ದೊಡ್ಡ ಸಾಕ್ಷಿಯಾಗಬಲ್ಲ ಶ್ರದ್ಧಾ ಮೊಬೈಲ್ ಕೂಡ ಇನ್ನೂ ಸಿಕ್ಕಿಲ್ಲ. ಶ್ರದ್ಧಾಳ ದೇಹದ ಹಲವು ಭಾಗಗಳೂ ಇನ್ನೂ ಪತ್ತೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರ ಮುಂದೆ ಸಮಯ ಕಡಿಮೆ ಆದರೆ ತನಿಖೆಗೆ ಮಾತ್ರ ಬೆಟ್ಟದಷ್ಟು ಉಳಿದಿದೆ.