Attack on Aftab Poonawalla: ಇಂದು ಕೆಲವರು ಶ್ರದ್ಧಾ ವಾಲ್ಕರ್ ನ್ನ 35 ತುಂ-ಡುಗಳಾಗಿ ಕ-ತ್ತರಿ-ಸಿದ ಆರೋಪಿ ಅಫ್ತಾಬ್ ಪೂನಾವಲಾನನ್ನ ತಿಹಾರ್ ಜೈಲಿಗೆ ಕೊಂಡೊಯ್ಯುತ್ತಿದ್ದಾಗ ಪೋಲಿಸ್ ವ್ಯಾನ್ ಮೇಲೆ ತಲ್ವಾರ್ ನಿಂದ ದಾ-ಳಿ ಮಾಡಿದ್ದಾರೆ. ಇಬ್ಬರು ದಾ-ಳಿ-ಕೋರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ, ಈ ಎಲ್ಲಾ ದಾ-ಳಿ-ಕೋರರು ಹಿಂದೂ ಸೇನೆಗೆ ಸಂಬಂಧಿಸಿದವರು ಎಂದು ಹೇಳಲಾಗಿದೆ, ಆದರೆ ಹಿಂದೂ ಸೇನೆಯು ದಾ-ಳಿ-ಕೋರರೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದೆ. ನಾವು ಕಾನೂನನ್ನು ಪಾಲಿಸುತ್ತೇವೆ. ದೆಹಲಿ ಪೊಲೀಸರು ಅಫ್ತಾಬ್ನನ್ನು ಎಫ್ಎಸ್ಎಲ್ ಕಟ್ಟಡಕ್ಕೆ ಕರೆದೊಯ್ದಾಗ ಈ ದಾ-ಳಿ ನಡೆದಿದೆ. ವ್ಯಾನ್ ತಲುಪಿದ ತಕ್ಷಣ, ಕೆಲವರು ಪೋಲಿಸ್ ವಾಹನವನ್ನ ಹಿಂದಿಕ್ಕಿ ತಮ್ಮ ವಾಹನವನ್ನ ಪೊಲೀಸ್ ವ್ಯಾನ್ ಮುಂದೆ ನಿಲ್ಲಿಸಿದರು.
ಇದಾದ ಬಳಿಕ ತಲ್ವಾರ್ ಗಳನ್ನ ಹೊರತೆಗೆದು ವ್ಯಾನ್ನಲ್ಲಿದ್ದ ಪೊಲೀಸ್ ಅಧಿಕಾರಿಗಳತ್ತ ತೋರಿಸಿದರು. ಅದಕ್ಕೆ ಪ್ರತಿಯಾಗಿ ಪೊಲೀಸ್ ಅಧಿಕಾರಿಯೂ ಪಿಸ್ತೂಲನ್ನು ಹೊರತೆಗೆದು ವೈಮಾನಿಕ ಗುಂಡು ಹಾರಿಸುವ ಸ್ಥಿತಿಗೆ ಬಂದರು. ಇದಾದ ನಂತರವೂ ದಾ-ಳಿ-ಕೋರರು ಹಿಂದೆ ಸರಿಯದೆ ಪೊಲೀಸ್ ಅಧಿಕಾರಿಗೆ ತಲ್ವಾರ್ ತೋರಿಸಿ ಬೆದರಿಸಿದ್ದಾರೆ.
ಚಾಲಕ ವ್ಯಾನ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಮೊದಲು, ದಾ-ಳಿ-ಕೋರರು ವ್ಯಾನಿನ ಹಿಂದಿನ ಬಾಗಿಲನ್ನು ತೆರೆದರು. ಇದೇ ವ್ಯಾನ್ನಲ್ಲಿ ಅಫ್ತಾಬ್ ಇದ್ದ. ದಾ-ಳಿ-ಕೋರರು ಬಾಗಿಲು ತೆರೆದು ಅವನನ್ನು ಕೊ-ಲ್ಲ-ಲು ಮುಂದಾದರು, ಅಫ್ತಾಬ್ ಜೊತೆ ವ್ಯಾನ್ನೊಳಗಿದ್ದ ಪೋಲೀಸ್ ದಾ-ಳಿ-ಕೋರರತ್ತ ಬಂದೂಕನ್ನು ತೋರಿಸಿದರು. ಇದರಿಂದಾಗಿ ದಾ-ಳಿ-ಕೋರರು ಹಿಂದೆ ಸರಿದರು. ಇದಾದ ಬಳಿಕ ಪೊಲೀಸ್ ವ್ಯಾನಿನ ಬಾಗಿಲು ಮುಚ್ಚಿ ವ್ಯಾನ್ ಮುಂದಕ್ಕೆ ಕೊಂಡೊಯ್ಯಲಾಯಿತು. ಈ ವೇಳೆಯೂ ದಾ-ಳಿ-ಕೋರರು ತಲ್ವಾರ್ ಗಳಿಂದ ವ್ಯಾನ್ ಮೇಲೆ ದಾ-ಳಿ ನಡೆಸುತ್ತಿದ್ದರು.
#KasamSamvidhaanKi: गाड़ी भरकर हथियार….कौन जिम्मेदार ? #ShraddhaMurderCase #Aftab #AttackOnAftab @aditi_tyagi @NeerajGaur_ pic.twitter.com/E6Etjw42a7
— Zee News (@ZeeNews) November 28, 2022
ಈತನ 70 ಪೀಸ್ ಮಾಡುತ್ತೇವೆ
ಪೊಲೀಸರ ಬಂಧನದ ಕುರಿತು ಝೀ ನ್ಯೂಸ್ ಜೊತೆ ಮಾತನಾಡಿದ ದಾ-ಳಿಕೋರರು, “ನಮಗೆ ಬಂಧಿಸಲು ಯಾವುದೇ ಸಮಸ್ಯೆ ಇಲ್ಲ. ನಾವು ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಉಳಿಸಬೇಕು. ಇದಕ್ಕಾಗಿ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕಾದರೂ ನಾವು ಮಾಡುತ್ತೇವೆ. ಬೆಳಗ್ಗೆಯಿಂದ ಇಲ್ಲಿಯೇ ಕುಳಿತು ಅವಕಾಶ ಹುಡುಕುತ್ತಿದ್ದೆವು” ಎಂದಿದ್ದಾರೆ.
ದಾ-ಳಿ-ಕೋರರಲ್ಲಿ ಒಬ್ಬ ಮಾತನಾಡುತ್ತ, “ನಾವು ರಾತ್ರಿ 11 ಗಂಟೆಗೂ ಬಂದಿದ್ದೆವು ಆದರೆ ಅಫ್ತಾಬ್ ಸಿಗಲಿಲ್ಲ. ಅಫ್ತಾಬ್ಗಾಗಿ ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದೆವು. ಇಂದು ಕೂಡ ಬೆಳಗ್ಗೆ 8ರಿಂದ ಇಲ್ಲಿಯೇ ಕುಳಿತಿದ್ದೇವು. ನಾವು ಅವನನ್ನ ಕ-ತ್ತ-ರಿಸಿ ಹಾಕುತ್ತೇವೆ, 10 ನಿಮಿಷಗಳ ಕಾಲ ನಿರೀಕ್ಷಿಸಿ ಆಮೇಲೆ ನೋಡೋಣ. ನಿಮ್ಮ ಸಂಬಂಧಿಕರೋ ಅಥವ ಅಕ್ಕ ತಂಗಿಯರನ್ನ ಯಾರಾದರೂ ಕೊಂ-ದರೆ, ನಿಮ್ಮ ಸಹೋದರ ಸೇಡು ತೀರಿಸಿಕೊಳ್ಳುವುದಿಲ್ಲವೇ?” ಎಂದಿದ್ದಾನೆ.
Attack on Aftab: आफताब पर तलवार से हमले की कोशिश, हमलावर बोले- श्रद्धा के 35 टुकड़े करने वाले के 70 टुकड़े करेंगे#DelhiCrime #DelhiPolice #Shraddha #crime #BREAKING_NEWS pic.twitter.com/DEtmEz5pTs
— Jaydeep Bhaliya (@bhaliya_jaydeep) November 28, 2022
“ಇಲ್ಲಿ ಅಫ್ತಾಬ್ಗಾಗಿ ಕಾಯುತ್ತಿದ್ದ ನಾವು 15 ಮಂದಿ. ಅವನು ನಮ್ಮ ಸಹೋದರಿಯನ್ನು 35 ತುಂ-ಡು-ಗಳಾಗಿ ಕ-ತ್ತ-ರಿಸಿದ್ದಾನೆ. ಈಗ ನಾವು ಅವನನ್ನು 70 ತುಂ-ಡು-ಗಳಾಗಿ ಕ-ತ್ತ-ರಿಸುತ್ತೇವೆ” ಎಂದು ಮತ್ತೊಬ್ಬ ದಾ-ಳಿ-ಕೋರ ಹೇಳಿದ್ದಾನೆ. ದಾ-ಳಿ-ಕೋರರು ಕಾರಿನಲ್ಲಿ ಇಲ್ಲಿಗೆ ಬಂದಿದ್ದು, ಅದರಲ್ಲಿ ಸುಮಾರು 10 ತಲ್ವಾರ್ ಗಳನ್ನ ಇರಿಸಲಾಗಿತ್ತು. ಇದಲ್ಲದೇ ಸುತ್ತಿಗೆಯನ್ನೂ ಅದರಲ್ಲಿ ಇಡಲಾಗಿತ್ತು ಎಂದು ವರದಿಯಾಗಿದೆ.