ಅಹಮದಾಬಾದ್ ಜಾಮಾ ಮಸೀದಿಯ ಶಾಹಿ ಇಮಾಮ್ ಶಬ್ಬೀರ್ ಅಹ್ಮದ್ ಸಿದ್ದಿಕಿ, “ಮು-ಸ್ಲಿಂ ಮಹಿಳೆಯರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದನ್ನ ವಿರೋಧಿಸಿ, ಅವರಿಗೆ ಎಲ್ಲರ ಮುಂದೆ ಸಾರ್ವಜನಿಕವಾಗಿ ಎಲ್ಲರೆದುರು ಬರಲು ಅನುಮತಿ ಇದ್ದಿದ್ದರೆ ಅವರನ್ನು ಮಸೀದಿಯಲ್ಲಿ ಬರೋದಕ್ಕೆ ತಡೆಯುತ್ತಿರಲಿಲ್ಲ”
ಮೌಲಾನಾ ರಾವ್ ಮುಷರಫ್ ಪ್ರಕಾರ ಮು-ಸ್ಲಿಂ ಮಹಿಳೆಯರು ಮಸೀದಿಗೆ ಹೋಗಬಹುದು. ಮು-ಸ್ಲಿಂ ಮಹಿಳೆಯರು ಮಸೀದಿಗೆ ಹೋಗದಿರಲು ಇಮಾಮ್‌ಗಳ ಕಿ-ರು-ಕುಳ ಮತ್ತು ಅವರ ಚೇಲಾಗಳಿಂದ ಅ-ತ್ಯಾ-ಚಾ-ರದ ಪ್ರಯತ್ನಗಳು ಕಾರಣ ಎಂದು ಅವರು ಹೇಳಿದ್ದಾರೆ. ಈ ಸಮಯದಲ್ಲಿ, ರಾವ್ ಮುಷರಫ್ ಅವರು ಶೇಖ್ ಹಸೀನಾ ಮತ್ತು ಬೆನಜೀರ್ ಭುಟ್ಟೊ ಅವರ ಉದಾಹರಣೆಗಳನ್ನೂ ನೀಡಿದರು. ದೇವಬಂದ್‌ನ ಮತ್ತೊಬ್ಬ ಉಲೇಮಾ ಖಾರಿ ಇಶಾಕ್ ಕೂಡ ಜಾಮಾ ಮಸೀದಿಯ ಇಮಾಮ್‌ನ ಹೇಳಿಕೆಯನ್ನು ಚುನಾವಣೆಯ ಸಮಯದಲ್ಲಿ ಹೇಳಿದ್ದಾಗಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಶಾಹಿ ಇಮಾಮ್ ಮೌಲಾನಾ ಶಬ್ಬೀರ್ ಅಹ್ಮದ್ ಸಿದ್ದಿಕಿ ಮಸೀದಿಗೆ ಮಹಿಳೆಯರ ಪ್ರವೇಶ ನಿಷಿದ್ಧ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮೌಲಾನಾ ರಾವ್ ಮುಷರಫ್, ಮಸೀದಿಗೆ ಮು-ಸ್ಲಿಂ ಮಹಿಳೆಯರ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದ್ದಾರೆ. ಮುಷರಫ್ ಪ್ರಕಾರ, ಮಹಿಳೆಯರು ಪುರುಷರೊಂದಿಗೆ ಹಜ್ ಹೋಗಬಹುದಾದರೆ ಅವರು ಮಸೀದಿಗೆ ಯಾಕೆ ಹೋಗಬಾರದು? ಎಂದಿದ್ದಾರೆ.
ಶಾಹಿ ಇಮಾಮ್ ಶಬ್ಬೀರ್ ಹೇಳಿಕೆಯನ್ನು ಟೀಕಿಸಿದ ರಾವ್ ಮುಷರಫ್, ಕುರಾನ್ ಮತ್ತು ಹದೀಸ್‌ನಲ್ಲಿ ಎಲ್ಲಿಯೂ ಮಹಿಳೆಯರಿಗೆ ಮಸೀದಿ ಪ್ರವೇಶಿಸುವುದನ್ನು ನಿಷೇಧಿಸಲಾಗಿಲ್ಲ ಎಂದು ಹೇಳಿದರು. ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ರಾವ್ ಮುಷರಫ್ ಮಾತನಾಡುತ್ತ, “ಮಸೀದಿಯ ಇಮಾಮ್ ಮಹಿಳೆಯರಿಗೆ ಕಿ-ರು-ಕುಳ ನೀಡುತ್ತಿದ್ದರು ಮತ್ತು ಅವರ ಚೇಲಾಗಳು ಮಹಿಳೆಯರ ಮೇ-ಲೆ ಅ-ತ್ಯಾ-ಚಾ-ರ ಮಾಡಲು ಪ್ರಯತ್ನಿಸಿದ್ದರಿಂದ ಮು-ಸ್ಲಿಂ ಮಹಿಳೆಯರು ಮಸೀದಿಗೆ ಹೋಗುವುದನ್ನು ನಿಲ್ಲಿಸಿದ್ದರು” ಎಂದಿದ್ದಾರೆ. ಬೆನಜೀರ್ ಭುಟ್ಟೊ ಮತ್ತು ಶೇಖ್ ಹಸೀನಾ ಅವರ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಇ-ಸ್ಲಾಂ-ನಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡದೇ ಇದ್ದಿದ್ದರೆ ಈ ಇಬ್ಬರು ಮಹಿಳೆಯರು ಹೇಗೆ ಪ್ರಧಾನಿ ಹುದ್ದೆಯನ್ನು ತಲುಪುತ್ತಿದ್ದರು ಎಂಬುದನ್ನು ವಿವರಿಸಿದರು.
ರಾವ್ ಮುಷರಫ್ ಅವರು ಇಮಾಮ್ ಶಬ್ಬೀರ್ ಅವರ ಹೇಳಿಕೆಯು ಪ್ರಚೋದನಕಾರಿ ಮತ್ತು ಅವರೊಬ್ಬ ಸಂಪ್ರದಾಯವಾದಿ ಮತ್ತು ಪ್ರತ್ಯೇಕತಾವಾದಿ ಎಂದು ಕರೆದರು. ಇಮಾಮ್ ಶಬ್ಬೀರ್ ಅವರಂತಹವರ ಮಾತುಗಳನ್ನು ನಿಷೇಧಿಸಬೇಕು ಎಂದರು. ಮುಷರಫ್ ಪ್ರಕಾರ, ಭಾರತೀಯ ಕಾನೂನು ಕೂಡ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಮು-ಸ್ಲಿಂ ಮಹಿಳೆಯರಿಗೆ ಮತದಾನದಿಂದ ಹಿಡಿದು ಚುನಾವಣೆಗೆ ಸ್ಪರ್ಧಿಸುವವರೆಗಿನ ಹಕ್ಕಿದೆ ಎಂದಿದ್ದಾರೆ.
ಮತ್ತೊಂದೆಡೆ, ದಿಯೋಬಂದ್‌ನೊಂದಿಗೆ ಸಂಬಂಧ ಹೊಂದಿರುವ ಖಾರಿ ಇಶಾಕ್ ಗೋರಾ, ಶಾಹಿ ಇಮಾಮ್ ಶಬ್ಬೀರ್ ಅವರ ಹೇಳಿಕೆಯನ್ನು ಅಸಂಬದ್ಧ ಎಂದು ಕರೆದಿದ್ದಾರೆ. ಇಮಾಮ್ ಶಬ್ಬೀರ್ ರಂಥವರು ತಾವು ಹೇಳಿಕೆ ನೀಡುವ ಮುನ್ನ ಯಾರಾದರೂ ಮುಫ್ತಿಗಳಿಂದ ಇ-ಸ್ಲಾಮಿ-ಕ್ ಮಾಹಿತಿಯನ್ನು ಲಿಖಿತವಾಗಿ ಪಡೆದರೆ ಉತ್ತಮ ಎಂದು ಅವರು ಹೇಳಿದರು. ಖಾರಿ ಇಶಾಕ್ ಪ್ರಕಾರ, ಇಮಾಮ್‌ನ ಇಂತಹ ಹೇಳಿಕೆಗಳು ಅನಗತ್ಯ ಚರ್ಚೆಯನ್ನು ಸೃಷ್ಟಿಸುತ್ತವೆ. ಇಶಾಕ್ ಜಮೀಯತ್ ದವತುಲ್ ಮುಸ್ಲಿಮೀನ್‌ನ ಪೋಷಕರೂ ಆಗಿದ್ದಾರೆ.