“ಕೊರೋನಾ ಹಬ್ಬಿಸಿದ್ದು ಅಮೇರಿಕಾ, ಹಣ, ಸೆಕ್ಯೂರಿಟಿ ಅಮೇರಿಕದ್ದು, ಲ್ಯಾಬ್ ಚೀನಾದ್ದು”: ಕೊರೋನಾ ಹೇಗೆ ಲೀಕ್ ಆಯ್ತು? ಕೊನೆಗೂ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ವಿಜ್ಞಾನಿಗಳು

in Uncategorized 929 views

ಕರೋನಾ ಹೇಗೆ ಹುಟ್ಟಿತು ಅಥವ ಅದರ ಮೂಲ ಯಾವುದು ಎಂಬುದರ ಬಗ್ಗೆ ಅನೇಕ ಅಂಶಗಳನ್ನ ಪ್ರತಿಪಾದನೆ ಮಾಡಲಾಗಿದೆ. ಅನೇಕರು ಇದನ್ನು ಜೈವಿಕವಾಗಿ ಹರಡುವ ಎಂದು ಕರೆಯುತ್ತಾರೆ ಎಂದು ಕೆಲವರ ವಾದವಾದರೆ, ಇದು ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (WIV) ನಿಂದ ಲೀಕ್ ಆಗಿತ್ತು ಎಂದು ಹಲವರ ವಾದವಾಗಿದೆ. ಈಗ ಈ ವಾದ ಮತ್ತಷ್ಟು ಬಲಗೊಳ್ಳುತ್ತಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯೊಬ್ಬರು ಈ ನಿಟ್ಟಿನಲ್ಲಿ ಸ್ಪೋಟಕ ಮಾಹಿತಿಯೊಂದನ್ನ ಬಯಲು ಮಾಡಿದ್ದಾರೆ.

Advertisement

ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆ ‘ದಿ ಸನ್’ ವರದಿಯ ಪ್ರಕಾರ, ಚೀನಾದ ‘ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ’ಯಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿ ಆಂಡ್ರ್ಯೂ ಹಫ್ ಮಾತನಾಡುತ್ತ, ಕೋವಿಡ್ -19 ಮಾನವ ನಿರ್ಮಿತ ವೈರಸ್, ಇದು WIV (Wuhan Institute of Virology) ನಿಂದ ಲೀಕ್ ಆಗಿದೆ ಎಂದು ಹೇಳಿದ್ದಾರೆ.

ಈ ವೈರಸ್‌ನ ಅಧ್ಯಯನವನ್ನ ಮಾಡಿರುವ ಆಂಡ್ರ್ಯೂ ಹಫ್ ನ್ಯೂಯಾರ್ಕ್ ಮೂಲದ ನಾನ್ ಪ್ರಾಫಿಟ್ ಆರ್ಗನೈಸೇಷನ್ (NPO) ನಲ್ಲೂ ಕೆಲಸ ಮಾಡಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಕೋವಿಡ್ ಸೋರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಹಫ್ ಇದನ್ನು 9/11 ನ ಬಳಿಕದ ಅತಿದೊಡ್ಡ US ಗುಪ್ತಚರ ವೈಫಲ್ಯ ಎಂದು ಕರೆದರು ಮತ್ತು ಇದಕ್ಕೆ ಅಮೇರಿಕಾದ ಅಧಿಕಾರಿಗಳನ್ನೂ ದೂಷಿಸಿದರು.

ವುಹಾನ್‌ನ ಈ ಲ್ಯಾಬ್ ಕೋವಿಡ್‌ನ ಮೂಲದ ಬಗ್ಗೆ ಚರ್ಚೆಯ ಕೇಂದ್ರಬಿಂದುವಾಗಿದೆ. ಆದಾಗ್ಯೂ, ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿದೆ ಎಂದು ಚೀನಾದ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಯೋಗಾಲಯದ ಸಿಬ್ಬಂದಿ ಮೊದಲಿನಿಂದಲೂ ನಿರಾಕರಿಸುತ್ತಲೇ ಬಂದಿದ್ದಾರೆ. ತನ್ನ ಹೊಸ ಪುಸ್ತಕ ‘ದಿ ಟ್ರುಥ್ ಅಬೌಟ್ ವುಹಾನ್ (The Truth About Wuhan)’ ನಲ್ಲಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಫ್ ಚೀನಾದಲ್ಲಿನ ಕರೋನವೈರಸ್ ಯುಎಸ್ ಸರ್ಕಾರದ ಧನಸಹಾಯದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ. ಚೀನಾದಲ್ಲಿ ಪ್ರಯೋಗವನ್ನು LAX ಭದ್ರತೆಯೊಂದಿಗೆ ಮಾಡಲಾಯಿತು, ಇದು ವುಹಾನ್ ಲ್ಯಾಬ್‌ನಲ್ಲಿ ಸೋರಿಕೆಗೆ ಕಾರಣವಾಯಿತು ಎಂದು ಅವರು ಹೇಳಿದರು. ಲಾಸ್ ಏಂಜಲೀಸ್ ಏರ್‌ಪೋರ್ಟ್ ಸೆಕ್ಯುರಿಟಿ (LAX ಸೆಕ್ಯುರಿಟಿ) ಲಾಸ್ ಏಂಜಲೀಸ್ ಏರ್‌ಪೋರ್ಟ್ ಪೋಲೀಸ್‌ನ ಒಂದು ವಿಭಾಗವಾಗಿದೆ.

ಅವರು ತಮ್ಮ ಪುಸ್ತಕದಲ್ಲಿ, “ಬಯೋ ಸೇಫ್ಟಿ (ಅಪಾಯಕಾರಿ ರೋಗಾಣುಗಳನ್ನ ಎದುರಿಸಲು ಕ್ರಮಗಳು), ಬಯೋ ಸೆಕ್ಯುರಿಟಿ (ವೈರಸ್ ಹರಡುವುದನ್ನು ತಡೆಗಟ್ಟುವುದು) ಮತ್ತು ವಿದೇಶಿ ಪ್ರಯೋಗಾಲಯಗಳಲ್ಲಿ ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಿರಲಿಲ್ಲ. ಈ ವಿಷಯಗಳು ಅಂತಿಮವಾಗಿ WIV ನಿಂದ ವೈರಸ್ ಸೋರಿಕೆಗೆ ಕಾರಣವಾಯಿತು. ಕಳೆದ ಎರಡು ವರ್ಷಗಳಲ್ಲಿ, ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿದೆ ಎಂದು ಸೂಚಿಸುವ ಹಲವು ಪುರಾವೆಗಳು ಮುನ್ನೆಲೆಗೆ ಬಂದಿವೆ” ಎಂದು ತಿಳಿಸಿದ್ದಾರೆ.

ಹಫ್ ನ್ಯೂಯಾರ್ಕ್ ಮೂಲದ ನಾನ್ ಪ್ರಾಫಿಟ್ ಆರ್ಗನೈಸೇಷನ್ ಗ್ರೂಪ್‌ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ಇದು US ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ನೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಬಾವಲಿಗಳಲ್ಲಿನ ವಿವಿಧ ಕರೋನವೈರಸ್‌ಗಳನ್ನು ಅಧ್ಯಯನ ಮಾಡುತ್ತಿದೆ ಮತ್ತು ಸಂಸ್ಥೆಯು ವುಹಾನ್ ಲ್ಯಾಬ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ.

ವಿಜ್ಞಾನಿ ಹಫ್ ತಮ್ಮ ಪುಸ್ತಕದಲ್ಲಿ, “ಕರೋನವೈರಸ್ ಅನ್ನು ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಸೃಷ್ಟಿಸಲಾಗಿದೆ ಎಂದು ಚೀನಾಕ್ಕೆ ಮೊದಲ ದಿನದಿಂದಲೇ ತಿಳಿದಿತ್ತು. ಇದಕ್ಕೆ ಅಮೇರಿಕಾ ಹೊಣೆಯಾಗಬೇಕು, ಏಕೆಂದರೆ ಅದು ಚೀನಾಗೆ ಜೈವಿಕ ಬಯೋ ಟೆಕ್ನಾಲಜಿಯ ಈ ತಂತ್ರಜ್ಞಾನವನ್ನು ನೀಡಿದೆ. ‘ಜೆನೆಟಿಕ್ ಇಂಜಿನಿಯರಿಂಗ್’ ಮೂಲಕ ಅದರ ಜೀನ್‌ಗಳನ್ನು ತಿದ್ದುವ ಮೂಲಕ ಜೀವಿಗಳ ಸ್ವರೂಪವನ್ನು ಬದಲಾಯಿಸಬಹುದು” ಎಂದು ಬರೆದಿದ್ದಾರೆ.

Advertisement
Share this on...