ತನ್ನನ್ನ ತಾನು ‘ಪ್ರಾಫೆಟ್’ ಎಂದು ಹೇಳಿ 20 ಮದುವೆಯಾಗಿ, ಕೊನೆಗೆ ಮಗಳನ್ನೂ ಮದುವೆಯಾಗಿ ಸ್ನೇಹಿತರಿಗೆ “ನನ್ನ ಮಕ್ಕಳ ಜೊತೆ ಸೆ#ಕ್ಸ್ ಮಾಡಿ” ಎಂದ ವ್ಯಕ್ತಿ: ಕೊನೆಗೂ ಖೆಡ್ಡಾ ತೋಡಿದ ಪೋಲಿಸರು

in Uncategorized 1,078 views

ಅಮೆರಿಕದ ಅರಿಝೋನಾದಲ್ಲಿ, ಬಹುಪತ್ನಿತ್ವವನ್ನು (Polygamist) ಪ್ರತಿಪಾದಿಸುವ ಸ್ಯಾಮ್ಯುಯೆಲ್ ರಾಪಿ ಬೇಟ್‌ಮ್ಯಾನ್ (Samuel Rappylee Bateman) ಎಂಬ ಮೂಲಭೂತವಾದಿ 20 ಹೆಂಡತಿಯರನ್ನು ಹೊಂದಿದ್ದ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಆರೋಪಿ ತನ್ನ ಮಗಳಿಗೆ ತಾನೊಬ್ಬ ‘ಪ್ರವಾದಿ (Prophet)’ ಎಂದು ಹೇಳುವ ಮೂಲಕ ಮದುವೆ ಮಾಡಿಕೊಂಡಿದ್ದಾನೆ. ಈತ ಹೆಚ್ಚಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನೇ ಮದುವೆಯಾಗಿದ್ದಾನೆ. ಈತನ ಮೇಲೆ ವ್ಯ-ಭಿ-ಚಾರ, ವಯಸ್ಕರು ಮತ್ತು ಮಕ್ಕಳೊಂದಿಗೆ ಗುಂಪು ಲೈಂ-ಗಿಕ-ತೆ, ಮಕ್ಕಳ ಲೈಂ-ಗಿ-ಕ ಕ-ಳ್ಳ-ಸಾ-ಗಣೆ ಆರೋಪವಿದೆ.

Advertisement

ವರದಿಗಳ ಪ್ರಕಾರ, ಸ್ಯಾಮ್ಯುಯೆಲ್ 2019 ರಲ್ಲಿ 50 ಜನರ ಸಣ್ಣ ಗುಂಪನ್ನು ಮುನ್ನಡೆಸಲು ಪ್ರಾರಂಭಿಸಿದನು. ಈ ಗುಂಪಿನ ಹೆಸರು ಫಂಡಮೆಂಟಲಿಸ್ಟ್ ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲೇಟರ್-ಡೇ ಸೇಂಟ್ಸ್ (Fundamentalist Church of Jesus Christ of Latter-Day Saints). ಈ ಗುಂಪನ್ನು ನಿಯಂತ್ರಿಸುತ್ತಲೇ ತನ್ನನ್ನು ತಾನು ‘ಪ್ರವಾದಿ’ ಎಂದು ಕರೆಯತೊಡಗಿದ. ಈತ ತನ್ನ ಸ್ವಂತ ಮಗಳನ್ನೇ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿ ಮದುವೆಯಾಗಿದ್ದ. ಅಷ್ಟೇ ಅಲ್ಲದೆ ಈತ ತನ್ನ ಮೂವರು ಅನುಯಾಯಿಗಳಿಗೆ ತನ್ನ ಹೆಣ್ಣುಮಕ್ಕಳೊಂದಿಗೆ ಲೈಂ-ಗಿ-ಕ ಕ್ರಿಯೆ ನಡೆಸುವಂತೆಯೂ ಹೇಳಿದ್ದ, ಅದು ಕೂಡ ಅವರಲ್ಲಿ ಒಬ್ಬಳು ಕೇವಲ 12 ವರ್ಷ ವಯಸ್ಸಿನವಳಿಗಿದ್ದಾಗ.

ದೇವರ ಹೆಸರಿನಲ್ಲಿ ತಮ್ಮ ಗೌರವವನ್ನು (ಶೀಲವನ್ನ) ತ್ಯಾಗ ಮಾಡಲು ಸ್ಯಾಮ್ಯುಯೆಲ್ ಹುಡುಗಿಯರನ್ನು ಕೇಳುತ್ತಿದ್ದ. ದೇವರು ಅವರ (ಹೆಣ್ಣುಮಕ್ಕಳ) ದೇಹವನ್ನು ಮತ್ತೆ ಸರಿಮಾಡುತ್ತಾನೆ ಮತ್ತು ಆ ಪೊರೆಯು ಅವರ ದೇಹದಲ್ಲಿ ಮತ್ತೆ ಬರುತ್ತದೆ ಎಂದು ಹೇಳುತ್ತಿದ್ದ.

FBI ದಾಖಲೆಗಳ ಪ್ರಕಾರ, 46 ವರ್ಷದ ಸ್ಯಾಮ್ಯುಯೆಲ್ ಇದುವರೆಗೆ 20 ಮಹಿಳೆಯರನ್ನು ಮದುವೆಯಾಗಿದ್ದಾನೆ. ಅವರಲ್ಲಿ ಹೆಚ್ಚಿನವರು 15 ವರ್ಷದೊಳಗಿನವರೇ ಆಗಿದ್ದಾರೆ. ಪೊಲೀಸರು ಆತನನ್ನು ಬಂಧಿಸಿದಾಗಲೂ ವಾಹನಗಳಲ್ಲಿ ಹುಡುಗಿಯರನ್ನು ಕರೆದುಕೊಂಡು ರಾಜ್ಯ ಸುತ್ತುತ್ತಿದ್ದ. ಕಾರಿನಲ್ಲಿ ಸೋಫಾ ಮತ್ತು ಟಾಯ್ಲೆಟ್ ಬಕೆಟ್ ಇತ್ತು. ಆಗ ಪೊಲೀಸರು ಆತನನ್ನು ಸೆರೆ ಹಿಡಿದರು. ಅರಿಜೋನಾ, ಉತಾಹ್, ನೆವಾದಾದಲ್ಲಿ ಈತ ಹುಡುಗಿಯರನ್ನು ಸಾಗಿಸುತ್ತಿದ್ದ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಈತನ ಕಾರನ್ನು ನಿಲ್ಲಿಸಿದಾಗ ಅದರಲ್ಲಿ ಇಬ್ಬರು ಹುಡುಗಿಯರಿದ್ದರು. ಇದಾದ ನಂತರ ಪೊಲೀಸರು ಈತನ ವಿರುದ್ಧ ಮಕ್ಕಳ ಮೇಲಿನ ದೌ-ರ್ಜ-ನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮೊದಲು ಜಾಮೀನು ಪಡೆದರು. ಆದರೆ ಮತ್ತೆ ಬೇರೆ ಆರೋಪಗಳಲ್ಲಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಲು ದಾ-ಳಿ ನಡೆಸಿ 9 ಸಂತ್ರಸ್ತೆಯರನ್ನ ತಮ್ಮ ವಶಕ್ಕೆ ತೆಗೆದುಕೊಂಡರು. ದಾ-ಳಿ-ಯ ನಂತರ FBI ಈತನನ್ನ ಅರಿಝೋನಾ ಜೈಲಿನಲ್ಲಿ ಇರಿಸಿತು. ಸೆಪ್ಟೆಂಬರ್‌ನಿಂದ ಈತನ ವಿರುದ್ಧ ಅಪ್ರಾಪ್ತ ಯುವತಿಯರನ್ನು ಮದುವೆಯಾಗಿ ದೈ-ಹಿ-ಕ ಸಂಬಂಧ ಹೊಂದಿದ್ದ ಎಂಬುದಕ್ಕೆ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ.

Advertisement
Share this on...