ಶ್ರದ್ಧಾ ವಾಕರ್ ಅವರ ಕ್ರೂ-ರ ಹ-ತ್ಯೆ-ಯು ನಟಿ ಫ್ಲೋರಾ ಸೈನಿ (Flora Saini) ಅವರು ಕೆಲವು ವರ್ಷಗಳ ಹಿಂದೆ ಅನುಭವಿಸಿದ ನರಕ ಯಾತನೆಗಳನ್ನ ನೆನಪಿಸುತ್ತದೆ. ಶ್ರದ್ಧಾಳನ್ನು ಆಕೆಯ ಬಾಯ್ ಫ್ರೆಂಡ್ ಅಫ್ತಾಬ್ ಪೂನವಾಲಾ ತುಂ-ಡು ತುಂ-ಡಾಗಿ ಕ-ತ್ತ-ರಿಸಿ ಹಾಕಿದ್ದ. ಮನೆಯವರ ವಿರೋಧದ ನಡುವೆಯೂ ಆಕೆ ಮನೆ ತೊರೆದು ಅಫ್ತಾಬ್ ಜೊತೆಯಲ್ಲಿ ವಾಸಿಸುತ್ತಿದ್ದಳು. ಅದೇ ರೀತಿ ನಟಿ ಫ್ಲೋರಾ ಸೈನಿ ಕೂಡ ತನ್ನ ಪ್ರಿಯಕರನಿಗಾಗಿ ಮನೆ ಬಿಟ್ಟು ಹೋಗಿದ್ದಳು. ಆದರೆ ಆತನ ಪ್ರಿಯಕರ ಆಕೆಯನ್ನ ಬಹುತೇಕ ಸಾಯುವ ಹಂತಕ್ಕೇ ತಂದು ಬಿಟ್ಟಿದ್ದನು.
‘ಗಂದಿ ಬಾತ್’ ನಂತಹ ವೆಬ್ ಸೀರೀಸ್ ಗಳು ಮತ್ತು ‘ಸ್ತ್ರೀ’ ಯಂತಹ ಚಿತ್ರಗಳಲ್ಲಿ ನಟಿಸಿರುವ ಫ್ಲೋರಾ, 2018 ರಲ್ಲಿ ‘ಮೀ ಟೂ ಮೂವ್ಮೆಂಟ್’ ಸಮಯದಲ್ಲಿಯೂ ತನ್ನ ಬಾಯ್ಫ್ರೆಂಡ್ ಗೌರಂಗ್ ದೋಷಿ ತನ್ನ ಮೇಲೆ ನಡಸಿದ್ದ ಹಿಂ-ಸೆಯ ಬಗ್ಗೆ ಹೇಳಿದ್ದರು. ಈಗ ಶ್ರದ್ಧಾ ಪ್ರಕರಣ ಮುನ್ನೆಲೆಗೆ ಬಂದ ನಂತರ, ಆರಂಭದಲ್ಲಿ ತನ್ನ ಲಿವ್-ಇನ್ ಪಾರ್ಟ್ನರ್ ಗೌರಂಗ್ ಮೊದಮೊದಲು ಚೆನ್ನಾಗಿದ್ದ. ಆದರೆ ನಂತರ ಆತ ಬದಲಾದ ಎಂದು ಹೇಳಿದ್ದಾರೆ. ಒಮ್ಮೆ ಆತನ ತನ್ನನ್ನ ಹೊ-ಡೆ-ದು ದವಡೆಯನ್ನೇ ಮುರಿದುಹಾಕಿದ್ದ. ಅಲ್ಲದೇ ಕುಟುಂಬ ಸದಸ್ಯರನ್ನೂ ಕೊ-ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಫ್ಲೋರಾ ಗೌರಂಗ್ನೊಂದಿಗೆ ಇರಲು ತನ್ನ ಮನೆಯನ್ನೂ ಸಹ ತೊರೆದಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಆತ ತನ್ನ ಪ್ರೀತಿಯನ್ನು ಸಾಬೀತುಪಡಿಸುವಂತೆ ಫ್ಲೋರಾಗೆ ಕೇಳಿದ್ದ. ಆರಂಭದಲ್ಲಿ ಆತ ತುಂಬಾ ಒಳ್ಳೆಯವನಾಗಿದ್ದನು, ನನ್ನ (ಫ್ಲೋರಾ) ಕುಟುಂಬ ಸದಸ್ಯರು ಆತನನ್ನ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಒಂದು ವಾರ ಒಟ್ಟಿಗೆ ಇದ್ದ ನಂತರವೇ ಗೌರಂಗ್ನ ನಿಜ ಮುಖ ಬಯಲಾಯಿತು ಎಂದು ನಟಿ ಫ್ಲೋರಾ ಹೇಳಿದ್ದಾರೆ.
ಒಂದು ವಾರದಲ್ಲಿ ಗೌರಾಂಗ್ ತನ್ನನ್ನು ಹಲವಾರು ಬಾರಿ ಹೊ-ಡೆ-ದಿದ್ದಾನೆ ಎಂದು ಫ್ಲೋರಾ ಹೇಳಿದರು. ಅವನ ತಪ್ಪು ಏನು ಎಂದು ಅವನಿಗೆ ಅರ್ಥವಾಗಲಿಲ್ಲ. ಒಮ್ಮೆ ಹೊ-ಡೆ-ಯುವ ಸಮಯದಲ್ಲಿ, ಅವನು ನನ್ನ ದವಡೆಯನ್ನೂ ಮುರಿದನು. ಈ ಘಟನೆ 2007ರದ್ದು. ಸ್ವಲ್ಪ ಸಮಯದ ನಂತರ ಈ ಸಂಬಂಧವು ತಿರುವು ಪಡೆದುಕೊಂಡಿತು, ಅಲ್ಲಿ ತನ್ನ ಜೀವವನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಲಾರಂಭಿಸಿದೆ ಎಂದು ನಟಿ ಹೇಳುತ್ತಾರೆ.
ನನ್ನ ಬಿಟ್ಟು ಹೋದರೆ ನಿನ್ನ ಇಡೀ ಕುಟುಂಬವನ್ನೇ ಸಾ-ಯಿ-ಸುವುದಾಗಿ ಗೌರಂಗ್ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ. ಈ ಹಿಂದೆ, #MeToo ಕ್ಯಾಂಪೇನ್ ಸಮಯದಲ್ಲಿ, ಫ್ಲೋರಾ ತನ್ನ ಲೈವ್-ಇನ್ ಪಾರ್ಟನರ್ ತನ್ನನ್ನು ಸೆಕ್ಷುವಲಿ ಅಬ್ಯೂಸ್ ಮಾಡಿದ್ದ ಎಂದು ಹೇಳಿದ್ದರು. ಆತ ನನ್ನನ್ನ ಹೊ-ಡೆ-ಯುವ ಸಮಯದಲ್ಲಿ ನನ್ನ ತಾಯಿಯ ಸಲಹೆಯನ್ನು ಕೇಳಿದೆ ಎಂದು ನಟಿ ಹೇಳುತ್ತಾರೆ. ಬಿಕ್ಕಟ್ಟಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ ಏನನ್ನೂ ನೋಡದೆ ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದರು. ಇದನ್ನು ಯೋಚಿಸಿ ಫ್ಲೋರಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ದೂರು ದಾಖಲಾಗಿರಲಿಲ್ಲ. ಅಂತಿಮವಾಗಿ, ಸಾಕಷ್ಟು ಪ್ರಯತ್ನದ ನಂತರ, ಫ್ಲೋರಾ ತನ್ನ ಪ್ರೇಮಿಯ ವಿರುದ್ಧ ದೂರು ದಾಖಲಿಸಿದ್ದರು.