“Youtube ನಲ್ಲಿ ಅಶ್ಲೀಲ Ad ನೋಡಿ ಮೂಡ್ ಖರಾಬ್ ಆಯ್ತು, 75 ಲಕ್ಷ ಪರಿಹಾರ ಬೇಕು”: ಪರೀಕ್ಷೆಯಲ್ಲಿ ಫೇಲ್ ಆಗಿ ಸುಪ್ರೀಂಕೋರ್ಟ್ ನಲ್ಲಿ ಕೇಸ್ ಹಾಕಿದ ಯುವಕ, ಮುಂದಾಗಿದ್ದೇನು ನೋಡಿ

in Uncategorized 1,180 views

ಯೂಟ್ಯೂಬ್‌ನಲ್ಲಿ ಅಶ್ಲೀಲ ಜಾಹೀರಾತುಗಳನ್ನು ನೋಡಿದ್ದರಿಂದ ಗಮನ ಬೇರೆಡೆಗೆ ತಿರುಗಿದ್ದು, ಇದರಿಂದ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೇನೆ ಎಂದು ಯುವಕನೊಬ್ಬ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿದಾರನು ತನ್ನ ಅರ್ಜಿಯಲ್ಲಿ ಯೂಟ್ಯೂಬ್‌ನಿಂದ 75 ಲಕ್ಷ ರೂಪಾಯಿ ಪರಿಹಾರವನ್ನು ಕೋರಿದ್ದನು. ಆದರೆ, ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಯುವಕನಿಗೆ 25 ಸಾವಿರ ರೂ. ದಂಡ ವಿಧಿಸಿದೆ. ಅರ್ಜಿದಾರನನ್ನು ಮಧ್ಯಪ್ರದೇಶದ ನಿವಾಸಿ ಆನಂದ್ ಕಿಶೋರ್ ಚೌಧರಿ ಎಂದು ಗುರುತಿಸಲಾಗಿದೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಅಭಯ್ ಎಸ್. ಓಕ್ ರವರ ಪೀಠದಿಂದ ಶುಕ್ರವಾರ (ಡಿಸೆಂಬರ್ 9, 2022) ನಡೆದ ವಿಚಾರಣೆಯ ಸಂದರ್ಭದಲ್ಲಿ, ಓಕ್ ಅವರ ಪೀಠವು ಅರ್ಜಿದಾರರಿಗೆ ಛೀಮಾರಿ ಹಾಕಿತು, “ಇದು ಆರ್ಟಿಕಲ್ 32 ರ ಅಡಿಯಲ್ಲಿ ಸಲ್ಲಿಸಲಾದ ‘ಕೆಟ್ಟ’ ಅರ್ಜಿಗಳಲ್ಲಿ ಒಂದು” ಎಂದು ಹೇಳಿದೆ.

ನ್ಯಾಯಮೂರ್ತಿ ಕೌಲ್ ಅವರು ಅರ್ಜಿದಾರರನ್ನು, “ನಿಮಗೆ ಯಾವು ಕಾರಣಕ್ಕಾಗಿ ಪರಿಹಾರ ಬೇಕು?. ನೀವು ಇಂಟರ್ನೆಟ್ ನೋಡುತ್ತೀರಿ ಎಂಬುದಕ್ಕಾ? ಅಥವಾ ಇಂಟರ್ನೆಟ್ ನೋಡುವುದರಿಂದ ನೀವು ಪರೀಕ್ಷೆಯಲ್ಲಿ ಫೇಲ್ ಆದಿರಿ ಅನ್ನೋದಕ್ಕೆ ಆದ್ದರಿಂದ ಪರಿಹಾರ ಬೇಕೇ? ಜಾಹೀರಾತು ಲೈಂಗಿಕ ವಿಷಯವನ್ನು ಒಳಗೊಂಡಿರುವ ಕಾರಣ, ನೀವು ಪರಿಹಾರವನ್ನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೀರಿ. ಜಾಹೀರಾತನ್ನು ನೋಡುವುದು ನಿಮ್ಮ ಆಯ್ಕೆಯಾಗಿದೆ” ಎಂದು ಹೇಳಿದ್ದಾರೆ.

ವಿಚಾರಣೆ ವೇಳೆ ನ್ಯಾಯಮೂರ್ತಿ ಕೌಲ್, “ಜಾಹೀರಾತಿನಲ್ಲಿ ಲೈಂಗಿಕ ವಿಷಯವಿದ್ದು, ಅದು ನಿಮ್ಮ ಗಮನವನ್ನು ಬೇರೆಡೆ ಸೆಳೆದಿದೆ, ಹೀಗಾಗಿ ನ್ಯಾಯಾಲಯದಲ್ಲಿ ಪರಿಹಾರ ಕೊಡಿ ಮಾತನಾಡುತ್ತಿದ್ದೀರಿ, ಪರಿಹಾರ ಕೊಡಿ. ಜಾಹೀರಾತನ್ನು ನೋಡದೇ ಇದ್ದರೆ ನೋಡಬೇಡಿ” ಎಂದು ಕೋರ್ಟ್ ಹೇಳಿದ್ದು, ಇಂತಹ ಅರ್ಜಿ ಸಲ್ಲಿಸುವುದು ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡಿದಂತೆ. ಈಗ ನಿನ್ನ ನಡತೆಯಿಂದಾಗಿ ದಂಡ ತೆರಲೇಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಅರ್ಜಿದಾರನಿಗೆ ಛೀಮಾರಿ ಹಾಕಿದ ನ್ಯಾಯಾಲಯ 1 ಲಕ್ಷ ದಂಡ ವಿಧಿಸಿದೆ. ಆದರೆ, 1 ಲಕ್ಷ ರೂ.ಗಳ ದಂಡದ ಬಗ್ಗೆ ಕೇಳುತ್ತಲೇ ಅರ್ಜಿದಾರನು, “ಮಾನ್ಯರೇ, ನನ್ನ ಪೋಷಕರು ಕೂಲಿ ಕಾರ್ಮಿಕರು, ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಕ್ಷಮೆ ಯಾಚಿಸಿದನು. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಕೌಲ್, “ನೀವು ಪ್ರಚಾರಕ್ಕಾಗಿ ಯಾವಾಗ ಬೇಕಾದರೂ ಇಲ್ಲಿಗೆ ಬರಬಹುದು ಎಂದು ನೀವು ಭಾವಿಸುತ್ತೀರಿ. ದಂಡವನ್ನು ಕಡಿಮೆ ಮಾಡುತ್ತೇನೆ, ಆದರೆ ಕ್ಷಮಿಸುವುದಿಲ್ಲ” ಎಂದು ಹೇಳಿ ಬಳಿಕ ದಂಡದ ಮೊತ್ತವನ್ನು ರೂ.25,000ಕ್ಕೆ ಇಳಿಸಿ ಆದೇಶ ಹೊರಡಿಸಿದ್ದಾರೆ.

‘ನಾನು ನಿರುದ್ಯೋಗಿ, ದಂಡ ಕಟ್ಟಲು ಸಾಧ್ಯವಿಲ್ಲ’ ಎಂದು ಅರ್ಜಿದಾರರು ಪೀಠಕ್ಕೆ ತಿಳಿಸಿದರು. ಆಗ ನ್ಯಾಯಮೂರ್ತಿ ಕೌಲ್, ‘ನಿನ್ನ ಬಳಿ ಉದ್ಯೋಗವಿಲ್ಲದಿದ್ದರೆ ರಿಕವರಿ ಮಾಡುತ್ತೇವೆ, ಇನ್ನೇನು’ ಎಂದರು.

ವಾಸ್ತವವಾಗಿ, ಅರ್ಜಿದಾರ ಆನಂದ್ ಕಿಶೋರ್ ಚೌಧರಿ ಯೂಟ್ಯೂಬ್‌ನಲ್ಲಿನ ಅಶ್ಲೀಲ ಜಾಹೀರಾತುಗಳಿಂದಾಗಿ ತನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದು ಇದರಿಂದಾಗಿ ಮಧ್ಯಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ ಎಂದು ಆರ್ಟಿಕಲ್ 19 (2) ರ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಬದಲಾಗಿ ಯೂಟ್ಯೂಬ್ ನಿಂದ 75 ಲಕ್ಷ ಪರಿಹಾರ ನೀಡಬೇಕು. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಜಾಹೀರಾತುಗಳನ್ನು (ಅಶ್ಲೀಲತೆ) ನಿಷೇಧಿಸುವಂತೆಯೂ ಯುವಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಒತ್ತಾಯಿಸಿದ್ದರು.

Advertisement
Share this on...