ಬಾಲಿವುಡ್ ನಟ ಅಮೀರ್ ಖಾನ್ ಇತ್ತೀಚೆಗೆ ಹಿಂದೂ ಸಂಪ್ರದಾಯದಂತೆ ಕಲಶ ಪೂಜೆ ನೆರವೇರಿಸಿದರು. ಅಮೀರ್ ಖಾನ್ ಪ್ರೊಡಕ್ಷನ್ ಹೌಸ್ ನ ನೂತನ ಕಚೇರಿಯಲ್ಲಿ ನಡೆದ ಈ ಪೂಜೆಯಲ್ಲಿ ಅವರ ಮಾಜಿ ಪತ್ನಿ ಕಿರಣ್ ರಾವ್ ಕೂಡ ಉಪಸ್ಥಿತರಿದ್ದರು. ಪೂಜೆಯ ನಂತರ ಅಮೀರ್ ಮತ್ತು ಕಿರಣ್ ಒಟ್ಟಿಗೆ ಆರತಿ ಮಾಡಿದರು. ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ನಿರ್ದೇಶಕ ಅದ್ವೈತ್ ಚಂದನ್ ಅವರು ಗುರುವಾರ (ಡಿಸೆಂಬರ್ 8, 2022) ಅಮೀರ್ ಖಾನ್ ಪೂಜೆ ಮತ್ತು ಆರತಿ ಮಾಡುತ್ತಿರುವ ಕೆಲವು ಚಿತ್ರಗಳನ್ನು ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ. ಪೂಜೆಯಲ್ಲಿ ಭಾಗವಹಿಸಿದ್ದ ಇತರ ಸಿಬ್ಬಂದಿಗಳನ್ನೂ ಸಹ ನೀವು ಈ ಚಿತ್ರಗಳಲ್ಲಿ ಕಾಣಬಹುದು.
#AamirKhan and #KiranRao performed puja at his office recently
Pictures of them performing the aarti have been shared by #LaalSinghChaddha director #AdvaitChandan; fans say, ‘Ekbar to dang rh gaye ki ye sach Amir Khan hai’ #Bollywood pic.twitter.com/MPlJX4RWY8
— HT City (@htcity) December 9, 2022
ಕಛೇರಿಯಲ್ಲಿ ಪೂಜಾ ಸಂದರ್ಭದಲ್ಲಿ, ಅಮೀರ್ ಸ್ವೆಟ್ಶರ್ಟ್ ಮತ್ತು ಡೆನಿಮ್ ಜೀನ್ಸ್ ಪ್ಯಾಂಟ್ ಧರಿಸಿ, ಹೆಗಲಲ್ಲಿ ಬಿಳಿ ಬಣ್ಣದ ಶಾಲ್ನ್ನ ಧರಿಸಿದ್ದರು. ಇದಷ್ಟೇ ಅಲ್ಲದೆ ಮರಾಠಿ ಟೋಪಿ ಧರಿಸಿ ಹಣೆಗೆ ತಿಲಕವಿಟ್ಟುಕೊಂಡಿದ್ದರು. ಅವರ ಮುಂದೆ ತಾನು ಪೂಜಿಸುತ್ತಿರುವ ದೇವರ ಚಿತ್ರವೂ ಇತ್ತು.
ಅಮೀರ್ ಮತ್ತು ಕಿರಣ್ ಪೂಜೆ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ನಂತರ, ಕೆಲವರು ಅವರನ್ನು ಹೊಗಳುತ್ತಿದ್ದರೆ, ಬಹುತೇಕರು ಅವರ ಈ ಹೊಸ ಲುಕ್ಸ್ ನ್ನ ಪ್ರಶ್ನಿಸುತ್ತಿದ್ದಾರೆ. ನಿರಂತರ ಚಿತ್ರ ಬಾಯ್ಕಾಟ್ ನಂತರ ಪೂಜೆ ಮಾಡುವುದು ನಾಟಕ ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತು ಕೆಲವರು ಅಮೀರ್ ಖಾನ್ರ ನಿಜವಾದ ಧರ್ಮದ ಯಾವುದು? ಎಂದು ಕೇಳುತ್ತಿದ್ದಾರೆ.
ಮುಸ್ಲಿಂ ಯೂಸರ್ ಗಳು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅಮೀರ್ ಖಾನ್ನ್ನ ಕಾಫಿರ್ ಎಂದು ಕರೆಯುತ್ತಿದ್ದಾರೆ. ಪಠಾಣ್ ಎಂಬ ಯೂಸರ್, “ಹೇ, ಯಾಕೆ ಈ ಕಲಶ ಪೂಜೆ. ಸರ್ ನಿಮ್ಮ ನಿಜವಾದ ಧರ್ಮ ಯಾವುದು ಅಂತ ಯಾಕೆ ಹೇಳಬಾರದು. ನೀವು ಹಿಂದೂವೇ?, ಹಾಗಾದರೆ ನಿಮ್ಮ ಬಗ್ಗೆ ಮುಸ್ಲಿಮರು ಬಾಯಿಗೆ ಬಂದಂತೆ ಕಾಮೆಂಟ್ ಮಾಡುವ ಅವಶ್ಯಕತೆ ಏನಿದೆ?” ಎಂದು ಕಮೆಂಟ್ ಮಾಡಿದ್ದಾರೆ.
ಅತೀಕ್ ಖಾನ್ ಎಂಬ ಯೂಸರ್ ಈ ಫೋಟೊಗಳಿಗೆ ಕಮೆಂಟ್ ಮಾಡಿ ‘ಈತ ಕಾಫಿರ್’ ಎಂದಿದ್ದಾನೆ.
ಕೆಲವು ಹಿಂದೂ ಬಳಕೆದಾರರು ಅಮೀರ್ ಖಾನ್ ಅವರನ್ನು ಪೂಜೆ ಮಾಡಿದ್ದಕ್ಕೆ ಕೋಪಗೊಂಡ ಮುಸ್ಲಿಮರಿಗೆ ಸೂಕ್ತವಾದ ಉತ್ತರವನ್ನೂ ನೀಡಿದ್ದಾರೆ. “ನೀವು ನಿಮ್ಮ ಕುಟುಂಬದ ಮೂರು ತಲೆಮಾರುಗಳ ಹಿಂದೆ ಹೋದರೆ, ನಿಮ್ಮ ಹಿರಿಯರು ಸಹ ತಮ್ಮನ್ನು ತಾವು ಕಾಫಿರ್ ರೇ ಆಗಿದ್ದರು. ಮುಲ್ಲಾಗಳ ಮಾತುಗಳನ್ನ ಕೇಳಿ ನಿಮ್ಮ ಹಿರಿಯರನ್ನು ಅವಮಾನಿಸಬೇಡಿ” ಎಂದಿದ್ದಾರೆ. ಇದರ ನಂತರ, ಅತಿಕ್ ಶೇಖ್ ಅಮೀರ್ ಖಾನ್ ಅವರನ್ನು ಸಮರ್ಥಿಸುವವರನ್ನೂ ಬೈಯುತ್ತಿದ್ದಾನೆ.
ಅಮೀರ್ ಖಾನ್ ಹಾಗು ಕಿರಣ್ ರಾವ್ ರವರ ತಲಾಖ್
ಕೆಲವು ವರ್ಷಗಳ ಹಿಂದೆ, ಅಮೀರ್ ಖಾನ್ ಅವರು ತಮ್ಮ ಪತ್ನಿ ಭಾರತದಲ್ಲಿ ಸುರಕ್ಷಿತವಾಗಿಲ್ಲ ಮತ್ತು ದೇಶವನ್ನು ತೊರೆಯುವಂತೆ ಹೇಳಿದ್ದಾಳೆ ಎಂದಿದ್ದರು. ಅವರ ಈ ಹೇಳಿಕೆಯ ನಂತರ, ಜನರು ಅಮೀರ್ ಖಾನ್ ಮತ್ತು ಅವರ ಪತ್ನಿಯ ಬಗ್ಗೆ ತುಂಬಾ ಕೋಪಗೊಂಡಿದ್ದರು. ಹೀಗಾದರೆ ದೇಶ ಬಿಡಬೇಕು, ಇಲ್ಲಿ ಕೆಲಸ ಸಿಗಬಾರದು ಎಂದು ಜನ ಸಲಹೆಯನ್ನೂ ನೀಡಿದ್ದರು.
ಅಮೀರ್ ಅವರ ಈ ಹೇಳಿಕೆ 2015 ರಲ್ಲಿ ಬಂದಿತ್ತು. ಇದಾದ ನಂತರ ಕಾಲಕಾಲಕ್ಕೆ ಇದನ್ನೇ ಆಧಾರವಾಗಿಟ್ಟುಕೊಂಡು ಹಿಂದೂ ವಿರೋಧಿ, ಭಾರತ ವಿರೋಧಿ ಎಂದು ಜನ ಅವರನ್ನ ಕರೆದಿದ್ದರು. ಅವರ ಸಿನಿಮಾಗಳನ್ನೂ ಬಹಿಷ್ಕರಿಸಲಾಯಿತು. ಆದರೆ, ಕೆಲ ವರ್ಷಗಳ ನಂತರ ಪತಿ-ಪತ್ನಿ ಇಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು.
ಕಿರಣ್ ರಾವ್ ಮತ್ತು ಅಮೀರ್ ಖಾನ್ ಕಳೆದ ವರ್ಷ ಜುಲೈನಲ್ಲಿ ಜಂಟಿ ಹೇಳಿಕೆ ನೀಡುವ ಮೂಲಕ ವಿಚ್ಛೇದನ ಪಡೆಯುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಜಂಟಿ ಹೇಳಿಕೆಯಲ್ಲಿ, ಇಬ್ಬರೂ ಈ 15 ವರ್ಷಗಳು ತುಂಬಾ ಚೆನ್ನಾಗಿದ್ದವು, ಈ ಸಮಯದಲ್ಲಿ ನಾವು ಪರಸ್ಪರ ಒಟ್ಟಿಗೆ ವಾಸಿಸುವ ಅನುಭವಗಳನ್ನು ಹಂಚಿಕೊಂಡಿದ್ದೇವೆ ಎಂದು ಹೇಳಿದ್ದರು. ಅವರು ಮಾತನಾಡುತ್ತ, “ನಾವು ಒಟ್ಟಿಗೆ ಸಂತೋಷವಾಗಿದ್ದೆವು, ನಗುತ್ತಿದ್ದೆವು. ನಮ್ಮ ಸಂಬಂಧವು ನಂಬಿಕೆ, ಪ್ರೀತಿ ಮತ್ತು ಗೌರವದ ವಿಷಯದಲ್ಲಿ ಬೆಳೆಯುತ್ತಲೇ ಇತ್ತು. ಈಗ ನಾವು ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಬೇಕು ಎಂದು ನಿರ್ಧರಿಸಿದ್ದೇವೆ, ಆದರೆ ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಅದು ಮಗ ಆಜಾದ್ನ ರಕ್ಷಕನಾಗಿ, ಕುಟುಂಬವಾಗಿ” ಎಂದಿದ್ದರು.