ಹಿಂದೂಗಳನ್ನ ಬಲವಂತವಾಗಿ ಮತಾಂತರ ಮಾಡಿ ಮುಸ್ಲಿಮರ ಕೈಗೆ ಒಪ್ಪಿಸುತ್ತಿದ್ದ ಮೌಲಾನಾ ವಿರುದ್ಧ ಖಡಕ್ ಕಾರ್ಯಾಚರಣೆ ನಡೆಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್

in Uncategorized 272 views

Britain Action on International Anti-Corruption Day and Human Rights Day:

Advertisement
ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಮತ್ತು ಮಾನವ ಹಕ್ಕುಗಳ ದಿನದ ಸಂದರ್ಭದಲ್ಲಿ ಬ್ರಿಟನ್ ಸರ್ಕಾರ ಶುಕ್ರವಾರ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನದಲ್ಲಿ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಹುಡುಗಿಯರನ್ನು ಬಲವಂತವಾಗಿ ಮತಾಂತರಗೊಳಿಸಿ ಬಲವಂತವಾಗಿ ವಿವಾಹ ಮಾಡಿಸುತ್ತಿರುವ ಆರೋಪದಲ್ಲಿ ಮೌಲಾನಾ ಸೇರಿದಂತೆ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಅನೇಕ ಭ್ರಷ್ಟ ಅಧಿಕಾರಿಗಳು ಮತ್ತು ಸಂಘಟನೆಗಳನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿದೆ. ಅಂತಹ ಬರೋಬ್ಬರಿ 30 ವ್ಯಕ್ತಿಗಳು, ಅಧಿಕಾರಿಗಳು ಮತ್ತು ಸಂಸ್ಥೆಗಳನ್ನು ಬ್ರಿಟನ್ ನ ರಿಷಿ ಸುನಕ್ ಸರ್ಕಾರ ನಿಷೇಧಿಸಿದೆ.

ಈ ರೀತಿಯಾಗಿ ಇಂತಹ ಜನರನ್ನ ನಿಷೇಧಿಸಿದ ಸರ್ಕಾರ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ಭರ್ಚುಂಡಿ ಷರೀಫ್ ದರ್ಗಾದ ಮಿಯಾನ್ ಅಬ್ದುಲ್ ಹಕ್ ಕೂಡ ಶುಕ್ರವಾರ ಬ್ರಿಟಿಷ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಬಿಡುಗಡೆ ಮಾಡಿದ ನಿಷೇಧಿತ ವ್ಯಕ್ತಿಗಳು ಮತ್ತು ಸಂಘಟನೆಗಳ ಹೊಸ ಪಟ್ಟಿಯಲ್ಲಿದ್ದಾನೆ. ಈ ಪಟ್ಟಿಯಲ್ಲಿ ಕೈದಿಗಳನ್ನು ಹಿಂಸಿಸುವುದರಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಹೆಸರುಗಳು, ಮಹಿಳೆಯರ ಮೇಲೆ ಅ-ತ್ಯಾಚಾ-ರ ಮತ್ತು ವ್ಯವಸ್ಥಿತ ಚಿತ್ರಹಿಂಸೆ ನಡೆಸುವಂತೆ ಸೈನಿಕರಿಗೆ ಆಗ್ರಹಿಸುವ ವ್ಯಕ್ತಿಗಳ ಹೆಸರೂ ಸೇರಿವೆ.

ಲಿಸ್ಟ್ ಜಾರಿ ಮಾಡಿ ಬ್ರಿಟನ್ ಸರ್ಕಾರ ಹೇಳಿದ್ದೇನು?

ಕ್ಲೆವರ್ಲಿ ಮಾತನಾಡುತ್ತ, “ಪ್ರಪಂಚದಾದ್ಯಂತ ಸ್ವತಂತ್ರ ಮತ್ತು ಮುಕ್ತ ಸಮಾಜವನ್ನು ಉತ್ತೇಜಿಸುವುದು ನಮ್ಮ ಕರ್ತವ್ಯ. ಇಂದು ನಾವು ವಿಧಿಸಿರುವ ನಿರ್ಬಂಧಗಳು ನಮ್ಮ ಮೂಲಭೂತ ಹಕ್ಕುಗಳ ಈ ಘೋರ ಉಲ್ಲಂಘನೆಗಳ ಹಿಂದೆ ಇರುವವರನ್ನು ಬಯಲಿಗೆಳೆಯುತ್ತದೆ. ಭಯದ ಮೇಲೆ ಸ್ವಾತಂತ್ರ್ಯದ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಮ್ಮ ಬಳಿ ಇರುವ ಎಲ್ಲ ವಿಧಾನಗಳನ್ನು ಬಳಸಲು ನಾವು ನಿರ್ಧರಿಸಿದ್ದೇವೆ” ಎಂದಿದ್ದಾರೆ. ಮೌಲಾನಾ ಹಕ್ ಒಬ್ಬ ರಾಜಕೀಯ ನಾಯಕ. ಆತ ಸಿಂಧ್‌ನಲ್ಲಿ ಸ್ಥಳೀಯವಾಗಿ ಪ್ರಭಾವಶಾಲಿಯಾಗಿದ್ದಾನೆ. ಈ ಪ್ರಾಂತ್ಯದ ಬಹುತೇಕ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದ್ದಕ್ಕಾಗಿ ಆತ ಹಲವು ವರ್ಷಗಳಿಂದ ಟೀಕೆಗೊಳಗಾಗಿದ್ದಾನೆ. ಬ್ರಿಟನ್ ನಿರ್ಬಂಧಗಳ ಪಟ್ಟಿಯು ಹೀಗೆ ಹೇಳುತ್ತದೆ, “ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ಭರ್ಚುಂಡಿ ದರ್ಗಾದ ಮೌಲಾನಾ ಮಿಯಾನ್ ಅಬ್ದುಲ್ ಹಕ್ ಮುಸ್ಲಿಮೇತರರು ಮತ್ತು ಅಪ್ರಾಪ್ತರ ಬಲವಂತದ ಮದುವೆಗಳು ಮತ್ತು ಬಲವಂತದ ಮತಾಂತರಗಳಿಗೆ ಕಾರಣರಾಗಿದ್ದಾರೆ”

ನಿಷೇಧದ ಬಳಿಕ ಇವರ ಕಥೆ ಏನಾಗಲಿದೆ?

ಈಗ ಈ ನಿಷೇಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡವರ ಆಸ್ತಿಯನ್ನು ಬ್ರಿಟನ್‌ನಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಅವರ ಪ್ರಯಾಣವನ್ನೂ ನಿಷೇಧಿಸಲಾಗುವುದು. ಇದರೊಂದಿಗೆ, ಯಾವುದೇ ಬ್ರಿಟನ್ ಪ್ರಜೆ, ಕಂಪನಿ ಅಥವಾ ಸಂಸ್ಥೆಯು ಇವರೊಂದಿಗೆ ಯಾವುದೇ ರೀತಿಯ ವ್ಯಾಪಾರ ಸಂಬಂಧವನ್ನು ಹೊಂದಲು ಸಾಧ್ಯವಾಗುವುದಿಲ್ಲ ಅಥವಾ ಅವರಿಗೆ ಹಣವನ್ನು ನೀಡಲು ಸಾಧ್ಯವಾಗುವುದಿಲ್ಲ. ರಷ್ಯಾ, ಉಗಾಂಡಾ, ಮ್ಯಾನ್ಮಾರ್ ಮತ್ತು ಇರಾನ್‌ನ ಜನರು ಸಹ ಈ ಪಟ್ಟಿಯಲ್ಲಿ ಸೇರಿದ್ದಾರೆ.

ಇವರ ಮೇಲೂ ನಡೆದಿದೆ ಕಾರ್ಯಾಚರಣೆ

2015 ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಕೊಸ್ಟೆಂಕೊ ಅವರನ್ನು ಹಿಂಸಿಸುವುದಕ್ಕಾಗಿ ಕ್ರೈಮಿಯಾದಲ್ಲಿನ ರಷ್ಯಾದ ಫೆಡರಲ್ ಭದ್ರತಾ ಸೇವೆಯ ಸದಸ್ಯ ಆಂಡ್ರೆ ಟಿಶೆನಿನ್ ಮತ್ತು ಕ್ರೈಮಿಯ ಸ್ವಾಯತ್ತ ಗಣರಾಜ್ಯದ ಹಿರಿಯ ಅಧಿಕಾರಿ ಅರ್ತರ್ ಶಂಬಾಜೋವ್ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದಲ್ಲದೆ, ರಷ್ಯಾದ ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಟರ್ ಮೇಲೆಯೂ ನಿರ್ಬಂಧಗಳನ್ನು ವಿಧಿಸಲಾಗಿದೆ. ಇರಾನ್‌ನ ನ್ಯಾಯಾಂಗ ಮತ್ತು ಜೈಲು ವ್ಯವಸ್ಥೆಗೆ ಸಂಬಂಧಿಸಿದ 10 ಅಧಿಕಾರಿಗಳ ಮೇಲೂ ನಿರ್ಬಂಧಗಳನ್ನು ವಿಧಿಸಲಾಗಿದೆ. ಅ-ತ್ಯಾ-ಚಾ-ರ ಮತ್ತು ಲೈಂ-ಗಿ-ಕ ದೌರ್ಜನ್ಯದ ಆರೋಪದ ಮೇಲೆ ಮ್ಯಾನ್ಮಾರ್‌ನ ಜುಂಟಾ (ಮಿಲಿಟರಿ ಆಡಳಿತಗಾರ) ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ.

Advertisement
Share this on...