ಪಾಕಿಸ್ತಾನವು ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ, ಅದರ ಮೇಲೆ ‘ಜನಸಂಖ್ಯಾ ಸ್ಫೋಟ’ ಅಲ್ಲಿನ ಬಡತನವನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಈ ಈ ಅಬ್ದುಲ್ ಮಜೀದ್ ಚಚ್ಚಾನನ್ನೇ ನೋಡಿ! ಈತ 6 ಮದುವೆಗಳನ್ನು ಮಾಡಿಕೊಂಡಿದ್ದ. ಕಷ್ಟಪಟ್ಟು ಬೆವರು ಸುರಿಸಿ 54 ಮಕ್ಕಳನ್ನೂ ಹುಟ್ಟಿಸಿದ್ದ. ಆದರೆ ಇಂತಹ ದೊಡ್ಡ ಕುಟುಂಬದ ಹೊರತಾಗಿಯೂ ಹೆಂಡತಿ ಮಕ್ಕಳನ್ನು ಸಾಕಲು ಜೀವನದುದ್ದಕ್ಕೂ ಹೆಣಗಾಡಿದ ಅಬ್ದುಲ್ ಮಜೀದ್ ಇದೀಗ ಇಹಲೋಕ ತ್ಯಜಿಸಿದ್ದಾನೆ.
ಇಸ್ಲಾಂಬಾದ್: ಪಾಕಿಸ್ತಾನವು ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ, ಅದರ ಮೇಲೆ ‘ಜನಸಂಖ್ಯಾ ಸ್ಫೋಟ’ ಅಲ್ಲಿನ ಬಡತನವನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಈ ಈ ಅಬ್ದುಲ್ ಮಜೀದ್ ಚಚ್ಚಾನನ್ನೇ ನೋಡಿ! ಇಸ್ಲಾಂನಲ್ಲಿ ಒಂದಕ್ಕಿಂತ ಹೆಚ್ಚು ಮದುವೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯದ ದುರುಪಯೋಗ ಪಡೆದ ಈತ 6 ಮದುವೆಗಳನ್ನು ಮಾಡಿಕೊಂಡಿದ್ದ. ಕಷ್ಟಪಟ್ಟು ಬೆವರು ಸುರಿಸಿ 54 ಮಕ್ಕಳನ್ನೂ ಹುಟ್ಟಿಸಿದ್ದ. ಆದರೆ ಇಂತಹ ದೊಡ್ಡ ಕುಟುಂಬದ ಹೊರತಾಗಿಯೂ ಹೆಂಡತಿ ಮಕ್ಕಳನ್ನು ಸಾಕಲು ಜೀವನದುದ್ದಕ್ಕೂ ಹೆಣಗಾಡಿದ ಅಬ್ದುಲ್ ಮಜೀದ್ ಈಗ ಇಹಲೋಕ ತ್ಯಜಿಸಿದ್ದಾನೆ ಎಂದು ತಿಳಿದು ಬಂದಿದೆ.
ಅಬ್ದುಲ್ ಮಜೀದ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ನೋಶ್ಕಿ ಜಿಲ್ಲೆಯ ನಿವಾಸಿ ಅಬ್ದುಲ್ (75) ಟ್ರಕ್ ಚಾಲಕನಾಗಿದ್ದ. ಆತನ ಮೇಲೆ ಕುಟುಂಬದ ಹೊರೆ ಎಷ್ಟಿತ್ತೆಂದರೆ ವೃದ್ಧಾಪ್ಯದಲ್ಲೂ ಲಾರಿ ಓಡಿಸಬೇಕಾಗಿತ್ತು. ಅವರ ಮಗ ಶಾ ವಾಲಿ ಪ್ರಕಾರ, ಆತನ ಅಬ್ಬು ಸಾಯುವ 5 ದಿನಗಳ ಮುನ್ನವೂ ಟ್ರಕ್ ಓಡಿಸುತ್ತಿದ್ದ.
ಬಹುತೇಕ ಮಕ್ಕಳು ನಿರುದ್ಯೋಗಿಗಳು, ಸಾಯುವವರೆಗೂ ಲಾರಿ ನಡೆಸುತ್ತಿದ್ದ ಅಬ್ದುಲ್
ಪಾಕಿಸ್ತಾನದ ಹೆಚ್ಚುತ್ತಿರುವ ಜನಸಂಖ್ಯೆಯು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಇದರ ಪರಿಣಾಮ ಜನರು ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಅಬ್ದುಲ್ ಮಜೀದ್ ಪುತ್ರ ಶಾಹ್ ವಾಲಿ ಮಾತನಾಡಿ, ಅವರ ಕುಟುಂಬದಲ್ಲಿ ಹಲವರು ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ. ತಂದೆ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು, ಆದರೆ ಹಣದ ಕೊರತೆಯಿಂದ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ ಎಂದಿದ್ದಾನೆ. ಮತ್ತೊಂದೆಡೆ, ಈ ಹಿಂದೆ ಬಂದ ಪ್ರವಾಹದಲ್ಲಿ ಮನೆ ಕೊಚ್ಚಿ ಹೋಗಿತ್ತು. ಅಬ್ದುಲ್ ಮಜೀದ್ ತನ್ನ ಜೀವನದುದ್ದಕ್ಕೂ ಟ್ರಕ್ ಓಡಿಸುತ್ತಿದ್ದ ಎಂದು ಸಂಬಂಧಿಕರು ಹೇಳುತ್ತಾರೆ. ಅಬ್ದುಲ್ ಮಜೀದ್ಗೆ ಟ್ರಕ್ ಓಡಿಸುವುದರಿಂದ ಪ್ರತಿ ತಿಂಗಳು 15 ರಿಂದ 25 ಸಾವಿರ ಪಾಕಿಸ್ತಾನಿ ರೂಪಾಯಿಗಳನ್ನೂ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಣದಿಂದ ಇಷ್ಟು ದೊಡ್ಡ ಕುಟುಂಬದ ಖರ್ಚು ಹೇಗೆ ನಡೆಯುತ್ತಿತ್ತು ಎಂಬುದನ್ನು ಊಹಿಸಬಹುದು. ಅಬ್ದುಲ್ ಅವರ ಮಗ ಶಾ 37 ವರ್ಷದವನಾಗಿದ್ದು ಆತನೂ ಟ್ರಕ್ ಓಡಿಸುತ್ತಾನೆ.
2017 ರಲ್ಲಿ ಪಾಕಿಸ್ತಾನದ ಜನಗಣತಿಯನ್ನು ನಡೆಸಿದಾಗ, ಅಬ್ದುಲ್ ಮಜೀದ್ ಸುದ್ದಿಯಲ್ಲಿದ್ದ. ಪಾಕಿಸ್ತಾನದಲ್ಲಿ 19 ವರ್ಷಗಳ ನಂತರ ಜನಗಣತಿ ನಡೆಸಲಾಗಿತ್ತು. ಆ ಸಮಯದಲ್ಲಿ ಅಬ್ದುಲ್ 4 ಹೆಂಡತಿಯರು ಮತ್ತು 42 ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಇಬ್ಬರು ಪತ್ನಿಯರು ಮತ್ತು 12 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಬ್ದುಲ್ ಮಜೀದ್ 18ನೇ ವಯಸ್ಸಿನಲ್ಲೇ ವಿವಾಹವಾಗಿದ್ದ. ಆತನ 22 ಗಂಡು ಮತ್ತು 20 ಹೆಣ್ಣು ಮಕ್ಕಳು ಕೇವಲ 7 ಕೋಣೆಗಳ ಮನೆಯಲ್ಲೇ ವಾಸಿಸುತ್ತಿದ್ದರು. ಅಬ್ದುಲ್ ಮಜೀದ್ ಅವರ ಬಹುತೇಕ ಮಕ್ಕಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಕಿರಿಯ ಮಗಳಿಗೆ 7 ವರ್ಷ ಎಂದು ಹೇಳಲಾಗಿದೆ.
ಬಡತನದ ಕಾರಣ ಪ್ರಾಣ ಕಳೆದುಕೊಂಡ ಮಕ್ಕಳು
2017 ರಲ್ಲಿ ಸಂದರ್ಶನವೊಂದರಲ್ಲಿ, ಅಬ್ದುಲ್ ಮಜೀದ್ ಬಡತನ, ಹಣದ ಕೊರತೆಯಿಂದಾಗಿ ತನ್ನ ಮಕ್ಕಳಿಗೆ ಊಟ ಕೂಡ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ. ಸರಿಯಾದ ಪೋಷಣೆಯ ಕೊರತೆಯಿಂದ ಎಷ್ಟೋ ಮಕ್ಕಳು ಸಾವನ್ನಪ್ಪಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ, ಮಜೀದ್ ತನ್ನ ಹಿರಿಯ ಮಗನಿಗೆ ಮಾತ್ರ ಸರಿಯಾದ ಶಿಕ್ಷಣ ಕೊಡಿಸಲು ಶಕ್ತನಾಗಿದ್ದ. ವಯಸ್ಸು ಕಳೆದಂತೆ ಸಮಸ್ಯೆಗಳು ಹೆಚ್ಚುತ್ತಲೇ ಇದ್ದವು.
ಒಂದಕ್ಕಿಂತ ಹೆಚ್ಚು ಮದುವೆಯಾಗುವ ಬಗ್ಗೆ ಭಾರತದಲ್ಲೂ ವ್ಯಕ್ತವಾಗುತ್ತಿದೆ ವಿರೋಧ
ಭಾರತದ ಬಗ್ಗೆ ಮಾತನಾಡುವುದಾದರೆ ಇತ್ತೀಚೆಗೆ, ಅಸ್ಸಾಂನ ರಾಜಕೀಯ ಪಕ್ಷ AIUDF ಅಧ್ಯಕ್ಷ ಮತ್ತು ಧುಬ್ರಿ ಸಂಸದ ಬದ್ರುದ್ದೀನ್ ಅಜ್ಮಲ್ (AIUDF Chief Badruddin Ajmak) ಹೇಳಿಕೆ ನೀಡಿದ್ದು, “ಅವರು (ಹಿಂದೂಗಳು) 40 ವರ್ಷಗಳ ನಂತರ ಮದುವೆಯಾದರೆ ಅವರ ಬಳಿ ಮಕ್ಕಳು ಹುಟ್ಟಿಸೋ ಸಾಮರ್ಥ್ಯ ಎಲ್ಲಿರುತ್ತೆ? ಮಕ್ಕಳನ್ನು ಹೊಂದಲು ಅವರು ಮುಸ್ಲಿಂ ಫಾರ್ಮುಲಾವನ್ನ ಅನುಸರಿಸಬೇಕು ಮತ್ತು ತಮ್ಮ ಮಕ್ಕಳನ್ನು 18-20 ವರ್ಷ ವಯಸ್ಸಿನಲ್ಲೇ ಮದುವೆ ಮಾಡಿಸಬೇಕು” ಎಂದಿದ್ದರು. ಅಂದರೆ ಈತನ ಅರ್ಥ ಹಿಂದುಗಳೂ ಮುಸ್ಲಿಮರಂತೆ ಒಂದಕ್ಕಿಂತ ಹೆಚ್ಚು ಮದುವೆಗಳನ್ನ ಮಾಡಿಕೊಳ್ಳಬೇಕು ಎಂಬುದಾಗಿತ್ತು. ಆದರೆ, ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು. ಅದೇ ಸಮಯದಲ್ಲಿ, ಸರ್ಕಾರಗಳು ಈಗ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕಡೆಗೆ ಕೆಲಸ ಮಾಡುತ್ತಿವೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೆ ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಸಮಾನ ಕಾನೂನು ಜಾರಿಯಾಗಲಿದೆ. ಏಕರೂಪ ನಾಗರಿಕ ಸಂಹಿತೆ ಎಲ್ಲೇ ಜಾರಿಗೆ ಬಂದರೂ ಮದುವೆ, ವಿಚ್ಛೇದನ ಹಾಗೂ ಆಸ್ತಿ ಹಂಚಿಕೆಯಲ್ಲಿ ಎಲ್ಲ ಧರ್ಮದವರಿಗೂ ಒಂದೇ ಕಾನೂನು ಅನ್ವಯವಾಗಲಿದೆ.