ಶಾರುಖ್ ಖಾನ್ ವೈಷ್ಣೋದೇವಿ ಮಾತೆಯ ದರ್ಶನ ಪಡೆದ ಬಳಿಕದ ಫೋಟೋವೊಂದು ವೈರಲ್ ಆಗಿದೆ. ಇಲ್ಲಿ ಅವರು ಹಣೆಯ ಮೇಲೆ ತಿಲಕ ಹಚ್ಚಿಕೊಂಡಿರುವುದನ್ನ ಕಾಣಬಹುದು. ಶಾರುಖ್, ವೈನ್-ಬಣ್ಣದ ಸ್ವೆಟ್ ಟೀ ಶರ್ಟ್ನೊಂದಿಗೆ ಬೀನ್ ಕ್ಯಾಪ್ ಧರಿಸಿದ್ದು, ದರ್ಶನದ ನಂತರ ಅವರ ಹಣೆಯ ಮೇಲೆ ದೇವಸ್ಥಾನದಲ್ಲಿ ಹಚ್ಚಿದ ತಿಲಕವನ್ನ ಕಾಣಬಹುದು. ಫೋಟೋದಲ್ಲಿ, ಅವರ ಅಭಿಮಾನಿಯೊಬ್ಬರು ಶಾರುಖ್ ಅವರೊಂದಿಗೆ ಪೋಸ್ ನೀಡುತ್ತಿದ್ದಾರೆ.
ಶಾರುಖ್ ಖಾನ್ ಬಾಲಿವುಡ್ನ ಕಿಂಗ್ ಖಾನ್ ಎಂದು ಸುಮ್ಮನೇ ಕರೆಸಿಕೊಳ್ಳುವುದಿಲ್ಲ. ಅವರು ಏನೇ ಮಾಡಿದರೂ ತಮ್ಮದೇ ಆದ ಗುರುತು ಬಿಡುತ್ತಾರೆ. ಮಾ ವೈಷ್ಣೋ ದೇವಿಯ ದರ್ಶನಕ್ಕೆ ಶಾರುಖ್ ಕಳೆದ ದಿನ ಜಮ್ಮು ತಲುಪಿದ್ದರು. ಆದರೆ ಅಲ್ಲಿ ಶಾರುಖ್ ಮುಖ ಮುಚ್ಚಿಕೊಂಡು ಬಂದು ಹೋಗುತ್ತಿರುವುದು ಕಂಡುಬಂತು. ಆದರೆ ಈಗ ಶಾರುಖ್ ಅವರ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರ ಜಮ್ಮುವಿನ ಕಟರಾ ಪ್ರದೇಶದ್ದು ಎಂದು ಹೇಳಲಾಗುತ್ತಿದೆ.
ಹಣೆಯ ಮೇಲೆ ತಿಲಕ ಹಚ್ಚಿಕೊಂಡಿದ್ದ SRK
ಶಾರುಖ್ ಖಾನ್ ಅವರ ಒಂದು ಝಲಕ್ ಪಡೆಯಲು ಅಭಿಮಾನಿಗಳು ಏನು ಬೇಕಾದರೂ ಮಾಡುತ್ತಾರೆ. ಅವರ ವಿಶೇಷ ಚಿತ್ರಗಳನ್ನು ನೋಡಲು ಅಭಿಮಾನಿಗಳು ಹುಚ್ಚರಾಗುತ್ತಾರೆ. ಆದರೆ ನಿನ್ನೆ ಅದು ಆಗಲಿಲ್ಲ. ಶಾರುಖ್ ಮುಖ ಮುಚ್ಚಿಕೊಂಡು ವೈಷ್ಣೋದೇವಿ ಮಂದಿರವನ್ನು ತಲುಪಿದರು. ಆದರೆ ಇದೀಗ ಶಾರುಖ್ ಮಾತೆಯ ದರ್ಶನ ಪಡೆದ ಫೋಟೋವೊಂದು ವೈರಲ್ ಆಗಿದೆ. ಇಲ್ಲಿ ಅವರು ಹಣೆಯ ಮೇಲೆ ತಿಲಕ ಹಚ್ಚಿಕೊಂಡಿರುವುದನ್ನ ಕಾಣಬಹುದು. ಶಾರುಖ್, ವೈನ್-ಬಣ್ಣದ ಸ್ವೆಟ್ ಟೀ ಶರ್ಟ್ನೊಂದಿಗೆ ಬೀನ್ ಕ್ಯಾಪ್ ಧರಿಸಿದ್ದು, ದರ್ಶನದ ನಂತರ ಅವರ ಹಣೆಯ ಮೇಲೆ ದೇವಸ್ಥಾನದಲ್ಲಿ ಹಚ್ಚಿದ ತಿಲಕವನ್ನ ಕಾಣಬಹುದು.
ಫೋಟೋದಲ್ಲಿ, ಅವರ ಅಭಿಮಾನಿಯೊಬ್ಬರು ಶಾರುಖ್ ಅವರೊಂದಿಗೆ ಪೋಸ್ ನೀಡುತ್ತಿದ್ದಾರೆ. ಈ ವ್ಯಕ್ತಿಯನ್ನು ವೈಷ್ಣೋದೇವಿ ಶ್ರೈನ್ ಬೋರ್ಡ್ ಅಧಿಕಾರಿ ಎಂದು ಹೇಳಲಾಗುತ್ತಿದೆ. ಶಾರುಖ್ ಅವರ ದರ್ಶನ ಪಡೆದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಪಠಾಣ್ ಬರುತ್ತಿದ್ದಾರೆ ಎಂದು ಕಮೆಂಟ್ ಮಾಡುವ ಮೂಲಕ ಯೂಸರ್ ಗಳು ಶಾರುಖ್ ಅವರನ್ನು ಹೊಗಳುತ್ತಿದ್ದಾರೆ.
ಮಾಸ್ಕ್ ನಲ್ಲಿ ಮುಖ ಮುಚ್ಚಿಕೊಂಡಿದ್ದ ಶಾರುಖ್
ಶಾರುಖ್ ಸೋಮವಾರ ಮಾತಾ ವೈಷ್ಣೋ ದೇವಿಗೆ ಭೇಟಿ ನೀಡಿದ್ದರು. ಈ ವೇಳೆ ಶಾರುಖ್ ಓವರ್ಸೈಜ್ಡ್ ಹೂಡಿ ಧರಿಸಿ ಕಾಣಿಸಿಕೊಂಡರು. ಹೂಡಿ ಜೊತೆಗೆ ಶಾರುಖ್ ಕೂಡ ಮುಖ ಕಾಣಿಸದಂತೆ ಮಾಸ್ಕ್ ಹಾಕಿಕೊಂಡಿದ್ದರು. ಶಾರುಖ್ ಅದೇ ಲುಕ್ನಲ್ಲಿ ಹೋಗಿ ಅದೇ ಲುಕ್ನಲ್ಲಿ ಮರಳಿದ್ದಾರೆ. ಅವರ ಮುಂಬರುವ ಚಿತ್ರ ಪಠಾಣ್ನ ನಿರ್ದೇಶಕ ಸಿದ್ಧಾರ್ಥ್ ಆನಂದ್ ಕೂಡ ಶಾರುಖ್ ಜೊತೆ ಉಪಸ್ಥಿತರಿದ್ದರು.
ಶಾರುಖ್ ಕೂಡ ಜಮ್ಮುಗೆ ಹೋಗುವ ಮುನ್ನ ಉಮ್ರಾ ಮಾಡಲು ಮೆಕ್ಕಾಗೆ ತೆರಳಿದ್ದರು. ಶಾರುಖ್ ಬಿಳಿ ಬಟ್ಟೆಯಲ್ಲಿ ಉಮ್ರಾ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಶಾರುಖ್ ತಮ್ಮ ಮುಂಬರುವ ಚಿತ್ರ ಪಠಾಣ್ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಶಾರುಖ್ ನಾಲ್ಕು ವರ್ಷಗಳ ನಂತರ ಮತ್ತೆ ತೆರೆಗೆ ಬರುತ್ತಿದ್ದಾರೆ. ಪಠಾಣ್ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಕೂಡ ಕಂಡು ಬರುತ್ತಿದೆ.
ಇತ್ತೀಚೆಗೆ ಪಠಾಣ್ನ ಬೇಶರಂ ರಂಗ್ ಹಾಡು ಬಿಡುಗಡೆಯಾಗಿದೆ. ಜನರು ಈ ಹಾಡನ್ನು ತುಂಬಾ ಇಷ್ಟಪಟ್ಟಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಅವರ ಬೋಲ್ಡ್ ಸ್ಟೈಲ್ ಹಾಡಿನಲ್ಲಿ ಕಾಣುತ್ತಿದೆ. ಮತ್ತೊಂದೆಡೆ, ಶಾರುಖ್ ತಮ್ಮ ಸಿಕ್ಸ್ ಪ್ಯಾಕ್ ಲುಕ್ನಲ್ಲಿ ತುಂಬಾ ಕಿಲ್ಲರ್ ಆಗಿ ಕಾಣುತ್ತಿದ್ದಾರೆ. ಚಿತ್ರವು ಜನವರಿ 25, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.