ಡಿಸೆಂಬರ್ 11 ಹಿಂದಿ ಚಿತ್ರರಂಗದ ಅತ್ಯುತ್ತಮ ನಟ ದಿಲೀಪ್ ಕುಮಾರ್ ಅವರ 100ನೇ ಜನ್ಮದಿನವಾಗಿತ್ತು. ದಿಲೀಪ್ ಕುಮಾರ್ ನಮ್ಮ ನಡುವೆ ಇದ್ದಿದ್ದರೆ ಡಿಸೆಂಬರ್ 11 ರಂದು ಅವರು ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ದಿಲೀಪ್ ಕುಮಾರ್ ಅವರು ಡಿಸೆಂಬರ್ 11, 1922 ರಂದು ಪಾಕಿಸ್ತಾನದ (ಆಗಿನ ಭಾರತ) ಪೇಶಾವರದಲ್ಲಿ ಜನಿಸಿದರು.
ದಿಲೀಪ್ ಕುಮಾರ್ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಅವರ ನಟನೆ ಬಹಳ ಎಚ್ಚರಿಕೆಯಿಂದ ಕೂಡಿದ್ದಾಗಿತ್ತು. ಅವರು ವರ್ಷಗಳ ಕಾಲ ಹಿರಿತೆರೆಯನ್ನು ಆಳಿದರು. ಈಗ ಅವರು ನಮ್ಮೊಂದಿಗಿಲ್ಲ. ದಿಲೀಪ್ ಕುಮಾರ್ ಜುಲೈ 7, 2021 ರಂದು ನಿಧನರಾದರು. ಅವರು ತಮ್ಮ 98 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ.
ದಿಲೀಪ್ ಕುಮಾರ್ ಹಿಂದೂ ಹೆಸರು ಮತ್ತು ಅನೇಕ ಜನರು ದಿಲೀಪ್ ಕುಮಾರ್ ಅವರನ್ನು ಹಿಂದೂ ಎಂದೇ ಭಾವಿಸಿದ್ದರು. ಹೆಸರು ಹಿಂದೂ ಆಗಿದ್ದರೆ ಆ ವ್ಯಕ್ತಿ ಹಿಂದೂವೇ ಆಗಿರುತ್ತಾರೆ ಅಂತ ಜನ ಅಂದುಕೊಳ್ಳುತ್ತಾರೆ ಆದರೆ ದಿಲೀಪ್ ಕುಮಾರ್ ಒಬ್ಬ ಮುಸ್ಲಿಮ್ ಆಗಿದ್ದರು. ಅವರ ನಿಜವಾದ ಹೆಸರು ಯೂಸುಫ್ ಖಾನ್. ನಂತರ ಮುಸ್ಲಿಂ ಯೂಸುಫ್ ಖಾನ್ ಹಿಂದೂ ದಿಲೀಪ್ ಕುಮಾರ್ ಆದರು. ಲಾಲ್ ಗುಲಾಮ್ ಸರ್ವರ್ ಖಾನ್ ಮತ್ತು ಆಯೇಷಾ ಬೇಗಂ ತಮ್ಮ ಮಗನಿಗೆ ಯೂಸುಫ್ ಖಾನ್ ಎಂಬ ಹೆಸರನ್ನು ನೀಡಿದರು. 1944 ರ ‘ಜ್ವಾರ್ ಭಾಟಾ’ ಚಿತ್ರದ ಸಮಯದಲ್ಲಿ ನಟಿ ದೇವಿಕಾ ರಾಣಿ ಅವರು ಯೂಸುಫ್ ಖಾನ್ ಅವರಿಗೆ ದಿಲೀಪ್ ಕುಮಾರ್ ಎಂಬ ಹೆಸರನ್ನು ನೀಡಿದ್ದರು.
ದಿಲೀಪ್ ತಮ್ಮ ಸಾಕ್ಷ್ಯ ಚಿತ್ರವೊಂದರಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರ ಬಗ್ಗೆ ಮತ್ತೊಂದು ಉಪಾಖ್ಯಾನವನ್ನು ಹೇಳಿದ್ದರು. ಅವರು ಮಾತನಾಡುತ್ತ, “ನನ್ನ ತಂದೆ ಚಲನಚಿತ್ರಗಳ ವಿರುದ್ಧ ತೀವ್ರವಾಗಿ ವಿರೋಧಿಸುತ್ತಿದ್ದರು. ಅವರಿಗೆ ಒಬ್ಬ ಒಳ್ಳೆಯ ಸ್ನೇಹಿತನಿದ್ದ, ಅವರ ಹೆಸರು ಲಾಲಾ ಬನ್ಸಿ ನಾಥ್. ಅವರ ಪುತ್ರರೂ ಸಿನಿಮಾದಲ್ಲಿ ನಟಿಸುತ್ತಿದ್ದರು. ನೀನೇನು ಮಾಡ್ತದೀಯೋ? ಎಂದು ನನ್ನ ತಂದೆ ಆಗಾಗ ಅವರನ್ನ ದೂರುತ್ತಿದ್ದರು. ನಿಮ್ಮ ಚಿಕ್ಕ ಮತ್ತು ಆರೋಗ್ಯವಂತ ಹುಡುಗ ಏನು ಮಾಡುತ್ತಿದ್ದಾನೆ ನೋಡು”
ದಿಲೀಪ್ ಮುಂದೆ ಮಾತನಾಡುತ್ತ, “ನಾನು ಚಲನಚಿತ್ರಗಳಿಗೆ ಪ್ರವೇಶಿಸಿದಾಗ, ಈ ವಿಷಯ ನನ್ನ ತಂದೆಗೆ ತಿಳಿದರೆ ಅವರು ತುಂಬಾ ಕೋಪಗೊಳ್ಳುತ್ತಾರೆ ಎಂದು ನಾನು ತುಂಬಾ ಹೆದರುತ್ತಿದ್ದೆ. ಅವರು ನನ್ನನ್ನ ಥಳಿಸಲೂ ಬಹುದಿತ್ತು. ಆ ಸಮಯದಲ್ಲಿ ನನ್ನ ಮುಂದೆ ಮೂರು ಹೆಸರುಗಳನ್ನು ಇಡಲಾಯಿತು. ಯೂಸುಫ್ ಖಾನ್, ದಿಲೀಪ್ ಕುಮಾರ್ ಮತ್ತು ಬಸುದೇವ್. ಯೂಸುಫ್ ಖಾನನನ್ನು ಇಡಬೇಡಿ, ಉಳಿದವುಗಳು ಯಾವ ಹೆಸರು ನಿಮ್ಮ ಹೃದಯಕ್ಕೆ ಬರುತ್ತದೋ ಅದನ್ನು ಇಟ್ಟುಬಿಡಿ ಎಂದು ನಾನು ಹೇಳಿದೆ” ಎಂದಿದ್ದರು.
44 ನೇ ವಯಸ್ಸಿನಲ್ಲಿ, 22 ರ ಸಾಯರಾ ರನ್ನ ಮದುವೆಯಾದ ದಿಲೀಪ್
ದಿಲೀಪ್ ಕುಮಾರ್ ಅವರು 44 ವರ್ಷದವರಾಗಿದ್ದಾಗ ವಿವಾಹವಾದರು. ಈ ವಯಸ್ಸಿನಲ್ಲಿ, ಅವರ ವಧು ಕೇವಲ 22 ವರ್ಷ ವಯಸ್ಸಿನ ಸಾಯಿರಾ ಬಾನು ಆಗಿದ್ದರು. ದಿಲೀಪ್ ಅವರ ಪತ್ನಿಯ ಹೊರತಾಗಿ ಸಾಯರಾ ಬಾನು ಕೂಡ ಬಾಲಿವುಡ್ ನಟಿಯಾಗಿದ್ದರು. 1966 ರಲ್ಲಿ ಇಬ್ಬರೂ ವಿವಾಹವಾದರು. ತನಗಿಂತ 22 ವರ್ಷ ಚಿಕ್ಕವಳಾದ ಸಾಯರಾಳನ್ನು ದಿಲೀಪ್ ಮದುವೆಯಾಗಿದ್ದರು.
ಮೊದಲೇ ಮದುವೆಯಾಗಿದ್ದರೂ ಎರಡನೇ ಮದುವೆಯಾಗಿದ್ದ ದಿಲೀಪ್ ಕುಮಾರ್
ದಿಲೀಪ್ ಮತ್ತು ಸಾಯರಾ ನಡುವಿನ ಸಂಬಂಧ ಕೊನೆಯವರೆಗೂ ಇತ್ತು. ಸಾಯರಾ ತನ್ನ ಕೊನೆಯ ಉಸಿರು ಇರುವವರೆಗೂ ದಿಲೀಪ್ ಜೊತೆಯೇ ಇದ್ದರು. ಆದರೆ, ದಿಲೀಪ್ ಆಕೆಗೆ ತೀವ್ರ ದುಃಖ ತಂದಿದ್ದರು. ವಾಸ್ತವವಾಗಿ, ದಿಲೀಪ್, ಮದುವೆಯಾಗಿದ್ದರೂ, ಮರುಮದುವೆಯಾಗಿದ್ದರು. ದಿಲೀಪ್ ಅವರ ಎರಡನೇ ಮದುವೆ 1981 ರಲ್ಲಿ ಅಸ್ಮಾ ರೆಹಮಾನ್ ಅವರೊಂದಿಗೆ ನಡೆಯಿತು. ಆದರೆ, ಈ ಸಂಬಂಧ 1983ರಲ್ಲಿಯೇ ಮುರಿದುಬಿದ್ದಿತ್ತು.