ಲವ್ ಜಿಹಾದ್ ಮೂಲಕ ನಿಕಾಹ್ ಮಾಡಿಕೊಂಡು #ರತ್ನಾ ಳನ್ನ #ಆಯೆಶಾ ಮಾಡಿದ ಶಿಕ್ಷಕ #ಕಲೀಮುಲ್ಲಾ_ಶೇಖ್, ಈಗ ಮತ್ತೊಬ್ಬ ಹಿಂದೂ ಯುವತಿಯನ್ನ ಬಲೆಗೆ ಬೀಳಿಸೋಕೆ ಮೊದಲ ಹಿಂದೂ ಪತ್ನಿಯನ್ನೇ…..

in Uncategorized 2,423 views

ಬಿಹಾರದ ಸಿವಾನ್‌ನಿಂದ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. 28 ವರ್ಷದ ಕಲೀಮುಲ್ಲಾ ಶೇಖ್ ಎಂಬ ಶಿಕ್ಷಕ ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸಿದ್ದಾನೆ ಎಂದು ಆತನ ಪತ್ನಿಯೇ ಆರೋಪಿಸಿದ್ದಾರೆ. 27ರ ಹರೆಯದ ಯುವತಿ ಹೇಳುವಂತೆ ಕಲೀಮುಲ್ಲಾ ತನ್ನನ್ನು ಸಮೀರ್ ಖನ್ನಾ ಎಂದು ಹೇಳಿ ತನ್ನನ್ನ ಮೋಸದಿಂದ ಮದುವೆಯಾದ. ಮದುವೆಯ ನಂತರ ಆಕೆಯನ್ನ ಇಸ್ಲಾಂಗೆ ಮತಾಂತರಿಸಲಾಯಿತು. ಈಗ ಅರ್ಚನಾ ಎಂಬ ಮತ್ತೊಬ್ಬ ಹಿಂದೂ ಯವತಿಯನ್ನ ಬಲೆಗೆ ಬೀಳಿಸಲು ತನ್ನನ್ನ ಬಿಟ್ಟು ಓಡಿ ಹೋಗಿದ್ದಾನೆ ಎಂದು ಯುವತಿ ತಿಳಿಸಿದ್ದಾಳೆ.

Advertisement

ಮೂಲಗಳ ಪ್ರಕಾರ, ಕಲೀಮುಲ್ಲಾ ಉತ್ತರ ಪ್ರದೇಶದ ದೇವರಿಯಾ ನಿವಾಸಿಯಾಗಿದ್ದಾನೆ. ಆತ ಸುಮಾರು 6 ವರ್ಷಗಳಿಂದ ಬಿಹಾರದ ಸಿವಾನ್‌ನಲ್ಲಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ನಡೆಸುತ್ತಿದ್ದಾನೆ. ಸಂತ್ರಸ್ತ ಮಹಿಳೆ ದೂರು ದಾಖಲಿಸಲು ಬುಧವಾರ ಎಸ್‌ಪಿ ಕಚೇರಿಗೆ ಬಂದಿದ್ದಳು. ಕಲೀಮುಲ್ಲಾ ಈಗ ತನ್ನನ್ನ ಬಿಟ್ಟು ಮತ್ತೊಬ್ಬ ಹಿಂದೂ ಯುವತಿಯನ್ನ ಮದುವೆಯಾಗಲಿದ್ದಾನೆ, ಹೀಗಾಗಿ ನಾನು ದೂರು ನೀಡಲು ಮುಂದೆ ಬಂದಿದ್ದೇನೆ ಎಂದು ತಿಳಿಸಿದ್ದಾಳೆ.

ಸಂತ್ರಸ್ತ ಮಹಿಳೆ ಪ್ರಕಾರ, ಆಕೆ 2016 ರಲ್ಲಿ ಕಲೀಮುಲ್ಲಾ ಜೊತೆ ಸಂಪರ್ಕಕ್ಕೆ ಬಂದರು. ನಂತರ ಆತ ತನ್ನ ಹೆಸರನ್ನು ಸಮೀರ್ ಖನ್ನಾ ಎಂದು ಹೇಳಿಕೊಂಡಿದ್ದ. ಆತ ಕೈಗೆ ಪವಿತ್ರ ದಾರ ಕಟ್ಟಿಕೊಳ್ಳುತ್ತಿದ್ದ. ಹಣೆಗೆ ತಿಲಕ ಹಚ್ಚಿಕೊಳ್ಳುತ್ತಿದ್ದ. ಪೂಜೆಯಲ್ಲಿ ಭಾಗಿಯಾಗುತ್ತಿದ್ದ. ಮಾರ್ಚ್ 17, 2017 ರಂದು ಇಬ್ಬರೂ ನ್ಯಾಯಾಲಯದಲ್ಲಿ ವಿವಾಹವಾದೆವು. ಇದಾದ ನಂತರ ತಾನು ಸಮೀರ್ ಖನ್ನಾ ಅಲ್ಲ ಕಲೀಮುಲ್ಲಾ ಎಂಬ ತನ್ನ ಅಸಲಿ ಗುರುತನ್ನು ಬಹಿರಂಗಪಡಿಸಿ ನನ್ನನ್ನ ಇಸ್ಲಾಂಗೆ ಮತಾಂತರಗೊಳಿಸಿದ. ಸಿವಾನ್ ಜಿಲ್ಲೆಯ ಹುಸೈಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮದರಸಾಕ್ಕೆ ಹೋಗಿ ಆಕೆಯನ್ನು ಮತ್ತೆ ಮದುವೆಯಾದ. ಅಷ್ಟೇ ಅಲ್ಲ ಸಂತ್ರಸ್ತ ಯುವತಿಗೆ ಆಯೇಷಾ ಖಾತೂನ್ ಎಂದೂ ಮರುನಾಮಕರಣ ಮಾಡಲಾಯಿತು. ಹುಟ್ಟಿದ ಮಗಳ ಹೆಸರನ್ನ ಸುಹಾನಾ ಖಾತೂನ್ ಎಂದು ಇಡಲಾಯಿತು.

ಸಂತ್ರಸ್ತ ಮಹಿಳೆ ಪ್ರಕಾರ, ಕಲೀಮುಲ್ಲಾ ಆಕೆಯನ್ನ ಥಳಿಸುತ್ತಿದ್ದ. ಸುಮಾರು ನಾಲ್ಕು ತಿಂಗಳ ಹಿಂದೆ ಓಡಿಹೋಗಿದ್ದ ಆತ ಈಗ ಮತ್ತೊಬ್ಬ ಹಿಂದೂ ಯುವತಿಯನ್ನು ಮದುವೆಯಾಗಲು ಹೊರಟಿದ್ದಾನೆ. ಕೋಚಿಂಗ್ ಇನ್ಸ್ಟಿಟ್ಯೂಟ್ ಕೂಡ ನಿಲ್ಲಿಸಿದ್ದಾನೆ. ಸಂತ್ರಸ್ತೆಯ ಪ್ರಕಾರ, ಅನೇಕ ಹಿಂದೂ ಹುಡುಗಿಯರು ಅವನ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕೆಲವು ಡಾಕ್ಯುಮೆಂಟ್‌ಗಳನ್ನ ಸಮೀರ್ ಹೆಸರಿನಲ್ಲಿ ಮತ್ತು ಇನ್ನು ಕೆಲವು ಕಲೀಮುಲ್ಲಾ ಶೇಖ್ ಹೆಸರಿನಲ್ಲಿ ಮಾಡಿಸಿಕೊಂಡಿದ್ದಾನೆ.

ಸಾಂದರ್ಭಿಕ ಚಿತ್ರ

ಮಹಿಳೆಯ ದೂರಿನ ಮೇರೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೀವಾನ್ ಎಸ್ಪಿ ಶೈಲೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ:

“ಶೃದ್ಧಾಳದ್ದು 35 ತುಂಡು ಮಾಡಿದ್ದ ಆದರೆ ನಿನ್ನನ್ನ 70 ತುಂಡು ಮಾಡ್ತೀವಿ”: ಲವ್ ಜಿಹಾದ್ ಮೂಲಕ ಮದುವೆಯಾಗಿ ಹೆಂಡತಿಗೆ ಧಮಕಿ ಹಾಕಿದ #ಅರ್ಷದ್_ಮಲಿಕ್

ಮಹಾರಾಷ್ಟ್ರದ ಧುಲೆ ಜಿಲ್ಲೆಯಿಂದ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಅರ್ಷದ್ ಮಲಿಕ್ ಮತ್ತು ಆತನ ತಂದೆ ಸಲೀಂ ಮಲಿಕ್ ವಿರುದ್ಧ ಧುಲೆಯ ದೇವ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಹಿಂದೂ ಮಹಿಳೆಗೆ ತನ್ನ ಗುರುತನ್ನ ಮರೆಮಾಚುವ ಮೂಲಕ 2 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಕಲಂ 376(2)(ಎನ್), 377, 327, 504, 506, 34 ಮತ್ತು 323 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

24 ವರ್ಷದ ಸಂತ್ರಸ್ತೆ, ಹಿಂದೂ ಯುವತಿ, ಗುರುವಾರ (ಡಿಸೆಂಬರ್ 1, 2022) ಪಶ್ಚಿಮ ದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಂತ್ರಸ್ತೆಯ ಪ್ರಕಾರ, ಆರೋಪಿ ಅರ್ಷದ್ ಮಲಿಕ್ ತನ್ನನ್ನು ಹರ್ಷದ್ ಮಾಲಿ ಎಂಬ ಹಿಂದೂ ವ್ಯಕ್ತಿ ಎಂದು ಪರಿಚಯಿಸಿಕೊಂಡನು ಮತ್ತು ನಂತರ ಮದುವೆಯಾಗುವಂತೆ ಮನವೊಲಿಸಿದನು. ಸಂತ್ರಸ್ತೆಯ ಜೊತೆಗೆ ಅರ್ಷದ್ ತಂದೆ ಸಲೀಂ ಮಲಿಕ್ ಕೂಡ ಆಕೆಯ ಮೇಲೆ ಹಲವು ಬಾರಿ ಅ-ತ್ಯಾ-ಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಸಲೀಂ ಎರಡನೇ ಆರೋಪಿ.

ಸಂತ್ರಸ್ತೆಯ ಪ್ರಕಾರ, ಏಪ್ರಿಲ್ 4, 2016 ರಂದು ಗೌರವ್ ಎಂಬ ಯುವಕನೊಂದಿಗೆ ಆಕೆಯ ಮೊದಲ ವಿವಾಹವಾಗಿತ್ತು. ಅವರು 2017 ರಲ್ಲಿ ಮಗನಿಗೆ ಜನ್ಮ ನೀಡಿದರು. ಗೌರವ್ 2019 ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದರ ನಂತರ, ಸಂತ್ರಸ್ತ ಯುವತಿ ಸರ್ಕಾರಿ ಉದ್ಯೋಗವನ್ನು ಪಡೆಯಲು ಮಹಾರಾಷ್ಟ್ರ ಪೊಲೀಸ್ ನೇಮಕಾತಿ ತರಗತಿಗಳಿಗೆ ಸೇರಿಕೊಂಡಳು. ಇಲ್ಲಿ ಆಕೆ ಅರ್ಷದ್ ಮಲಿಕ್‌ನನ್ನ ಭೇಟಿಯಾದರು, ಆತ ಸಂತ್ರಸ್ತೆಗೆ ಹರ್ಷಲ್ ಮಾಲಿ ಎಂದು ಪರಿಚಯಿಸಿಕೊಂಡನು. ಇಬ್ಬರ ನಡುವೆ ಸ್ನೇಹ ಬೆಳೆಯಿತು. ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಅರ್ಷದ್ ಸಂತ್ರಸ್ತೆಯನ್ನು ಹೊರಹೋಗುವ ನೆಪದಲ್ಲಿ ಸಮೀಪದ ಕಾಡಿಗೆ ಕರೆದೊಯ್ದು ಅಲ್ಲಿ ಸಂತ್ರಸ್ತೆಯ ಮೇಲೆ ಅ-ತ್ಯಾ-ಚಾರವೆಸಗಿದ್ದು, ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ.

ಈ ಘಟನೆಯ ನಂತರ, ಸಂತ್ರಸ್ತೆ ಹರ್ಷಲ್ ಎಂದು ಹೇಳಿಕೊಂಡಿದ್ದ ಅರ್ಷದ್‌ನಿಂದ ದೂರವಾಗಲು ಪ್ರಾರಂಭಿಸಿದರು. ಅರ್ಷದ್ ಸಂತ್ರಸ್ತೆಗೆ ತಾನು ಆಕೆಯನ್ನ ತುಂಬಾ ಪ್ರೀತಿಸುತ್ತೇನೆ ಎಂದು ಭರವಸೆ ನೀಡಿದ್ದ. ಸ್ನೇಹ ಮುರಿದುಕೊಂಡ ಕಾರಣ ಆತ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಲವಂತವಾಗಿ, ಸಂತ್ರಸ್ತೆ ಅರ್ಷದ್ ಜೊತೆ ವಾಸಿಸಲು ನಿರ್ಧರಿಸಿದರು.

ಜುಲೈ 2021 ರಲ್ಲಿ, ಸಂತ್ರಸ್ತ ಯುವತಿ ತನ್ನ ಸ್ನೇಹಿತ ಹರ್ಷಲ್ ಮಾಲಿ ಅಲ್ಲ, ಅರ್ಷದ್ ಮಲಿಕ್ ಎಂದು ತಿಳಿದುಕೊಂಡಳು. ಸತ್ಯ ತಿಳಿದ ನಂತರ ಅರ್ಷದ್ ಸಂತ್ರಸ್ತೆಗೆ ಪ್ರೀತಿಯಲ್ಲಿ ಹೆಸರು ಮತ್ತು ಧರ್ಮ ಮುಖ್ಯವಲ್ಲ ಎಂದು ಹೇಳಿದ್ದಾನೆ. ಅದರ ನಂತರ, ಸಂತ್ರಸ್ತೆ ತನ್ನ ಮಗ ವಿವೇಕ್ ಮತ್ತು ಅರ್ಷದ್ ಜೊತೆಗೆ ವಾಸಿಸಲು ಅಮಲ್ನೇರ್ ಮತ್ತು ಉಲ್ಲಾಸ್ನಗರ ನಗರಗಳಲ್ಲಿ ವಾಸಿಸಲು ಹೋದರು.

ಈ ವೇಳೆ ಅರ್ಷದ್ ಸಂತ್ರಸ್ತೆಯ ಮೊದಲ ಪತಿಯಿಂದ ಪಡೆದಿದ್ದ 2.5 ಲಕ್ಷ ರೂ ಗಳನ್ನೂ ಲಪಟಾಯಿಸಿದ್ದ. ಅಷ್ಟೇ ಅಲ್ಲ, ಅರ್ಷದ್ ಸಂತ್ರಸ್ತೆಯ ಮೊದಲ ಪತಿ ಗೌರವ್ ಉಡುಗೊರೆಯಾಗಿ ನೀಡಿದ್ದ ಚಿನ್ನದ ಸರದ ಮೇಲೂ ಕಣ್ಣಿಟ್ಟಿದ್ದ. ಅರ್ಷದ್ ಆ ಸರವನ್ನೂ ಆಕೆಯಿಂದ ಕಿತ್ತುಕೊಂಡ. ಇದಾದ ನಂತರ ಅರ್ಷದ್ ಸಂತ್ರಸ್ತೆಯ ಭಾಗವಾಗಿ ಸಂತ್ರಸ್ತೆಯ ಜೊತೆಗಿನ ಸಂಬಂಧದ ಬಗ್ಗೆ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾನೆ. ನಂತರ ಸಂತ್ರಸ್ತೆ ತನ್ನ ಮಗನಾದ ವಿವೇಕ್ ಮತ್ತು ಅರ್ಷದ್ ಜೊತೆಗೆ ಉಲ್ಲಾಸನಗರ ತಲುಪಿದ್ದಾಳೆ.

ಕೆಲವು ದಿನಗಳ ನಂತರ, ಅರ್ಷದ್ ತಂದೆ ಸಲೀಂ ಮಲಿಕ್ ಉಲ್ಲಾಸನಗರದ ಮನೆಗೆ ತಲುಪುತ್ತಾನೆ. ಪೊಲೀಸ್ ವರದಿಯ ಪ್ರಕಾರ, ಸಲೀಂ ತನ್ನ ಮಗ ಅರ್ಷದ್ ಅನುಮತಿಯೊಂದಿಗೆ ಸಂತ್ರಸ್ತೆಯ ಮೇಲೆ ಅ-ತ್ಯಾ-ಚಾರ ಎಸಗಿದ್ದಲ್ಲದೆ, ಆಕೆಗೆ ಅಸ್ವಾಭಾವಿಕ ಚಿತ್ರಹಿಂಸೆಯನ್ನೂ ನೀಡಿದ್ದಾನೆ. ನಾಲ್ಕು ತಿಂಗಳ ನಂತರ, ಅರ್ಷದ್ ಅವಳನ್ನು ಧುಲೆ ನಗರದ ವಿಟಾ ಭಟ್ಟಿ ಪ್ರದೇಶದಲ್ಲಿರುವ ತನ್ನ ಮನೆಗೆ ಕರೆತಂದನು. ಇವರಿಬ್ಬರೂ ಇಸ್ಲಾಮಿಕ್ ಪದ್ಧತಿಯಂತೆ ವಿವಾಹವಾಗಿದ್ದರು.

ಸಂತ್ರಸ್ತೆಯ ಪ್ರಕಾರ, ಈ ನಡುವೆ ಆಕೆ ಗರ್ಭಿಣಿಯಾದಳು. ಆಕೆಯ ಗರ್ಭಾವಸ್ಥೆಯಲ್ಲಿಯೂ, ಅರ್ಷದ್ ಮತ್ತು ಅವನ ತಂದೆ ಸಲೀಂ ಇಬ್ಬರೂ ಅವಳ ಮೇಲೆ ಬಲವಂತಪಡಿಸುತ್ತಿದ್ದರು. ಆಗಸ್ಟ್ 26, 2022 ರಂದು, ಸಂತ್ರಸ್ತ ಎರಡನೇ ಮಗನಿಗೆ ಜನ್ಮ ನೀಡಿದಳು. ಇದಾದ ನಂತರವೂ ಸಲೀಂ ಸಂತ್ರಸ್ತೆಯ ಜತೆ ಮತ್ತೆ ಮತ್ತೆ ಅನುಚಿತವಾಗಿ ವರ್ತಿಸುತ್ತಿದ್ದ.

ಸಂತ್ರಸ್ತೆಯ ದೂರಿನ ಪ್ರಕಾರ, ಆಕೆಗೆ ಹೊಸ ಇಸ್ಲಾಮಿಕ್ ಹೆಸರನ್ನು ನೀಡಿ ಬಲವಂತವಾಗಿ ಮತಾಂತರಿಸಲಾಗಿದೆ. ಅಲ್ಲದೆ, ಮೊದಲ ಪತಿಯಿಂದ ಮಗನನ್ನು ಮತಾಂತರಿಸುವ ಪ್ರಯತ್ನವೂ ನಡೆದಿದೆ. ಅರ್ಷದ್ ಕುಟುಂಬದವರು ಮಗ ವಿವೇಕ್ ಗೆ ಸುನ್ನತ್ ಮಾಡಿಸಲು ಬಯಸಿದ್ದರು. ಆಗ ಸಂತ್ರಸ್ತೆ ವಿವೇಕ್ ನನ್ನು ಅಜ್ಜಿಯ ಬಳಿ ಕಳುಹಿಸಿದ್ದಾಳೆ.

ವಿರೋಧ ವ್ಯಕ್ತಪಡಿಸಿದ್ದಕ್ಕೆ ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ನಂತರ ಅರ್ಷದ್ ಮತ್ತು ಅವನ ಕುಟುಂಬವು ಸಂತ್ರಸ್ತ ಯುವತಿಯನ್ನ ಕೊ-ಲ್ಲು-ವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿತು. ‘ಶ್ರದ್ಧಾಳನ್ನು 35 ತುಂ-ಡುಗಳನ್ನಾಗಿ ಮಾಡಲಾಗಿದೆ, ನಿನ್ನನ್ನು 70 ತುಂ-ಡು ಮಾಡಲಾಗುವುದು’ ಎಂದು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ.

ಕೊ-ಲೆ ಬೆದರಿಕೆ ಬಂದ ನಂತರ ಸಂತ್ರಸ್ತೆ ಹೇಗೋ ಅರ್ಷದ್ ಮನೆಯಿಂದ ಪರಾರಿಯಾಗಿದ್ದಾಳೆ. ಅವಳು ತನ್ನ ಮೊದಲ ಗಂಡನ ಮನೆಗೆ ತಲುಪಿದಳು ಮತ್ತು ಸಹಾಯಕ್ಕಾಗಿ ತನ್ನ ಅತ್ತೆಯನ್ನು ಕೇಳಿದಳು. ಈ ಸಂಬಂಧ ಅರ್ಷದ್ ಹಾಗೂ ಆತನ ತಂದೆ ಸಲೀಂ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement
Share this on...