#ಶಾಕಿಂಗ್: “ಬರೋಬ್ಬರಿ 5 ಕೋಟಿ ರೂ. ಪಡೆದು ಪಾಕಿಸ್ತಾನದ ಸೇನಾ ಜನರಲ್ ಜೊತೆ ದೀಪಿಕಾ ಪಡುಕೋಣೆ….” ಪಠಾಣ್ ಬಾಯ್ಕಾಟ್‌ಗೆ ಹೆಚ್ಚಾಯ್ತು ಆಗ್ರಹ

in Uncategorized 91,032 views

ಇತ್ತೀಚಿನ ದಿನಗಳಲ್ಲಿ ಪಠಾಣ್ ಚಿತ್ರದ ಟ್ರೆಂಡ್ ಬಾಲಿವುಡ್ ನಲ್ಲಿ ಗೋಚರಿಸುತ್ತಿದೆ. ಚಿತ್ರವನ್ನ ಬಾಯ್‌ಕಾಟ್ ಮಾಡುವಂತೆ ಅಭಿಯಾನಗಳು ಶುರುವಾಗಿವೆ. ಇದಕ್ಕೆ ಕಾರಣ ದೀಪಿಕಾ ರಿಂದ ಹಿಡಿದು ಶಾರುಖ್ ವರೆಗೆ ಹಿಂದೂ ಧರ್ಮವನ್ನು ಲೇವಡಿ ಮಾಡಿದ್ದಾಗಿದೆ. ಚಿತ್ರದ ಮೊದಲ ಹಾಡಿನ ಬೇಷರಂ ರಂಗ್‌ನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು, ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ. ದೀಪಿಕಾ ಬಾಯ್‌ಕಾಟ್ ಗೆ ಮತ್ತೊಂದು ಕಾರಣವೂ ಇದೆ. ವಾಸ್ತವವಾಗಿ, ‘ಛಪಾಕ್’ ಚಿತ್ರದ ಪ್ರಚಾರದ (2020 ರಲ್ಲಿ) ಸಮಯದಲ್ಲಿ, ದೀಪಿಕಾ ಪಡುಕೋಣೆ ಜೆಎನ್‌ಯು ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಹೋಗಿದ್ದರು ಮತ್ತು ಆಕೆ ಜೆಎನ್‌ಯುನಲ್ಲಿ ಪ್ರತಿಭಟನಾಕಾರರ ನಡುವೆ ನಿಲ್ಲಲು ಪಾಕಿಸ್ತಾನಿ ಏಜೆಂಟ್ ಅನಿಲ್ ಮುಸರತ್ ಎಂಬಾತನಿಂದ ಸುಮಾರು 5 ಕೋಟಿ ರೂಪಾಯಿ ಪಡೆದಿದ್ದರು ಎಂಬ ಗುರುತರ ಆರೋಪವೂ ಕೇಳಿಬಂದಿತ್ತು.

Advertisement

ಹೌದು ಮತ್ತು ವಿಷಯ ಬೆಳಕಿಗೆ ಬಂದ ನಂತರ, ಇಡಿ ತನ್ನ ತನಿಖೆಯನ್ನು ಪ್ರಾರಂಭಿಸಿತ್ತು. ದೀಪಿಕಾ ವಿರುದ್ಧ ಇಂತಹ ಗಂಭೀರ ಆರೋಪಗಳನ್ನು ಮಾಡುದ್ದವರು ಯಾರೋ ಸಾಮಾನ್ಯ ಜನರಲ್ಲ ಬದಲಾಗಿ ಭಾರತೀಯ ಗುಪ್ತಚರ ಸಂಸ್ಥೆ RAW ನ ಮಾಜಿ ಅಧಿಕಾರಿ ಎನ್‌ಕೆ ಸೂದ್ ಆಗಿದ್ದರು. ಅನಿಲ್ ಮುಸರತ್ ದೀಪಿಕಾಗೆ ಕರೆ ಮಾಡಿ ಜೆಎನ್‌ಯುಗೆ ಹೋಗುವಂತೆ ಹೇಳಿದ್ದ ಎಂದು ಎನ್‌ಕೆ ಸೂದ್ ಹೇಳುತ್ತಾರೆ. ಈ ಹಿಂದೆ, ಸುಶಾಂತ್ ಸಿಂಗ್ ಸಾವಿನ ನಂತರ, ಬಾಲಿವುಡ್‌ನ ಕರಾಳ ಸತ್ಯ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಜನರ ಪಾಕಿಸ್ತಾನಿ ಏಜೆಂಟ್‌ಗಳ ನಡುವಿನ ಸಂಬಂಧವನ್ನು ಬಹಿರಂಗಪಡಿಸಿದ ನಂತರ, ಈ ಇಡೀ ವಿಷಯವು ಬಿಸಿಯಾಗಿತ್ತು ಮತ್ತು ಈ ಮಧ್ಯೆ, ಎನ್‌ಕೆ. ಸೂದ್ ಅವರ ವಿಡಿಯೋವೊಂದರಲ್ಲಿ ದೀಪಿಕಾ ಅವರನ್ನು ಟೀಕಿಸಿದ್ದರು. ಜೆಎನ್‌ಯುಗೆ ಹೋಗುವುದರ ಹಿಂದೆ ಅಡಗಿರುವ ಸತ್ಯ ಬಯಲಾಗಿತ್ತು. ಇದು ತನ್ನ ಚಿತ್ರದ ಪ್ರೊಮೋಷನ್ ಮಾಡಲು ದೀಪಿಕಾಳ PR ಸ್ಟಂಟ್ ಎಂದು ಮೊದಲು ಸುದ್ದಿಯಾಗಿತ್ತು.

ಎನ್‌ಕೆ ಸೂದ್ ಅವರು ತಮ್ಮ ವೀಡಿಯೊದಲ್ಲಿ ಅನಿಲ್ ಮುಸರತ್‌ನ ವೃತ್ತಿಯ ಬಗ್ಗೆ ಹೇಳಿದ್ದರು ಮತ್ತು ಅನಿಲ್ ಮುಸರತ್ ಪಾಕಿಸ್ತಾನದ ಆಗಿನ ಪ್ರಧಾನಿ ಇಮ್ರಾನ್ ಖಾನ್‌ಗೆ ಹೇಗೆ ಆಪ್ತರಾಗಿದ್ದಾನೆ ಎಂಬುದರ ಕುರಿತು ಮಾಹಿತಿ ನೀಡಿದ್ದರು. ಇದರಿಂದಾಗಿ ಆತ ಇಮ್ರಾನ್ ಖಾನ್ ಅವರ ಪಕ್ಷದ ಪಿಡಿಐಗೆ ಬೆಂಬಲವನ್ನು ನೀಡಿದ್ದ. ಇದಲ್ಲದೆ, ಅನಿಲ್ ಪಾಕಿಸ್ತಾನಿ ಸೇನೆ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದಾನೆ. ಆದರೆ, ಈ ಎಲ್ಲಾ ವಿಷಯಗಳ ಹೊರತಾಗಿಯೂ, ಅನಿಲ್ ನೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿರುವ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇದ್ದಾರೆ. ಇವರಲ್ಲಿ ಕರಣ್ ಜೋಹರ್, ಅನಿಲ್ ಕಪೂರ್ ಮುಂತಾದ ಅನೇಕ ಪ್ರಸಿದ್ಧ ಮುಖಗಳೂ ಇವೆ.

ಅನೇಕ ಬಾಲಿವುಡ್ ನಟರು ಸಹ ಅನಿಲ್ ಮಗಳ ಮದುವೆಯಲ್ಲೂ ಭಾಗವಹಿಸಿದ್ದರು ಮತ್ತು ಅನಿಲ್ ಕಪೂರ್ ಅವರ ಮಗಳು ಅಂದರೆ ಸೋನಮ್ ಕಪೂರ್ ಮದುವೆಯಾದಾಗಲೂ ಪಾಕಿಸ್ತಾನಿ ಏಜೆಂಟ್ ಅನಿಲ್ ಅದರಲ್ಲಿ ಕಾಣಿಸಿಕೊಂಡಿದ್ದ. 2020 ರ ಜನವರಿ ತಿಂಗಳಲ್ಲಿ ದೀಪಿಕಾ ಜೆಎನ್‌ಯುಗೆ ಹೋಗಿದ್ದರು ಎಂದು ಅವರು ಹೇಳಿದರು. ತುಕ್ಡೆ-ತುಕ್ಡೆ ಗ್ಯಾಂಗ್‌ನ ಪ್ರತಿಭಟನೆ ನಡೆಯುತ್ತಿತ್ತು. ಆಗ ದೀಪಿಕಾ ತುಕ್ಡೆ-ತುಕ್ಡೆ ಗ್ಯಾಂಗ್‌ನ್ನ ಬೆಂಬಲಿಸಲು ಮತ್ತು ತನ್ನ ಚಲನಚಿತ್ರವನ್ನು ಪ್ರಚಾರ ಮಾಡಲು ಅಲ್ಲಿಗೆ ಹೋಗಿದ್ದಳು. ಆದರೆ ಆಕೆ ಅನಿಲ್ ಮುಸರತ್‌ನ ಅಣತಿಯಂತೆಯೇ ಇದೆಲ್ಲವನ್ನೂ ಮಾಡಿದ್ದಳು. ಆ ವೇಳೆ ಅನಿಲ್ ಮುಸರತ್ ದುಬೈನಲ್ಲಿದ್ದು, ಅಲ್ಲಿಂದ ದೀಪಿಕಾಗೆ ಕರೆ ಮಾಡಿದ್ದ. ಅದರ ನಂತರ ದೀಪಿಕಾ ತನ್ನ ಟಾಸ್ಕ್ ಮಾಡಲು ಮುಂದಾದಳು. ಪಾಕಿಸ್ತಾನಿ ಏಜೆಂಟ್ ಅನಿಲ್ ಮುಸರತ್ ದೀಪಿಕಾಗೆ ಸುಮಾರು 5 ಕೋಟಿ ರೂ. ನೀಡಿದ್ದ ಎಂದು ಸೂದ್ ತಿಳಿಸಿದ್ದರು.

Advertisement
Share this on...