3 ಮಕ್ಕಳ ತಾಯಿಯನ್ನ ನಿಕಾಹ್ ಮಾಡಕೊಳ್ಳಲು ಬಯಸಿದ್ದ ದಾನಿಶ್, ಒಪ್ಪದಿದ್ದಾಗ ಹಿಂದೂ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು….😡

in Uncategorized 581 views

ಬಿಹಾರದ ಮೋತಿಹಾರಿಯಲ್ಲಿ ವಿವಾಹಿತ ಹಿಂದೂ ಮಹಿಳೆಯೊಬ್ಬಳ ಮೇಲೆ ಪೆಟ್ರೋಲ್ ಸು-ರಿ-ದು ಸು-ಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ಹೆಸರು ದಾನಿಶ್ ಆಲಂ ಎಂದು ಹೇಳಲಾಗುತ್ತಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿವಾಹಿತ ಮಹಿಳೆಯನ್ನು ಮದುವೆಯಾಗುವಂತೆ ದಾನಿಶ್ ಆಲಂ ಬಲವಂತವಾಗಿ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಘಟನೆ ಗುರುವಾರ (15 ಡಿಸೆಂಬರ್ 2022) ರಾತ್ರಿ ನಡೆದಿದೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೇವಪುರ ಪರ್ಸಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘೋಡಾಸಹನ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯಿ ಗ್ರಾಮದ ನಿವಾಸಿ ದಾನಿಶ್, 35 ವರ್ಷದ ವಿವಾಹಿತ ಮಹಿಳೆ ಅರ್ಚನಾ ಕುಶ್ವಾಹಾ ಅವರನ್ನು ಮದುವೆಯಾಗುವಂತೆ ದೀರ್ಘಕಾಲದಿಂದ ಒತ್ತಡ ಹೇರುತ್ತಿದ್ದ. ದಾನಿಶ್‌ನ ಒತ್ತಡದ ನಂತರವೂ ಸಂತ್ರಸ್ತೆ ಮದುವೆಗೆ ನಿರಾಕರಿಸುತ್ತಲೇ ಇದ್ದಳು. ಅರ್ಚನಾಗೆ 3 ಮಕ್ಕಳಿದ್ದು, ಆಕೆಯ ಪತಿ ರಣಧೀರ್ ಕುಮಾರ್ ಕುಶ್ವಾಹ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದು, ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಮನೆಗೆ ಬರುತ್ತಿದ್ದರು.

ಸಂತ್ರಸ್ತೆ ಮತ್ತು ದಾನಿಶ್ ಸುಮಾರು ಒಂದೂವರೆ ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವಿನ ಮಾತು ಮಿಸ್ಡ್ ಕಾಲ್ ನಿಂದ ಶುರುವಾಯಿತು. ಘಟನೆ ನಡೆದ ದಿನ ಸಂಜೆ 7 ಗಂಟೆಗೆ ಸಂತ್ರಸ್ತೆ ತನ್ನ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ಅಷ್ಟರಲ್ಲಿ ದಾನಿಶ್ ಆಲಂ ಆಕೆಯ ಮನೆಗೆ ಬಂದನು. ಸ್ವಲ್ಪ ಸಮಯದ ನಂತರ, ದಾನಿಶ್ ಮತ್ತೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದನು. ಈ ವಿಚಾರವಾಗಿ ಇಬ್ಬರ ನಡುವೆ ಜಟಾಪಟಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ವೇಳೆ ಮಗು ಹಾಗೂ ಮತ್ತೊಬ್ಬ ಮಹಿಳೆ ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದರು. ಗ್ರಾಮಸ್ಥರ ಪ್ರಕಾರ ಮಹಿಳೆಯ ಕಿರುಚಾಟ ಇಡೀ ಗ್ರಾಮದಲ್ಲಿ ಕೇಳಿಬಂದಿದೆ. ಓಡುತ್ತಿದ್ದ ದಾನಿಶ್ ನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಕ್ಕಿಬಿದ್ದ ದಾನಿಶ್ ಆಲಂ ತನ್ನನ್ನು ದಾನಿಶ್ ಕುಮಾರ್ ಎಂದು ಹೇಳಿಕೊಳ್ಳುತ್ತಿದ್ದ.

ಈ ಮಧ್ಯೆ, ದಾನಿಶ್ ಕೋಪದ ಭರಾಟೆಯಲ್ಲಿ ಮಹಿಳೆಗೆ ಪೆಟ್ರೋಲ್ ಸು-ರಿ-ದು ಬೆಂ-ಕಿ ಹಚ್ಚಿದ್ದಾನೆ ಎಂದು ವರದಿಯಾಗಿದೆ. ಆಕೆಯ ಚೀರಾಟವನ್ನ ಕೇಳಿ ನೆರೆದಿದ್ದ ಜನರು ಜಮಾಯಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಕಂಡು ಸಂತ್ರಸ್ತೆಯನ್ನು ಮೋತಿಹಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಾನಿಶ್‌ನನ್ನ ನಾನು ಪ್ರೀತಿಸುತ್ತಿರಲಿಲ್ಲ ಆತನೇ ನನಗೆ ಕಿರುಕುಳ ಕೊಡುತ್ತಿದ್ದ, ಅವನೊಂದಿಗೆ ಮಾತನಾಡದಿದ್ದರೆ ಇಡೀ ಕುಟುಂಬವನ್ನು ಕೊಂ-ದು ಹಾಕುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತ ಮಹಳೆ ತಿಳಿಸಿದ್ದಾರೆ. ಕಲ್ಯಾಣಪುರ ಠಾಣೆಯ ಪ್ರಭಾರಿ ಪ್ರಕಾರ ಮಾಹಿತಿ ಮೇರೆಗೆ ಆರೋಪಿ ದಾನಿಶನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ದಾನಿಶ್, ಘಟನೆಯ ದಿನ ಅರ್ಚನಾ ಯಾರನ್ನೋ ಕೊ-ಲ್ಲ-ಲು ಕರೆದಿದ್ದಳು ಎಂದು ಹೇಳಿದ್ದಾನೆ.

Advertisement
Share this on...