“ಈತನ ಚಿತ್ರ ಎಲ್ಲೂ ಬಿಡುಗಡೆ ಮಾಡೋಕೆ ಬಿಡಲ್ಲ, ಈ ಶಾರುಖ್ ಖಾನ್ ನಮ್ಮ ಇಸ್ಲಾಂನ್ನ….”: ಹಿಂದುಗಳಾಯ್ತು ಈಗ ಶಾರುಖ್ ವಿರುದ್ಧ ತಿರುಗಿಬಿದ್ದ ಮುಸ್ಲಿಂ ಸಂಘಟನೆಗಳು

in Uncategorized 32,423 views

ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಬಗ್ಗೆ ಜನರ ಅಸಮಾಧಾನ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕ ರಾಮ್ ಕದಂ ಕೂಡ ‘ಪಠಾಣ್’ ವಿರುದ್ಧ ಹರಿಹಾಯ್ದಿದ್ದಾರೆ. ಚಿತ್ರ ನಿರ್ಮಾಪಕರು ತಮ್ಮ ನಿಲುವನ್ನು ಮಂಡಿಸುವಂತೆ ಅವರು ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಹಿಂದುತ್ವವನ್ನು ಅವಮಾನಿಸುವ ಯಾವುದೇ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದರು.

Advertisement

ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ರಾಮ್ ಕದಮ್ 2 ಟ್ವೀಟ್ ಮಾಡಿದ್ದಾರೆ. ದೇಶದ ಋಷಿಮುನಿಗಳು ಮತ್ತು ಸಂತರ ಹೊರತಾಗಿ ಅನೇಕ ಹಿಂದೂ ಸಂಘಟನೆಗಳು ಈ ಚಿತ್ರವನ್ನು ವಿರೋಧಿಸುತ್ತಿವೆ ಎಂದು ರಾಮ್ ಕದಮ್ ಮೊದಲ ಟ್ವೀಟ್‌ನಲ್ಲಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಹಿಂದುತ್ವ ಸಿದ್ಧಾಂತದ ಸರ್ಕಾರವಿದೆ. ನಿರ್ಮಾಪಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರೆ ಉತ್ತಮ. ಅವರು ತಮ್ಮ ಮುಂದಿನ ಟ್ವೀಟ್‌ನಲ್ಲಿ ಹಿಂದುತ್ವವನ್ನು ಅವಮಾನಿಸುವ ಯಾವುದೇ ಚಲನಚಿತ್ರ ಅಥವಾ ಧಾರಾವಾಹಿ ಮಹಾರಾಷ್ಟ್ರದಲ್ಲಿ ಓಡಲು ಸಾಧ್ಯವಾಗುವುದಿಲ್ಲ ಎಂದು ಬರೆದಿದ್ದಾರೆ. ಜೆಎನ್‌ಯುನ ಜನರು ಉದ್ದೇಶಪೂರ್ವಕವಾಗಿ ಜನಿವಾರಧಾರಿ ಸಿದ್ಧಾಂತವನ್ನು ನೋಯಿಸುವ ಧೈರ್ಯ ಮಾಡುತ್ತಿದ್ದಾರೆಯೇ ಎಂದು ಅವರು ಕೇಳಿದ್ದಾರೆ.

ಇದಕ್ಕೂ ಮುನ್ನ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ದೀಪಿಕಾ ಪಡುಕೋಣೆ ಅವರ ವೇಷಭೂಷಣ ಮತ್ತು ಚಿತ್ರದ ‘ಬೇಷರಂ ರಂಗ್’ ಹಾಡಿನಲ್ಲಿ ಚಿತ್ರೀಕರಿಸಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಠಾಣ್ ಚಿತ್ರದ ಹಾಡಿನಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್ ಬೆಂಬಲಿಗರಾದ ನಟಿ ದೀಪಿಕಾ ಪಡುಕೋಣೆ ವೇಷಭೂಷಣವು ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ. ಭ್ರಷ್ಟ ಮನಸ್ಥಿತಿಯಿಂದಲೇ ಈ ಹಾಡನ್ನು ಚಿತ್ರೀಕರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ‘ಬೇಷರಂ ರಂಗ್’ ಹಾಡಿನ ಸಾಹಿತ್ಯ, ದೃಶ್ಯಾವಳಿಗಳು ಮತ್ತು ಕೇಸರಿ ಮತ್ತು ಹಸಿರು ಬಣ್ಣದ ವೇಷಭೂಷಣಗಳನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಮಧ್ಯಪ್ರದೇಶದಲ್ಲಿ ಚಿತ್ರ ತೆರೆಕಾಣಬೇಕೋ ಬೇಡವೋ ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದಿದ್ದರು.

ಮತ್ತೊಂದೆಡೆ ಇಲ್ಲಿಯವರೆಗೂ ಹಿಂದೂ ಸಂಘಟನೆಗಳಿಂದ ವಿರೋಧ ಎದುರಿಸುತ್ತಿರುವ ಶಾರುಖ್ ಖಾನ್ ಚಿತ್ರ ಪಠಾಣ್ ಚಿತ್ರಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧವೂ ವ್ಯಕ್ತವಾಗುತ್ತಿದೆ. ಮಧ್ಯಪ್ರದೇಶದ ಉಲೇಮಾ ಬೋರ್ಡ್ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಪಠಾಣ್ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಮಂಡಳಿಯಿಂದ ಹೇಳಲಾಗಿದೆ.

ಉಲೇಮಾ ಮಂಡಳಿಯ ಹೊರತಾಗಿ ಅಖಿಲ ಭಾರತ ಮುಸ್ಲಿಂ ತ್ಯೋಹಾರ್ ಕಮಿಟಿ ಕೂಡ ಶಾರುಖ್ ಅಭಿನಯದ ‘ಪಠಾಣ್’ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದೆ. ಮುಸ್ಲಿಂ ತ್ಯೋಹಾರ್ ಕಮಿಟಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಧ್ಯಪ್ರದೇಶ ಬಿಟ್ಟು ದೇಶದ ಎಲ್ಲೂ ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಘೋಷಿಸಿದೆ. ಪಠಾಣ್ ಚಿತ್ರವನ್ನು ವಿರೋಧಿಸುತ್ತಿರುವ ಮುಸ್ಲಿಂ ಸಂಘಟನೆಗಳು ಶಾರುಖ್ ಖಾನ್ ಇಸ್ಲಾಂಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸುತ್ತಿವೆ.

ಇತ್ತೀಚೆಗೆ, ಪಠಾಣ್ ಚಿತ್ರದ ಮೊದಲ ಹಾಡು ‘ಬೇಷರಂ ರಂಗ್’ ಬಿಡುಗಡೆಯಾಗಿತ್ತು. ಹಾಡು ಬಿಡುಗಡೆಯಾದಾಗಿನಿಂದ ಚಿತ್ರದ ಬಾಯ್‌ಕಾಟ್ ಕೂಗು ತೀವ್ರಗೊಂಡಿದೆ. ಹಾಡಿನ ಹಲವು ದೃಶ್ಯಗಳಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದನ್ನು ತೋರಿಸಲಾಗಿದೆ. ಇದರ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ:

“ಪಠಾಣ್‌ ಚಿತ್ರವನ್ನ ಒಂದಲ್ಲ ಎರಡೆರಡ್ ಬಾರಿ ನೋಡ್ತೀನಿ ಅದೇನ್ ಮಾಡ್ತೀರೋ….”: ವೀರ ಸಾವರ್ಕರರನ್ನ ಅಪಮಾನಿಸುವ ಚಿತ್ರ ಶೇರ್ ಮಾಡಿ ಪಠಾಣ್‌ಗೆ ಬೆಂಬಲ ಸೂಚಿಸಿದ ಸಬಾ ಅಜಾದ್

ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ಭಾರೀ ವಿರೋಧ ಎದುರಿಸುತ್ತಿದೆ. ಹಾಡಿನಲ್ಲಿ ಅಶ್ಲೀಲತೆಯಿಂದಾಗಿ ಗುರಿಯಾಗಿದ್ದಷ್ಟೇ ಅಲ್ಲದೆ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಅಶ್ಲೀಲವಾಗಿ ನೃತ್ಯ ಮಾಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ‘ಪಠಾಣ್’ದಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಹೃತಿಕ್ ರೋಷನ್ ಗರ್ಲ್ ಫ್ರೆಂಡ್ ಸಬಾ ಆಜಾದ್ ಕೂಡ ಈ ಹಾಡಿಗೆ ಬೆಂಬಲವಾಗಿ ನಿಂತಿದ್ದಾಳೆ.

ಸಾಬಾ ಆಜಾದ್ ದೀಪಿಕಾ ಪಡುಕೋಣೆ ಕೇಸರಿ ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಮತ್ತು ಶಾರುಖ್ ಖಾನ್ ಆಕೆಯ ಸೊಂಟವನ್ನು ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದಾಳೆ . ‘ಪಠಾಣ್’ ಚಿತ್ರದ ‘ಬೇಷರಮ್ ರಂಗ್’ ಹಾಡಿನ ಈ ದೃಶ್ಯವನ್ನು ಹಂಚಿಕೊಂಡಿದ್ದು, ಟ್ವೀಟ್ ಮಾಡುತ್ತ, ಅದರಲ್ಲಿ “ಬಿಕಿನಿ ಬಣ್ಣದಿಂದ ರೊಚ್ಚಿಗೆದ್ದಿರುವ ದೇಶ. ಬಡತನ, ನಿರುದ್ಯೋಗ, ಮಾಲಿನ್ಯ ಮತ್ತು ಆರ್ಥಿಕತೆಯ ಸಮಸ್ಯೆಗಳು ಕಾಯಬಹುದು” ಎಂದು ಬರೆದುಕೊಂಡಿದ್ದಾಳೆ. ಈ ಟ್ವೀಟ್ ಬರೆದಿರುವ ಟ್ವಿಟರ್ ಹ್ಯಾಂಡಲ್ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರನ್ನು ಅವಮಾನಿಸುವ ಡಿಪಿ ಯನ್ನೂ ಹಾಕಿಕೊಂಡಿದೆ.

ಈ ಟ್ವೀಟ್ ಅನ್ನು ಶೇರ್ ಮಾಡಿಕೊಳ್ಳುತ್ತ, ಸಬಾ ಆಜಾದ್, “ಇದಕ್ಕಿಂತ ಉತ್ತಮವಾದ ಜೋಕ್ ಇದ್ದರೆ ನನಗೆ ಹೇಳಿ. ಒಂದೇ ಒಂದು ಸಿಗುವುದಿಲ್ಲ. ‘ಪಠಾಣ್’ ಸಿನಿಮಾವನ್ನು ಒಂದಲ್ಲ ಎರಡೆರಡು ಬಾರಿ ಸಿನಿಮಾ ಹಾಲ್‌ನಲ್ಲಿ ನೋಡುತ್ತೇನೆ” ಎಂದಿದ್ದಾಳೆ. ಸಬಾ ಆಜಾದ್ ಮತ್ತು ಹೃತಿಕ್ ರೋಷನ್ ಈಗ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಬಂದಿದೆ. ಸಬಾ ಆಜಾದ್ ಈ ಹಿಂದೆ ನಾಸಿರುದ್ದೀನ್ ಷಾ ಅವರ ಪುತ್ರ ಇಮಾದ್ ಷಾ ನೊಂದಿಗೆ ಡೇಟಿಂಗ್ ಮಾಡಿದ್ದಳು ಇತ್ತೀಚೆಗೆ, ಅಭಿಮಾನಿಯೊಬ್ಬರು ಹೃತಿಕ್-ಸಬಾ ಇಬ್ಬರ ಚಿತ್ರಗಳನ್ನು ಕ್ಲಿಕ್ ಮಾಡಲು ಪ್ರಯತ್ನಿಸಿದಾಗ, ಅವರ ಭದ್ರತಾ ಸಿಬ್ಬಂದಿಯೊಬ್ಬರು ಅವರನ್ನು ತಳ್ಳಿದರು.

ಸಬಾ ಆಜಾದ್ ಮುಂಬೈನ ಸಂಗೀತ ಸಂಯೋಜಕಿ ಮತ್ತು ನಟಿಯಾಗಿದ್ದು 2008 ರಲ್ಲಿ ‘ದಿಲ್ ಕಬಡ್ಡಿ’ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಳು. ಇತ್ತೀಚೆಗೆ ಸಬಾ ‘ರಾಕೆಟ್ ಬಾಯ್ಸ್’ ವೆಬ್ ಸೀರೀಸ್‌ ನಲ್ಲೂ ಕಾಣಿಸಿಕೊಂಡಿದ್ದಳು. ಇಬ್ಬರೂ ಅಂದರೆ ಹೃತಿಕ್ ಹಾಗು ಸಬಾ ಒಟ್ಟಿಗೆ ವಾಸಿಸಲಿರುವ ಫ್ಲ್ಯಾಟ್ ಅನ್ನು 100 ಕೋಟಿ ರೂಪಾಯಿಗೆ ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ. ‘ಪಠಾಣ್’ ಚಿತ್ರದ ವಿರುದ್ಧದ ಪ್ರತಿಭಟನೆಯಿಂದಾಗಿ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಶಾರುಖ್ ಖಾನ್ ಅವರ ಮುಂದಿನ ಚಿತ್ರ ‘ಡಂಕಿ’ ಚಿತ್ರೀಕರಣ ಸ್ಥಗಿತಗೊಂಡ ನಂತರ ಜನರು ಹನುಮಾನ್ ಚಾಲೀಸಾವನ್ನು ಪಠಿಸಿದರು. ಮತ್ತು ಮುಜಾಫರ್‌ಪುರದಲ್ಲಿ ಶಾರುಖ್ ಖಾನ್ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು.

Advertisement
Share this on...