“ನನಗೆ ನನ್ನ ಕೆರಿಯರ್ ಬಗ್ಗೆ ಚಿಂತೆ ಕಾಡ್ತಿದೆ, ಬೇಲ್ ಕೊಡಿ” ಎಂದ ಅಫ್ತಾಬ್, “ಇವನನ್ನ ಜೈಲಲ್ಲಿಟ್ಗೊಂಡು ಪ್ರಯೋಜನ ಇಲ್ಲ, ಬಿಟ್ಬಿಡಿ” ಎಂದ ವಕೀಲ: ನ್ಯಾಯಾಲಯ ಹೇಳಿದ್ದೇನು ನೋಡಿ

in Uncategorized 2,052 views

ತನ್ನ ಲಿವ್-ಇನ್ ಪಾರ್ಟ್ನರ್ ಶೃದ್ಧಾಳನ್ನು ಬ ರ್ಬ ರವಾಗಿ ಹ ತ್ಯೆ ಗೈ ದ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಅಫ್ತಾಬ್ ಪೂನಾವಾಲಾ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಜಾಮೀನು ಅರ್ಜಿಯಲ್ಲಿ ಅಫ್ತಾಬ್ ತನ್ನ ಮುಂದಿನ ಕೆರಿಯರ್ ಬಗ್ಗೆ ಉಲ್ಲೇಖಿಸಿ ಜಾಮೀನು ಕೋರಿದ್ದಾನೆ. ಅಫ್ತಾಬ್‌ನ ಅರ್ಜಿಯು ಶನಿವಾರ (ಡಿಸೆಂಬರ್ 17, 2022) ವಿಚಾರಣೆಗೆ ಬಂದಿತ್ತು.

ಮಾಧ್ಯಮ ವರದಿಗಳ ಪ್ರಕಾರ, ಅಫ್ತಾಬ್ ಪೂನಾವಾಲಾ ಪರ ವಕೀಲರು ಶುಕ್ರವಾರ (ಡಿಸೆಂಬರ್ 16, 2022) ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯಲ್ಲಿ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಪೊಲೀಸರು ಈಗ ಚಾರ್ಜ್ ಶೀಟ್ ಸಲ್ಲಿಸಬೇಕಾಗುತ್ತದೆ ಎಂದು ವಾದಿಸಲಾಗಿತ್ತು.

ಅಫ್ತಾಬ್ ಪರ ವಕೀಲ ಅವಿನಾಶ್ ಕುಮಾರ್ ಅವರು, “ಜಾಮೀನು ಅರ್ಜಿಯ ಆಧಾರದಲ್ಲಿ ಆರೋಪಿಯನ್ನು ಇನ್ನೂ ನ್ಯಾಯಾಂಗ ಬಂಧನದಲ್ಲಿರಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ನ್ಯಾಯಾಂಗ ಬಂಧನವನ್ನು ವಿಸ್ತರಿಸುವುದರಿಂದ ಅವರ ಕೆರಿಯರ್ ಮತ್ತು ಭವಿಷ್ಯಕ್ಕೆ ತೊಂದರೆಯಾಗುತ್ತದೆ” ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಕಳೆದ ವಾರ ಡಿಸೆಂಬರ್ 9 ರಂದು ನಡೆದ ವಿಚಾರಣೆಯಲ್ಲಿ ಅಫ್ತಾಬ್‌ನ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

Advertisement

ಸದ್ಯ ಪೊಲೀಸರು ಅಫ್ತಾಬ್‌ನ ಪಾಲಿಗ್ರಾಫ್ ಮತ್ತು ನಾರ್ಕೋ ಟೆಸ್ಟ್ ನ ರಿಪೋರ್ಟ್ ಗಾಗಿ ಕಾಯುತ್ತಿದ್ದಾರೆ. ಇದಲ್ಲದೇ ಅರಣ್ಯದಿಂದ ಪತ್ತೆಯಾದ ವಿವಿಧ ಎ ಲು ಬು ಗಳ ಪೋಸ್ಟಮಾರ್ಟಮ್ ಪರೀಕ್ಷೆ ಕೂಡ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಮೂ ಳೆ ಗಳನ್ನು ಪರೀಕ್ಷಿಸಿದ ಬಳಿಕ ಫೊರೆನ್ಸಿಕ್ ಲ್ಯಾಬ್ ಮೂ ಳೆ ಗ ಳಲ್ಲಿ ಚೂ ಪಾ ದ ಆ ಯು ಧ ಗಳ ಗುರುತುಗಳು ಪತ್ತೆಯಾಗಿವೆ ಎಂದು ತಿಳಿಸಿತ್ತು.

ಈ ಪ್ರಕರಣದಲ್ಲಿ ಇದುವರೆಗೆ ಹೊರಬಿದ್ದಿರುವ ಎಲ್ಲ ಸಾಕ್ಷ್ಯಗಳೂ ಅಫ್ತಾಬ್ ವಿರುದ್ಧವೇ ಇವೆ. ಶ್ರದ್ಧಾಳ ತಂದೆ ಮತ್ತು ಸಹೋದರನ ಬ್ಲಡ್ ಸ್ಯಾಂಪಲ್ ಗಳ ಡಿಎನ್‌ಎ ಕೂಡ ಮೆಹ್ರೌಲಿ ಅರಣ್ಯದಲ್ಲಿ ಪತ್ತೆಯಾದ ಮೂ ಳೆ ಗಳೊಂದಿಗೆ ಹೊಂದಾಣಿಕೆಯಾಗಿದೆ. ಗುರುವಾರ (ಡಿಸೆಂಬರ್ 15, 2022) ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಶ್ರದ್ಧಾ ಕೊ ಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ದೆಹಲಿ ಸರ್ಕಾರವನ್ನು ಪ್ರತಿನಿಧಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸುವ ದೆಹಲಿ ಪೊಲೀಸರ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಪ್ರಕಾರ, ವಕೀಲರಾದ ಮಧುಕರ್ ಪಾಂಡೆ ಮತ್ತು ಅಮಿತ್ ಪ್ರಸಾದ್ ಅವರು ಪ್ರಕರಣದಲ್ಲಿ ದೆಹಲಿ ಪೊಲೀಸರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾಗಿ ಪ್ರತಿನಿಧಿಸಲಿದ್ದಾರೆ.

ಮೊಟ್ಟಮೊದಲ ಬಾರಿಗೆ ಮಾಧ್ಯಮಗಳೆದುರು ಬಂದು ಶೃದ್ಧಾ ತಂದೆ ಹೇಳಿದ್ದೇನು?

ತಮ್ಮ ಮಗಳಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸುತ್ತ ಆರೋಪಿಗಳಿಗೆ ಕಠಿಣ ವರ್ಷಗಳ ಶಿಕ್ಷೆಯನ್ನು ಕೊಡಿಸುವ ಬಗ್ಗೆಯೂ ಮಾತನಾಡಿದರು. ಈ ಸಂಬಂಧ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೂ ಮಾತನಾಡಿದ್ದಾರೆ. ಶ್ರದ್ಧಾ ಅವರ ತಂದೆ ವಿಕಾಸ್ ವಾಕರ್ ಅವರು ತಮ್ಮ ಮಗಳ ಜೊತೆ ಅಫ್ತಾಬ್ ಕುರಿತಾಗಿ ಕೊನೆಯ ಬಾರಿಗೆ ಮಾತನಾಡಿದ್ದು 2021 ರಲ್ಲಿ ಎಂದು ಹೇಳಿದ್ದಾರೆ. ಇದರೊಂದಿಗೆ ಪೊಲೀಸರು ಈ ವಿಷಯದ ಬಗ್ಗೆ ಕಟ್ಟುನಿಟ್ಟಾಗಿ ಕಾಣುತ್ತಿಲ್ಲ ಎಂದು ಹೇಳಿದರು. ಶ್ರದ್ಧಾ ಹ-ತ್ಯೆ-ಯಿಂದ ನಮ್ಮ ಇಡೀ ಕುಟುಂಬ ದುಃಖದಲ್ಲಿದೆ ಎಂದರು.

ನನ್ನ ಸ್ವಂತ ಮನಸ್ಥಿತಿ ಕೂಡ ತುಂಬಾ ಕೆಟ್ಟದಾಗಿದೆ. ಆದರೆ, ನನ್ನ ಮಗಳಿಗೆ ನ್ಯಾಯ ಸಿಗಲಿದೆ ಎಂದು ದೆಹಲಿ ಪೊಲೀಸರು ಭರವಸೆ ನೀಡಿದ್ದಾರೆ. ಇದೇ ವೇಳೆ ಉಪ ಮುಖ್ಯಮಂತ್ರಿ ಕೂಡ ನನಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ ಎಂದರು. ಆರೋಪಿ ಅಫ್ತಾಬ್‌ನ ಕುರಿತು ಮಾತನಾಡಿದ ವಿಕಾಸ್ ವಾಕರ್, “ಅವನು ನನ್ನ ಮಗಳನ್ನು ಬ-ರ್ಬ-ರ-ವಾಗಿ ಕೊಂ-ದಿ-ದ್ದಾನೆ, ಅವನಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಹೇಳಿದರು. ಈ ವಿಚಾರವಾಗಿ ಶ್ರದ್ಧಾ ಅವರ ತಂದೆ ವಿಕಾಸ್ ವಾಲ್ಕರ್ ಮೊದಲ ಬಾರಿಗೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈಗ ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಈ ಇಡೀ ವಿಷಯ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರದ್ಧಾ ಹ-ತ್ಯೆಯ ಸಂಚಿನಲ್ಲಿ ಆರೋಪಿಯ ಕುಟುಂಬ ಸದಸ್ಯರೂ ಭಾಗಿಯಾಗಿರಬಹುದು ಎಂದು ಶ್ರದ್ಧಾ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಶ್ರದ್ಧಾ ತಂದೆ, ಕೊ-ಲೆ-ಗೂ ಮುನ್ನವೇ ಅಫ್ತಾಬ್ ಕುಟುಂಬಸ್ಥರು ಮುಂಬೈ ವಸೈನಲ್ಲಿ ವಾಸಿಸಲು ಆರಂಭಿಸಿದ್ದೇಕೆ? ಎಂದು ಕೇಳಿದ್ದಾರೆ.

ಶ್ರದ್ಧಾ ಹ-ತ್ಯೆ-ಯ ಸಂಚಿನಲ್ಲಿ ಆರೋಪಿಯ ಕುಟುಂಬ ಸದಸ್ಯರೂ ಭಾಗಿಯಾಗಿರಬಹುದು ಎಂದು ಶ್ರದ್ಧಾ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿದ ಶ್ರದ್ಧಾ ತಂದೆ, ಕೊ-ಲೆ-ಗೂ ಮುನ್ನವೇ ಅಫ್ತಾಬ್ ಕುಟುಂಬ ಮುಂಬೈನ ವಸೈನಲ್ಲಿ ವಾಸ ಮಾಡಲು ಆರಂಭಿಸಿದ್ದೇಕೆ? ಆದ್ದರಿಂದ ಈ ವಿಚಾರದಲ್ಲಿ ಅಫ್ತಾಬ್ ಅವರ ಕುಟುಂಬದ ಸದಸ್ಯರನ್ನೂ ವಿಚಾರಣೆಗೊಳಪಡಿಸಬೇಕು, ಇದರಿಂದ ಕೆಲವು ದೊಡ್ಡ ಸುಳಿವುಗಳು ಸಿಗುತ್ತವೆ ಎಂದು ನಾನು ಪೊಲೀಸರಲ್ಲಿ ಒತ್ತಾಯಿಸುತ್ತೇನೆ ಎಂದಿದ್ದಾರೆ. ಅದೇ ಸಮಯದಲ್ಲಿ, ಶ್ರದ್ಧಾ ಮತ್ತು ಅಫ್ತಾಬ್ ಅವರ ಮದುವೆಗೆ ನಾವು ಒಪ್ಪಿದ್ದೇವು, ಆದರೆ ಅಫ್ತಾಬ್ ಕುಟುಂಬ ಸಿದ್ಧರಿರಲಿಲ್ಲ ಎಂದು ಶ್ರದ್ಧಾ ತಂದೆ ಹೇಳಿದರು. ಮುಂದೆ ಮಾತನಾಡಿದ ಅವರು, ಅಫ್ತಾಬ್ ತನ್ನೊಂದಿಗೆ ತುಂಬಾ ಕ್ರೂರವಾಗಿ ವರ್ತಿಸುತ್ತಾನೆ ಎಂದು ಶ್ರದ್ಧಾ ನಮಗೆ ಎಂದಿಗೂ ಹೇಳಿರಲಿಲ್ಲ. ಆದಾಗ್ಯೂ ಆಕೆ ಒಮ್ಮೆ ತನ್ನ ತಾಯಿಗೆ ಈ ವಿಷಯ ತಿಳಿಸಿದ್ದಳು. ಏಕೆಂದರೆ ಶೃದ್ಧಾ ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದಳು. ತನ್ನ ಜೊತೆ ನಡೆದ ಕ್ರೌರ್ಯದ ಬಗ್ಗೆ ತಾಯಿಗೆ ತಿಳಿಸಿದಾಗ, ತಾಯಿ ಮನೆಗೆ ಬರುವಂತೆ ಹೇಳಿದ್ದಳು ಆದರೆ ಆಕೆ ಮನೆಗೆ ಬರಲಿಲ್ಲ ಎಂದು ತಿಳಿಸಿದ್ದಾರೆ.

Advertisement
Share this on...