#VIDEO| “ಜೀಸಸ್‌ನ ಕಾರಣದಿಂದಲೇ ಭಾರತ ಕೊರೋನಾದಿಂದ ಬಚಾವಾಯ್ತ, ದೇಶದ ಅಭಿವೃದ್ಧಿಯೂ ಜೀಸಸ್‌ನಿಂದಲೇ ಆಗ್ತಿದೆ”: ಶ್ರೀನಿವಾಸ್ ರಾವ್, ಸರ್ಕಾರದ ಹೆಲ್ತ್ ಡೈರೆಕ್ಟರ್

in Uncategorized 502 views

ವಿಶ್ವಾದ್ಯಂತ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ನಡುವೆ ತೆಲಂಗಾಣ ಆರೋಗ್ಯ ನಿರ್ದೇಶಕ (Health Director) ಜಿ. ಶ್ರೀನಿವಾಸ ರಾವ್ ಅವರ ವಿಚಿತ್ರ ಹೇಳಿಕೆ ಮುನ್ನೆಲೆಗೆ ಬಂದಿದೆ. ಕ್ರಿಸ್‌ಮಸ್‌ಗೂ ಮುನ್ನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೈಸ್ತ ಮತವನ್ನ ವೈಭವೀಕರಿಸಿದ ಅವರು, ಏಸುಕ್ರಿಸ್ತನಿಂದಲೇ ಭಾರತದಲ್ಲಿ ಕೋವಿಡ್ ನಿಯಂತ್ರಣ ಸಾಧ್ಯವಾಗಿದ್ದು. ಯೇಸುವಿನ ಕಾರಣದಿಂದ ಜನರು ಕರೋನಾ ಸಾಂಕ್ರಾಮಿಕ ರೋಗದಿಂದ ರಕ್ಷಿಸಲ್ಪಟ್ಟರು ಎಂದು ಹೇಳಿದ್ದಾರೆ.

ಭದ್ರಾದ್ರಿ ಕೊತ್ತಗುಡೆಂನಲ್ಲಿ ಆಯೋಜಿಸಿದ್ದ ಕ್ರಿಸ್‌ಮಸ್ ಪೂರ್ವ ಸಮಾರಂಭದಲ್ಲಿ ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟಿವಿ 9 ತೆಲುಗಿನಲ್ಲಿ ಪ್ರಕಟವಾದ ವರದಿಯ ಪ್ರಕಾರ, “ಭಾರತವು ಕ್ರಿಶ್ಚಿಯನ್ ಧರ್ಮದಿಂದಾಗಿ ಅಭಿವೃದ್ಧಿಗೊಂಡಿದೆ. ಯೇಸುಕ್ರಿಸ್ತನ ಕೃಪೆಯಿಂದ ಮಾತ್ರ ಕೋವಿಡ್ ಕಡಿಮೆಯಾಗಿದೆ. ನಾವು ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ ಕರೋನಾ ಕಡಿಮೆಯಾಗಿದೆ ಎಂದು ಹಲವರು ಭಾವಿಸುತ್ತಾರೆ. ಇದು ವಾಸ್ತವವಲ್ಲ. ಜೀಸಸ್ ಕ್ರೈಸ್ಟ್ ಕಾರಣ ಕೋವಿಡ್ ಪ್ರಕರಣಗಳು ಕಡಿಮೆಯಾಗಿದೆ” ಎಂದಿದ್ದಾರೆ.

ಶ್ರೀನಿವಾಸ ಮುಂದೆ ಮಾತನಾಡುತ್ತ, “ಮನುಕುಲದ ಅಸ್ತಿತ್ವ ಅಪಾಯದಲ್ಲಿದೆ. ದೇವರುಗಳು ಅನೇಕರು, ಆದರೆ ಭೂಮಿಯಲ್ಲಿ ನಡೆದಾಡಿದವನು ಯೇಸು ಸ್ವಾಮಿ ಒಬ್ಬನೇ” ಎನ್ನುತ್ತಾರೆ. ಇದನ್ನೆಲ್ಲ ತಮ್ಮ ಪೂರ್ವಜರು ನೋಡಿ ಮುಂದಿನ ಪೀಳಿಗೆಗೆ ಹೇಳಿದ್ದಾರೆ ಎಂದು ಶ್ರೀನಿವಾಸ ಹೇಳಿದರು. ಜಾತಿ ಮತ್ತು ಧರ್ಮದ ಭೇದವಿಲ್ಲದೆ ಜನರು ಯೇಸುಕ್ರಿಸ್ತನ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕು ಮತ್ತು ಅದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಅವರು ಕರೆ ನೀಡಿದರು.

ಸರ್ಕಾರಿ ಹುದ್ದೆಯಲ್ಲಿ ಕುಳಿತ ವ್ಯಕ್ತಿಯೊಬ್ಬರು ಪಾದ್ರಿಯಂತೆ ಮಾತನಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಶ್ರೀನಿವಾಸ್ ವಿವಾದಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರು ತೆಲಂಗಾಣ ಮುಖ್ಯಮಂತ್ರಿಯಾಗಿರುವ ಕೆ.ಚಂದ್ರಶೇಖರ್ ರಾವ್ ಅವರ ಪಾದ ಮುಟ್ಟಿ ವಿವಾದಕ್ಕೀಡಾಗಿದ್ದಾರೆ. ಶ್ರೀನಿವಾಸ್ ಹೇಳಿಕೆಗೆ ತೆಲಂಗಾಣ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಆರೋಗ್ಯ ನಿರ್ದೇಶಕರ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ತೆಲಂಗಾಣ ಬಿಜೆಪಿ ನಾಯಕ ಕೃಷ್ಣ ಸಾಗರ್ ರಾವ್ ಮಾತನಾಡಿ, “ಒಂದು, ಭಾರತದಲ್ಲಿ ಏನೇ ಅಭಿವೃದ್ಧಿ ನಡೆದಿದೆಯೋ ಅದನ್ನು ಯೇಸು ಕ್ರಿಸ್ತನು ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ. ಕೋವಿಡ್ -19 ಮತ್ತು ಅದರಾಚೆಗಿನ ಪರಿಸ್ಥಿತಿಗಳನ್ನು ಯೇಸು ನಿಭಾಯಿಸಿದ್ದಾನೆ ಎಂದು ಅವರು ಹೇಳುತ್ತಿದ್ದಾರೆ. ಇದು ಅವರ ವೈಯಕ್ತಿಕ ನಂಬಿಕೆಯಾಗಿರಬಹುದು ಆದರೆ ಸಾರ್ವಜನಿಕವಾಗಿ ಅವರು ಇದನ್ನ ಹೇಗೆ ಹೇಳಲು ಸಾಧ್ಯ?. ಹಾಗಾದರೆ ಅವರೇಕೆ ಆರೋಗ್ಯ ನಿರ್ದೇಶಕರು?. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಜನರನ್ನ ರಕ್ಷಿಸೋಕೆ ಯೇಸುವೇ ಸಾಕಲ್ಲವೇ?” ಎಂದಿದ್ದಾರೆ.

ಇನ್ನೊಂದೆಡೆ ವಿವಾದ ಹೆಚ್ಚಾಗುತ್ತಿರುವುದನ್ನು ಕಂಡು ಶ್ರೀನಿವಾಸ್ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋವನ್ನು ಹಂಚಿಕೊಂಡಿರುವ ಅವರು, “ನನ್ನ ಪ್ರತಿಷ್ಠೆಯನ್ನು ಹಾಳುಮಾಡಲು ಒಂದು ವರ್ಗದ ಜನರು ನನ್ನ ಭಾಷಣವನ್ನು ತಪ್ಪಾಗಿ ನಿರೂಪಿಸಿದ್ದಾರೆ. ನನ್ನ ಸಂಪೂರ್ಣ ವಿಡಿಯೋ ನೋಡಿ, ಸರ್ಕಾರ, ಆರೋಗ್ಯ ಕಾರ್ಯಕರ್ತರು ಮತ್ತು ಎಲ್ಲಾ ಧರ್ಮೀಯರ ಪ್ರಾರ್ಥನೆಯಿಂದ ನಾವು ಕರೋನಾವನ್ನು ನಿಗ್ರಹಿಸಲು ಸಾಧ್ಯವಾಯಿತು ಎಂದಷ್ಟೇ ಹೇಳಿದ್ದೇನೆ” ಎಂದಿದ್ದಾರೆ.

ತೆಲಂಗಾಣ ಆರೋಗ್ಯ ನಿರ್ದೇಶಕರ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, ಭಾರತವು ತನ್ನ ಕಾರ್ಯತಂತ್ರದಿಂದಾಗಿ ಕರೋನಾದ ಮಾರಣಾಂತಿಕ ಅಲೆಯಿಂದ ಚೇತರಿಸಿಕೊಳ್ಳಲು ಸಾಧ್ಯವಾಯಿತು. ದೇಶದಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್‌ಗಳನ್ನು ವಿಧಿಸಲಾಯಿತು, ಇದು ಸಮುದಾಯ ಪ್ರಸರಣವನ್ನು ಕಡಿಮೆಗೊಳಿಸಿತು. ಪರಿಣಾಮಕಾರಿ ಲಸಿಕೆಗಳನ್ನು ತಯಾರಿಸಲಾಯಿತು ಮತ್ತು ದೇಶದ ಇಷ್ಟು ದೊಡ್ಡ ಜನಸಂಖ್ಯೆಗೆ ಲಸಿಕಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪ್ರಾರಂಭಿಸಲಾಯಿತು. ಆದರೆ, ಮತ್ತೆ ಜಗತ್ತಿನಾದ್ಯಂತ ಮತ್ತೆ ಹೆಚ್ಚುತ್ತಿರುವ ಕೊರೋನಾ ಭಾರತದ ಆತಂಕವನ್ನೂ ಹೆಚ್ಚಿಸಿದೆ.

Advertisement
Share this on...