ಇಮ್ರಾನ್ ಖಾನ್‌ನ ಎರಡನೆಯ ಪತ್ನಿಯ ಮೂರನೆಯ ನಿಕಾಹ್: ಚಚೆರಾ ಭಾಯಿ (ಕಸಿನ್) ಜೊತೆ ನಿಕಾಹ್ ಮಾಡಿಕೊಂಡು ಈಗ ಮತ್ತೊಬ್ಬನ ಜೊತೆ ನಿಕಾಹ್ ಮಾಡಿಕೊಳ್ಳಲು ಮುಂದಾದ #ರೆಹಮ್_ಖಾನ್, ಕಂಗಾಲಾದ ಇಮ್ರಾನ್ ಖಾನ್

in Uncategorized 395 views

ರೆಹಮ್ ಖಾನ್ ಇಮ್ರಾನ್ ಖಾನ್ ಅವರ ಎರಡನೇ ಪತ್ನಿಯಾಗಿದ್ದರು. ರೆಹಮ್ ಖಾನ್ ಗೆ ತಲಾಕ್ ನೀಡಿದ ನಂತರವೇ ಇಮ್ರಾನ್ ಖಾನ್ ಪಿಂಕಿ ಪೀರ್ನಿ ಎಂದೂ ಕರೆಯಲ್ಪಡುವ ತಾಂತ್ರಿಕ್ ಬುಶ್ರಾ ಬೀಬಿಯನ್ನು ವಿವಾಹವಾಗಿದ್ದರು. ರೆಹಮ್ ಖಾನ್ ಇಮ್ರಾನ್ ಖಾನ್ ವಿರುದ್ಧ ಸದಾ ಕೆಂಡ ಕಾರುತ್ತ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಈ ವರ್ಷ ಮಾರ್ಚ್ 31 ರಂದು ಅವರು ಟ್ವೀಟ್‌ನಲ್ಲಿ ಇಮ್ರಾನ್ ಖಾನ್ ಅವರನ್ನು ಬೇಅಕ್ಲ್ (ಬುದ್ಧಿಹೀನ) ಎಂದು ಕರೆಯುತ್ತ, “ಈ ಮನುಷ್ಯನ ತಲೆಯಲ್ಲಿ ಬುದ್ಧಿ ಹೊರತುಪಡಿಸಿ ಎಲ್ಲವೂ ಇದೆ” ಎಂದು ರೆಹಮ್ ಖಾನ್ ಟ್ವೀಟ್ ಮಾಡಿದ್ದರು.

Advertisement

ಕೇವಲ 10 ತಿಂಗಳ ಕಾಲ ಇದ್ದ ದಾಂಪತ್ಯ ಜೀವನ

ಇಮ್ರಾನ್ ಖಾನ್ 2014 ರಲ್ಲಿ ಬ್ರಿಟಿಷ್-ಪಾಕಿಸ್ತಾನಿ ಪತ್ರಕರ್ತೆ ರೆಹಮ್ ಖಾನ್ ಅವರನ್ನು ಎರಡನೇ ಮದುವೆಯಾದರು, ಆದರೆ ಈ ಮದುವೆ ಕೂಡ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಈ ಮದುವೆಯು ಕೇವಲ 10 ತಿಂಗಳಲ್ಲಿ ಮುರಿದುಬಿತ್ತು. ಇಮ್ರಾನ್ ಖಾನ್ ಬಹು ವಿವಾಹಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಇಮ್ರಾನ್ ಖಾನ್ ಪ್ರಾರಂಭದಿಂದಲೂ ಪ್ಲೇಬಾಯ್ ಇಮೇಜ್ ಹೊಂದಿದ್ದರು. ರೆಹಮ್ ಖಾನ್‌ಗೆ ವಿಚ್ಛೇದನ ನೀಡಿದ ನಂತರ, ಇಮ್ರಾನ್ ಖಾನ್ ತಾಂತ್ರಿಕ್ ಎಂದು ಪರಿಗಣಿಸಲ್ಪಟ್ಟ ಬುಶ್ರಾ ಬೀಬಿಯನ್ನು ಮೂರನೇ ಬಾರಿಗೆ ವಿವಾಹವಾದರು. ಬುಶ್ರಾ ಬೀಬಿ ಪಾಕಿಸ್ತಾನದ ಮಾಜಿ ಜನರಲ್ ಕಮರ್ ಜಾವೇದ್ ಬಾಜ್ವಾ ವಿರುದ್ಧವೂ ವಾಮಾಚಾರ ಮಾಡಲು ಪ್ರಯತ್ನಿಸಿದ್ದಳು. ಇಮ್ರಾನ್ ಖಾನ್ ಮತ್ತು ಬುಶ್ರಾ ಅವರ ವಯಸ್ಸಿನಲ್ಲಿ 20 ವರ್ಷಗಳ ವ್ಯತ್ಯಾಸವಿದ್ದು, ಇದಕ್ಕೂ ಮೊದಲು ಇಮ್ರಾನ್ ಖಾನ್ ಮಾಡಿದ ಎರಡು ಮದುವೆಗಳಲ್ಲಿ ವಯಸ್ಸಿನ ಅಂತರವೂ 20 ವರ್ಷವೇ ಆಗಿತ್ತು.

ಜುಲೈನಲ್ಲಿ ಮದುವೆಯ ಸಿಗ್ನಲ್ ನೀಡಿದ್ದ ರೆಹಮ್ ಖಾನ್

ಈ ವರ್ಷದ ಜುಲೈನಲ್ಲಿ ಪಾಕಿಸ್ತಾನಿ-ಬ್ರಿಟಿಷ್ ಪತ್ರಕರ್ತೆ ರೆಹಮ್ ಖಾನ್ ಅವರು ‘ಜೀ ಸರ್ಕಾರ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು, ಅಲ್ಲಿ ಅವರು ತಮಗೆ ಮತ್ತೆ ಪ್ರೀತಿ ಹುಟ್ಟಿರುವ ಬಗ್ಗೆ ಮಾತನಾಡಿದ್ದರು. ಮೂರನೇ ಮದುವೆಯಾದ ರೆಹಮ್ ಖಾನ್ ಅವರ ಎರಡು ಮದುವೆಗಳು ವಿಫಲವಾಗಿದ್ದರೂ, ಅದರ ನಂತರವೂ ಅವರು ಮೂರನೇ ಮದುವೆಯಾಗಲು ನಿರ್ಧರಿಸಿದರು. ತನ್ನ ಮದುವೆಯ ಯೋಜನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೆಹಮ್, ತಾನು ಮತ್ತೆ ಮದುವೆಯಾಗುತ್ತೇನೆ ಎಂದು ಹಸ್ತಸಾಮುದ್ರಿಕರಾಗಿರುವ ಕುಟುಂಬದ ಸದಸ್ಯರು ತನಗೆ ಹೇಳಿದ್ದಾರೆ ಆದ್ದರಿಂದ ನಾನು ತೀರ್ಮಾನಿಸಿದೆ ನಾನು ಖಂಡಿತವಾಗಿಯೂ ಅದನ್ನು ಪರಿಗಣಿಸಲು ಮುಕ್ತಳು ಎಂದು ಹೇಳಿದ್ದರು.

ಯಾರು ಈ ರೆಹಮ್ ಖಾನ್?

ಕಾರ್ಯಕ್ರಮದ ವೇಳೆ ಜ್ಯೋತಿಷಿಯೊಬ್ಬರು ರೆಹಮ್ ಖಾನ್ ಅವರ ಮದುವೆ ಡಿಸೆಂಬರ್ 20, 2022 ರ ನಂತರ ನಡೆಯಲಿದೆ ಎಂದು ಹೇಳಿದ್ದರು ಮತ್ತು ಇಂದು ಡಿಸೆಂಬರ್ 23 ರಂದು ಅವರು ತಮ್ಮ ಮದುವೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದ ವೇಳೆ ರೆಹಮ್ ಖಾನ್ ಹೇಳಿದ್ದು, ತನ್ನ ಕೈಯಲ್ಲಿ ಮೂರು ಮದುವೆಗಳ ಕಾಂಬಿನೇಷನ್ ಇದೆ, ಏಕೆಂದರೆ ನನ್ನ ಕೈಯಲ್ಲಿ ಮೂರು ಗೆರೆಗಳಿವೆ ಎಂದು ಹೇಳಿದ್ದರು. ಆಗಿನಿಂದ ರೆಹಮ್ ಖಾನ್ ಮತ್ತೆ ಮದುವೆಯಾಗಬಹುದು ಎಂದು ಊಹಿಸಲಾಗಿತ್ತು. ರೆಹಮ್ ಖಾನ್ ಪಾಕಿಸ್ತಾನಿ ಮೂಲದ ಬ್ರಿಟಿಷ್ ಪತ್ರಕರ್ತೆ ಮತ್ತು ಅವರು ಪುಸ್ತಕವನ್ನೂ ಬರೆದಿದ್ದಾರೆ. ಅವರ ತಂದೆಯ ಹೆಸರು ಡಾ. ನಾಯರ್ ರಂಜಾನ್, ಅವರು ಪಾಕಿಸ್ತಾನದಿಂದ ಬ್ರಿಟನ್‌ಗೆ ವಲಸೆ ಬಂದಿದ್ದರು. ರೆಹಮ್ ಖಾನ್ ಅವರು ಇಂಗ್ಲಿಷ್, ಉರ್ದು, ಪಾಷ್ತೋ ಮತ್ತು ಸ್ಥಳೀಯ ಭಾಷೆ ಹಿಂದಿ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ರೆಹಮ್ ಖಾನ್ 1973 ರಲ್ಲಿ ಲಿಬಿಯಾದಲ್ಲಿ ಜನಿಸಿದರು, ಆ ಸಮಯದಲ್ಲಿ ಆಕೆಯ ಪೋಷಕರು ಅಲ್ಲೇ ಇದ್ದರು.

ಚಚೆರೆ ಭಾಯಿ (ಕಸಿನ್ ಬ್ರದರ್) ಜೊತೆ ನಿಕಾಹ್ ಮಾಡಿಕೊಂಡಿದ್ದ ರೆಹಮ್ ಖಾನ್

ರೆಹಮ್ ಖಾನ್ ಪಾಕಿಸ್ತಾನದ ಜಿನ್ನಾ ಕಾಲೇಜ್ ಫಾರ್ ವುಮೆನ್ ನಿಂದ ಪದವಿ ಪಡೆದರು ಮತ್ತು ಕೇವಲ 19 ನೇ ವಯಸ್ಸಿನಲ್ಲೇ ಅವರು ತಮ್ಮ ಚಚೆರೆ ಭಾಯಿ (ಕಸಿನ್ ಬ್ರದರ್) ಮತ್ತು ಬ್ರಿಟಿಷ್ ಮನಶ್ಶಾಸ್ತ್ರಜ್ಞ ಎಜಾಜ್ ರೆಹಮಾನ್ ಅವರನ್ನು ವಿವಾಹವಾದರು. ಬಳಿಕ ತನ್ನ ಚಚೆರೆ ಭಾಯಿಯಿಂದ ತಲಾಕ್ ಪಡೆದ ನಂತರ, ರೆಹಮ್ ಖಾನ್ ಬ್ರಿಟನ್‌ನಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರಿಗೆ ಮೂವರು ಮಕ್ಕಳಿದ್ದು, ಅವರು ರೆಹಮ್ ಖಾನ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಅದೇ ಸಮಯದಲ್ಲಿ, ನಂತರ ಅವಳು ಇಮ್ರಾನ್ ಖಾನ್ ಜೊತೆ ಎರಡನೇ ಮದುವೆಯನ್ನು ಮಾಡಿಕೊಂಡರು, ಆದರೆ ಆ ಮದುವೆ ಒಂದು ವರ್ಷವೂ ಉಳಿಯಲಿಲ್ಲ. ಇಮ್ರಾನ್ ಖಾನ್ ಜನವರಿ 6, 2015 ರಂದು ರೆಹಮ್ ಖಾನ್ ಅವರೊಂದಿಗಿನ ತಲಾಕ್‌ನ್ನ ದೃಢಪಡಿಸಿದರು ಮತ್ತು ಅವರು ಅಕ್ಟೋಬರ್ 2015 ರಲ್ಲಿ ವಿಚ್ಛೇದನ ಪಡೆದರು. ಆದರೆ, ಇಮ್ರಾನ್ ಖಾನ್ ಮತ್ತು ತಾನು 2014 ರಲ್ಲೇ ವಿವಾಹವಾಗಿದ್ದೆವು ಆದರೆ ಇಮ್ರಾನ್ ಖಾನ್ ಸುಮಾರು ಒಂದು ವರ್ಷ ಕಾಲ ಅದನ್ನು ಮುಚ್ಚಿಟ್ಟಿದ್ದರು ಎಂದು ರೆಹಮ್ ಖಾನ್ ಹೇಳಿಕೊಂಡಿದ್ದರು.

Advertisement
Share this on...