ಒಬ್ಬ ವ್ಯಕ್ತಿಯು ಹಿಂದೂ ಧರ್ಮದಿಂದ ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೂ ತನ್ನ ಜಾತಿಯನ್ನು ಉಳಿಸಿಕೊಂಡು ಅದರ ಆಧಾರದ ಮೇಲೆ ಮೀಸಲಾತಿ ಇತ್ಯಾದಿ ಲಾಭಗಳನ್ನು ಅನುಭವಿಸುವುದನ್ನು ಮುಂದುವರಿಸಬಹುದೇ? ಮದ್ರಾಸ್ ಹೈಕೋರ್ಟಿನ ತೀರ್ಪಿನಿಂದ ಈ ವಿಷಯ ಸ್ಪಷ್ಟವಾಗಿದೆ. ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಯೊಬ್ಬರು ತಮ್ಮ ಅರ್ಜಿಯೊಂದಿಗೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಮತಾಂತರದ ನಂತರವೂ ಅವರು ಹುಟ್ಟಿದ ಜಾತಿಯನ್ನು ಅದನ್ನ ಗುರುತಾಗಿ ಬಳಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭದಲ್ಲಿ, ಹಿಂದೂ ಧರ್ಮದ ವ್ಯಕ್ತಿಯು ಬೇರೆ ಧರ್ಮಕ್ಕೆ ಮತಾಂತರಗೊಂಡಾಗ, ಅವನ ಜಾತಿಯು (ಮತಾಂತರವಾಗೋಕು ಮುನ್ನ ಇದ್ದ ಜಾತಿ) ಪರಿಗಣೆನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಟೀಕಿಸಿದೆ. ಒಬ್ಬ ವ್ಯಕ್ತಿ ಮತ್ತೊಂದು ಧರ್ಮಕ್ಕೆ ಕನ್ವರ್ಟ್ ಆಗಿ ಮತ್ತೆ ವಾಪಸ್ ಘರ್ವಾಪಸಿ ಮಾಡಿದ ತಕ್ಷಣ, ಅವನ ಜಾತಿಯ (ಮತಾಂತರವಾಗೋಕು ಮುನ್ನ ಇದ್ದ ಜಾತಿ) ಗುರುತು ಕೂಡ ವಾಪಸ್ಸಾಗುತ್ತದೆ ಮತ್ತು ಅವನು ಅದನ್ನು ಬಳಸಬಹುದು. ಈ ಅರ್ಜಿ ಸಲ್ಲಿಸಿದ್ದ ವ್ಯಕ್ತಿ 2008ರಲ್ಲಿ ಕುಟುಂಬ ಸಮೇತ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಅವರು ತಮ್ಮ ಹೆಸರನ್ನು ಬದಲಾಯಿಸಿದ್ದರು ಮತ್ತು ಅದನ್ನು ಗೆಜೆಟ್ನಲ್ಲಿ ತೋರಿಸಿರಲಿಲ್ಲ.
ಸಮುದಾಯ ಪ್ರಮಾಣಪತ್ರವನ್ನು (Community certificate) ರಾಮನಾಥಪುರದ ವಲಯ ಉಪ ತಹಸೀಲ್ದಾರ್ ಅವರು 28-ಅಕ್ಟೋ-2015 ರಂದು ವಿತರಿಸಿದರು. ಅರ್ಜಿದಾರರು ‘ಲಬ್ಬಾಯಿಸ್ ಸಮಾಜ’ಕ್ಕೆ ಸೇರಿದವರು ಎಂದು ಅದರಲ್ಲಿ ತಿಳಿಸಲಾಗಿದೆ. ಈ ವ್ಯಕ್ತಿ ತಮಿಳುನಾಡು ಲೋಕಸೇವಾ ಆಯೋಗದ (TNPSC) ಪರೀಕ್ಷೆಗೆ ಹಾಜರಾದಾಗ ಜಾತಿ ಪ್ರಮಾಣಪತ್ರದ ಸಮಸ್ಯೆ ಗಮನಕ್ಕೆ ಬಂದಿದೆ. ಗ್ರೂಪ್-2ರ ಪೂರ್ವಭಾವಿ (prelims) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮುಖ್ಯ ಪರೀಕ್ಷೆಯಲ್ಲಿ (mains) ತೇರ್ಗಡೆಯಾದರು. ಆದರೆ, ಅಂತಿಮ ಆಯ್ಕೆ ಪಟ್ಟಿಯಲ್ಲಿ ಅವರನ್ನು ಸೇರಿಸಿರಲಿಲ್ಲ.
"The original caste remains under eclipse and as soon
as the person is reconverted to the original religion, the eclipse disappears and the caste automatically revives", Madras HC quotes from Supreme Court precedents.— Live Law (@LiveLawIndia) December 2, 2022
ಇದಕ್ಕೆ ಕಾರಣವೇನು ಎಂದು ಆರ್ ಟಿಐ ಮೂಲಕ ತಿಳಿದುಕೊಂಡಾಗ ಅವರನ್ನು ‘ಹಿಂದುಳಿದ ವರ್ಗ (ಬಿಸಿ) ಮುಸ್ಲಿಂ’ಗೆ ಸೇರಿಸಿಲ್ಲ ಎಂದು ಹೇಳಿದ್ದರಿಂದ ಹೀಗಾಯಿತು. ಅವರನ್ನು ‘ಸಾಮಾನ್ಯ (General)’ ವರ್ಗದಡಿ ಪರಿಗಣಿಸಲಾಗಿತ್ತು. ಇದಾದ ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. 2012ರ ಡಿಸೆಂಬರ್ 25ರಂದು ಖಾಝಿ ನೀಡಿದ ಪ್ರಮಾಣಪತ್ರದಲ್ಲಿ ಮುಸ್ಲಿಂ ಜಮಾತ್ ಗೆ ಸೇರಿರುವುದಾಗಿ ಬರೆಯಲಾಗಿತ್ತು. ಮತಾಂತರದ ನಂತರದ ಮೀಸಲಾತಿಯ ಹಕ್ಕನ್ನು ಸುಪ್ರೀಂ ಕೋರ್ಟ್ನಲ್ಲಿಯೂ ವಿಚಾರಣೆ ನಡೆಸುತ್ತಿರುವ ಕಾರಣ, ಮದ್ರಾಸ್ ಹೈಕೋರ್ಟ್ ಅದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿತು ಮತ್ತು ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿತು.
ಇದನ್ನೂ ಓದಿ:
“ನಿಮ್ ಬಗ್ಗೆನೂ ಹಿಂದುಗಳೂ ಹಿಂಗೇ ಯೋಚನೆ ಮಾಡಿದ್ರೆ ನಿಮ್ ಗತಿ ಏನಾಗ್ತಿತ್ತು” ಹೈಕೋರ್ಟ್ ತರಾಟೆ
ನಮ್ಮದು ಮುಸ್ಲಿಂ ಪ್ರಾಬಲ್ಯ ಇರುವ ಪ್ರದೇಶ. ಅಲ್ಲಿ ಹಿಂದೂಗಳು ಮೆರವಣಿಗೆ ಮಾಡಬಾರದು, ನಮ್ಮ ಏರಿಯಾದಲ್ಲಿ ಹಿಂದೂಗಳು ಅಲ್ಪ ಪ್ರಮಾಣದಲ್ಲಿ ಇದ್ದು, ಆ ಪ್ರದೇಶದಲ್ಲಿ ಅವರ ಮೆರವಣಿಗೆ ನಿಷೇಧ ಮಾಡಬೇಕು ಎಂದು ಕೆಲ ಮು ಸ್ಲಿಂ ಮುಖಂಡರು ಸಲ್ಲಿಸಿದ್ದ ಅರ್ಜಿಗೆ ಮದ್ರಾಸ್ ಹೈಕೋರ್ಟ್ ಕಿ-ಡಿ ಕಾರಿದೆ.
ಕಲತ್ತೂರ್ ಪೆರಂಬಲೂರಿನಲ್ಲಿ ಮು ಸ್ಲಿಂ ಪ್ರಾಬಲ್ಯ ಇದೆ. ಇದು ಹಿಂದೂ ಅಲ್ಪಸಂಖ್ಯಾತ ಪಟ್ಟಣ. ಆದ್ದರಿಂದ ಅವರ ಮೆರವಣಿಗೆಯನ್ನು ಇಲ್ಲಿ ನಡೆಸಬಾರದು, ಇದನ್ನು ಬ್ಯಾನ್ ಮಾಡಲು ಸರ್ಕಾರಕ್ಕೆ ಆದೇಶಿಸಿ ಎಂದು ಸಲ್ಲಿಸಿದ್ದ ಅರ್ಜಿ ಇದಾಗಿತ್ತು.
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್ ಕಿರುಬಕರನ್ ಮತ್ತು ಪಿ. ವೆಲ್ಮುರುಗನ್ ಅವರ ಪೀಠ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.
ಒಂದು ವೇಳೆ ಇದೇ ರೀತಿ ಹಿಂದೂಗಳು ಯೋಚನೆ ಮಾಡಿದ್ದರೆ, ಅಲ್ಪಸಂಖ್ಯಾತ ಜನರು ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ಯಾವುದೇ ಉತ್ಸವ ಅಥವಾ ಮೆರವಣಿಗೆಯನ್ನು ನಡೆಸಬಾರದು ಎಂದು ಅವರೂ ಯೋಚನೆ ಮಾಡಿದ್ದರೆ, ನಿಮ್ಮ ಸ್ಥಿತಿ ಹೇಗಿರುತ್ತಿತ್ತು ಎಂದು ಊಹಿಸಿರುವಿರಾ? ಪರಿಸ್ಥಿತಿ ಯಾವ ರೀತಿ ಸೃಷ್ಟಿಯಾಗಿರುತ್ತಿತ್ತು ಎಂಬುದನ್ನು ಬಲ್ಲಿರಾ ಎಂದು ಪೀಠ ಪ್ರಶ್ನಿಸಿತು.
2012ರಿಂದ ಹಿಂದೂ ಮೆರವಣಿಗೆಯನ್ನು ಈ ಪ್ರದೇಶಗಳಲ್ಲಿ ವಿರೋಧಿಸಲಾಗುತ್ತಿದೆ. ಇ ಸ್ಲಾಮಿ ಕ್ ಮೂಲಭೂತವಾದಿಗಳು ಹಿಂದೂ ಹಬ್ಬಗಳನ್ನು ‘ಪಾಪದ ಆಚರಣೆ’ ಎಂದು ಕರೆಯುತ್ತಾರೆ ಎಂದು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳ ಗಮನಕ್ಕೆ ಬಂದು ತೀವ್ರವಾಗಿ ಅಸಮಾಧಾನ ಪಟ್ಟರು.
ಇಂತಹ ಬೇಡಿಕೆಗಳನ್ನು ಮಾಡುವ ಮೂಲಕ ಮು-ಸ್ಲಿಮ-ರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಮು ಸ್ಲಿಂ ಸಮುದಾಯವು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವುದರಿಂದ, ಮತ್ತೊಂದು ಧಾರ್ಮಿಕ ಸಮುದಾಯವು ಹಬ್ಬಗಳನ್ನು ಆಚರಿಸುವುದನ್ನು ಅಥವಾ ಆ ಪ್ರದೇಶದ ಬೀದಿಗಳಲ್ಲಿ ಮೆರವಣಿಗೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಒಂದು ನಿರ್ದಿಷ್ಟ ಧಾರ್ಮಿಕ ಪಂಥದ ಅಸಹಿಷ್ಣುತೆಯಿಂದಾಗಿ ದಶಕಗಳಿಂದ ಒಟ್ಟಿಗೆ ನಡೆಯುವ ಹಬ್ಬಗಳನ್ನು ನಿಷೇಧಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾ ಮಾಡಿದರು.
‘ಧಾರ್ಮಿಕ ಅಸಹಿಷ್ಣುತೆಯನ್ನು ಅನುಮತಿಸಿದರೆ, ಅದು ಜಾತ್ಯತೀತ ದೇಶಕ್ಕೆ ಒಳ್ಳೆಯದಲ್ಲ. ಯಾವುದೇ ರೀತಿಯ ಅಸಹಿಷ್ಣುತೆಯನ್ನು ಮು ಸ್ಲಿಂ ಸಮುದಾಯವು ತ್ಯಜಿಸಬೇಕು ಮತ್ತು ಧಾರ್ಮಿಕ ಸಂಕುಚಿತ ಮನೋಭಾವದಿಂದ ಹಾಗೂ ಹೀಗೆ ಪರಸ್ಪರ ಕ#ಚ್ಚಾಟ-ವು ಸಂ ಘ ರ್ಷ ಮತ್ತು ಗ ಲ ಭೆ ಗಳಿಗೆ ಕಾರಣವಾಗಬಾರದು, ಅಪಾರ ಪ್ರಾ ಣಹಾ ನಿ, ಆಸ್ತಿಪಾಸ್ತಿಗೆ ನಷ್ಟ ಉಂಟಾಗಬಹುದು ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.