ಒಂದು ಪೀಕ್ ಗೆ ತಲುಪಿದ ನಂತರ, ಕರೋನಾ ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ ಎಂದು ಚೀನಾ ಅಂದಾಜಿಸಿದೆ. ಇದು ಆರ್ಥಿಕತೆ (Economy) ಮತ್ತು ಕೈಗಾರಿಕಾ ಬೆಳವಣಿಗೆಯ (Industrial Growth) ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚೀನಾ ಹೇಳುತ್ತಿದೆ. ಆದರೆ ಚೀನಾದಿಂದ ಹಬ್ಬಿದ ಕೊರೋನಾ ವೈರಸ್ ವಿವಿಧ ದೇಶಗಳಲ್ಲಿ ಹರಡುತ್ತಿದ್ದು ಇದು ಲಕ್ಷಾಂತರ ಜನರನ್ನು ಕೊಲ್ಲಬಹುದು ಎಂದು ಹೇಳಲಾಗುತ್ತಿದೆ.
ಕೊರೊನಾ ಸೋಂಕಿತ ವೃದ್ಧರಿಗೆ ಚೀನಾ ಚಿಕಿತ್ಸೆ ನೀಡುತ್ತಿಲ್ಲ. ಇದರೊಂದಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೂ ಚಿಕಿತ್ಸೆ ನೀಡಲು ಚೀನಾ ಹಿಂದೆ ಸರಿಯುತ್ತಿದೆ. ಎಪೋಚ್ ಟೈಮ್ಸ್ ವರದಿಯನ್ನು ಉಲ್ಲೇಖಿಸಿ ಈ ಹೇಳಿಕೆಯನ್ನು ನೀಡಲಾಗಿದೆ. ಚೀನಾದಲ್ಲಿ ಅಂತಹ 40 ಮಿಲಿಯನ್ ಅಂದರೆ 4 ಕೋಟಿ ವೃದ್ಧರಿದ್ದು, ಅವರಿಗೆ ಕೋವಿಡ್ ಲಸಿಕೆಯನ್ನೂ ಸಹ ನೀಡಿಲ್ಲ. ಅಂದರೆ, ಅವರಿಗೆ ವಯಸ್ಸಾಗಿರುವ ಕಾರಣ ಅವರ ಅವಶ್ಯಕತೆ ನಮಗಿಲ್ಲ ಎಂಬುದು ಚೀನಾದ ಮನಸ್ಥಿತಿಯಾಗಿದೆ. ನವೆಂಬರ್ 2022 ರ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಚೀನಾ 80 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಶೇಕಡಾ 40 ರಷ್ಟು ಜನರಿಗೆ ಮಾತ್ರ ಕರೋನಾ ಲಸಿಕೆಯನ್ನು ನೀಡಲು ಸಮರ್ಥವಾಗಿದೆ. ಈ ವಯಸ್ಸಿನ ಜನರು ಈಗ ಭಾರೀ ಅಪಾಯದಲ್ಲಿದ್ದಾರೆ. ವ್ಯಾಕ್ಸಿನ್ ಕೊರತೆಯಿಂದ ವೃದ್ಧರೇ ಹೆಚ್ಚು ಸಾಯುತ್ತಿದ್ದಾರೆ. ಈ ಕಾರಣದಿಂದಾಗಿ, 150 ಕೋಟಿಗಿಂತ ಹೆಚ್ಚು ಬೆಳೆಯುತ್ತಿರುವ ಜನಸಂಖ್ಯೆಯನ್ನು ಚೀನಾ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಹೇಗೆ ಕೆಲಸ ಮಾಡುತ್ತಿದೆ ಚೀನಾದ ಬಯೋ ವೆಪನ್ (ಕೊರೋನಾ)?
ಪೀಕ್ಗೆ ತಲುಪಿದ ನಂತರ, ಕರೋನಾ ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ ಎಂದು ಚೀನಾ ಅಂದಾಜಿಸಿದೆ. ಇದು ಆರ್ಥಿಕತೆ (Economy) ಮತ್ತು ಕೈಗಾರಿಕಾ ಬೆಳವಣಿಗೆಯ (Industrial Growth) ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚೀನಾ ಹೇಳುತ್ತಿದೆ. ಆದರೆ ಚೀನಾದಿಂದ ಹಬ್ಬಿದ ಕೊರೋನಾ ವೈರಸ್ ವಿವಿಧ ದೇಶಗಳಲ್ಲಿ ಹರಡುತ್ತಿದ್ದು ಇದು ಲಕ್ಷಾಂತರ ಜನರನ್ನು ಕೊಲ್ಲಬಹುದು ಎಂದು ಹೇಳಲಾಗುತ್ತಿದೆ. ಕೊರೊನಾದಿಂದ ಇತರ ದೇಶಗಳ ಆರ್ಥಿಕತೆಯೂ ಕುಸಿಯುತ್ತದೆ. ಇದು ಚೀನಾಕ್ಕೆ ಒಳ್ಳೆಯ ಸುದ್ದಿಯಾಗಬಹುದು. ಈ ಬಯೋ ವೆಪನ್ ಮೂಲಕ, ಚೀನಾ ವಿಶ್ವದ ಎಲ್ಲಾ ದೇಶಗಳನ್ನು ಟಾರ್ಗೆಟ್ ಮಾಡಲು ಬಯಸಿದೆ. ಅದಕ್ಕಾಗಿಯೇ ಈ ಬಾರಿಯ ಕೋವಿಡ್ ಅಲೆಯನ್ನು ಚೀನಾದ ಬಯೋ ವೆಪನ್ ಎಂದೇ ಕರೆಯಲಾಗುತ್ತಿದೆ.
ಸುದ್ದಿಗಳನ್ನ ಸೆನ್ಸರ್ ಮಾಡುತ್ತಿದೆ ಚೀನಾ
ಚೀನಾದಲ್ಲಿ 54 ಲಕ್ಷಕ್ಕೂ ಹೆಚ್ಚು ಜನರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸಾವಿನ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಆದರೆ ಇದೆಲ್ಲದರ ನಡುವೆ ಚೀನಾ ಮಂಡಿಸಿರುವ ಅಧಿಕೃತ ಅಂಕಿ ಅಂಶಗಳು ಅಚ್ಚರಿ ಮೂಡಿಸಿವೆ. ಡಿಸೆಂಬರ್ 22 ರಂದು ಚೀನಾದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಮತ್ತು ಸೋಂಕಿತರ ಸಂಖ್ಯೆ ಕೇವಲ 3,761 ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಶುಕ್ರವಾರ ತಿಳಿಸಿದೆ. ಏಕಾಏಕಿ ಹರಡುವಿಕೆಯನ್ನು ಗಮನಿಸಿದರೆ, ವರದಿಯಾಗುತ್ತಿರುವ ಅಂಕಿಅಂಶಗಳು ನಂಬಲಾಗದವು.
ಕರೋನಾದಿಂದ ಹಾಹಾಕಾರ..ತಿನ್ನಲು ಔಷಧಿಯೂ ಇಲ್ಲ, ಕಿತ್ತಳೆ, ನಿಂಬೆ ಹಣ್ಣಿಗಾಗಿ ಕಾಲ್ತುಳಿತ
ಕೊರೊನಾ ಮತ್ತೊಮ್ಮೆ ಅಪಾಯಕಾರಿ ರೂಪ ಪಡೆಯುತ್ತಿದೆ. ಚೀನಾದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಅಲ್ಲಿ ಕರೋನಾ ಪ್ರಕರಣಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿನಿತ್ಯ ಲಕ್ಷಗಟ್ಟಲೆ ಕೇಸ್ ಗಳು ವರದಿಯಾಗುತ್ತಿದ್ದು ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಚೀನಾದಿಂದ ಅಲ್ಲಿನ ಪರಿಸ್ಥಿತಿಯನ್ನು ವಿವರಿಸುವ ವಿಡಿಯೋವೊಂದು ಹೊರಬಿದ್ದಿದೆ. ಅಲ್ಲಿನ ಡಿಟೆನ್ಶನ್ ಸೆಂಟರ್ ಗಳಲ್ಲಿ ಔಷಧಿಗಳ ಕೊರತೆಯಿದ್ದು, ನಿಂಬೆಹಣ್ಣು, ಕಿತ್ತಳೆ ಹಣ್ಣು ಲೂಟಿ ಮಾಡುವುದರಲ್ಲಿ ಜನ ನಿರತರಾಗಿದ್ದಾರೆ.
ಹೆಲ್ತ್ ಸೆಂಟರ್ಗಳನ್ನ ಡಿಟೆನ್ಶನ್ ಕ್ಯಾಂಪ್ ಗಳನ್ನಾಗಿ ಮಾಡಿದ ಸರ್ಕಾರ
ವಾಸ್ತವವಾಗಿ, ಈ ಘಟನೆಯನ್ನು ಚೀನಾದ ಡಿಟೆನ್ಶನ್ ಸೆಂಟರ್ ಒಂದರದ್ದು ಎಂದು ಹೇಳಲಾಗುತ್ತಿದೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನ ಶೇರ್ ಮಾಡುತ್ತಿದ್ದಾರೆ. ಇದು ಶಾಂಘೈನಲ್ಲಿರುವ ಹೆಲ್ತ್ ಸೆಂಟರ್ ಒಂದರದ್ದಾಗಿದ್ದು ಅದನ್ನು ಡಿಟೆನ್ಶನ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕರೋನಾ ರೋಗಿಗಳನ್ನು ಇಲ್ಲಿ ಬಂಧಿಸಲಾಗಿದೆ ಮತ್ತು ಅವರು ಇಲ್ಲಿನ ಪರಿಸ್ಥಿತಿಯ ಬಗ್ಗೆ ಜೋರಾಗಿ ಕೂಗುತ್ತಿದ್ದಾರೆ. ಅಲ್ಲಿ ಅವರಿಗೆ ಸೂಕ್ತವಾದ ಔಷಧಗಳು ತಲುಪುತ್ತಿಲ್ಲ.
ತನ್ನ ವೈಫಲ್ಯವನ್ನು ಜಗತ್ತಿಗೆ ಮರೆಮಾಚಿದ ಚೀನಾ?
ಇಲ್ಲಿ ಕಿತ್ತಳೆ ಹಣ್ಣಿಗಾಗಿ ಜಗಳ ನಡೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಏಕೆಂದರೆ ಔಷಧಿಗಳ ಕೊರತೆ ಇರುವುದರಿಂದ ಜನರು ಕಿತ್ತಳೆ ಮತ್ತು ನಿಂಬೆಹಣ್ಣುಗಳನ್ನು ಹೆಚ್ಚಾಗಿ ತಿನ್ನುತ್ತಿದ್ದಾರೆ. ಕಿತ್ತಳೆ ಮತ್ತು ನಿಂಬೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಅಂದರೆ ಚೀನಾ ತನ್ನ ವೈಫಲ್ಯವನ್ನು ಜಗತ್ತಿನ ಮುಂದೆ ಮರೆಮಾಚುತ್ತಿದೆ ಆದರೆ ಅಲ್ಲಿನ ಜನ ಅದನ್ನು ಬಯಲಿಗೆಳೆಯುತ್ತಿದ್ದಾರೆ.
People in China Rush and Struggle for Oranges and Lemons as these fruits have Vitamin C…
#COVID #chinacovid #COVID19 #coronavirus #China #CovidIsNotOver #CovidIsntOver #Corona pic.twitter.com/enAuGemCqu
— Jyot Jeet (@activistjyot) December 23, 2022
ಪ್ರತಿದಿನ 10 ಲಕ್ಷಕ್ಕೂ ಅಧಿಕ ಕೇಸ್
ಚೀನಾದಲ್ಲಿ ಕೊರೋನಾ ಮಾಡುತ್ತಿರುವ ವಿನಾಶವನ್ನ ಜಗತ್ತು ಸಹ ಒಪ್ಪಿಕೊಳ್ಳುತ್ತಿದೆ. ಲಂಡನ್ ಮೂಲದ ಜಾಗತಿಕ ಆರೋಗ್ಯ ಗುಪ್ತಚರ ಕಂಪನಿ ಏರ್ಫಿನಿಟಿ ಪ್ರಕಾರ, ಚೀನಾದಲ್ಲಿ ಪ್ರತಿದಿನ ಒಂದು ಮಿಲಿಯನ್ ಅಂದರೆ 10 ಲಕ್ಷಕ್ಕೂ ಅಧಿಕ ಕರೋನಾ ಪ್ರಕರಣಗಳು ವರದಿಯಾಗುತ್ತಿವೆ. 24 ಗಂಟೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಮತ್ತೊಂದು ಮಾಧ್ಯಮ ವರದಿಯ ಪ್ರಕಾರ, ಚೀನಾದಲ್ಲಿ ಝೀರೋ ಕೋವಿಡ್ ಪಾಲಿಸಿ ಮುಗಿದ ನಂತರ 21 ಲಕ್ಷ ಸಾವುಗಳು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.