ಟಿವಿ ಸೀರಿಯಲ್ಸ್ನ ಖ್ಯಾತ ನಟಿ ತುನೀಶಾ ಶರ್ಮಾ ನೇ ಣು ಬಿ ಗಿ ದು ಕೊಂಡು ಆ ತ್ಮ ಹ ತ್ಯೆ ಮಾಡಿಕೊಂಡಿದ್ದಾರೆ. SAB ಟಿವಿಯ ಅಲಿ ಬಾಬಾ – ದಾಸ್ತಾನ್ ಇ ಕಾಬೂಲ್ ಶೋನಲ್ಲಿ ತುನಿಶಾ ಶರ್ಮಸಲಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದರು. ಕಾರ್ಯಕ್ರಮದ ಸೆಟ್ ನಲ್ಲಿಯೇ ಅವರು ಈ ಹೆಜ್ಜೆ ಇಟ್ಟಿದ್ದಾರೆ. ಆ ತ್ಮ ಹ ತ್ಯೆ ಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ತುನಿಶಾ ಶರ್ಮಾ ವಯಸ್ಸು ಈಗ 20 ವರ್ಷವಾಗಿತ್ತು.
ಮಾಧ್ಯಮ ವರದಿಗಳ ಪ್ರಕಾರ, ತುನಿಶಾ ಶರ್ಮಾ ತನ್ನ ಸಹನಟ ಶೀಜನ್ ಅವರ ಮೇಕಪ್ ರೂಮ್ನಲ್ಲಿ ಆ ತ್ಮ ಹ ತ್ಯೆ ಮಾಡಿಕೊಂಡಿದ್ದಾರೆ. ತುನೀಶಾ ಆ ತ್ಮ ಹ ತ್ಯೆ ಮಾಡಿಕೊಂಡಾಗ ಶೀಜಾನ್ ಸೆಟ್ನಲ್ಲಿ ಶೂಟಿಂಗ್ನಲ್ಲಿ ನಿರತರಾಗಿದ್ದರು. ಅವರು ತಮ್ಮ ಮೇಕಪ್ ರೂಮ್ ಗೆ ಹೋಗಿ ತುನಿಶಾರನ್ನ ಕರೆದಿದ್ದಾರೆ. ಡೋರ್ ತೆರೆಯದಿದ್ದಾಗ ಡೋರ್ನ್ನ ಮುರಿದು ಒಳಗೆ ಹೋಗಿ ನೋಡಿದಾಗ ತುನೀಶಾ ಶ ವ ವಾಗಿ ಬಿದ್ದಿದ್ದರು.
ಆದರೆ, ತುನಿಶಾ ಬಾತ್ ರೂಂನಲ್ಲಿ ಶ ವ ವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಹೇಳಿರುವುದಾಗಿ ಝೀ ನ್ಯೂಸ್ ವರದಿ ಮಾಡಿದೆ. ಆದರೆ, ತುನಿಶಾ ಶರ್ಮಾ ಆ ತ್ಮ ಹ ತ್ಯೆ ಗೆ ಸಂಬಂಧಿಸಿದಂತೆ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಕೆಯೊಂದಿಗೆ ಶೂಟಿಂಗ್ ಮಾಡುತ್ತಿದ್ದ ನಟರು ಹಾಗೂ ಇತರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆ ತ್ಮ ಹ ತ್ಯೆ ಗೂ ಮುನ್ನ ತುನಿಶಾ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ನ ಶೀರ್ಷಿಕೆಯಲ್ಲಿ, “Those who are driven by their passion doesnt stop” ಎಂದು ಬರೆದುಕೊಂಡಿದ್ದರು.
ಅವರ ಕೊನೆಯ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಅವರು ‘ಉತ್ಸಾಹ’ ಮತ್ತು ‘ನಿಲ್ಲಿಸುವುದಿಲ್ಲ’ ಎಂದು ಹೇಳಿದ್ದರಿಂದ, ಅವರ ಆ ತ್ಮ ಹ ತ್ಯೆ ಯ ಬಗ್ಗೆ ಹಲವು ಅನುಮಾನಗಳು ಮೂಡುತ್ತಿವೆ.
ತುನೀಶಾ ಶರ್ಮಾ ಅವರು ‘ಅಲಿ ಬಾಬಾ – ದಾಸ್ತಾನ್ ಎ ಕಾಬೂಲ್’ ಚಿತ್ರದಲ್ಲಿ ಮರಿಯಮ್ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಅವರು ಚಕ್ರವರ್ತಿ ಅಶೋಕ್ ಸಾಮ್ರಾಟ್, ಭಾರತ್ ಕಾ ವೀರ್ ಪುತ್ರ – ಮಹಾರಾಣಾ ಪ್ರತಾಪ್, ಗಬ್ಬರ್ ಪೂಂಚ್ವಾಲಾ, ಇಂಟರ್ನೆಟ್ ವಾಲಾ ಲವ್ ಮತ್ತು ಇಸ್ಕ್ ಸುಭಾನಲ್ಲಾ ಮುಂತಾದ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರು ಕೆಲವು ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಕಹಾನಿ 2, ದಬಾಂಗ್-3, ಬಾರ್ ಬಾರ್ ದೇಖೋ ಮತ್ತು ಫಿತೂರ್ ಚಿತ್ರಗಳಲ್ಲಿ ತುನಿಶಾ ಶರ್ಮಾ ಅತ್ಯುತ್ತಮ ಪಾತ್ರವನ್ನು ನಿರ್ವಹಿಸಿದ್ದಾರೆ.
ತುನಿಶಾ ಶರ್ಮಾ ಅವರು ನಟ ಶಿವಿನ್ ನಾರಂಗ್ ಅವರೊಂದಿಗೆ ಮ್ಯೂಸಿಕ್ ವಿಡಿಯೋ ಚಿತ್ರೀಕರಣದಲ್ಲಿದ್ದರು. ತುನೀಶಾ ಚಿಕ್ಕ ವಯಸ್ಸಿನಲ್ಲೇ ಯಶಸ್ಸು ಸಾಧಿಸಿದ್ದರು. ಅವರು ಕತ್ರಿನಾ ಕೈಫ್ ಮತ್ತು ವಿದ್ಯಾ ಬಾಲನ್ ಅವರಂತಹ ನಟಿಯರೊಂದಿಗೂ ಕೆಲಸ ಮಾಡಿದ್ದಾರೆ.
ಈ ವರ್ಷದ ಅಕ್ಟೋಬರ್ನಲ್ಲಿ, ಮತ್ತೊಬ್ಬ ಪ್ರಸಿದ್ಧ ಟಿವಿ ಧಾರಾವಾಹಿ ನಟಿ ವೈಶಾಲಿ ಠಕ್ಕರ್ ಮಧ್ಯಪ್ರದೇಶದ ಇಂದೋರ್ನಲ್ಲಿರುವ ತನ್ನ ಮನೆಯಲ್ಲಿ ಆ ತ್ಮ ಹ ತ್ಯೆ ಮಾಡಿಕೊಂಡಿದ್ದರು. ವೈಶಾಲಿಯ ಡೈರಿಯಲ್ಲಿ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿತ್ತು. ಈ ಸೂಸೈಡ್ ನೋಟ್ನಲ್ಲಿ ರಾಹುಲ್ ನವಲಾನಿ ಮತ್ತು ಅವರ ಪತ್ನಿ ದಿಶಾ ನವ್ಲಾನಿ ತಮಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದರು.