ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ‘ಬ್ರಿಟಿಷರ ಮಾಹಿತಿದಾರ’ ಎಂದು ಕಾಂಗ್ರೆಸ್ ನಾಯಕ ಗೌರವ್ ಪಾಂಧಿ (Gaurav Pandhi) ಕರೆದಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ವೀರ್ ಸಾವರ್ಕರ್ ಅವರಂತಹ ವ್ಯಕ್ತಿಗಳಿಂದ ಹಿಡಿದು ವಾಜಪೇಯಿ ಅವರನ್ನು ನಿಂದಿಸುವುದು ಕಾಂಗ್ರೆಸ್ನ ಅಭ್ಯಾಸವಾಗಿದೆ ಎಂದು ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ ಹೇಳಿದ್ದಾರೆ.
In 1942, like all other members of the RSS, Atal Bihari Vajpayee boycotted the Quit India Movement & worked as a British Informer reporting against those who participated in the andolan.
Be it Nellie massacre or demolition of Babri, Vajpayee played an imp role in inciting mobs +
— Gaurav Pandhi (@GauravPandhi) December 25, 2022
ವಾಸ್ತವವಾಗಿ, ಕಾಂಗ್ರೆಸ್ ನಾಯಕ ಗೌರವ್ ಪಾಂಧಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ‘ಬ್ರಿಟಿಷರ ಮಾಹಿತಿದಾರ’ ಎಂದು ಕರೆದರು ಮತ್ತು ಅವರನ್ನು ಜನಸಮೂಹದ ಪ್ರಚೋದಕ ಎಂದು ಕರೆದಿದ್ದಾರೆ. “1942 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ಅವರು ಇತರ ಎಲ್ಲ ಆರ್ಎಸ್ಎಸ್ ಸದಸ್ಯರಂತೆ ‘ಕ್ವಿಟ್ ಇಂಡಿಯಾ ಚಳುವಳಿ’ಯನ್ನು ಬಹಿಷ್ಕರಿಸಿದರು ಮತ್ತು ಚಳವಳಿಯಲ್ಲಿ ಭಾಗವಹಿಸಿದವರ ವಿರುದ್ಧ ಬ್ರಿಟಿಷರಿಗೆ ಮಾಹಿತಿ ನೀಡುವವರಾಗಿ ಕಾರ್ಯನಿರ್ವಹಿಸಿದರು” ಎಂದು ಪಾಂಧಿ ಟ್ವೀಟ್ ಮಾಡಿದ್ದಾರೆ.
+ There is a reason why BJP leaders today always liken Modi with Gandhi, Patel or other Congress leaders and not Savarkar, Vajpayee or Golwalkar. They know the truth!
Advertisement— Gaurav Pandhi (@GauravPandhi) December 25, 2022
ಪಾಂಧಿ ಇಲ್ಲಿಗೇ ನಿಲ್ಲದೆ, “ನೆಲ್ಲಿ ಹತ್ಯಾಕಾಂಡವಾಗಲಿ ಅಥವಾ ಬಾಬರಿ ಧ್ವಂಸವಾಗಲಿ, ಜನಸಮೂಹವನ್ನು ಪ್ರಚೋದಿಸುವಲ್ಲಿ ವಾಜಪೇಯಿ ಪ್ರಮುಖ ಪಾತ್ರ ವಹಿಸಿದ್ದರು. ಇದೇ ಕಾರಣಕ್ಕೆ ಇಂದು ಬಿಜೆಪಿ ನಾಯಕರು ಯಾವಾಗಲೂ ಮೋದಿಯನ್ನು ಗಾಂಧಿ, ಪಟೇಲ್ ಅಥವಾ ಇತರ ಕಾಂಗ್ರೆಸ್ ನಾಯಕರೊಂದಿಗೆ ಹೋಲಿಸುತ್ತಾರೆಯೇ ಹೊರತು ಸಾವರ್ಕರ್, ವಾಜಪೇಯಿ ಅಥವಾ ಗೋಲ್ವಾಲ್ಕರ್ ಅವರೊಂದಿಗೆ ಅಲ್ಲ. ಅವರಿಗೆ ಸತ್ಯ ಗೊತ್ತಿದೆ” ಎಂದಿದ್ದಾರೆ.
ಗೌರವ್ ಪಾಂಧಿ ಅವರ ಈ ಹೇಳಿಕೆಯ ನಂತರ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಬಿಜೆಪಿ ವಕ್ತಾರ ಶಹಜಾದ್ ಪೂನವಾಲಾ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಭಾರತಕ್ಕೆ ನೀಡಿದ ಕೊಡುಗೆಯನ್ನು ಇಂದು ದೇಶವು ಸ್ಮರಿಸುತ್ತಿದೆ. ಕಾಂಗ್ರೆಸ್ ಇಂದು ತನ್ನ ನಿಜವಾದ ಮುಖವನ್ನು ತೋರಿಸಿದೆ. ಅವರು ಸಾವರ್ಕರ್, ಅಂಬೇಡ್ಕರ್, ಅಟಲ್ ಬಿಹಾರಿ ಅವರಂತಹ ವ್ಯಕ್ತಿಗಳನ್ನು ಅವಮಾನಿಸುವುದರಲ್ಲಿ ನಂಬುತ್ತಾರೆ ಎಂದಿದ್ದಾರೆ.
On instructions of First Family of Congress – Gaurav PANDHI has made baseless attacks on Shri AB Vajpayee ji on a day when entire country is paying tribute
Not Sanyog but a Parivar ka Prayog to insult all icons-from Savarkar ji to Vajpayee ji-Congress must apologise & sack him pic.twitter.com/J7oxdBGIHA
— Shehzad Jai Hind (@Shehzad_Ind) December 25, 2022
ಶಹಜಾದ್ ಪೂನಾವಾಲಾ ಮುಂದೆ, “ಇಂದು ರಾಹುಲ್ ಗಾಂಧಿಗೆ ಆಪ್ತರಾಗಿರುವ ಗೌರವ್ ಪಾಂಧಿ ಅವರು ವಾಜಪೇಯಿ ಅವರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಇದು ಕಾಕತಾಳೀಯವಲ್ಲ ಬದಲಾಗಿ ಪ್ರಯೋಗ. ಇದು ಕಾಂಗ್ರೆಸ್ನ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಅವರ ಅಭ್ಯಾಸವಾಗಿ ಹೋಗಿದೆ. ಗೌರವ್ ಪಾಂಧಿ ಅವರನ್ನು ವಜಾಗೊಳಿಸಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು” ಎಂದು ಹೇಳಿದ್ದಾರೆ.
PM Vajpayee ji was praised by Nehru ji & Dr Manmohan Singh
Were they wrong & is Gaurav PANDHI right?
This is a deliberate attempt to tarnish icons of Bharat by first family using people like PANDHI !
2/2
— Shehzad Jai Hind (@Shehzad_Ind) December 25, 2022
ಪೂನವಾಲಾ ಟ್ವೀಟ್ ಮಾಡಿ, “ವಾಜಪೇಯಿ ಜಿ ಅವರನ್ನು ನೆಹರೂ ಜಿ ಮತ್ತು ಡಾ. ಮನಮೋಹನ್ ಸಿಂಗ್ ಹೊಗಳಿದ್ದಾರೆ. ಹಾಗಾದರೆ ಅವರು ತಪ್ಪಾ? ಗೌರವ್ ಪಾಂಧಿ ಸರಿಯೇ? ಗಾಂಧಿಯಂತಹವರನ್ನು ಬಳಸಿಕೊಂಡು ಮೊದಲ ಕುಟುಂಬ (ಗಾಂಧಿ ಕುಟುಂಬ) ಉದ್ದೇಶಪೂರ್ವಕವಾಗಿ ಭಾರತದ ಪ್ರತೀಕಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದೆ” ಎಂದಿದ್ದಾರೆ.
On one hand Rahul Gandhi pretending to pay respect to Vajpayee ji by visiting his Samadhi
On other hand his close aide Gaurav Pandhi insults Vajpayee ji on a day we celebrated his legacy
Rahul’s hypocrisy exposed
If Rahul , Congress truly respect Vajpayee ji then sack him pic.twitter.com/xEbn8HH8Il
— Shehzad Jai Hind (@Shehzad_Ind) December 25, 2022
ಮತ್ತೊಂದು ಟ್ವೀಟ್ನಲ್ಲಿ ಪೂನಾವಾಲಾ, “ಒಂದೆಡೆ ರಾಹುಲ್ ಗಾಂಧಿ ವಾಜಪೇಯಿ ಅವರ ಸಮಾಧಿಗೆ ಭೇಟಿ ನೀಡುವ ಮೂಲಕ ಅವರಿಗೆ ಗೌರವ ಸಲ್ಲಿಸುವಂತೆ ನಟಿಸುತ್ತಿದ್ದಾರೆ. ಮತ್ತೊಂದೆಡೆ, ನಾವು ವಾಜಪೇಯಿ ಅವರನ್ನು ನೆನಪಿಸಿಕೊಂಡ ದಿನ, ಅದೇ ದಿನ ಅವರ ನಿಕಟವರ್ತಿ ಗೌರವ್ ಪಾಂಧಿ ವಾಜಪೇಯಿ ಜೀ ಅವರನ್ನು ಅವಮಾನಿಸುತ್ತಿದ್ದಾರೆ. ರಾಹುಲ್ ಅವರ ಬೂಟಾಟಿಕೆ ಬಯಲಾಗಿದೆ. ಕಾಂಗ್ರೆಸ್ನಲ್ಲಿ ವಾಜಪೇಯಿ ಅವರನ್ನು ರಾಹುಲ್ ಗೌರವಿಸುವುದೇ ಆದರೆ ಅವರನ್ನು (ಗೌರವ್ ಪಾಂಡಿ) ವಜಾ ಮಾಡಿ” ಎಂದರು.
Leaders like Atalji have earned the respect of leaders across political lines and the love of the people of India because of his undying commitment to the nation. Does this have official sanction from the party ? https://t.co/iUUtDLTH5D
— Jitin Prasada जितिन प्रसाद (@JitinPrasada) December 25, 2022
ಈ ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರದ ಸಚಿವ ಮತ್ತು ಬಿಜೆಪಿ ನಾಯಕ ಜಿತಿನ್ ಪ್ರಸಾದ್ ಅವರು, “ಅಟಲ್ ಜಿ ಅವರಂತಹ ನಾಯಕರು ರಾಜಕೀಯ ಕ್ಷೇತ್ರದಲ್ಲಿ ನಾಯಕರ ಗೌರವವನ್ನು ಮತ್ತು ರಾಷ್ಟ್ರದ ಮೇಲಿನ ಅವರ ಅಚಲ ಬದ್ಧತೆಯಿಂದ ಭಾರತದ ಜನರ ಪ್ರೀತಿಯನ್ನು ಗಳಿಸಿದ್ದಾರೆ. . ಗೌರವ್ ಪಾಂಧಿಯವರ ಈ ಹೇಳಿಕೆಗೆ ಕಾಂಗ್ರೆಸ್ ನಿಂದ ಅಧಿಕೃತ ಒಪ್ಪಿಗೆ ಸಿಕ್ಕಿದೆಯೇ?” ಎಂದಿದ್ದಾರೆ.