ನಟಿ ತುನೀಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ಸ್ಪೋಟಕ ಮಾಹಿತಿ ಬಹಿರಂಗೊಡಿಸಿದ್ದಾನೆ. ಶ್ರದ್ಧಾ ವಾಕರ್‌ಳನ್ನು ಆಕೆಯ ಲಿವ್ ಇನ್ ಪಾರ್ಟ್‌ನರ್ ಅಫ್ತಾಬ್ ಪೂನಾವಾಲಾ ಭೀ ಕ ರ ವಾಗಿ ಹ ತ್ಯೆ ಮಾಡಿದ ನಂತರ ದೇಶದಲ್ಲಿ ಉಂಟಾಗಿರುವ ವಾತಾವರಣದಿಂದ ತಾನು ಪರೇಶಾನ್ ಆಗಿದ್ದೆ ಎಂದು ತುನಿಶಾಳ ಮಾಜಿ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಪೊಲೀಸರಿಗೆ ತಿಳಿಸಿದ್ದಾನೆ.
ಮುಂಬೈ (ಮಹಾರಾಷ್ಟ್ರ): ಕಿರುತೆರೆ ನಟಿ ತುನೀಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ಸ್ಪೋಟಕ ಮಾಹಿತಿ ಬಹಿರಂಗೊಡಿಸಿದ್ದಾನೆ. ತುನಿಶಾಳ ಮಾಜಿ ಬಾಯ್‌ಫ್ರೆಂಡ್ ಶೀಜಾನ್ ಖಾನ್, “ಶ್ರದ್ಧಾ ವಾಕರ್‌ನ್ನ ಆಕೆಯ ಲಿವ್-ಇನ್ ಪಾರ್ಟನರ್ ಭೀ ಕ ರ ವಾಗಿ ಹ-ತ್ಯೆ ಮಾಡಿದ ನಂತರ ದೇಶದ ವಾತಾವರಣದಿಂದ ತಾನು ತುಂಬಾ ವಿಚಲಿತನಾಗಿದ್ದೆ ಮತ್ತು ತುನಿಶಾ ಜೊತೆಗಿನ ರಿಲೇಶನ್‌ಶಿಪ್ ಕೊನೆಗೊಳಿಸಲು ನಿರ್ಧರಿಸಿದ್ದೆ” ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸ್ ಕಸ್ಟಡಿಯಾದ ಮೊದಲ ದಿನ, ಶೀಜಾನ್ “ಶ್ರದ್ಧಾ ವಾಕರ್ ಪ್ರಕರಣವನ್ನು ನೋಡಿದ ನಂತರ ತುನೀಶಾ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದೆ ಮತ್ತು ಇಬ್ಬರೂ ಬೇರೆ ಧರ್ಮದಾಗಿರುವ ಹೊರತಾಗಿ ಇಬ್ಬರ ನಡುವೆ ದೊಡ್ಡ ವಯಸ್ಸಿನ ಅಂತರವಿದೆ ಎಂದು ತನ್ನ ಮಾಜಿ ಪ್ರೇಯಸಿಗೆ ತಿಳಿಸಿದ್ದೆ” ಎಂದು ಹೇಳಿದ್ದಾನೆ.
ವಿಚಾರಣೆಯ ಸಮಯದಲ್ಲಿ, ಶೀಜಾನ್, ನಮ್ಮ ನಡುವಿನ ಬ್ರೇಕಪ್ ಆದ ನಂತರ ತುನಿಶಾ ಸೂಸೈಡ್‌ಗೆ ಪ್ರಯತ್ನಿಸಿದ್ದಳು ಎಂದು ತಿಳಿಸಿದ್ದಾನೆ.
ಸಾಯುವ ಕೆಲವು ದಿನಗಳ ಮೊದಲು ತುನೀಶಾ ಇತ್ತೀಚೆಗೆ ಸೂಸೈಡ್‌ಗೆ ಯತ್ನಿಸಿದ್ದಳು, ಆದರೆ ಆ ಸಮಯದಲ್ಲಿ ನಾನು ಅವಳನ್ನು ಉಳಿಸಿದೆ ಮತ್ತು ಅವಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ತುನೀಶಾ ತಾಯಿಗೆ ಕೇಳಿಕೊಂಡಿದ್ದೆ ಎಂದು ಶೀಜಾನ್ ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಡಿಸೆಂಬರ್ 24 ರಂದು ಟಿವಿ ಶೂಟಿಂಗ್ ಸೆಟ್‌ನಲ್ಲಿ ಶೌಚಾಲಯದಲ್ಲಿ ಶ ವ ವಾಗಿ ಪತ್ತೆಯಾಗುವ ಕೆಲ ದಿನಗಳ ಹಿಂದೆಯೇ ತುನಿಶಾ ಮತ್ತು ಶೀಜಾನ್ ಬ್ರೇಕಪ್ ಆಗಿತ್ತು. ಭಾನುವಾರ ಮಹಾರಾಷ್ಟ್ರದ ವಸೈ ನ್ಯಾಯಾಲಯವು ತುನಿಶಾ ಶರ್ಮಾ ಸೂಸೈಡ್‌ಗೆ ಸಂಬಂಧಿಸಿದಂತೆ ನಟ ಶೀಜಾನ್ ಖಾನ್‌ನ್ನ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಸೂಸೈಡ್ ಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಶೀಜಾನ್ ಖಾನ್‌ನ್ನ ಬಂಧಿಸಿದ ನಂತರ ವಾಲೀವ್ ಪೊಲೀಸರು ಆತನನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಶೀಜಾನ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಲಿವ್ ಪೊಲೀಸರ ಪ್ರಕಾರ, ಡಿಸೆಂಬರ್ 24 ರಂದು ಟಿವಿ ಧಾರಾವಾಹಿಯ ಸೆಟ್‌ನಲ್ಲಿ ತುನಿಶಾ ಅವರ ಶ ವ ಪತ್ತೆಯಾಗಿತ್ತು. ಚಹಾ ವಿರಾಮದ ನಂತರ ನಟಿ ಶೌಚಾಲಯಕ್ಕೆ ಹೋದರು ಮತ್ತು ಅವರು ಹಿಂತಿರುಗದಿದ್ದಾಗ, ಪೊಲೀಸರು ಬಾಗಿಲು ಒಡೆದು ನೋಡಿದಾಗ ಆಕೆ ನೇ ಣು ಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಅವರಿಗೆ ಸಿಕ್ಕಿತು. ಸ್ಥಳದಲ್ಲಿದ್ದ ಪೊಲೀಸರಿಗೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ.
ತುನೀಶಾ ತನ್ನ ಜೀವನವನ್ನು ಕೊನೆಗೊಳಿಸಲು ಈ ಕೃತ್ಯದ ಹಿಂದೆ ಶೀಜಾನ್ ಜೊತೆಗಿನ ಅವಳ ಬ್ರೇಕಪ್ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ಪ್ರಾಥಮಿಕ ಮಾಹಿತಿ ವರದಿ ಅಥವಾ ಎಫ್‌ಐಆರ್‌ನಿಂದ ಇಬ್ಬರೂ ರಿಲೇಶನ್‌ಶಿಪ್ ನಲ್ಲಿದ್ದರು ಮತ್ತು 15 ದಿನಗಳ ಹಿಂದೆಯಷ್ಟೇ ಬ್ರೇಕಪ್ ಮಾಡಿಕೊಂಡಿದ್ದರು. ತುನಿಶಾ ಶರ್ಮಾ ಒತ್ತಡದಲ್ಲಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇಬ್ಬರ ನಡುವೆ ಏನಾಯಿತು ಮತ್ತು 15 ದಿನಗಳ ನಂತರ ಬ್ರೇಕಪ್ ಆದ ನಂತರ ಯಾವ ಕಾರಣಕ್ಕಾಗಿ ತುನೀಶಾ ನಿಧನರಾದರು ಎಂಬುದನ್ನ ಪತ್ತೆ ಹಚ್ಚಲು ಇಬ್ಬರ ನಡುವಿನ ಕರೆಗಳು ಮತ್ತು ಚಾಟ್‌ಗಳು ರಿಕವರ್ ಮಾಡಲು ಪೊಲೀಸರುತುನೀಶಾ ಮತ್ತು ಶೀಜಾನ್ ಇಬ್ಬರ ಮೊಬೈಲ್ ಫೋನ್‌ಗಳನ್ನು ಫಾರೆನ್ಸಿಕ್ ಲ್ಯಾಬ್‌ಗೆ ಕಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಶನಿವಾರ ಬೆಳಿಗ್ಗೆ, ತುನೀಶಾ ಧಾರಾವಾಹಿಯ ಸೆಟ್‌ಗೆ ಹೋಗಲು ಖುಷಿಯಿಂದಲೇ ತನ್ನ ಮನೆಯಿಂದ ಹೊರಟಿದ್ದಳು. ಮೊದಲ ಪಾಳಿಯ ಚಿತ್ರೀಕರಣ ಮುಗಿದ ಬಳಿಕ ಶೀಜಾನ್ ಖಾನ್ ಮತ್ತು ತುನೀಶಾ ಮೇಕಪ್ ರೂಮಿನಲ್ಲಿದ್ದು, ಇಬ್ಬರೂ ಎಂದಿನಂತೆ ಊಟಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಸಾಯುವ ದಿನ ತುನೀಶಾ ಲಂಚ್ ಮಾಡಿರಲಿಲ್ಲ, ಶಿಜಾನ್ ಊಟ ಮುಗಿಸಿದ ನಂತರ ಇಬ್ಬರೂ ತಮ್ಮ ಕೆಲಸ ಆರಂಭಿಸಿದರು. ಎಂದಿನಂತೆ ಶೀಜಾನ್ ಸೆಟ್‌ನಲ್ಲಿ ಶೂಟಿಂಗ್‌ಗೆ ಹೋಗಿದ್ದು, ತುನೀಶಾ ಮೇಕಪ್ ರೂಮ್‌ಗೆ ಹೋಗಿದ್ದಾರೆ. ಚಹಾ ಮುಗಿಸಿ ತುನೀಶಾ ಶರ್ಮಾ ವಾಪಸಾಗದಿದ್ದಾಗ ಸೆಟ್ ನಲ್ಲಿದ್ದ ಜನ ಆಕೆಯನ್ನು ಹುಡುಕತೊಡಗಿದರು.
ಇದೀಗ ತುನಿಶಾ ಸಾವಿಗೆ ಅಸಲಿ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತುನೀಶಾ ಅವರ ತಾಯಿ ವನಿತಾ ಶರ್ಮಾ ಮತ್ತು ಆಕೆಯ ಚಿಕ್ಕಪ್ಪಮ ಹೇಳಿಕೆಗಳನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಈ ಘಟನೆಯಿಂದ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ ಎಂದು ತುನೀಶಾ ಅವರ ಚಿಕ್ಕಪ್ಪ ಹೇಳಿದ್ದಾರೆ. ತುನೀಶಾ ತನ್ನ ತಾಯಿಯೊಂದಿಗೆ ಮೀರಾ ರಸ್ತೆಯ ಇಂದ್ರಪ್ರಸ್ಥ ಭವನದಲ್ಲಿ ವಾಸಿಸುತ್ತಿದ್ದಳು. ಕುಟುಂಬದ ಎಲ್ಲಾ ಖರ್ಚುಗಳನ್ನ ಅವಳೇ ಭರಿಸುತ್ತಿದ್ದಳು, ಆದರೆ ಈಗ ಅವಳೇ ಇಲ್ಲ. ಆರೋಪಿ ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗಬೇಕು ಎನ್ನುತ್ತಾರೆ ತುನಿಶಾ ಚಿಕ್ಕಪ್ಪ.